ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​

Shamita Shetty | Raqesh Bapat: ನಿಧಾನವಾಗಿ ಶಮಿತಾ ಶೆಟ್ಟಿ ಮತ್ತು ರಾಕೇಶ್​ ಬಾಪಟ್​ ನಡುವೆ ಆತ್ಮೀಯತೆ ಹೆಚ್ಚುತ್ತಿರುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ. ಕಿಸ್​ ಬೇಕು ಎಂದು ಕ್ಯಾಮೆರಾ ಮುಂದೆಯೇ ಕೇಳುವಷ್ಟರ ಮಟ್ಟಿಗೆ ಶಮಿತಾ ಆ್ಯಕ್ಟೀವ್​ ಆಗಿದ್ದಾರೆ.

ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​
ರಾಕೇಶ್​ ಬಾಪಟ್​, ಶಮಿತಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Aug 29, 2021 | 9:01 AM

ಇತ್ತ ರಾಜ್​ ಕುಂದ್ರಾ ಪ್ರಕರಣದಿಂದಾಗಿ ಶಿಲ್ಪಾ ಶೆಟ್ಟಿ ಕುಟುಂಬದವರ ತಲೆನೋವು ಏನೇ ಇರಲಿ, ಅತ್ತ ಶಿಲ್ಪಾ ತಂಗಿ ಶಮಿತಾ ಶೆಟ್ಟಿ (Shamita Shetty) ಮಾತ್ರ ಬಿಗ್​ ಬಾಸ್​ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಕರಣ್​ ಜೋಹರ್​ ನಡೆಸಿಕೊಡುತ್ತಿರುವ ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮದಲ್ಲಿ ಶಮಿತಾ ಶೆಟ್ಟಿ ಸಖತ್​ ಹೈಲೈಟ್​ ಆಗುತ್ತಿದ್ದಾರೆ. ಕೆಲವೊಮ್ಮೆ ಜಗಳದಿಂದ ಅಟೆನ್ಷನ್​ ಪಡೆಯುವ ಅವರು, ಮತ್ತೆ ಕೆಲವೊಮ್ಮೆ ರೊಮ್ಯಾನ್ಸ್​ ಕಾರಣಕ್ಕಾಗಿ ಸುದ್ದಿ ಆಗುತ್ತಾರೆ. ಇತ್ತೀಚೆಗಂತೂ ಅವರು ರಾಕೇಶ್​ ಬಾಪಟ್​ ((Raqesh Bapat) ಜೊತೆ ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಾಕೇಶ್​ ಅವರನ್ನು ಹತ್ತಿರ ಕರೆದು ‘ನನಗೆ ಈಗಲೇ ಮುತ್ತು ಕೊಡು’ ಎಂದು ನೇರವಾಗಿ ಕ್ಯಾಮೆರಾ ಮುಂದೆಯೇ ಕೇಳುವಷ್ಟರ ಮಟ್ಟಿಗೆ ಶಮಿತಾ ಆ್ಯಕ್ಟೀವ್​ ಆಗಿದ್ದಾರೆ.

ಇತ್ತೀಚಿನ ಎಪಿಸೋಡ್​ನಲ್ಲಿ ರಾಕೇಶ್​ ಬಾಪಟ್​ ಅಡುಗೆ ಮಾಡುತ್ತಿದ್ದರು. ‘ಅದನ್ನು ಹೆಚ್ಚು ಬಿಸಿ ಮಾಡಬೇಡ. ಗಟ್ಟಿ ಆಗಿಬಿಡುತ್ತದೆ’ ಎಂದು ಅವರಿಗೆ ಶಮಿತಾ ಸೂಚನೆ ನೀಡಿದರು. ‘ಮತ್ತೇನಾದರೂ ಹೇಳುವುದಿದೆಯೇ’ ಎಂದು ರಾಕೇಶ್​ ಕೇಳಿದರು. ಈ ಪ್ರಶ್ನೆಯನ್ನು ತಪ್ಪಾಗಿ ಅರ್ಥಮಾಡಿಕೊಂಡ ಶಮಿತಾ, ‘ಇದರಿಂದ ನಿನಗೇನಾದರೂ ತೊಂದರೆ ಆಯಿತಾ’ ಎಂದು ಮರುಪ್ರಶ್ನೆ ಹಾಕಿದರು. ನಂತರ ತಾವೇ ತಪ್ಪಾಗಿ ಅರ್ಥ ಮಾಡಿಕೊಂಡಿದ್ದು ಎಂಬ ಅರಿವು ಅವರಿಗೆ ಆಯಿತು. ಕೂಡಲೇ ರಾಕೇಶ್​ ಅವರನ್ನು ಪಕ್ಕಕ್ಕೆ ಕರೆದು ಮುತ್ತು ಕೊಡಿಸಿಕೊಂಡರು!

‘ಬಾ ಇಲ್ಲಿ. ಈ ಕೂಡಲೇ ನನಗೊಂದು ಮುತ್ತು ಕೊಡು’ ಎಂದು ಲೇಡಿ ಬಾಸ್​ ರೀತಿಯಲ್ಲಿ ಒತ್ತಾಯ ಮಾಡಿದರು. ಅದಕ್ಕೆ ಒಪ್ಪಿದ ರಾಕೇಶ್​ ಬಾಪಟ್​ ಅವರು ಶಮಿತಾ ಕೆನ್ನೆಗೆ ಮುತ್ತಿಟ್ಟರು. ಇದನ್ನೆಲ್ಲ ಹತ್ತಿರದಿಂದಲೇ ನೋಡುತ್ತಿದ್ದ ಕಾಂಟ್ರವರ್ಸಿ ಗಾಯಕಿ ನೇಹಾ ಬಾಸಿನ್​ ಅವರು ‘ಸೋ ಸ್ವೀಟ್​’ ಎಂದು ಹೊಗಳುತ್ತಾ ನಾಚಿಕೊಂಡರು. ಅವರ ಮಾತಿಗೆ ಪ್ರತಿಕ್ರಿಯಿಸಿದ ಶಮಿತಾ, ‘ರಾಕೇಶ್​ ತುಂಬ ಕ್ಯೂಟ್​ ಆಗಿದ್ದಾನೆ’ ಎಂದು ಹೇಳಿ ಜಾರಿಕೊಂಡರು. ಈ ವಿಡಿಯೋ ವೈರಲ್​ ಆಗುತ್ತಿದೆ. ಇಬ್ಬರ ಬಗ್ಗೆ ನೆಟ್ಟಿಗರು ತರಹೇವಾರಿ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

View this post on Instagram

A post shared by Voot (@voot)

ಕೆಲವೇ ದಿನಗಳ ಹಿಂದೆ ಇದೇ ರೀತಿ ಆಗಿತ್ತು. ಬಿಗ್​ ಬಾಸ್​ ಸ್ಪರ್ಧಿಗಳನ್ನು ಎಬ್ಬಿಸಲು ಪ್ರತಿ ದಿನ ಬೆಳಗ್ಗೆ ಹಾಡು ಪ್ಲೇ ಮಾಡಲಾಗುತ್ತಿದೆ. ಈ ವೇಳೆ ಶಮಿತಾ ಶೆಟ್ಟಿ ಮಲಗಿದ್ದ ಜಾಗಕ್ಕೆ ತೆರಳಿದ್ದ ರಾಕೇಶ್​ ಬಾಪಟ್​ ಅವರು ಕಿಸ್​ ಮಾಡಿದ್ದರು. ಅವರು ಶಮಿತಾ ಕೈಗೆ ಮುತ್ತಿಟ್ಟಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ನಿಧಾನವಾಗಿ ಶಮಿತಾ ಮತ್ತು ರಾಕೇಶ್​ ಬಾಪಟ್​ ನಡುವೆ ಆತ್ಮೀಯತೆ ಹೆಚ್ಚುತ್ತಿರುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

ಇದನ್ನೂ ಓದಿ:

‘ನೀನು ಡೈಪರ್​ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್​ ಆದೇಶ ನೀಡಿದ ಶಮಿತಾ ಶೆಟ್ಟಿ

‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ