ಗದ್ದೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ; ತೋಟ ಮಾಡುವ ಕನಸು ಕಂಡ ನಟಿ

ಗದ್ದೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ; ತೋಟ ಮಾಡುವ ಕನಸು ಕಂಡ ನಟಿ
ಗದ್ದೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ; ತೋಟ ಮಾಡುವ ಕನಸು ಕಂಡ ನಟಿ

ಅದಿತಿ ಅವರು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಆರಂಭದಲ್ಲಿ ಕಿರುತೆರೆಯಲ್ಲಿ ಮಿಂಚಿ, ನಂತರ ಹಿರಿತೆರೆಗೆ ಕಾಲಿಟ್ಟರು. ಎರಡರಲ್ಲೂ ಅವರು ಜನಮನ್ನಣ್ಣೆ ಪಡೆದುಕೊಳ್ಳಲು ಯಶಸ್ವಿಯಾದರು.

TV9kannada Web Team

| Edited By: Rajesh Duggumane

Aug 06, 2021 | 9:28 PM


ನಟಿ ಅದಿತಿ ಪ್ರಭುದೇವ ಅವರು ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದವರು. ಅವರ ಕೈಯಲ್ಲಿ ಸದ್ಯ ಸಾಲುಸಾಲು ಸಿನಿಮಾಗಳಿವೆ. ತಮ್ಮ ಬ್ಯುಸಿ ಕೆಲಸದ ಮಧ್ಯೆಯೂ ಅದಿತಿ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದಿತಿ ಅವರು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಆರಂಭದಲ್ಲಿ ಕಿರುತೆರೆಯಲ್ಲಿ ಮಿಂಚಿ, ನಂತರ ಹಿರಿತೆರೆಗೆ ಕಾಲಿಟ್ಟರು. ಎರಡರಲ್ಲೂ ಅವರು ಜನಮನ್ನಣೆ ಪಡೆದುಕೊಳ್ಳಲು ಯಶಸ್ವಿಯಾದರು. ಆದರೆ, ಅವರು ತಮ್ಮ ಹಿನ್ನೆಲೆ ಮರೆತಿಲ್ಲ. ತಾವೇ ಟ್ರ್ಯಾಕ್ಟರ್​ ಏರಿ ಗದ್ದೆಯನ್ನು ಹೂಡುತ್ತಿರುವ ವಿಡಿಯೋವನ್ನು ಅದಿತಿ ಹಂಚಿಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ, ನಾನು ಹಳ್ಳಿಯ ಹೆಣ್ಣು ಮಗಳಾದರೂ, ರೈತ ಕುಟುಂಬದ ಹಿನ್ನೆಲೆ ಇದ್ದರೂ ಈಗಿರುವ ಪರಿಸ್ಥಿತಿಯಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವಾಗಲಿ, ಕೆಲಸವಾಗಲಿ, ದಿನಚರಿಯಾಗಲಿ ವಿಭಿನ್ನವಾಗಿ ಇರಬಹುದು. ಆದರೂ ಪ್ರತಿಸಲ ಯಾವುದೇ ಹಳ್ಳಿಗೆ ಹೋದರೂ ಇರುವ ಒಂದೆರಡು ದಿನಗಳಾದರೂ ವಾತಾವರಣವನ್ನು ಪ್ರೀತಿಯಿಂದ ಅನುಭವಿಸುತ್ತೇನೆ. ಪ್ರಕೃತಿಯ ಜೊತೆಗಿನ ನಂಟು ಜೀವನಕ್ಕೆ ಸಾರ್ಥಕತೆಯನ್ನು ನೆಮ್ಮದಿಯನ್ನು ತರುತ್ತದೆ. ಆ ಸಂತೋಷವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು’ ಎಂದಿದ್ದಾರೆ ಅದಿತಿ.

‘ಅನೇಕ ಜನರ ಕನಸಂತೆ ನನಗೂ ನನ್ನದೇ ಆದ ಒಂದು ಪುಟ್ಟ ತೋಟ ಮಾಡುವ ಹಂಬಲ. ನೋಡೋಣ, ಮುಂದೊಂದು ದಿನ ಅದು ಆದರೂ ಆಗಬಹುದು. ಅದೆಷ್ಟೋ ಬಾರಿ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದಿದ್ದರೂ, ಮೈತುಂಬಾ ಸಾಲವಿದ್ದರೂ ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ ದೇವರು ಅನ್ನಬ್ರಹ್ಮ ರೈತನಿಗೆ ಈ ಮೂಲಕ ನಮನ. ಈ ವೀಡಿಯೋ ಪ್ರತಿಯೊಬ್ಬ ರೈತ ಮಿತ್ರನಿಗೆ ಸಮರ್ಪಣೆ’ ಎಂದು ಬರೆದುಕೊಂಡಿದ್ದಾರೆ.

ಅದಿತಿ ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ದಿಲ್​ಮಾರ್​, ತೋತಾಪುರಿ ಸೇರಿ 10-11 ಸಿನಿಮಾಗಳು ಅವರ ಕೈಯಲ್ಲಿವೆ. ಕೊವಿಡ್​ ಎರಡನೇ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿದ್ದವು. ಈಗ ಕೊವಿಡ್​ ಎರಡನೇ ಅಲೆ ಕಡಿಮೆ ಆಗಿದೆ. ಈ ಕಾರಣಕ್ಕೆ ಸಿನಿಮಾ ಕೆಲಸಗಳಿಗೆ ಚುರುಕುಮುಟ್ಟಿಸಲಾಗಿದೆ. ಅದಿತಿ ಕೂಡ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಬಿಡುವು ಸಿಕ್ಕಾಗ ಅವರು ಕೃಷಿ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ

Vaishnavi Gowda: ಸೈಲೆಂಟ್​ ಆಗಿ ಬಿಗ್​ ಬಾಸ್​ ಗೆಲ್ತಾರಾ ವೈಷ್ಣವಿ? ಇಲ್ಲಿವೆ ಕಾರಣಗಳು ​

Follow us on

Related Stories

Most Read Stories

Click on your DTH Provider to Add TV9 Kannada