ಬಿಗ್​ ಬಾಸ್​ ಹೊಸ ಸೀಸನ್​ ಸೆ.5ರಿಂದ ಆರಂಭ; ಗನ್​ ಹಿಡಿದು ಬಂದ ನಿರೂಪಕ

‘ಬಿಗ್​ ಬಾಸ್​ ತೆಲುಗು ಸೀಸನ್​ 5’ರ ಪ್ರೋಮೋದಲ್ಲಿ ಗನ್​ ಹೆಚ್ಚು ಹೈಲೈಟ್​ ಆಗಿದೆ. ಪ್ರೋಮೋ ಮತ್ತು ಫೋಟೋಶೂಟ್​ ನೋಡಿದ ಜನರು, ‘ಎಲ್ಲ ಸರಿ, ಈ ಗನ್​ ಯಾಕೆ’ ಎಂದು ಕಮೆಂಟ್​ ಮಾಡುತ್ತಿದ್ದಾರೆ.

ಬಿಗ್​ ಬಾಸ್​ ಹೊಸ ಸೀಸನ್​ ಸೆ.5ರಿಂದ ಆರಂಭ; ಗನ್​ ಹಿಡಿದು ಬಂದ ನಿರೂಪಕ
ಬಿಗ್​ ಬಾಸ್​ ಹೊಸ ಸೀಸನ್​ ಸೆ.5ರಿಂದ ಆರಂಭ
Follow us
TV9 Web
| Updated By: ಮದನ್​ ಕುಮಾರ್​

Updated on: Aug 28, 2021 | 9:21 AM

ಕಿರುತೆರೆ ಪ್ರೇಕ್ಷಕರಿಗೆ ಬಿಗ್​ ಬಾಸ್​ ಎಂದರೆ ಭಾರಿ ಆಸಕ್ತಿ. ಹಾಗಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ರಿಯಾಲಿಟಿ ಶೋ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಇತ್ತೀಚೆಗಷ್ಟೇ ಕೊನೆಗೊಂಡಿತು. ತೆಲುಗಿನಲ್ಲಿ 5ನೇ ಸೀಸನ್​ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳು ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿವೆ. ಸ್ಟಾರ್​ ಮಾ ವಾಹಿನಿಯಲ್ಲಿ ಸೆ.5ರಂದು ಅದ್ದೂರಿಯಾಗಿ ‘ತೆಲುಗು ಬಿಗ್​ ಬಾಸ್​ ಸೀಸನ್​ 5’ ಆರಂಭ ಆಗಲಿದೆ. ಈ ಬಾರಿಯೂ ಅಕ್ಕಿನೇನಿ ನಾಗಾರ್ಜುನ ಅವರು ನಿರೂಪಣೆ ಮಾಡಲಿದ್ದಾರೆ.

ಲಾಕ್​ಡೌನ್​ನಿಂದಾಗಿ ಎಲ್ಲರಿಗೂ ಬೋರ್​ ಆಗಿದೆ. ಆ ಬೋರ್​ಡಮ್​ ಸಾಯಿಸಲು ನಿರೂಪಕ ನಾಗಾರ್ಜುನ ಅವರು ಗನ್​ ಹಿಡಿದು ಬಂದಿದ್ದಾರೆ. ಆ ರೀತಿಯ ಕಾನ್ಸೆಪ್ಟ್​ನಲ್ಲಿ ಪ್ರೋಮೋ ತಯಾರಿಸಲಾಗಿದೆ. ಅಲ್ಲದೇ ಫೋಟೋಶೂಟ್​ನಲ್ಲಿಯೂ ನಾಗಾರ್ಜುನ ಅವರು ಗನ್​ ಹಿಡಿದು ನಿಂತಿದ್ದಾರೆ. ‘ಎಲ್ಲ ಸರಿ, ಈ ಗನ್​ ಯಾಕೆ’ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳ ಹೆಸರು ಓಡಾಡುತ್ತಿದೆ. ಕೆಲವು ಕಾಂಟ್ರವರ್ಸಿ ವ್ಯಕ್ತಿತ್ವದವರೂ ಈ ಪಟ್ಟಿಯಲ್ಲಿ ಇದ್ದಾರೆ. ನಿಜಕ್ಕೂ ಯಾರೆಲ್ಲ ಬಿಗ್​ ಬಾಸ್​ ಮನೆ ಪ್ರವೇಶಿಸಲಿದ್ದಾರೆ ಎಂಬುದು ಸೆ.5ರ ಸಂಜೆ ಗೊತ್ತಾಗಲಿದೆ. ನಾಗಾರ್ಜುನ ಅವರು ಶೋ ಹೋಸ್ಟ್​ ಮಾಡುತ್ತಿರುವುದು ಕೆಲವರಿಗೆ ಇಷ್ಟ ಇಲ್ಲ. ಮೊದಲ ಪ್ರೋಮೋ ಬಿಡುಗಡೆ ಆದಾಗಲೇ ನೆಟ್ಟಿಗರು ಆ ಬಗ್ಗೆ ಕಮೆಂಟ್​ ಮಾಡಿದ್ದರು. ದಯವಿಟ್ಟು ನಟ ನಾನಿ ಅವರನ್ನು ನಿರೂಪಕರನ್ನಾಗಿ ಕರೆತನ್ನಿ ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ.

ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗುತ್ತಿದೆ. ಈಗಾಗಲೇ ಹಿಂದಿಯಲ್ಲಿ ‘ಬಿಗ್​ ಬಾಸ್​ ಓಟಿಟಿ’ ಹೆಚ್ಚು ಫೇಮಸ್​ ಆಗಿದೆ. ಅದರಲ್ಲಿ ತುಂಬ ಆಕ್ರಮಣಕಾರಿ ಆದಂತಹ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ತೆಲುಗು ಬಿಗ್​ ಬಾಸ್​ ಆಯೋಜಕರು ಕೂಡ ಅಂಥ ಟಾಸ್ಕ್​ಗಳನ್ನು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವಾಹಿನಿಯ ಮುಖ್ಯಸ್ಥರು ಮತ್ತು ನಿರೂಪಕ ನಾಗಾರ್ಜುನ ಕಡೆಯಿಂದ ಅನುಮತಿ ಸಿಕ್ಕರೆ ಮಾತ್ರ ಅಂಥ ಟಾಸ್ಕ್​ಗಳನ್ನು ಪರಿಚಯಿಸಲಾಗುತ್ತದೆ.

ಇದನ್ನೂ ಓದಿ:

ಬಿಗ್​ ಬಾಸ್​ ಶೋನಲ್ಲೇ ಮಾರಾಮಾರಿ; ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಿ ಆದೇಶ

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ