ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ರಾಘವೇಂದ್ರ ರಾಜ್​ಕುಮಾರ್; ಕಾರಣವೇನು?

ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ರಾಘವೇಂದ್ರ ರಾಜ್​ಕುಮಾರ್; ಕಾರಣವೇನು?

TV9 Web
| Updated By: shivaprasad.hs

Updated on:Aug 07, 2021 | 10:59 AM

Basavaraja Bommai: ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡದ ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸಿಎಂ ಅವರ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭೇಟಿಯ ನಂತರ ಟಿವಿ9ನೊಂದಿಗೆ ಮಾತನಾಡಿರುವ ರಾಘವೇಂದ್ರ ರಾಜ್​ಕುಮಾರ್, ಬೊಮ್ಮಾಯಿ ಅವರನ್ನು ಅಭಿನಂದಿಸಲು ಹೋಗಿದ್ದೆವು ಎಂದಿದ್ದಾರೆ. ಡಾ.ರಾಜ್​ಕುಮಾರ್ ಕಾಲದಿಂದಲೂ ಬೊಮ್ಮಾಯಿ ಅವರ ಕುಟುಂಬ ತಮಗೆ ಆತ್ಮೀಯರಾಗಿದ್ದರು. ತಂದೆಯವರು(ರಾಜ್​ಕುಮಾರ್) ಬೊಮ್ಮಾಯಿಯವರ ಮದುವೆಗೂ ಹೋಗಿದ್ದರು. ಆದ್ದರಿಂದ ಈಗ ಶುಭಾಶಯ ತಿಳಿಸಲು ಬಂದಿದ್ದೆವು ಎಂದಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ ಅವರೊಂದಿಗೆ ಅವರ ಪುತ್ರ ಯುವರಾಜ್​ಕುಮಾರ್ ಸಹ ಸಿಎಂ ಅವರನ್ನು ಭೇಟಿಯಾಗಿದ್ದಾರೆ.

ಸಿಎಂ ಅವರ ಭೇಟಿಯ ಮತ್ತೊಂದು ಉದ್ದೇಶವನ್ನು ತಿಳಿಸಿರುವ ರಾಘವೇಂದ್ರ ರಾಜ್​ಕುಮಾರ್, ‘‘ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಕ್ಕೆ ಸಿಎಂ ಅವರನ್ನು ಆಹ್ವಾನಿಸಲು ಹೋಗಿದ್ದೆವು. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅವರು ಎಂದು ತಿಳಿಸುತ್ತಾರೆ ನೋಡಬೇಕು’’ ಎಂದಿದ್ದಾರೆ.

ಕರ್ನಾಟಕದಲ್ಲಿ ಚಿತ್ರಮಂದಿರದ ಓಪನ್ ಕುರಿತಂತೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಫಿಲ್ಮ್ ಚೇಂಬರ್ ಏನು ನಿರ್ಧಾರ ಮಾಡುತ್ತದೆಯೋ ಅದರಂತೆ ನಾವು ನಡೆಯುತ್ತೇವೆ’’ ಎಂದಿದ್ದಾರೆ.

ಇದನ್ನೂ ನೋಡಿ: 

Tokyo Olympics: ಕೂದಲೆಳೆಯಲ್ಲಿ ಭಾರತಕ್ಕೆ ಪದಕ ಮಿಸ್: ಗಾಲ್ಫ್​ನಲ್ಲಿ ಕರ್ನಾಟಕದ ಅದಿತಿ ಅಶೋಕ್​ಗೆ ಸೋಲು

(Raghavendra Rajkumar Meets Karnataka CM Basavaraja Bommai)

Published on: Aug 07, 2021 10:47 AM