AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಣಿ ಮುಖರ್ಜಿ-ಟೈಗರ್​ ಶ್ರಾಫ್​ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ 

ಖಾರ್​ ಪ್ರದೇಶದಲ್ಲಿ ರಾಣಿ ಮುಖರ್ಜಿ ಫ್ಲಾಟ್​ ಖರೀದಿ ಮಾಡಿದ್ದಾರೆ. 22ನೇ ಅಂತಸ್ತಿನಲ್ಲಿ ಈ ಫ್ಲಾಟ್​ ಇದೆ. 4+3 ಬಿಎಚ್​ಕೆ ಮನೆ ಇದಾಗಿದ್ದು, ಈ ಫ್ಲಾಟ್​ನಿಂದ ಅರಬ್ಬೀ ಸಮುದ್ರ ಕಾಣುತ್ತದೆ.

ರಾಣಿ ಮುಖರ್ಜಿ-ಟೈಗರ್​ ಶ್ರಾಫ್​ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ 
ರಾಣಿ ಮುಖರ್ಜಿ-ಟೈಗರ್​ ಶ್ರಾಫ್​ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ 
TV9 Web
| Edited By: |

Updated on: Aug 12, 2021 | 7:29 AM

Share

ಬಾಲಿವುಡ್​​ನಲ್ಲಿ ಗುರುತಿಸಿಕೊಂಡ ನಂತರದಲ್ಲಿ ಸಾಕಷ್ಟು ನಟ-ನಟಿಯರು ಮನೆ ಕೊಂಡುಕೊಳ್ಳೋಕೆ ಆಸಕ್ತಿ ತೋರುತ್ತಾರೆ. ಅದೇ ರೀತಿ ಅನೇಕ ಸ್ಟಾರ್​ಗಳು ಮುಂಬೈನ ದುಬಾರಿ ಏರಿಯಾದಲ್ಲಿ ಮನೆ ಖರೀದಿ ಮಾಡಿದ್ದಾರೆ. ಈಗ ನಟಿ ರಾಣಿ ಮುಖರ್ಜಿ ಸರದಿ. ಅವರು ಮುಂಬೈನಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ.

ರಾಣಿ ಮುಖರ್ಜಿ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 90ರ ದಶಕದಲ್ಲಿ ಸಿನಿಪ್ರಿಯರ ಹೃದಯ ಕದ್ದವರು ರಾಣಿ ಮುಖರ್ಜಿ. ಈಗಲೂ ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಇದೆ. ನೋ ಒನ್​ ಕಿಲ್ಲಡ್​ ಜಸ್ಸಿಕಾ ಚಿತ್ರದಲ್ಲಿ ಜರ್ನಲಿಸ್ಟ್​ ಪಾತ್ರದಲ್ಲಿ ಅವರು ಮಿಂಚಿದ್ದರು. ಈಗ ರಾಣಿ ಮುಖರ್ಜಿ ಹಾಗೂ ಟೈಗರ್​ ಶ್ರಾಫ್​ ನೆರೆ ಹೊರೆಯವರಾಗಿದ್ದಾರೆ.

ಖಾರ್​ ಪ್ರದೇಶದಲ್ಲಿ ರಾಣಿ ಮುಖರ್ಜಿ ಫ್ಲಾಟ್​ ಖರೀದಿ ಮಾಡಿದ್ದಾರೆ. 22ನೇ ಅಂತಸ್ತಿನಲ್ಲಿ ಈ ಫ್ಲಾಟ್​ ಇದೆ. 4+3 ಬಿಎಚ್​​ಕೆ ಮನೆ ಇದಾಗಿದ್ದು, ಈ ಫ್ಲಾಟ್​ನಿಂದ ಅರಬ್ಬೀ ಸಮುದ್ರ ಕಾಣುತ್ತದೆ. ಇದಕ್ಕೆ ಅವರು ಬರೋಬ್ಬರಿ 7.12 ಕೋಟಿ ರೂಪಾಯಿ ನೀಡಿದ್ದಾರೆ. ಇದೇ ಅಪಾರ್ಟ್​ಮೆಂಟ್​ನಲ್ಲಿ ಟೈಗರ್​ ಶ್ರಾಫ್​ ಫ್ಲ್ಯಾಟ್​ ಕೂಡ ಇದೆ ಎಂದು ತಿಳಿದು ಬಂದಿದೆ.

‘ಮರ್ದಾನಿ 2’ ಸಿನಿಮಾದಲ್ಲಿ ರಾಣಿ ಮುಖರ್ಜಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2019ರ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಸದ್ಯ ಅವರು ‘ಬಂಟಿ ಔರ್​​ ಬಬ್ಲಿ 2’ ಹಾಗೂ Mrs.ಚಟರ್ಜಿ vs ನಾರ್ವೆ ಫಿಲ್ಮ್ಸ್​​​ ಚಿತ್ರದಲ್ಲಿ ರಾಣಿ ಮುಖರ್ಜಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಅಮಿತಾಭ್​ ಬಚ್ಚನ್​, ಅರ್ಜುನ್​ ಕಪೂರ್​ ಹಾಗೂ ಅಜಯ್​ ದೇವಗನ್​-ಕಾಜೊಲ್​ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು. ಈಗ ರಾಣಿ ಮುಖರ್ಜಿ ಕೂಡ ಈ ಸಾಲಿಗೆ ಸೇರ್ಪಡೆ ಆಗಿದ್ದಾರೆ.

ಇದನ್ನೂ ಓದಿ:

 ಟೋಕಿಯೋ ಒಲಂಪಿಕ್ಸ್​ನಲ್ಲಿ ಮೊಳಗಿತು ಬಾಲಿವುಡ್​ ಹಾಡು; ಅಚ್ಚರಿಗೊಂಡ ಭಾರತೀಯರು

ಸೆಟ್​ನಲ್ಲೇ ತಲೆತಿರುಗಿ ಬಿದ್ದ ಬಾಲಿವುಡ್​ ನಟಿ; ಸಮಸ್ಯೆಗೆ ಕಾರಣ ಬಿಚ್ಚಿಟ್ಟ ವೈದ್ಯರು

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್