India vs England: ಥೇಟ್ ರೋಹಿತ್ ಶರ್ಮಾ ರೀತಿಯಲ್ಲೇ ಚೆಂಡನ್ನು ಸಿಕ್ಸ್ಗೆ ಅಟ್ಟಿದ ಜಸ್ಪ್ರೀತ್ ಬುಮ್ರಾ: ವಿಡಿಯೋ
Jasprit Bumrah: ಥೇಟ್ ಇದೇ ಮಾದರಿಯಲ್ಲಿ ಜಸ್ಪ್ರೀತ್ ಬುಮ್ರಾ ಚೆಂಡನ್ನು ಸಿಕ್ಸ್ಗೆ ಅಟ್ಟಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಇಂಗ್ಲೆಂಡ್ ತಂಡವನ್ನು 183 ರನ್ಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ (Team India) 278 ರನ್ ಬಾರಿಸಿ 95 ರನ್ಗಳ ಮುನ್ನಡೆ ಸಾಧಿಸಿತು. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಂಗ್ಲರು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 25 ರನ್ ಕಲೆಹಾಕಿದೆ. 70 ರನ್ಗಳ ಹಿನ್ನಡೆಯಲ್ಲಿದೆ.
ಕೆ. ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ನಿರ್ಗಮನದ ಬಳಿಕ ದಿಢೀರ್ ಕುಸಿತ ಕಂಡ ಭಾರತಕ್ಕೆ 9ನೇ ವಿಕೆಟ್ಗೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬ್ಯಾಟಿಂಗ್ ನಡೆದ ತಂಡದ ಮೊತ್ತವನ್ನು 278ಕ್ಕೆ ತಂದಿಟ್ಟರು. ಅದರಲ್ಲೂ ಯಾರ್ಕರ್ ಕಿಂಗ್ ಬುಮ್ರಾ ಮನಬಂದಂತೆ ಬ್ಯಾಟ್ ಬೀಸಿದರು.
ಬುಮ್ರಾ ಬ್ಯಾಟಿಂಗ್ನಲ್ಲಿ ಹೈಲೇಟ್ ಆಗಿದ್ದು ಆ ಒಂದು ಸಿಕ್ಸ್. ಟೀಮ್ ಇಂಡಿಯಾದಲ್ಲಿ ಪುಲ್ ಶಾಟ್ ಹೊಡೆಯುವುದರಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಎಕ್ಸ್ಪರ್ಟ್. ಲೀಲಾಜಾಲವಾಗಿ ಇವರು ಚೆಂಡನ್ನು ಪುಲ್ ಮಾಡುವ ಮೂಲಕ ಸಿಕ್ಸ್ ಸಿಡಿಸುತ್ತಾರೆ. ಆದರೆ, ಥೇಟ್ ಇದೇ ಮಾದರಿಯಲ್ಲಿ ಜಸ್ಪ್ರೀತ್ ಬುಮ್ರಾ ಚೆಂಡನ್ನು ಸಿಕ್ಸ್ಗೆ ಅಟ್ಟಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Sam Curran gets the taste of his own medicine ? Bumrah smashes 3 consecutive boundaries ?
Tune into Sony Six (ENG), Sony Ten 3 (HIN), Sony Ten 4 (TAM, TEL) & SonyLIV (https://t.co/AwcwLCPFGm ) now! ?#ENGvINDOnlyOnSonyTen #BackOurBoys #JaspritBumrah pic.twitter.com/XgaSYxOf21
— Sony Sports (@SonySportsIndia) August 6, 2021
ಸ್ಯಾಮ್ ಕುರ್ರನ್ ಬೌಲಿಂಗ್ನಲ್ಲಿ ಬುಮ್ರಾ ಅವರು ಡೀಪ್ ಸ್ಕ್ವಾರ್ ಲೆಗ್ ಕಡೆ ಪುಲ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಹಿಂದಿ ಬಾಲ್ನಲ್ಲಿ ಬೌಂಡರಿ ಬಾರಿಸಿದ್ದರು. ನಂತರದ ಬಾಲ್ ಸಿಕ್ಸ್ ಹೋದರೆ ಮುಂದಿನ ಎಸೆತದಲ್ಲೂ ಬೌಂಡರಿ ಬಾರಿಸಿ ಪರಾಕ್ರಮ ಮೆರೆದರು. ಬುಮ್ರಾ 34 ಎಸೆತಗಳಲ್ಲಿ 3 ಬೌಂಡಡರಿ, 1 ಸಿಕ್ಸರ್ ಬಾರಿಸಿ 28 ರನ್ ಗಳಿಸಿದರು.
ಭಾರತ ಪರ ಕೆ. ಎಲ್ ರಾಹುಲ್ 214 ಎಸೆತಗಳಲ್ಲಿ 84 ರನ್ ಬಾರಿಸಿದರೆ, ರವೀಂದ್ರ ಜಡೇಜಾ 86 ಎಸೆತಗಳಲ್ಲಿ 56 ರನ್ ಚಚ್ಚಿದರು. ಭಾರತ 84.5 ಓವರ್ನಲ್ಲಿ 278 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ರಾಬಿನ್ಸನ್ 5 ವಿಕೆಟ್ ಕಿತ್ತರೆ, ಜೇಮ್ಸ್ 4 ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದರು.
Tokyo Olympics: ರಿಲೇಯಲ್ಲಿ ಭಾರತಕ್ಕೆ ನಿರಾಸೆ: ಒಂದು ಸ್ಥಾನದಿಂದ ಕೈತಪ್ಪಿದ ಫೈನಲ್
(India vs England Jasprit Bumrah smacks Sam Curran for a huge six in first Test like Rohit Sharma)