Allu Arjun: ರಾಕ್ಷಸನಾಗಿ ಅಬ್ಬರಿಸಿದ ನಟ ಅಲ್ಲು ಅರ್ಜುನ್​; ಈ ರೀತಿ ಕೋಪ ತೋರಿಸಿದ್ದು ಯಾರ ಮೇಲೆ?

Pushpa songs: ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ‘ಪುಷ್ಪ’ ಬಿಡುಗಡೆ ಆಗಲಿದೆ. ಹಾಗಾಗಿ ಎಲ್ಲ ಭಾಷೆಯಲ್ಲೂ ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ.

Allu Arjun: ರಾಕ್ಷಸನಾಗಿ ಅಬ್ಬರಿಸಿದ ನಟ ಅಲ್ಲು ಅರ್ಜುನ್​; ಈ ರೀತಿ ಕೋಪ ತೋರಿಸಿದ್ದು ಯಾರ ಮೇಲೆ?
ರಾಕ್ಷಸನಾಗಿ ಅಬ್ಬರಿಸಿದ ನಟ ಅಲ್ಲು ಅರ್ಜುನ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 12, 2021 | 8:14 AM

ಅಲ್ಲು ಅರ್ಜುನ್​ (Allu Arjun) ನಟನೆಯ ಬಹುನಿರೀಕ್ಷಿತ ‘ಪುಷ್ಪ’ (Pushpa) ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಎರಡು ಪಾರ್ಟ್​ನಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಈ ವರ್ಷ ಕ್ರಿಸ್​ಮಸ್​ಗೆ ಮೊದಲ ಪಾರ್ಟ್​ ಬಿಡುಗಡೆ ಆಗಲಿದೆ. ಅದಕ್ಕೆ ಇನ್ನೂ ಮೂರೂವರೆ ತಿಂಗಳು ಬಾಕಿ ಇದೆ. ಅಷ್ಟರಲ್ಲಾಗಲೇ ಚಿತ್ರದ ಪ್ರಚಾರಕ್ಕೆ ಹೆಚ್ಚು ಗಮನ ನೀಡಲಾಗುತ್ತಿದೆ. ಈಗಾಗಲೇ ಕೆಲವು ಪ್ರೋಮೋ ಮೂಲಕ ಹೈಪ್​ ಸೃಷ್ಟಿ ಮಾಡಿದ ಚಿತ್ರತಂಡ ಈಗ ಹಾಡುಗಳ ಮೂಲಕ ಧೂಳೆಬ್ಬಿಸಲು ಸಿದ್ಧವಾಗಿದೆ. ಮೊದಲ ಸಾಂಗ್​ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ.

ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ‘ಪುಷ್ಪ’ ಬಿಡುಗಡೆ ಆಗಲಿದೆ. ಹಾಗಾಗಿ ಎಲ್ಲ ಭಾಷೆಯಲ್ಲೂ ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ಈ ಚಿತ್ರದ ಮೊದಲ ಹಾಡು ನಾಳೆ (ಆ.13) ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಒಂದು ಚಿಕ್ಕ ಪ್ರೋಮೋ ಮೂಲಕ ಕೌತುಕ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಈ ಪ್ರೋಮೋದಲ್ಲಿ ಅಲ್ಲು ಅರ್ಜುನ್​ ಅವರು ರಾಕ್ಷಸನ ರೀತಿ ಅಬ್ಬರಿಸಿದ್ದಾರೆ.

‘ಜೋಕೆ ಜೋಕೆ ಮೇಕೆ, ಹೆಬ್ಬುಲಿ ಹಾಕಿದೆ ಕೇಕೆ..’ ಎಂದು ಆರಂಭ ಆಗುವ ಈ ಹಾಡಿನ ಚಿಕ್ಕ ಪ್ರೋಮೋದಲ್ಲಿಯೇ ಅಲ್ಲು ಅರ್ಜುನ್​ ಅವರ ಅವತಾರ ಕಂಡ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಹಳ್ಳಿ ಜಾತ್ರೆಯ ಸೆಟ್​ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಮೇಕೆ ಬಲಿ ಕೊಡಲು ಕಥಾನಾಯಕ ಸಜ್ಜಾಗಿದ್ದಾನೆ. ಆದರೆ ಅಲ್ಲು ಅರ್ಜುನ್​ ಕಣ್ಣಲ್ಲಿ ಕಾಣಿಸಿರುವ ಕೋಪ, ಆವೇಶ ನೋಡಿದರೆ ಅದು ಕೇವಲ ಮೇಕೆಯ ಸಂಹಾರಕ್ಕೆ ಸಜ್ಜಾಗಿರುವುದು ಎನಿಸುವುದಿಲ್ಲ. ಕಥೆಯಲ್ಲಿ ಈ ಹಾಡು ಎಷ್ಟು ಪ್ರಾಮುಖ್ಯತೆ ವಹಿಸಲಿದೆ? ಯಾರನ್ನು ಸಂಹಾರ ಮಾಡಲು ಕಥಾನಾಯಕ ಕತ್ತಿ ಹಿಡಿದು ಹೋಗುತ್ತಿರಬಹುದು ಎಂಬ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದು, ಟ್ರಕ್​ ಡ್ರೈವರ್​ ಪಾತ್ರದಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದ ಕಾರಣದಿಂದಲೂ ‘ಪುಷ್ಪ’ ಚಿತ್ರ ಹೈಪ್​ ಸೃಷ್ಟಿಮಾಡಿದೆ. ಡಾಲಿ ಧನಂಜಯ, ಪ್ರಕಾಶ್​ ರೈ, ಫಹಾದ್​ ಫಾಸಿಲ್​, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಸನ್ನಿ ಲಿಯೋನ್​ ಕೂಡ ಈ ಚಿತ್ರದಲ್ಲಿ ಒಂದು ಐಟಂ ಡ್ಯಾನ್ಸ್​ ಮಾಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆ ಹಾಡಿಗಾಗಿ ಅವರು ಬರೋಬ್ಬರಿ 50 ಲಕ್ಷ ರೂ. ಡಿಮ್ಯಾಂಡ್​ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

Pushpa: ‘ಪುಷ್ಪ’ ರಿಲೀಸ್​ ಡೇಟ್​ ಜೊತೆಗೆ ಮತ್ತೊಂದು ಮುಖ್ಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅಲ್ಲು ಅರ್ಜುನ್​

ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ