AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮ್ ಸರಿಯಿಲ್ಲ’ ಅಂತಿದಾರೆ ಪುನೀತ್ ರಾಜ್​ಕುಮಾರ್; ಇದಕ್ಕೊಂದು ವಿಶೇಷ ಕಾರಣವಿದೆ!

Puneeth Rajkumar: ನಟ, ಗಾಯಕ ಪುನೀತ್ ರಾಜ್​ಕುಮಾರ್ ಹೊಸಬರೇ ಸೇರಿ ನಿರ್ಮಿಸುತ್ತಿರುವ ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. ಸದ್ಯ ಈ ಹಾಡು ಆನ್​ಲೈನ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ.

‘ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮ್ ಸರಿಯಿಲ್ಲ’ ಅಂತಿದಾರೆ ಪುನೀತ್ ರಾಜ್​ಕುಮಾರ್; ಇದಕ್ಕೊಂದು ವಿಶೇಷ ಕಾರಣವಿದೆ!
ನಟ, ಗಾಯಕ ಪುನೀತ್ ರಾಜ್​ಕುಮಾರ್
TV9 Web
| Updated By: shivaprasad.hs|

Updated on:Aug 12, 2021 | 5:45 PM

Share

ಚಂದನವನದ ಮುಂಚೂಣಿಯ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ತಮ್ಮ ಅಭಿನಯದೊಂದಿಗೆ ಗಾಯನದೊಂದಿಗೂ ಅಭಿಮಾನಿಗಳ ಮನಸೆಳೆಯುತ್ತಾರೆ. ಈಗ ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದ ಹಾಡೊಂದಕ್ಕೆ ಪುನೀತ್ ದನಿಯಾಗಿದ್ದಾರೆ. ‘ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮೇ ಸರಿಯಿಲ್ಲ’ ಎಂಬ ಸಾಹಿತ್ಯವಿರುವ ಈ ಹಾಡು ಕಾಲೇಜಿನ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿದೆ. ಪುನೀತ್ ರಾಜ್​ಕುಮಾರ್ ದನಿಯಲ್ಲಿ ಮೂಡಿ ಬಂದಿರುವ ಹಾಡಿನಲ್ಲಿ ನಟ ಶ್ರೀ ಮಹದೇವ್ ಹಾಗೂ ನಟಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ವಿಡಿಯೊ ಸಾಂಗ್​ ಅನ್ನು ಚಿತ್ರತಂಡ ಯುಟ್ಯೂಬ್​ನಲ್ಲಿ ಬಿಡುಗಡೆ ಮಾಡಿದೆ.

Gajanana And Gang

ಗಜಾನನ ಅಂಡ್ ಗ್ಯಾಂಗ್ ಚಿತ್ರದ ಒಂದು ಪೋಸ್ಟರ್

‘ಇರುವುದೆಲ್ಲವ ಬಿಟ್ಟು’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೀ ಮಹದೇವ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಕಮರ್ಷಿಯಲ್ ಹೀರೋ ಆಗುತ್ತಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.  ಹಿಂದೆ ‘ನಮ್ ಗಣಿ ಬಿಕಾಂ ಪಾಸ್’ ಚಿತ್ರವನ್ನು ಮಾಡಿದ್ದ ತಂಡವೇ ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದಲ್ಲಿ ಜೊತೆಯಾಗಿದೆ. ಅಭಿಷೇಕ್ ಶೆಟ್ಟಿ ನಿರ್ದೇಶನ ಈ ಸಿನಿಮಾಕ್ಕಿದ್ದು, ನಾಗೇಶ್ ಕುಮಾರ್ ಯು.ಎಸ್ ಮತ್ತು ಪ್ರಶಾಂತ್ ಶೆಟ್ಟಿ ಉಪ್ಪುಂದ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರದ್ಯೋತನ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಉದಯ್ ಲೀಲಾ ಛಾಯಾಗ್ರಹಣ ಮಾಡುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್ ದನಿಯಾಗಿರುವ ಹಾಡು ಇಲ್ಲಿದೆ:

ನಾಯಕ ನಟ ಶ್ರೀ ಮೊದಲು ಕಿರುತೆರೆಯಲ್ಲಿ ಬಹಳ ಸದ್ದು ಮಾಡಿದ್ದರು. ಚಿಟ್ಟೆಹೆಜ್ಜೆ, ನೀಲಿ, ಇಷ್ಟದೇವತೆ, ಶ್ರೀರಸ್ತು ಶುಭಮಸ್ತು ಧಾರವಾಹಿಗಳ ಮುಖಾಂತರ ಮನೆ ಮಾತಾಗಿದ್ದರು. ಈಗ ಬೆಳ್ಳಿತೆರೆಯಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಈಗಾಗಲೇ ಕನ್ನಡದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ದಿಲ್​ಮಾರ್​, ತೋತಾಪುರಿ ಸೇರಿ 10-11 ಸಿನಿಮಾಗಳು ಅವರ ಕೈಯಲ್ಲಿವೆ. ಕೊವಿಡ್​ ಎರಡನೇ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿದ್ದವು. ಈಗ ಅದಿತಿ ಸಿನಿಮಾ ಕೆಲಸಗಳಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಬೆಂಗಳೂರಿನ ಬೀದಿಗಳಲ್ಲಿ ಆಟೋ ಓಡಿಸಿದ ನಟಿ ಅದಿತಿ ಪ್ರಭುದೇವ್‌ ವಿಡಿಯೋ ವೈರಲ್..!

ಗದ್ದೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ; ತೋಟ ಮಾಡುವ ಕನಸು ಕಂಡ ನಟಿ

(Puneet Rajkumar sings a song Nan Olleyavne for a kannada movie Gajanana and Gang)

Published On - 5:42 pm, Thu, 12 August 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ