ಲವರ್ ಬಾಯ್ ಗೆಟಪ್ ತೊಟ್ಟ ನಟ ಅಚ್ಯುತ್ ಕುಮಾರ್; ಭರವಸೆ ಮೂಡಿಸುತ್ತಿದೆ ‘ಫೋರ್​ವಾಲ್ಸ್’ ಟೀಸರ್

Fourwalls: ಕನ್ನಡ ಚಲನಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ನಿರ್ದೇಶಕರು ತಮ್ಮ ಚಿತ್ರಗಳಿಂದ ಭರವಸೆ ಮೂಡಿಸುತ್ತಿದ್ದಾರೆ. ಅಂಥದ್ದೇ ಒಂದು ಚಿತ್ರ ತಯಾರಾಗುತ್ತಿರುವ ಸುಳಿವು ಲಭ್ಯವಾಗಿದ್ದು, ಅಚ್ಯುತ್ ಕುಮಾರ್ ನಟನೆಯ, ‘ಫೋರ್​ವಾಲ್ಸ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದೆ.

ಲವರ್ ಬಾಯ್ ಗೆಟಪ್ ತೊಟ್ಟ ನಟ ಅಚ್ಯುತ್ ಕುಮಾರ್; ಭರವಸೆ ಮೂಡಿಸುತ್ತಿದೆ 'ಫೋರ್​ವಾಲ್ಸ್' ಟೀಸರ್
‘ಫೋರ್​ವಾಲ್ಸ್​’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on: Aug 12, 2021 | 6:41 PM

ಚಂದನವನದ ಖ್ಯಾತ ನಟ ಅಚ್ಯುತ್ ಕುಮಾರ್ ಲವರ್ ಬಾಯ್ ಆಗಿ ಮಿಂಚಲಿದ್ದಾರಾ? ಹೀಗೊಂದು ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಫೋರ್​ವಾಲ್ಸ್ ಅಂಡ್ ಟು ಪೀಸ್’ ಚಿತ್ರದ ಟೀಸರ್ ಈ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್​ನಲ್ಲಿ ಅಚ್ಯುತ್ ಕುಮಾರ್ ಮೂರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಗೆಟಪ್​ನಲ್ಲಿ ಲವರ್ ಬಾಯ್ ಆಗಿ ಅವರು ಕಾಣಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಫೋರ್​ವಾಲ್ಸ್ ಚಿತ್ರದ ಟೀಸರ್:

ಚಿತ್ರದಲ್ಲಿ ಅಚ್ಯುತ್ ಕುಮಾರ್ ಶಂಕ್ರಣ್ಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಡಾ. ಪವಿತ್ರ ಅಚ್ಯುತ್ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ದತ್ತಣ್ಣ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ, ಡಾ.ಜಾನ್ವಿ ಜ್ಯೋತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ತಂದೆ ಮಕ್ಕಳ ಬಾಂಧವ್ಯದ ಕಥೆಯನ್ನೊಳಗೊಂಡ ಸಿನಿಮಾವಾಗಿದ್ದು, ಅದರ ಒಂದು ಝಲಕ್ ಟೀಸರ್​ನಲ್ಲಿ ಕಾಣಿಸುತ್ತದೆ. ‘ಮಂತ್ರಂ’ ಸಿನಿಮಾ ನಿರ್ದೇಶಿಸಿ ಗುರುತಿಸಿಕೊಂಡಿದ್ದ ಎಸ್ ಎಸ್ ಸಜ್ಜನ್ ಈ ಚಿತ್ರಕ್ಕೆ ಕತೆ ರಚಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಸೆಟ್ಟೇರಿದ್ದ ಈ ಚಿತ್ರ ಈಗ ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದೆ.

ಫೋರ್​ವಾಲ್ಸ್ ಚಿತ್ರದ ಒಂದು ಪೋಸ್ಟರ್:

Fourwalls poster

‘ಫೋರ್​ವಾಲ್ಸ್​’ನ ವಿಂಟೇಜ್ ಶೈಲಿಯ ಪೋಸ್ಟರ್

ಟಿ.ವಿಶ್ವನಾಥ್ ನಾಯ್ಕ್ ಎಸ್.ವಿ.ಪಿಚ್ಚರ್ಸ್ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಿಸಿದ್ದು, ಚಿತ್ರಕ್ಕೆ ಆನಂದ್ ರಾಜಾವಿಕ್ರಮ ಸಂಗೀತ ನೀಡಿದ್ದಾರೆ. ಈ ವರ್ಷದಲ್ಲೇ ಚಿತ್ರವು ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ:

ರಾಧಿಕಾ ಪಂಡಿತ್​-ಯಶ್​ ನಿಶ್ಚಿತಾರ್ಥಕ್ಕೆ ಐದು ವರ್ಷ; ವಿಶೇಷ ವಿಡಿಯೋ ಹಂಚಿಕೊಂಡ ನಟಿ

‘ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮ್ ಸರಿಯಿಲ್ಲ’ ಅಂತಿದಾರೆ ಪುನೀತ್ ರಾಜ್​ಕುಮಾರ್; ಇದಕ್ಕೊಂದು ವಿಶೇಷ ಕಾರಣವಿದೆ!

(New kannada Movie Fourwalls presents a very promising teaser starring Achyuth Kumar and Dattanna)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್