ಟೋಕಿಯೋ ಒಲಂಪಿಕ್ಸ್ನಲ್ಲಿ ಮೊಳಗಿತು ಬಾಲಿವುಡ್ ಹಾಡು; ಅಚ್ಚರಿಗೊಂಡ ಭಾರತೀಯರು
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸಾಕಷ್ಟು ಜನರು ಈ ಹಾಡನ್ನು ನೋಡಿ ಸಂತಸ ಪಟ್ಟಿದ್ದಾರೆ. ಅನೇಕರು ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್. ಅಂದಿನ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಹೆಚ್ಚು ಗಾರಿಕೆ ಅವರದ್ದು. ‘ಆಜಾ ನಚ್ಲೆ..’ ಸೇರಿ ಸಾಕಷ್ಟು ಸೂಪರ್ ಹಿಟ್ ಹಾಡಿಗೆ ಮಾಧುರಿ ಹೆಜ್ಜೆ ಹಾಕಿದ್ದಾರೆ. ಅವರು ಡ್ಯಾನ್ಸ್ ಮಾಡಿದ ಹಾಡುಗಳು ಇಂದಿಗೂ ಜನರ ಬಾಯಲ್ಲಿ ಗುನುಗುಡುತ್ತವೆ. ಈಗ ಟೋಕಿಯೋ ಒಲಂಪಿಕ್ನಲ್ಲಿ ಮಾಧುರಿ ದೀಕ್ಷಿತ್ ಅವರ ‘ಆಜಾ ನಚ್ಲೆ..’ ಹಾಡು ಮೊಳಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಜಪಾನ್ನ ಟೋಕಿಯೋದಲ್ಲಿ ಒಲಂಪಿಕ್ಸ್ ನಡೆಯುತ್ತಿದೆ. ಈ ವೇಳೆ ನಡೆದ ಡುಯೆಟ್ ಫ್ರೀ ಇವೆಂಟ್ನಲ್ಲಿ ಇಸ್ರೇಲ್ನ ಸ್ವಿಮ್ಮರ್ಗಳಾದ ಈಡನ್ ಬ್ಲೆಚರ್ ಮತ್ತು ಶೆಲ್ಲಿ ಬೊಬ್ರಿಟ್ಸ್ಕೈ ‘ಆಜಾ ನಚ್ಲೆ’ ಹಾಡಿಗೆ ನೀರಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಅವರ ಡ್ಯಾನ್ಸ್ ಜಡ್ಜ್ಗಳಿಗೆ ಖುಷಿ ನೀಡಿಲ್ಲ. ಆದರೆ, ಭಾರತೀಯರ ಹೃದಯವನ್ನು ಇವರು ಗೆದ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸಾಕಷ್ಟು ಜನರು ಈ ಹಾಡನ್ನು ನೋಡಿ ಸಂತಸ ಪಟ್ಟಿದ್ದಾರೆ. ಅನೇಕರು ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಬರೆದುಕೊಂಡಿದ್ದಾರೆ. ‘ಇಸ್ರೇಲಿಗರೇ ಇದಕ್ಕೆ ಧನ್ಯವಾದ. ಇದನ್ನು ನೋಡಲು ಮತ್ತು ಕೇಳಲು ನಾವು ಎಷ್ಟು ಎಗ್ಸೈಟ್ ಆಗಿದ್ದೇನೆ ಎನ್ನುವುದು ನಿಮಗೆ ತಿಳಿದಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ.
Thank you so much Team Israel for this!!! You have no idea how excited I was to hear and see this!! AAJA NACHLE!!! #ArtisticSwimming #Olympics #Tokyo2020 pic.twitter.com/lZ5mUq1qZP
— ???? ????? (@AnneDanam) August 4, 2021
1984ರಲ್ಲಿ ‘ಅಬೋದ್’ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್ ಅವರು ಬಾಲಿವುಡ್ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ಆಗ ಮಾಧುರಿ ವಯಸ್ಸು ಕೇವಲ 17. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್’ ಸಿನಿಮಾ ಮೂಲಕ. ಆ ಚಿತ್ರದ ‘ಏಕ್ ದೋ ತೀನ್..’ ಹಾಡು ಸೂಪರ್ ಹಿಟ್ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್ ದೇಶಾದ್ಯಂತ ಖ್ಯಾತಿ ಗಳಿಸಿದರು.
ಇದನ್ನೂ ಓದಿ: ಮಾಧುರಿ ದೀಕ್ಷಿತ್ ಜನ್ಮದಿನ; ‘ಏಕ್ ದೋ ತೀನ್’ ಸುಂದರಿಗೆ ಈಗ ಎಷ್ಟು ವರ್ಷ?
Published On - 7:42 pm, Thu, 5 August 21