AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಸಿನಿಮಾದಲ್ಲಿ ಸನ್ನಿ ಲಿಯೋನ್​ಗೆ 50 ಲಕ್ಷ ಸಂಬಳ; ಮಾಜಿ ನೀಲಿ ತಾರೆಗೆ ಏನು ಕೆಲಸ?

ಸನ್ನಿ ಲಿಯೋನ್​ಗೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಅದು ‘ಪುಷ್ಪ’ ಚಿತ್ರತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ. ಹಾಗಾಗಿ ನಿರ್ದೇಶಕ ಸುಕುಮಾರ್​ ಈ ಪ್ಲ್ಯಾನ್​ ಮಾಡಿದಂತಿದೆ.

ರಶ್ಮಿಕಾ ಸಿನಿಮಾದಲ್ಲಿ ಸನ್ನಿ ಲಿಯೋನ್​ಗೆ 50 ಲಕ್ಷ ಸಂಬಳ; ಮಾಜಿ ನೀಲಿ ತಾರೆಗೆ ಏನು ಕೆಲಸ?
ಸನ್ನಿ ಲಿಯೋನ್​
TV9 Web
| Edited By: |

Updated on: Jul 24, 2021 | 3:46 PM

Share

ಒಂದು ಕಾಲದಲ್ಲಿ ನೀಲಿ ಚಿತ್ರಗಳ ತಾರೆಯಾಗಿದ್ದ ನಟಿ ಸನ್ನಿ ಲಿಯೋನ್ (Sunny Leone)​ ನಂತರ ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆ ಕಂಡುಕೊಂಡರು. ಬಳಿಕ ಅವರಿಗೆ ಬೇರೆ ಬೇರೆ ಭಾಷೆಗಳಲ್ಲೂ ಆಫರ್​ಗಳು ಬರಲು ಆರಂಭಿಸಿದವು. ಈಗ ಅಲ್ಲು ಅರ್ಜುನ್​ (Allu Arjun) ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅಭಿನಯಿಸಲು ಸನ್ನಿ ಲಿಯೋನ್​ಗೆ ಅವಕಾಶ ಸಿಗುತ್ತಿದೆ. ಅರೆರೆ, ಆ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಲ್ಲವೇ? ಹಾಗಾದರೆ ಸನ್ನಿ ಲಿಯೋನ್​ಗೆ ಅಲ್ಲೇನು ಕೆಲಸ? ಈ ಪ್ರಶ್ನೆಗೆ ಉತ್ತರ ಐಟಂ ಡ್ಯಾನ್ಸ್​!

ಹಲವು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಎಲ್ಲ ಸಿನಿಮಾದಲ್ಲೂ ಐಟಂ ಸಾಂಗ್​ಗೆ ಸುಕುಮಾರ್​ ಹೆಚ್ಚು ಮಹತ್ವ ನೀಡುತ್ತಾರೆ. ಅದನ್ನು ‘ಪುಷ್ಪ’ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ ಸನ್ನಿ ಲಿಯೋನ್​ ಜೊತೆಗೆ ಚಿತ್ರತಂಡ ಈಗಾಗಲೇ ಒಂದು ಸುತ್ತಿನ ಮಾತುಕಥೆ ಮುಗಿಸಿದೆ. ಅವರು ಈ ಒಂದು ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ 50 ಲಕ್ಷ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಈಗಾಗಲೇ ಹಲವು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡಿ ಸನ್ನಿ ಫೇಮಸ್​ ಆಗಿದ್ದಾರೆ. ಶಾರುಖ್​ ಖಾನ್​, ಸಂಜಯ್​ ದತ್​ ಮುಂತಾದವರ ಸಿನಿಮಾದಲ್ಲೂ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರಿಗೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರಿಂದ ಐಟಂ ಡ್ಯಾನ್ಸ್​ ಮಾಡಿಸಿದರೆ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ ಎಂಬ ಲೆಕ್ಕಾಚಾರ ‘ಪುಷ್ಪ’ ತಂಡದ್ದು. ಅಲ್ಲದೇ ಈ ಸಿನಿಮಾ ಮಲಯಾಳಂ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ಕೇರಳದಲ್ಲಿ ಸನ್ನಿ ಲಿಯೋನ್​ಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಇದ್ದಾರೆ. ಈ ಎಲ್ಲ ಆಯಾಮಗಳಲ್ಲೂ ನಿರ್ದೇಶಕ ಸುಕುಮಾರ್​ ಆಲೋಚಿಸಿದಂತಿದೆ.

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹಾದ್​ ಫಾಸಿಲ್​, ಜಗಪತಿ ಬಾಬು, ಪ್ರಕಾಶ್​ ರಾಜ್​ ಮುಂತಾದವರು ನಟಿಸಿರುವ ‘ಪುಷ್ಪ’ ಚಿತ್ರ ಎರಡು ಪಾರ್ಟ್​ಗಳಲ್ಲಿ ಮೂಡಿಬರಲಿದೆ. ಐಎಂಡಿಬಿ ವೆಬ್​ಸೈಟ್​ನ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಮೊದಲ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ:

Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ​ ಸನ್ನಿ ಲಿಯೋನ್​; ವೈರಲ್​ ಆಯ್ತು ನಟಿಯ ಹೊಸ ಫೋಟೋ

ನಿಮ್ಮ ಪರ್ಸನಲ್​ ಮೆಸೇಜ್​ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್​ ಉಪಾಯ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?