‘ಅಪ್ಪನ ಹೆಸರು ಗೊತ್ತಾಗಿದ್ದೇ 10ನೇ ಕ್ಲಾಸಲ್ಲಿ; ಸಾಯೋಕಿಂತ ಮುಂಚೆ ಅವ್ರನ್ನ ನೋಡ್ಬೇಕು’: ಮಿಥುನ ರಾಶಿ ವೈಷ್ಣವಿ ಕಣ್ಣೀರು

ವೈಷ್ಣವಿ ಮಾತನಾಡಿರುವುದು ಹೃದಯಸ್ಪರ್ಶಿ ಆಗಿದೆ. ಅದನ್ನು ಕೇಳಿ ಬಿಗ್​ ಬಾಸ್​ ಮನೆಯ ಇನ್ನುಳಿದ ಸದಸ್ಯರು ಕೂಡ ಕಣ್ಣೀರು ಸುರಿಸಿದ್ದಾರೆ. ಅಭಿಮಾನಿಗಳು ಕಮೆಂಟ್​ ಮೂಲಕ ಸಮಾಧಾನ ಮಾಡುತ್ತಿದ್ದಾರೆ.

‘ಅಪ್ಪನ ಹೆಸರು ಗೊತ್ತಾಗಿದ್ದೇ 10ನೇ ಕ್ಲಾಸಲ್ಲಿ; ಸಾಯೋಕಿಂತ ಮುಂಚೆ ಅವ್ರನ್ನ ನೋಡ್ಬೇಕು’: ಮಿಥುನ ರಾಶಿ ವೈಷ್ಣವಿ ಕಣ್ಣೀರು
ಮಿಥುನ ರಾಶಿ ವೈಷ್ಣವಿ ಕಣ್ಣೀರು
Follow us
TV9 Web
| Updated By: ಮದನ್​ ಕುಮಾರ್​

Updated on: Aug 27, 2021 | 2:05 PM

ತೆರೆಮೇಲೆ ಖುಷಿಖುಷಿಯಾಗಿ ಮನರಂಜಿಸುವ ನಟ-ನಟಿಯರ ರಿಯಲ್​ ಲೈಫ್​ ಬಗ್ಗೆ ಅಭಿಮಾನಿಗಳಿಗೆ ಹೆಚ್ಚೇನೂ ಗೊತ್ತಿರುವುದಿಲ್ಲ. ಸೆಲೆಬ್ರಿಟಿಗಳ ಬದುಕಿನಲ್ಲಿಯೂ ಹೇಳಿಕೊಳ್ಳಲಾಗದಂತಹ ನೋವಿನ ಘಟನೆಗಳು ಇರುತ್ತವೆ. ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಭಾಗವಹಿಸಿರುವ ಕೆಲವು ಕಲಾವಿದರು ತಮ್ಮ ಬದುಕಿನ ಅಂತಹ ಕೆಲವು ನೋವುಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯ ‘ಮಿಥುನ ರಾಶಿ’ ಸೀರಿಯಲ್​ ಮೂಲಕ ಫೇಮಸ್​ ಆದ ನಟಿ ವೈಷ್ಣವಿ ಅವರು ಇತ್ತೀಚೆಗೆ ದೊಡ್ಮನೆಯಲ್ಲಿ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಮನದಾಳದ ನೋವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾರೆ.

ಈ ಎಪಿಸೋಡ್​ ಕುರಿತಂತೆ ಕಲರ್ಸ್​ ಕನ್ನಡ ವಾಹಿನಿ ಒಂದು ಪ್ರೋಮೋ ಬಿಡುಗಡೆ ಮಾಡಿದೆ. ಅದರಲ್ಲಿ ವೈಷ್ಣವಿ ಮಾತನಾಡಿರುವುದು ಹೃದಯಸ್ಪರ್ಶಿ ಆಗಿದೆ. ಅದನ್ನು ಕೇಳಿ ಬಿಗ್​ ಬಾಸ್​ ಮನೆಯ ಇನ್ನುಳಿದ ಸದಸ್ಯರು ಕೂಡ ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೋ ನೋಡಿ ಕಮೆಂಟ್​ ಮಾಡಿರುವ ಅನೇಕ ಅಭಿಮಾನಿಗಳು ವೈಷ್ಣವಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಿದ್ದಾರೆ. ತಮಗೂ ಇಂಥದ್ದೇ ಸಮಸ್ಯೆ ಇದೆ ಎಂದು ಕೂಡ ಅನೇಕರು ಹೇಳಿಕೊಂಡಿದ್ದಾರೆ.

‘ನನಗೆ ಅಪ್ಪನ ಹೆಸರು ಗೊತ್ತಾಗಿದ್ದು 10ನೇ ಕ್ಲಾಸ್​​ನಲ್ಲಿ. ನನಗೆ ಅಪ್ಪ ಇದ್ದಾರೆ ಎನಿಸುತ್ತದೆ. ಅವರು ಸತ್ತಿಲ್ಲ. ಅವರು ನಮ್ಮ ಜೊತೆ ಕೂಡ ಇಲ್ಲ. ನಾನು ಅವರನ್ನು ನೋಡಿಯೇ ಇಲ್ಲ. ಇವಳಿಗೆ ಇವರ ಅಪ್ಪನ ಹೆಸರೇ ಗೊತ್ತಿಲ್ಲ ಎಂದು ನನ್ನ ಎದುರಿಗೇ ಜನರು ಆಡಿಕೊಳ್ಳುತ್ತಿದ್ದರು. ನಮ್ಮ ಅಪ್ಪ ಸಾಯುವುದಕ್ಕಿಂತ ಮುಂಚೆ ನಾನು ಅವರನ್ನ ನೋಡಬೇಕು. ಒಂದೇ ಒಂದು ಬಾರಿ ಅವರನ್ನು ನಾನು ಅಪ್ಪ ಎಂದು ಕರೆಯಬೇಕು ಅಂತ ತುಂಬ ಆಸೆ ಇದೆ’ ಎನ್ನುತ್ತ ವೈಷ್ಣವಿ ಕಣ್ಣೀರು ಸುರಿಸಿದ್ದಾರೆ.

ಈ ಎಪಿಸೋಡ್​ ಶುಕ್ರವಾರ (ಆ.27) ರಾತ್ರಿ ಪ್ರಸಾರ ಆಗಲಿದೆ. ಅಕುಲ್​ ಬಾಲಾಜಿ, ನಿರಂಜನ್​, ‘ಕನ್ನಡತಿ’ ಧಾರಾವಾಹಿ ನಟ ಕಿರಣ್​ ರಾಜ್​, ‘ನನ್ನರಸಿ ರಾಧೆ’ ಖ್ಯಾತಿಯ ಕೌಸ್ತುಭ, ‘ಮಂಗಳಗೌರಿ ಮದುವೆ’ ಸೀರಿಯಲ್​ನ ಗಗನ್​ ಚಿನ್ನಪ್ಪ ಸೇರಿದಂತೆ ಒಟ್ಟು 15 ಸೆಲೆಬ್ರಿಟಿಗಳು ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಭಾಗವಹಿಸಿದ್ದಾರೆ. ಇದರ ಗ್ರ್ಯಾಂಡ್​ ಫಿನಾಲೆಗೆ ಕಿಚ್ಚ ಸುದೀಪ್​ ನಿರೂಪಣೆ ಮಾಡಲಿದ್ದಾರೆ ಎಂಬ ವಿಚಾರವನ್ನು ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಇತ್ತೀಚೆಗೆ ಖಚಿತಪಡಿಸಿದ್ದರು. ಹಾಗಾಗಿ ವೀಕ್ಷಕರ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಶೋನಲ್ಲೇ ಮಾರಾಮಾರಿ; ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಿ ಆದೇಶ

ಬಿಗ್​ ಬಾಸ್​ ಮನೆಯಲ್ಲಿರುವ ತಪ್ಪು ಕಲ್ಪನೆ ಬಗ್ಗೆ ಬಾಯ್ಬಿಟ್ಟ ಕೌಸ್ತುಭ; ಅವರು ಟೀಕಿಸಿದ್ದು ಯಾರನ್ನ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ