AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನಿ ಹೇಸ್ಟ್​ ಪ್ರೊಫೆಸರ್​ಗೆ ಕಾಡಿತ್ತು ಕ್ಯಾನ್ಸರ್​; ಅವರ ಮುಂದಿತ್ತು ಸಾವು ಅಥವಾ ಕಾಲು ಕತ್ತರಿಸುವ ಆಯ್ಕೆ

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಈ ವೆಬ್​ ಸೀರಿಸ್​ನಲ್ಲಿ ಪ್ರೊಫೆಸರ್​ ಪಾತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರತಿ ದರೋಡೆಯ ರುವಾರಿ ಇದೇ ಪ್ರೊಫೆಸರ್​.

ಮನಿ ಹೇಸ್ಟ್​ ಪ್ರೊಫೆಸರ್​ಗೆ ಕಾಡಿತ್ತು ಕ್ಯಾನ್ಸರ್​; ಅವರ ಮುಂದಿತ್ತು ಸಾವು ಅಥವಾ ಕಾಲು ಕತ್ತರಿಸುವ ಆಯ್ಕೆ
ಮನಿ ಹೇಸ್ಟ್​ ಪ್ರೊಫೆಸರ್​ಗೆ ಕಾಡಿತ್ತು ಕ್ಯಾನ್ಸರ್​; ಅವರ ಮುಂದಿತ್ತು ಸಾವು ಅಥವಾ ಕಾಲು ಕತ್ತರಿಸುವ ಆಯ್ಕೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 28, 2021 | 3:36 PM

Share

‘ಮನಿ ಹೇಸ್ಟ್’​ ವೆಬ್​ ಸೀರಿಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಸ್ಪ್ಯಾನಿಶ್​ ಭಾಷೆಯ ಈ ವೆಬ್​ ಸೀರಿಸ್​ನಲ್ಲಿ ಬರುವ ಪ್ರತಿ ಪಾತ್ರಗಳು ಹಾಗೂ ಅವರಿಗೆ ಇಡಲಾದ ಹೆಸರುಗಳು ವೀಕ್ಷಕರಿಗೆ ಸಾಕಷ್ಟು ಇಷ್ಟವಾಗಿದೆ. ಈ ಕಾರಣಕ್ಕೆ ಭಾರತದಲ್ಲೂ ಇದಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಈ ವೆಬ್​ ಸೀರಿಸ್​ನಲ್ಲಿ ಪ್ರೊಫೆಸರ್​ ಪಾತ್ರ ಮಾಡಿದ ಅಲ್ವಾರೊ ಮೊರ್ಟೆಗೆ ಕಾಲಿನ ಕ್ಯಾನ್ಸರ್​ ಕಾಡಿತ್ತು. ಈಗ ಅವರು ಅದರಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಈ ವೆಬ್​ ಸೀರಿಸ್​ನಲ್ಲಿ ಪ್ರೊಫೆಸರ್​ ಪಾತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರತಿ ದರೋಡೆಯ ರುವಾರಿ ಇದೇ ಪ್ರೊಫೆಸರ್​. ಅಲ್ವಾರೊ ನಿರ್ವಹಿಸಿರುವ ಪಾತ್ರದ  ಮ್ಯಾನರಿಸಮ್​ ಎಲ್ಲರಿಗೂ ಇಷ್ಟವಾಗುತ್ತಿದೆ. ಅವರಿಗೆ ಒಂದು ಕಾಲದಲ್ಲಿ ಕ್ಯಾನ್ಸರ್​ ಕಾಡಿತ್ತು. ಅದರಿಂದ ಅವರು ಬದುಕಿ ಬಂದಿದ್ದಾರೆ.

‘ನಾನು ಹಾಸಿಗೆಯ ಮೇಲೆ ಮಲಗಿದ್ದೆ. ಬಿಳಿ ಬಣ್ಣದ ಕೋಟ್​ ಹಾಕಿ ಡಾಕ್ಟರ್​ ನನ್ನ ಬಳಿ ಬಂದರು. ನೀನು ಸಾಯುತ್ತೀಯಾ ಅಥವಾ ನಿನ್ನ ಕಾಲನ್ನು ಕತ್ತರಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಅದೆರಡೇ ನನ್ನ ಮುಂದಿರುವ ಆಯ್ಕೆ ಎಂದು ನಾನು ಭಾವಿಸಿದ್ದೆ. ಆದರೆ, ವೈದ್ಯರು ಹಾಗೆ ಹೇಳಲಿಲ್ಲ. ಅವರು ಇದನ್ನು ಗುಣಮಾಡಬಹುದು ಎಂದರು. ಅಂತೆಯೇ ನಾನು ಕ್ಯಾನ್ಸರ್​ನಿಂದ ಗುಣಮುಖನಾದೆ’ ಎಂದಿದ್ದಾರೆ ಅವರು.

‘ಮನಿ ಹೇಸ್ಟ್’​ ಯಶಸ್ವಿಯಾಗಿ ನಾಲ್ಕು ಸೀಸನ್​ ಪೂರ್ಣಗೊಳಿಸಿದೆ. ನೆಟ್​​ಫ್ಲಿಕ್ಸ್​ನಲ್ಲಿ ಈ ವೆಬ್​ ಸೀರಿಸ್​ ಪ್ರಸಾರವಾಗುತ್ತಿದೆ. ಐದನೇ ಸೀಸನ್​ ಸೆಪ್ಟೆಂಬರ್ 3ರಂದು ಪ್ರಸಾರಗೊಳ್ಳಲಿದೆ. ಐದನೇ ಸೀಸನ್​ ಎರಡು ಪಾರ್ಟ್​ಗಳಲ್ಲಿ ಬರುತ್ತಿದೆ ಅನ್ನೋದು ವಿಶೇಷ. ಈ ವೆಬ್​ ಸೀರಿಸ್​ಗಾಗಿ ಅನೇಕರು ಕಾದು ಕೂತಿದ್ದಾರೆ.

ಇದನ್ನೂ ಓದಿ: ‘ಜಗಳವಾಡಿ ಕ್ಷಮೆ ಕೇಳುವುದರೊಳಗೆ ಹೆಣವಾಗಿ ಬಂದಿದ್ದರು ತಂದೆ’​; ‘ನನ್ನರಸಿ ರಾಧೆ’ ಅಭಿನವ್ ನೋವಿನ ಕಥೆ 

ಬಿಗ್​ ಬಾಸ್​ ಹೊಸ ಸೀಸನ್​ ಸೆ.5ರಿಂದ ಆರಂಭ; ಗನ್​ ಹಿಡಿದು ಬಂದ ನಿರೂಪಕ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ