AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್​’ ಚಿತ್ರದ ಪುನೀತ್ ಪವರ್​ಫುಲ್​​ ಲುಕ್​ ಅನಾವರಣ

‘ಜೇಮ್ಸ್​’ ಸಿನಿಮಾ ಘೋಷಣೆ ಆಗಿ ಹಲವು ತಿಂಗಳೇ ಕಳೆದಿವೆ. ಈವರೆಗೆ ಚಿತ್ರತಂಡದಿಂದ ಯಾವುದೇ ಅಪ್​​ಡೆಟ್​ ಸಿಕ್ಕಿರಲಿಲ್ಲ. ಆದರೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ ಚಿತ್ರತಂಡ ಫಸ್ಟ್​ ಪೋಸ್ಟರ್​ ರಿಲೀಸ್​ ಮಾಡಿದೆ.

‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್​’ ಚಿತ್ರದ ಪುನೀತ್ ಪವರ್​ಫುಲ್​​ ಲುಕ್​ ಅನಾವರಣ
‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್​’ ಚಿತ್ರದ ಪುನೀತ್ ಪವರ್​ಫುಲ್​​ ಲುಕ್​ ಅನಾವರಣ
TV9 Web
| Edited By: |

Updated on: Aug 15, 2021 | 3:24 PM

Share

‘ಬಹದ್ದೂರ್’​, ‘ಭರ್ಜರಿ’, ‘ಭರಾಟೆ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಚೇತನ್​ ಕುಮಾರ್​ ಈಗ ಪುನೀತ್​ ರಾಜ್​ಕುಮಾರ್​ ನಟನೆಯ ‘ಜೇಮ್ಸ್​’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇಂದು ಸ್ವಾತಂತ್ರ್ಯ ದಿನಾಚರಣೆ. ಈ ಪ್ರಯುಕ್ತ ಒಂದು ಪವರ್​ಫುಲ್​ ಪೋಸ್ಟರ್​ಅನ್ನು ಚಿತ್ರತಂಡ ರಿಲೀಸ್​ ಮಾಡಿದೆ. ಸೈನಿಕರ ಮಧ್ಯದಲ್ಲಿ ಪುನೀತ್​ ರಾಜ್​ಕುಮಾರ್​ ನಿಂತಿದ್ದಾರೆ. ಸೈನಿಕರ ಜತೆ ಪುನೀತ್​ ಕೂಡ ಕಪ್ಪನೆಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ. ‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎನ್ನುವ ಕ್ಯಾಪ್ಶನ್ಅನ್ನು ಪೋಸ್ಟರ್​ಗೆ​ ನೀಡಲಾಗಿದೆ.

‘ಜೇಮ್ಸ್​’ ಸಿನಿಮಾ ಘೋಷಣೆ ಆಗಿ ಹಲವು ತಿಂಗಳೇ ಕಳೆದಿವೆ. ಈ ವರೆಗೆ ಚಿತ್ರತಂಡದಿಂದ ಯಾವುದೇ ಅಪ್​​ಡೆಟ್​ ಸಿಕ್ಕಿರಲಿಲ್ಲ. ಆದರೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಿತ್ರತಂಡ ​ ಪೋಸ್ಟರ್​ ರಿಲೀಸ್​ ಮಾಡಿದೆ. ಈ ಪೊಸ್ಟರ್ ಅಭಿಮಾನಿಗಳಲ್ಲಿ​ ಸಾಕಷ್ಟು ಕುತೂಹಲ ಮೂಡಿಸಿದೆ.

ಪುನೀತ್​ ರಾಜ್​ಕುಮಾರ್​ ಕೊನೆಯ ಬಾರಿ ಕಾಣಿಸಿಕೊಂಡಿದ್ದ ‘ಯುವರತ್ನ’ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಒಂದೊಳ್ಳೆಯ ಸಂದೇಶ ಇತ್ತು. ಜತೆಗೆ ಡ್ರಗ್​ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಚಿತ್ರತಂಡ ಮಾಡಿತ್ತು. ಈ ಸಿನಿಮಾ ರಿಲೀಸ್​ ಆದ ಸಂದರ್ಭದಲ್ಲಿ ಕೊವಿಡ್​ ಎರಡನೇ ಅಲೆ ಜೋರಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಮುಂದಾದ ಸರ್ಕಾರ, ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಹೀಗಾಗಿ ಒಂದೇ ವಾರದಲ್ಲಿ ಸಿನಿಮಾ ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರವಾಯಿತು. ಇದು ಪುನೀತ್​ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೀಗಾಗಿ, ‘ಜೇಮ್ಸ್​’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ ಫ್ಯಾನ್ಸ್​.

ಇನ್ನು, ಚೇತನ್​ ಕುಮಾರ್​ ಸಿನಿಮಾಗಳು ಮಾಸ್ ಡೈಲಾಗ್​ ಹಾಗೂ ಆ್ಯಕ್ಷನ್​ಗೆ ಫೇಮಸ್. ‘ಜೇಮ್ಸ್’​ ಸಿನಿಮಾದಲ್ಲೂ ಇದು ಮುಂದುವರಿಯಲಿದೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಶೀಘ್ರವೇ ಸಿನಿಮಾ ಬಗ್ಗೆ ಹೊಸಹೊಸ ಅಪ್​ಡೇಟ್​ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ‘ದ್ವಿತ್ವ’ ಚಿತ್ರಕ್ಕೆ ನಾಯಕಿಯಾದ ತ್ರಿಷಾ ಕೃಷ್ಣನ್

‘ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮ್ ಸರಿಯಿಲ್ಲ’ ಅಂತಿದಾರೆ ಪುನೀತ್ ರಾಜ್​ಕುಮಾರ್; ಇದಕ್ಕೊಂದು ವಿಶೇಷ ಕಾರಣವಿದೆ!

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ