ಯಶ್ ಜೊತೆ ಪುತ್ರ ಯಥರ್ವ್ ಫೈಟ್; ಮೂಗು ಕಚ್ಚಿದ ಮುದ್ದು ಕಂದನ ವಿಡಿಯೋ ವೈರಲ್
ನಟಿ ರಾಧಿಕಾ ಪಂಡಿತ್ ಅವರು ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಯಶ್ ಜೊತೆ ಅವರ ಪುತ್ರ ಯಥರ್ವ್ ಮುದ್ದಾಗಿ ಫೈಟ್ ಮಾಡುತ್ತಿರುವ ಕ್ಷಣಗಳು ಈ ವಿಡಿಯೋದಲ್ಲಿ ಸೆರೆ ಆಗಿವೆ.
‘ಕೆಜಿಎಫ್: ಚಾಪ್ಟರ್ 2’ ನಟ ಯಶ್ (Yash) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಶೂಟಿಂಗ್ ಇಲ್ಲದಿದ್ದಾಗ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಮಕ್ಕಳಾದ ಯಥರ್ವ್ (Yatharv Yash) ಮತ್ತು ಆರ್ಯಾ (Ayra Yash) ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಆ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ. ಅವುಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಸಿಗುತ್ತವೆ. ಈಗ ರಾಧಿಕಾ ಪಂಡಿತ್ ಅವರು ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಯಶ್ ಜೊತೆ ಅವರ ಪುತ್ರ ಯಥರ್ವ್ ಮುದ್ದಾಗಿ ಫೈಟ್ ಮಾಡುತ್ತಿರುವ ಕ್ಷಣಗಳು ಈ ವಿಡಿಯೋದಲ್ಲಿ ಸೆರೆ ಆಗಿವೆ.
ಯಶ್ ನಟನೆಯ ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಚಿತ್ರ ರಿಲೀಸ್ ಆಗಿ ಧೂಳೆಬ್ಬಿಸಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಹೊಸ ರಿಲೀಸ್ ಡೇಟ್ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ:
Radhika Pandit: ಹೊಸ ಮನೆಯ ಟೆರೇಸ್ನಿಂದ ಅಭಿಮಾನಿಗಳಿಗೆ ಹೆಲೋ ಹೇಳಿದ ರಾಧಿಕಾ ಪಂಡಿತ್-ಆಯ್ರಾ ಯಶ್
Published on: Aug 07, 2021 09:56 AM
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

