ಜಮ್ಮು ಮತ್ತು ಕಾಶ್ಮೀರನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಈಗಾಗಲೇ ಆರಂಭವಾಗಿದೆ!

ಜಮ್ಮು ಮತ್ತು ಕಾಶ್ಮೀರನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಈಗಾಗಲೇ ಆರಂಭವಾಗಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 07, 2021 | 5:24 PM

ಶ್ರೀನಗರದ ಮೆಯರ್ ಜುನೈದ್ ಮಟ್ಟೂ ಅವರು ಘಂಟಾ ಘರ್ ರಾಷ್ಟ್ರಧ್ವಜದಲ್ಲಿನ ಬಣ್ಣಗಳಿಂದ ಝಗಮಗಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿ, ಲಾಲ್ ಚೌಕ್ ಅನ್ನು ಸಿಂಗಾರಗೊಳಿಸಿದ ಶ್ರೀನಗರ ನಗರಸಭೆಯನ್ನು ಅಭಿನಂದಿಸಿದ್ದಾರೆ.

ಇಲ್ಲಿರುವ ವಿಡಿಯೋ ನೋಡಿ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಇದು ಶ್ರೀನಗರದ ಲಾಲ್ ಚೌಕ್ನಲ್ಲಿರುವ ಕ್ಲಾಕ್ ಟವರ್. ಸಾಮಾನ್ಯವಾಗಿ ಇದು ಘಂಟಾ ಘರ್ ಎಂದೇ ಎಲ್ಲರಿಗೂ ಪರಿಚಿತ. ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಆಚರಿಸಲು ಇನ್ನೂ ಒಂದು ವಾರ ಬಾಕಿಯಿದೆ. ಆದರೆ ಜಮ್ಮು ಮತ್ತು ಕಾಶ್ಮಿರದಲ್ಲಿ ಅದಾಗಲೇ ಸಿದ್ದತೆಗಳು ಪೂರ್ಣಗೊಂಡಂತೆ ಕಾಣುತ್ತಿವೆ. ಅದು ಸ್ವಾಭಾವಿಕವೂ ಹೌದು. ಯಾಕೆ ಅಂತ ನಮಗೆಲ್ಲ ಗೊತ್ತಿದೆ.

ಕೇವಲ ಎರಡು ವರ್ಷಗಳ ಹಿಂದೆ ಇಂಥದೊಂದು ಸನ್ನಿವೇಶವನ್ನು ನೆನೆಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ 2019ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ 370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ನಂತರ ಅಲ್ಲಿನ ಸ್ಥಿತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅಡಗಿ ಕೂತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದವರ ಹುಟ್ಟಡಗಿದೆ. ಮೊದಲೆಲ್ಲ ಮನೆಬಿಟ್ಟು ಹೊರಬರಲು ಹೆದರುತ್ತಿದ್ದ ಅಲ್ಲಿನ ಜನ ಈಗ ಸ್ವಚ್ಛಂದವಾಗಿ ಓಡಾಡುತ್ತಿದ್ದಾರೆ. ಬದಲಾವಣೆಯ ಗಾಳಿ ಜೋರಾಗಿ ಬೀಸಿದೆ!

ಶ್ರೀನಗರದ ಮೆಯರ್ ಜುನೈದ್ ಮಟ್ಟೂ ಅವರು ಘಂಟಾ ಘರ್ ರಾಷ್ಟ್ರಧ್ವಜದಲ್ಲಿನ ಬಣ್ಣಗಳಿಂದ ಝಗಮಗಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿ, ಲಾಲ್ ಚೌಕ್ ಅನ್ನು ಸಿಂಗಾರಗೊಳಿಸಿದ ಶ್ರೀನಗರ ನಗರಸಭೆಯನ್ನು ಅಭಿನಂದಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಆಂಗವಾಗಿ ಆಗಸ್ಟ್ 5 ರಂದು ಕ್ರೀಡಾ ಸಪ್ತಾಹವನ್ನು ಉದ್ಘಾಟಿಸಿದರು.
ಏತನ್ಮಧ್ಯೆ, ಭಾರತದ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮಿರದ ಪ್ರತಿ ಪಂಚಾಯತ್ನಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾರಿಸಲಾಗುವುದೆಂದು ಹೇಳಿದ್ದಾರೆ.

ಇದನ್ನೂ ಓದಿ:  India vs England: ಥೇಟ್ ರೋಹಿತ್ ಶರ್ಮಾ ರೀತಿಯಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಜಸ್​ಪ್ರೀತ್ ಬುಮ್ರಾ: ವಿಡಿಯೋ

Published on: Aug 07, 2021 04:09 PM