AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲಿ ಬರ್ತಿದೆ ವಿಜಯ್​ ಸೇತುಪತಿ-ತಾಪ್ಸಿ ಪನ್ನು ಸಿನಿಮಾ; ಸೆ.17ರಂದು ‘ಅನಬೆಲ್​ ಸೇತುಪತಿ’ ರಿಲೀಸ್​

Annabelle Sethupathi: ‘ಅನಬೆಲ್​ ಸೇತುಪತಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿಲ್ಲ. ನೇರವಾಗಿ ಓಟಿಟಿ ಮೂಲಕ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಸೆ.17ರಂದು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ಈ ಚಿತ್ರ ರಿಲೀಸ್​ ಆಗಲಿದೆ.

ಕನ್ನಡದಲ್ಲಿ ಬರ್ತಿದೆ ವಿಜಯ್​ ಸೇತುಪತಿ-ತಾಪ್ಸಿ ಪನ್ನು ಸಿನಿಮಾ; ಸೆ.17ರಂದು ‘ಅನಬೆಲ್​ ಸೇತುಪತಿ’ ರಿಲೀಸ್​
ವಿಜಯ್​ ಸೇತುಪತಿ-ತಾಪ್ಸಿ ಪನ್ನು
TV9 Web
| Updated By: ಮದನ್​ ಕುಮಾರ್​|

Updated on: Aug 27, 2021 | 3:54 PM

Share

ನಟ ವಿಜಯ್​ ಸೇತುಪತಿ ಅವರ ಪ್ರತಿಭೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಅವರು ಬಹುಬೇಡಿಕೆಯ ನಟನಾಗಿ ಮಿಂಚುತ್ತಿದ್ದಾರೆ. ಯಾವ ಪಾತ್ರ ಕೊಟ್ಟರೂ ಮನಮುಟ್ಟುವಂತೆ ಅಭಿನಯಿಸಿ ತೋರಿಸುತ್ತಾರೆ. ಅದೇ ರೀತಿ, ಹಿಂದಿ ಚಿತ್ರರಂಗದಲ್ಲಿ ನಟಿ ತಾಪ್ಸಿ ಪನ್ನು ಕೂಡ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ದೈತ್ಯ ಕಲಾವಿದರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರಕ್ಕೆ ‘ಅನಬೆಲ್​ ಸೇತುಪತಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಬಗ್ಗೆ ವಿಜಯ್​ ಸೇತುಪತಿ ಮತ್ತು ತಾಪ್ಸಿ ಪನ್ನು ಅವರು ಹೊಸ ನ್ಯೂಸ್​ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ, ಈ ಚಿತ್ರ ಕನ್ನಡದಲ್ಲೂ ರಿಲೀಸ್​ ಆಗಲಿದೆ.

‘ಅನಬೆಲ್​ ಸೇತುಪತಿ’ ಒಂದು ಹಾರರ್​ ಕಾಮಿಡಿ ಸಿನಿಮಾ. ಈ ಚಿತ್ರಕ್ಕೆ ದೀಪಕ್​ ಸುಂದರ್​ ರಾಜನ್​ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಮಾಡಲಾಗಿದೆ. ಬಹುತೇಕ ಸಿನಿಮಾಗಳಲ್ಲಿ ವಿಲನ್​ ಲುಕ್​ನಲ್ಲಿ ಕಾಣಿಸಿಕೊಳ್ಳುವ ವಿಜಯ್​ ಸೇತುಪತಿ ಅವರಿಗೆ ‘ಅನಬೆಲ್​ ಸೇತುಪತಿ’ ಚಿತ್ರದಲ್ಲಿ ರಾಯಲ್​ ಲುಕ್​ ಇದೆ. ತಾಪ್ಸಿ ಪನ್ನು ಅವರು ಬ್ರಿಟಿಷ್​ ಮಹಿಳೆಯ ರೀತಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕೌತುಕ ಮೂಡಿದೆ.​

ಇದು ಮೂಲತಃ ತಮಿಳು ಸಿನಿಮಾವಾಗಿದ್ದು ಕನ್ನಡ, ಹಿಂದಿ, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೆ ಡಬ್​ ಆಗಿದೆ. ಹಿಂದಿಯಲ್ಲಿ ಈ ಚಿತ್ರಕ್ಕೆ ‘ಅನಬೆಲ್​ ರಾಥೋಡ್​’ ಎಂದು ಶೀರ್ಷಿಕೆ ಇಡಲಾಗಿದೆ. ಫಸ್ಟ್​ಲುಕ್​ ಹಂಚಿಕೊಂಡಿರುವ ತಾಪ್ಸಿ ಪನ್ನು ಅವರು, ‘ಯಾಕೆಂದರೆ ಕೆಲವೊಮ್ಮೆ ಇದೆಲ್ಲವನ್ನೂ ನೋಡಲು ಒಂದು ಜನ್ಮ ಸಾಲದು’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಹಾಗಿದ್ದರೆ ಇದು ಪುನರ್ಜನ್ಮದ ಕಥೆ ಇರಬಹುದೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಅಂದಹಾಗೆ, ‘ಅನಬೆಲ್​ ಸೇತುಪತಿ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿಲ್ಲ. ನೇರವಾಗಿ ಓಟಿಟಿ ಮೂಲಕ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ಈ ಚಿತ್ರ ರಿಲೀಸ್​ ಆಗಲಿದೆ. ಸೆ.17ರಿಂದ 5 ಭಾಷೆಯಲ್ಲೂ ವೀಕ್ಷಣೆಗೆ ಲಭ್ಯವಾಗಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಜೈಪುರದಲ್ಲಿ ನಡೆದಿದೆ.

ಹೀರೋ-ವಿಲನ್ ಎಂಬ ಯಾವ ಭೇದವೂ ಇಲ್ಲದೇ ವಿಜಯ್​ ಸೇತುಪತಿ ಎಲ್ಲ ಬಗೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರು ಅಭಿಮಾನಿಗಳಿಗೆ ಏನಾದರೂ ಅಚ್ಚರಿ ನೀಡುತ್ತಾರೆ. ಹಾಗಾಗಿ ಅವರ ಚಿತ್ರಗಳ ಮೇಲೆ ಸಿನಿಪ್ರಿಯರು ಸಹಜವಾಗಿಯೇ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ‘ಅನಬೆಲ್​ ಸೇತುಪತಿ’ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಅವರ ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ:

ಬೆಂಗಳೂರಲ್ಲಿ ಜೊತೆಯಾಗಿ ಏನು ಮಾಡ್ತಿದ್ದಾರೆ ತಮನ್ನಾ-ವಿಜಯ್​ ಸೇತುಪತಿ? ಇದು ಸಿನಿಮಾ ಸಮಾಚಾರ ಅಲ್ಲವೇ ಅಲ್ಲ

ವಿಜಯ್​ ಸೇತುಪತಿ ಮೇಲೆ ಕಣ್ಣಿಟ್ಟ ‘ದಿ ಫ್ಯಾಮಿಲಿ ಮ್ಯಾನ್​’ ತಂಡ; 3ನೇ ಸೀಸನ್​ನಲ್ಲಿ ಬಿಗ್​ ಸರ್ಪ್ರೈಸ್​?​