Virat Kohli: ಐಪಿಎಲ್ ಹರಾಜಿನಲ್ಲಿ ಕೊಹ್ಲಿಯನ್ನ ಆರ್​ಸಿಬಿ ಖರೀದಿಸುವ ಮುನ್ನ ನಡೆದ ಡ್ರಾಮ ನಿಮಗೆ ಗೊತ್ತೇ?

IPL 2021: ಆರ್​ಸಿಬಿ ಹೆಚ್ಚಾಗಿ ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿದೆ. Kohliಯನ್ನ ಬಿಟ್ಟುಕೊಡದೆ RCB ಎಷ್ಟು ಕೋಟಿ ಕೊಟ್ಟಾದರೂ ತನ್ನಲ್ಲೇ ಉಳಿಸಿಕೊಂಡಿದೆ. ಅಷ್ಟರ ಮಟ್ಟಿಗೆ IPL​ನಲ್ಲಿ ಕೊಹ್ಲಿ ತನ್ನ ಅಗತ್ಯತೆಯನ್ನು ತೋರಿಸಿಕೊಟ್ಟಿದ್ದಾರೆ.

Virat Kohli: ಐಪಿಎಲ್ ಹರಾಜಿನಲ್ಲಿ ಕೊಹ್ಲಿಯನ್ನ ಆರ್​ಸಿಬಿ ಖರೀದಿಸುವ ಮುನ್ನ ನಡೆದ ಡ್ರಾಮ ನಿಮಗೆ ಗೊತ್ತೇ?
ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ, ದೆಹಲಿ (ದೇಶೀಯ ಕ್ರಿಕೆಟ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಒಟ್ಟು 311 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 9929 ರನ್ ಗಳಿಸಿದ್ದಾರೆ. ಇದೇ ವೇಳೆ ಕೊಹ್ಲಿ ಬ್ಯಾಟ್​ನಿಂದ 5 ಶತಕ ಮತ್ತು 72 ಅರ್ಧ ಶತಕಗಳು ಮೂಡಿ ಬಂದಿವೆ. ಹಾಗೆಯೇ 879 ಬೌಂಡರಿ ಮತ್ತು 315 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
Follow us
TV9 Web
| Updated By: Vinay Bhat

Updated on:Aug 07, 2021 | 11:29 AM

ಕೊರೋನಾ ವೈರಸ್ (Corona Virus) ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಮುಟುಕುಗೊಂಡಿದ್ದ ಐಪಿಎಲ್ 14ನೇ ಆವೃತ್ತಿಗೆ (IPL 2021) ಮುಂದಿನ ತಿಂಗಳು ಮತ್ತೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ 19 ರಿಂದ ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈನ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಸಿಎಸ್​ಕೆ (CSK), ಪಂಜಾಬ್ ಸೇರಿದಂತೆ ಕೆಲವು ಫ್ರಾಂಚೈಸಿ ದುಬೈ ಫ್ಲೈಟ್ ಏರಲು ತಯಾರಾಗಿ ನಿಂತಿದೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇದರಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಪ್ರಮುಖ ಮಾತ್ರ ವಹಿಸಲಿದ್ದಾರೆ.

ಹೌದು, ಆರ್​ಸಿಬಿ ಹೆಚ್ಚಾಗಿ ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿದೆ. ಸದ್ಯದ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್​ಮನ್​​ ಎಂದರೆ ಅದು ವಿರಾಟ್ ಕೊಹ್ಲಿ. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಬೇರೆ ಫ್ರಾಂಚೈಸಿ ಸೇರದೆ ಒಂದೇ ತಂಡದಲ್ಲಿ ಆಡುತ್ತಿರುವ ಕೆಲವೇ ಕೆಲವು ಆಟಗಾರರ ಪೈಕಿ ಕೊಹ್ಲಿ ಕೂಡ ಒಬ್ಬರು. ಕೊಹ್ಲಿಯನ್ನ ಬಿಟ್ಟುಕೊಡದೆ ಆರ್​ಸಿಬಿ ಎಷ್ಟು ಕೋಟಿ ಕೊಟ್ಟಾದರೂ ತನ್ನಲ್ಲೇ ಉಳಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಐಪಿಎಲ್​ನಲ್ಲಿ ಕೊಹ್ಲಿ ತನ್ನ ಅಗತ್ಯತೆಯನ್ನು ತೋರಿಸಿಕೊಟ್ಟಿದ್ದಾರೆ.

ಆದರೆ, ಇಂಥಹ ಶ್ರೇಷ್ಠ ಆಟಗಾರನನ್ನು ಐಪಿಎಲ್​ನ ಒಂದು ಫ್ರಾಂಚೈಸಿ ಆರಂಭದಲ್ಲಿ ರಿಜೆಕ್ಟ್ ಮಾಡಿತ್ತು ಎಂದರೆ ನಂಬಲೇಬೇಕು. 2008ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಗಿನ ಭಾರತದ ಅಂಡರ್-19 ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರನ್ನು ಖರೀದಿ ಮಾಡಿತ್ತು. ಆದರೆ, ಆರ್​ಸಿಬಿ ಕೊಹ್ಲಿಯನ್ನು ಖರೀದಿ ಮಾಡುವ ಮುನ್ನ ಮತ್ತೊಂದು ಫ್ರಾಂಚೈಸಿ ಅಂದಿನ ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್​ಡೆವಿಲ್ಸ್) ಹರಾಜಿನಲ್ಲಿ ಇವರನ್ನು ಜೆಕ್ಟ್ ಮಾಡಿತ್ತಂತೆ.

2008ರ ಐಪಿಎಲ್ ಹರಾಜಿನಲ್ಲಿ ಪ್ರತಿ ತಂಡಗಳಿಗೆ ಇಬ್ಬರು ಅಂಡರ್-19 ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಈ ಸಂದರ್ಭ ಡೆಲ್ಲಿ ಆಗಿನ ಭಾರತದ ಅಂಡರ್-19 ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯನ್ನು ಬಿಟ್ಟು 50 ಸಾವಿರ ಡಾಲರ್​ಗೆ ಪ್ರದೀಪ್ ಸಂಗ್ವಾನ್ರನ್ನು ಖರೀದಿ ಮಾಡಿತ್ತು. ಇದಾದ ಬೆನ್ನಲ್ಲೆ ಆರ್​ಸಿಬಿ ಫ್ರಾಂಚೈಸಿ 30 ಸಾವಿರ ಡಾಲರ್​​ಗೆ ಕೊಹ್ಲಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಅಲ್ಲಿಂದ ಶುರುವಾದ ಕೊಹ್ಲಿ ಆರ್ಭಟ ಇಂದಿಗೂ ಮುಂದುವರೆಯುತ್ತಲೇ ಇದೆ. ಇತ್ತ ಡೆಲ್ಲಿ ಖರೀದಿ ಮಾಡಿದ ಆಟಗಾರ ಪ್ರದೀಪ್ ಮೂರು ವರ್ಷ ಆಡಿ ಯಶಸ್ಸು ಸಿಗದೆ ಬಳಿಕ ಹೊರ ಬಿದ್ದರು. 2008ರಲ್ಲಿ ಐಪಿಎಲ್ ಆರಂಭವಾದಾಗ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಅತ್ಯುತ್ತಮ ಅವಕಾಶವೊಂದನ್ನು ಮಿಸ್ ಮಾಡಿಕೊಂಡು ಇದೀಗ ಪರಿತಪಿಸುತ್ತಿರುವುದಂತು ಸುಳ್ಳಲ್ಲ.

Tokyo Olympics: ಕೂದಲೆಳೆಯಲ್ಲಿ ಭಾರತಕ್ಕೆ ಪದಕ ಮಿಸ್: ಗಾಲ್ಫ್​ನಲ್ಲಿ ಕರ್ನಾಟಕದ ಅದಿತಿ ಅಶೋಕ್​ಗೆ ಸೋಲು

IND vs ENG: ಆಂಡರ್ಸನ್​ಗೆ ‘ನೀ ತಾಂಟ್ರೆ ಬಾ ತಾಂಟ್’ ಎಂದ ಮೊಹಮ್ಮದ್ ಸಿರಾಜ್: ಇಬ್ಬರ ನಡುವೆ ಮಾತಿನ ಚಕಮಕಿ

(IPL Auction Here is the details big drama that held before select Virat Kohli RCB)

Published On - 11:28 am, Sat, 7 August 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ