ಬಿಗ್​ ಬಾಸ್​ ಶೋನಲ್ಲೇ ಮಾರಾಮಾರಿ; ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಿ ಆದೇಶ

‘ಬಾಸ್​ ಮ್ಯಾನ್​ ಬಾಸ್​ ಲೇಡಿ’ ಹೆಸರಿನ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಜೀಶನ್​ ಮತ್ತು ಪ್ರತೀಕ್​ ನಡುವೆ ಕಿತ್ತಾಟ ಏರ್ಪಟ್ಟಿದೆ. ಆರಂಭದಲ್ಲಿ ಸಣ್ಣಗಿದ್ದ ಜಗಳ ನಂತರ ಮಿತಿ ಮೀರಿದೆ.

ಬಿಗ್​ ಬಾಸ್​ ಶೋನಲ್ಲೇ ಮಾರಾಮಾರಿ; ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಿ ಆದೇಶ
ಬಿಗ್​ ಬಾಸ್​ ಶೋನಲ್ಲೇ ಮಾರಾಮಾರಿ; ಸ್ಪರ್ಧಿಯನ್ನು ತಕ್ಷಣ ಮನೆಯಿಂದ ಹೊರ ಹಾಕಿ ಆದೇಶ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 26, 2021 | 8:50 PM

‘ಬಿಗ್​ ಬಾಸ್​ ಒಟಿಟಿ’ ಸ್ಪರ್ಧಿಗಳು ವೀಕ್ಷಕರನ್ನು ಸೆಳೆಯೋಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮನೆಯಲ್ಲಿ ಕಿಸ್​ ಮಾಡಿದ ಘಟನೆ ಕೂಡ ನಡೆದಿದೆ. ಆದರೆ, ಈಗ ಬಿಗ್​ ಬಾಸ್​ ಸ್ಪರ್ಧಿ ಜೀಶನ್​ ಖಾನ್​ ಅವರು ಸಹ ಸ್ಪರ್ಧಿ ಪ್ರತೀಕ್​ ಸೆಹಜ್​ಪಾಲ್​ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮೂಲಕ ಅವರು ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ.

‘ಬಾಸ್​ ಮ್ಯಾನ್​ ಬಾಸ್​ ಲೇಡಿ’ ಹೆಸರಿನ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಜೀಶನ್​ ಮತ್ತು ಪ್ರತೀಕ್​ ನಡುವೆ ಕಿತ್ತಾಟ ಏರ್ಪಟ್ಟಿದೆ. ಆರಂಭದಲ್ಲಿ ಸಣ್ಣಗಿದ್ದ ಜಗಳ ನಂತರ ಮಿತಿ ಮೀರಿದೆ. ಇದು ಮನೆಯವರ ಗಮನಕ್ಕೆ ಬಂದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ಪ್ರತೀಕ್​ ಅವರನ್ನು ಜೀಶನ್​ ತಳ್ಳಿ ಹಲ್ಲೆ ನಡೆಸಿದ್ದಾರೆ.

ಜೀಶನ್​ ಮತ್ತು ದಿವ್ಯಾ ‘ ಬಿಗ್​ ಬಾಸ್​ ಮ್ಯಾನ್​ ಹಾಗೂ ಬಿಗ್​ ಬಾಸ್​ ಲೇಡಿ’ ಆಗಿದ್ದರು. ಇವರು ಆಟದ ನಿಯಮ ಮುರಿದವರಿಗೆ ರೆಡ್​ ಫ್ಲಾಗ್​ ನೀಡಬೆಕಿತ್ತು. ಆದರೆ, ಇಬ್ಬರೂ ತಮ್ಮದೇ ನಿಯಮಗಳನ್ನು ಸೃಷ್ಟಿ ಮಾಡಿಕೊಂಡಿದ್ದರಿಂದ ಬಿಗ್​ ಬಾಸ್​ ಮನೆಯಲ್ಲಿ ಜಗಳಗಳು ಉದ್ಭವ ಆದವು. ಜೀಶನ್​ ಅವರು ಪ್ರತೀಕ್​ ಮೇಲೆ ಹಲ್ಲೆ ಮಾಡಿ ಬಿಗ್​ ಬಾಸ್​ ನಿಯಮ ಮುರಿದರು. ಈ ಮೂಲಕ ಮನೆಯಿಂದ ಔಟ್​ ಆದರು.

ಹಿಂದಿಯ ‘ಕುಂಕುಮ್ ಭಾಗ್ಯ’ ಧಾರಾವಾಹಿ ಮೂಲಕ ನಟ ಜೀಶನ್ ಖಾನ್ ಗುರುತಿಸಿಕೊಂಡರು. ಅವರು ಇತ್ತೀಚೆಗೆ ಗೋವಾ ವಿಮಾನ ನಿಲ್ದಾಣದಿಂದ ಮುಂಬೈಗೆ ಬರುವವರಿದ್ದರು. ಈ ವೇಳೆ ಸ್ನಾನ ಮಾಡಲು ತೆರಳುವಾಗ ತೊಡುವ ಬಟ್ಟೆಯನ್ನು ಹಾಕಿಕೊಂಡಿದ್ದರು. ಆದರೆ, ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸೋಕೆ ಅಲ್ಲಿನ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಈ ರೀತಿಯ ಉಡುಗೆಗೆ ಅನುಮತಿ ಇಲ್ಲ ಎಂದು ಅಧಿಕಾರಿಗಳು ಕಡ್ಡಿಮುರಿದಂತೆ ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: ‘ಶುಗರ್ ಡ್ಯಾಡಿ, ಡ್ರಗ್ ಇನ್ ಸ್ಯಾಂಡಲ್​ವುಡ್’; ಬಿಗ್​ ಬಾಸ್​ನಿಂದ ಬಂದ ಬೆನ್ನಲ್ಲೇ ಪುಸ್ತಕ ಬರೆಯಲು ಮುಂದಾದ ಪ್ರಶಾಂತ್​ ಸಂಬರಗಿ

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ