ಓಡಿ ಹೋದ ಕೆಲವೇ ದಿನಕ್ಕೆ ಹೆಣವಾದ ಯುವತಿ; ಖ್ಯಾತ ಯೂಟ್ಯೂಬರ್ ಅರೆಸ್ಟ್
YouTuber Jeetu Jaan: ಕೋಮಲ್ ಇತ್ತೀಚೆಗೆ ನೇಣು ಬಿಗಿದು ಮೃತಪಟ್ಟಿದ್ದರು. ಇದನ್ನು ಪೊಲೀಸರು ಆತ್ಮಹತ್ಯೆ ಎಂದು ಕೇಸ್ ಕ್ಲೋಸ್ ಮಾಡಿದ್ದರು. ಆದರೆ, ಕೋಮಲ್ ಅವರ ತಾಯಿ ಜಿತೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಜೀತು ಜಾನ್ ಎಂದೇ ಖ್ಯಾತಿ ಪಡೆದಿರುವ ಜಿತೇಂದ್ರ ಹೆಸರಿನ ಖ್ಯಾತ ಯೂಟ್ಯೂಬರ್ನನ್ನು ಮಹಾರಾಷ್ಟ್ರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರ ಪತ್ನಿ ಕೋಮಲ್ ಅಗರ್ವಾಲ್ ಇತ್ತೀಚೆಗೆ ಫ್ಯಾನ್ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಇವರ ಸಾವಿಗೆ ಜೀತೇಂದ್ರ ಅವರೇ ಕಾರಣ ಎಂದು ಹುಡುಗಿ ಕುಟುಂಬದವರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಕೋಮಲ್ ಇತ್ತೀಚೆಗೆ ನೇಣು ಬಿಗಿದು ಮೃತಪಟ್ಟಿದ್ದರು. ಇದನ್ನು ಪೊಲೀಸರು ಆತ್ಮಹತ್ಯೆ ಎಂದು ಕೇಸ್ ಕ್ಲೋಸ್ ಮಾಡಿದ್ದರು. ಆದರೆ, ಕೋಮಲ್ ಅವರ ತಾಯಿ ಜಿತೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಿತೇಂದ್ರ ಅವರು ಹಿಂಸೆ ಕೊಡುತ್ತಿದ್ದರು. ಕೋಮಲ್ ಆತ್ಮಹತ್ಯೆ ಮಾಡಿಕೊಳ್ಳಲು ಅವರೇ ಪ್ರಚೋದನೆ ನೀಡಿದ್ದರು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಕೋಮಲ್ ತಾಯಿ ನೀಡಿದ ದೂರು ಆಧರಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಜಿತೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿದೆ. ‘ನನ್ನ ಅಕ್ಕನಿಗೆ ಆತ ಸಾಕಷ್ಟು ಚಿತ್ರ ಹಿಂಸೆ ಕೊಡುತ್ತಿದ್ದ. ಆತನೇ ಆಕೆಯನ್ನು ಕೊಲೆ ಮಾಡಿರಬಹುದು’ ಎಂದು ಕೋಮಲ್ ಸಹೋದರಿ ಪ್ರಿಯಾ ಆರೋಪಿಸಿದ್ದಾರೆ. ಸದ್ಯ, ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕೋಮಲ್ ಹಾಗೂ ಜಿತೇಂದ್ರ ಕೆಲ ತಿಂಗಳು ಪರಸ್ಪರ ಪ್ರೀತಿಸಿದ್ದರು. ಇವರ ಮದುವೆಗೆ ಕೋಮಲ್ ಮನೆಯವರ ಒಪ್ಪಿಗೆ ಇರಲಿಲ್ಲ. ಹೀಗಾಗಿ, ಮಾರ್ಚ್ 4ರಂದು ಜಿತೇಂದ್ರ ಜತೆಗೆ ಓಡಿ ಹೋಗಿ ಕೋಮಲ್ ಮದುವೆ ಆಗಿದ್ದರು. ಈಗ ಅವರ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಇದನ್ನೂ ಓದಿ: ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯ ತಲೆಗೆ ಗುಂಡಿಕ್ಕಿದ ಪತಿ; ಬಳಿಕ ಮೂವರು ಪುಟಾಣಿ ಮಕ್ಕಳನ್ನು ನಾಲೆಗೆ ಎಸೆದು ಕೊಲೆ
‘ದಿಯಾ’ ಹೀರೋ ದೀಕ್ಷಿತ್ ಶೆಟ್ಟಿಯ ಕ್ರೈಂ ಸ್ಟೋರಿ; ಒಂದು ಕೊಲೆಯ ಸುತ್ತ ಎಷ್ಟಿದೆ ರಹಸ್ಯ?