‘3 ತಿಂಗಳ ವೇತನ ಸೇರಿಸಿದರೂ ಅದನ್ನು ಖರೀದಿಸೋಕಾಗಲ್ಲ’; ಮಾಧುರಿ ದೀಕ್ಷಿತ್ ತೊಟ್ಟ ಲೆಹೆಂಗಾ ಬೆಲೆ ನೋಡಿ ಹೌಹಾರಿದ ಅಭಿಮಾನಿಗಳು

‘3 ತಿಂಗಳ ವೇತನ ಸೇರಿಸಿದರೂ ಅದನ್ನು ಖರೀದಿಸೋಕಾಗಲ್ಲ’; ಮಾಧುರಿ ದೀಕ್ಷಿತ್ ತೊಟ್ಟ ಲೆಹೆಂಗಾ ಬೆಲೆ ನೋಡಿ ಹೌಹಾರಿದ ಅಭಿಮಾನಿಗಳು
Madhuri Dixit

ಈ ಬೆಲೆಯನ್ನು ನೋಡಿದ ಅಭಿಮಾನಿಗಳು ಹೌಹಾರಿದ್ದಾರೆ. ಅಷ್ಟೇ ಅಲ್ಲ, ಅನೇಕರು ನಮ್ಮ ಮೂರು ತಿಂಗಳ ವೇತನ ಸೇರಿಸಿದರೂ ಈ ಬಟ್ಟೆ ಖರೀದಿಸೋಕಾಗಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

Rajesh Duggumane

|

Jun 02, 2021 | 6:36 PM

ಸೆಲೆಬ್ರಿಟಿಗಳು ಧರಿಸುವ ದುಬಾರಿ ಬೆಲೆಯ ಬಟ್ಟೆ ಅಭಿಮಾನಿಗಳ ಕಣ್ಣರಳಿಸುತ್ತದೆ. ಸೆಲೆಬ್ರಿಟಿಗಳು ಧರಿಸಿಸೋ ವಾಚ್​, ಅವರ ಜಿಮ್​ ಸ್ಯೂಟ್, ಮಾಸ್ಕ್​ ಹೀಗೆ ಎಲ್ಲದರ ಬೆಲೆಯನ್ನೂ ಅಭಿಮಾನಿಗಳು ಪತ್ತೆ ಹಚ್ಚುತ್ತಾರೆ. ಈಗ ನಟಿ ಮಾಧುರಿ ದೀಕ್ಷಿತ್​ ಲೆಹೆಂಗಾ ಚೋಲಿ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದಾರೆ. ಈ ಬಟ್ಟೆಯ ಬೆಲೆ ಕೇಳಿದ ಅಭಿಮಾನಿಗಳು ಹೌಹಾರಿದ್ದಾರೆ.

ಮಾಧುರಿ ದೀಕ್ಷಿತ್​ ಆಗಸ ನೀಲಿ ಬಣ್ಣದ ಲೆಹೆಂಗಾ ತೊಟ್ಟು ಫೋಟೋಶೂಟ್​ ಮಾಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು, ಚೆಂದವಾದ ಕ್ಯಾಪ್ಶನ್​ ಕೂಡ ನೀಡಿದ್ದಾರೆ. ಕತ್ತಿಗೆ ಒಂದು ಸುಂದರವಾದ ನೆಕ್​ಪೀಸ್​ ಧರಿಸಿದ್ದಾರೆ. ಇನ್ನು ಅವರ ಇಯರ್​ಯಿಂದ, ಬೆರಳಿಗೆ ಹಾಕಿಕೊಂಡಿರುವ ಉಂಗುರವೂ ಅಭಿಮಾನಿಗಳ ಗಮನ ಸೆಳೆದಿದೆ.

ಇನ್ನು ಕೆಲ ಯುವತಿಯರಿಗೆ ಮಾದುರಿ ದೀಕ್ಷಿತ್​ ಧರಿಸಿದ ಬಟ್ಟೆ ಮೇಲೆ ಮನಸಾಗಿದೆ. ಕಡಿಮೆ ಬೆಲೆಯದ್ದಾದರೆ ತಾವೂ ಒಂದು ಖರೀದಿಸೋಣ ಎಂದು ಆನ್​ಲೈನ್​ನಲ್ಲಿ ಇದರ ಬೆಲೆಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ಶಾಕಿಂಗ್​ ವಿಚಾರ ಬೆಳಕಿಗೆ ಬಂದಿದೆ. ಈ ಲೆಹೆಂಗಾ ಬೆಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 72 ಸಾವಿರ ರೂಪಾಯಿ.

ಈ ಬೆಲೆಯನ್ನು ನೋಡಿದ ಅಭಿಮಾನಿಗಳು ಹೌಹಾರಿದ್ದಾರೆ. ಅಷ್ಟೇ ಅಲ್ಲ, ಅನೇಕರು ನಮ್ಮ ಮೂರು ತಿಂಗಳ ವೇತನ ಸೇರಿಸಿದರೂ ಈ ಬಟ್ಟೆ ಖರೀದಿಸೋಕಾಗಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

1984ರಲ್ಲಿ ಅಬೋದ್​ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್​ ಅವರು ಬಾಲಿವುಡ್​ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ಆಗ ಮಾಧುರಿ ವಯಸ್ಸು ಕೇವಲ 17. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್​’ ಸಿನಿಮಾ ಮೂಲಕ. ಆ ಚಿತ್ರದ ‘ಏಕ್​ ದೋ ತೀನ್​..’ ಹಾಡು ಸೂಪರ್​ ಹಿಟ್​ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್​ ದೇಶಾದ್ಯಂತ ಖ್ಯಾತಿ ಗಳಿಸಿದರು. ಡಾನ್ಸ್​ ದೀವಾನೆ 3ನಲ್ಲಿ ಅವರು ಜಡ್ಜ್​ ಆಗಿದ್ದಾರೆ.  2019ರಲ್ಲಿ ತೆರೆಗೆ ಬಂದ ಕಳಂಕ್​ ಅವರ ಕೊನೆಯ ಚಿತ್ರ.

ಇದನ್ನೂ ಓದಿ: Happy Birthday Madhuri Dixit: ಮಾಧುರಿ ದೀಕ್ಷಿತ್​ ಜನ್ಮದಿನ; ‘ಏಕ್​ ದೋ ತೀನ್​’ ಸುಂದರಿಗೆ ಈಗ ಎಷ್ಟು ವರ್ಷ?

Follow us on

Related Stories

Most Read Stories

Click on your DTH Provider to Add TV9 Kannada