ಬಿಗ್ ಬಾಸ್ ನಿರೂಪಕನನ್ನೇ ಎದುರು ಹಾಕಿಕೊಂಡ ಸ್ಪರ್ಧಿ; ನನ್ನನ್ನು ಮನೆಯಿಂದ ಹೊರಹಾಕಿದರೂ ಬೇಸರವಿಲ್ಲ ಎಂದ ನಟಿ
ಶಿಲ್ಪಾ ಶೆಟ್ಟಿ ತಂಗಿ ಹಾಗೂ ದಿವ್ಯಾ ಅಗರ್ವಾಲ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ದಿವ್ಯಾಗೆ ಕರಣ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
‘ಬಿಗ್ ಬಾಸ್ ಒಟಿಟಿ’ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಈ ಶೋನ ನಿರೂಪಕ ಕರಣ್ ಜೋಹರ್ ಪಕ್ಷಪಾತ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವರಿಗೆ ಇದು ಹೌದು ಎನಿಸಿದರೆ ಇನ್ನೂ ಕೆಲವರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಅಗರ್ವಾಲ್ ನಿರೂಪಕ ಕರಣ್ ಅವರನ್ನೇ ಎದುರು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮನೆಯಿಂದ ನನ್ನನ್ನು ಹೊರಹಾಕಿದರೂ ನಾನು ಅದಕ್ಕೆ ಅಂಜುವುದಿಲ್ಲ ಎಂದಿದ್ದಾರೆ.
ಶಿಲ್ಪಾ ಶೆಟ್ಟಿ ತಂಗಿ ಹಾಗೂ ದಿವ್ಯಾ ಅಗರ್ವಾಲ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ದಿವ್ಯಾಗೆ ಕರಣ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ದಿವ್ಯಾ ಅವರು ಮನೆಯಲ್ಲಿ ಮಾತನಾಡಿದ್ದಾರೆ. ‘ಕರಣ್ ಟೀಕೆಗಳು ನನ್ನನ್ನು ಬದಲಾಯಿಸುವುದಿಲ್ಲ. ನಾನು ಹೀಗೆಯೇ ಇರುತ್ತೇನೆ. ಅವರಿಗೆ ನನ್ನ ಬಗ್ಗೆ ಗೊತ್ತಿಲ್ಲದೆ ಇದ್ದರೂ ಅಸಹ್ಯವಾಗಿ ಮಾತನಾಡುವ ಹಕ್ಕು ಅವರಿಗೆ ಇಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಅವರ ಡೇರಿಂಗ್ ನೋಡಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ.
‘ನನ್ನ ಬಗ್ಗೆ ಯಾರೇ ತಪ್ಪು ಮಾತನಾಡಿದರೂ ನಾನು ಆ ಬಗ್ಗೆ ಧ್ವನಿ ಎತ್ತುತ್ತೇನೆ. ನನ್ನ ಎದುರು ಇರುವ ವ್ಯಕ್ತಿ ಯಾರು ಎಂಬುದನ್ನು ನಾನು ಕೇರ್ ಮಾಡುವುದಿಲ್ಲ. ನನ್ನನ್ನು ಈ ಮನೆಯಿಂದ ಹೊರ ಹಾಕಿದರೂ ನನಗೆ ಬೇಸರವಿಲ್ಲ. ನಾನು ಕಲಾವಿದೆ. ಇಲ್ಲಲ್ಲದಿದ್ದರೆ ಮತ್ತೊಂದು ಕಡೆ ಹೋಗಿ ನಟನೆ ಮಾಡುತ್ತೇನೆ’ ಎಂದು ಹೇಳುವ ಮೂಲಕ ಹಲವು ವೀಕ್ಷಕರ ಮನ ಗೆದ್ದಿದ್ದಾರೆ.
‘ನನ್ನ ಬಗ್ಗೆ ಕರಣ್ ಹೇಳಿದ ಕೆಲವು ಮಾತುಗಳು ನಿಜವಲ್ಲ. ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳುವ ಹಕ್ಕು ಅವರಿಗೆ ಇಲ್ಲ. ಅವರು ಆ ರೀತಿ ಹೇಳಿದ್ದು ನನ್ನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ನನಗೆ ತೊಂದರೆ ಉಂಟಾಗುತ್ತಿದೆ ಎಂದಾಗ ನಾನು ಧ್ವನಿ ಎತ್ತುವುದರಲ್ಲಿ ತಪ್ಪೇನಿದೆ? ನೀವು ನಿಮ್ಮನ್ನು ಬಾಲಿವುಡ್ನ ಕಿಂಗ್ ಎಂದು ಪರಿಗಣಿಸಿದ್ದೀರಿ. ನಿಮ್ಮ ಹೇಳಿಕೆ ಪ್ರಭಾವ ಬೀರುತ್ತದೆ ಎಂಬುದು ಗೊತ್ತಿದ್ದೂ ಈ ರೀತಿ ಏಕೆ ಮಾತನಾಡುತ್ತೀರಿ’ ಎಂದು ಕೇಳಿದ್ದಾರೆ ಅವರು.
ದಿವ್ಯಾ ಈ ಹೇಳಿಕೆ ಕರಣ್ ಜೋಹರ್ ವಿರೋಧಿಗಳಿಗೆ ಇಷ್ಟವಾಗಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ದಿವ್ಯಾ ಅವರನ್ನು ಬೆಂಬಲಿಸುತ್ತಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್ ಮನೆ ತಲುಪುವ ಮೊದಲು ಸ್ಪರ್ಧಿಗಳು ದಟ್ಟ ಅರಣ್ಯವನ್ನು ಹಾದು ಬರಬೇಕು’; ಕುತೂಹಲ ಹೆಚ್ಚಿಸಿದ ನೂತನ ಪ್ರೊಮೊ