‘ದಿಯಾ’ ಹೀರೋ ದೀಕ್ಷಿತ್​ ಶೆಟ್ಟಿಯ ಕ್ರೈಂ ಸ್ಟೋರಿ; ಒಂದು ಕೊಲೆಯ ಸುತ್ತ ಎಷ್ಟಿದೆ ರಹಸ್ಯ?

ಕೆಲವೇ ದಿನಗಳ ಹಿಂದೆ ‘ಆಣಿ ಮುತ್ತಗಳು’ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ದೀಕ್ಷಿತ್​ ಶೆಟ್ಟಿ ಅವರು ಮೂಗನ ಪಾತ್ರ ಮಾಡಿದ್ದಾರೆ ಎಂಬ ವಿಷಯ ಬಹಿರಂಗ ಆಗಿತ್ತು.

‘ದಿಯಾ’ ಹೀರೋ ದೀಕ್ಷಿತ್​ ಶೆಟ್ಟಿಯ ಕ್ರೈಂ ಸ್ಟೋರಿ; ಒಂದು ಕೊಲೆಯ ಸುತ್ತ ಎಷ್ಟಿದೆ ರಹಸ್ಯ?
ನಟ ದೀಕ್ಷಿತ್​ ಶೆಟ್ಟಿ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Jun 01, 2021 | 2:56 PM

ಸಸ್ಪೆನ್ಸ್​ ಮತ್ತು ರೊಮ್ಯಾಂಟಿಕ್​ ಲವ್​ಸ್ಟೋರಿ ಹೊಂದಿದ್ದ ದಿಯಾ ಸಿನಿಮಾ 2020 ಆರಂಭದಲ್ಲಿ ಸೂಪರ್​ ಹಿಟ್​ ಆಯಿತು. ಆ ಚಿತ್ರದ ಮೂಲಕ ನಟ ದೀಕ್ಷಿತ್​ ಶೆಟ್ಟಿ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಕೂಡ ಸಿಕ್ಕಿತು. ಲವರ್​ ಬಾಯ್​ ಆಗಿ ಎಲ್ಲರಿಗೂ ಇಷ್ಟವಾಗಿದ್ದ ಅವರು ಈಗ ಹೊಸ ಸಿನಿಮಾದಲ್ಲಿ ಒಂದು ಕ್ರೈಂ ಕಥೆ ಹೇಳಲು ಬರುತ್ತಿದ್ದಾರೆ. ಅವರು ನಟಿಸಿರುವ ‘ಆಣಿ ಮುತ್ತುಗಳು’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು, ಈ ಸಿನಿಮಾದ ಕಥೆಯ ಬಗ್ಗೆ ಸುಳಿವು ಸಿಕ್ಕಿದೆ.

ಕೆಲವೇ ದಿನಗಳ ಹಿಂದೆ ‘ಆಣಿ ಮುತ್ತಗಳು’ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ದೀಕ್ಷಿತ್​ ಶೆಟ್ಟಿ ಅವರು ಮೂಗನ ಪಾತ್ರ ಮಾಡಿದ್ದಾರೆ ಎಂಬ ವಿಷಯ ಬಹಿರಂಗ ಆಗಿತ್ತು. ಈಗ ಟ್ರೇಲರ್​ ರಿಲೀಸ್​ ಆಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಕೌತುಕ ಮೂಡುವಂತಾಗಿದೆ. ಮೇಲ್ನೋಟಕ್ಕೆ ಇದು ಒಂದು ಕಾಮಿಡಿ ಸಿನಿಮಾದಂತೆ ಕಂಡರೂ ಅದರ ಒಳಗೆ ಒಂದು ಕ್ರೈಂ ಕಥೆಯನ್ನು ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ ಎಂಬುದು ಗೊತ್ತಾಗಿದೆ.

‘ಆಣಿ ಮುತ್ತುಗಳು’ ಚಿತ್ರಕ್ಕೆ ಅಭಿಲಾಷ್​ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ದಿಯಾ ರೀತಿಯ ರೊಮ್ಯಾಂಟಿಕ್​ ಸಿನಿಮಾದಲ್ಲಿ ನಟಿಸಿದ್ದ ದೀಕ್ಷಿತ್​ ಶೆಟ್ಟಿ ಈಗ ‘ಆಣಿ ಮುತ್ತುಗಳು’ ಚಿತ್ರದಲ್ಲಿ ಜನರನ್ನು ನಗಿಸಲು ಪ್ರಯತ್ನಿಸಿದ್ದಾರೆ. ಅವರ ಜೊತೆಗೆ ಶ್ರೀನಿವಾಸ್​ ರೆಡ್ಡಿ ಹಾಗೂ ವೆನ್ನಲ ರಾಮ್​ರಾವ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ್​ ರೆಡ್ಡಿಗೆ ಕಿವುಡನ ಪಾತ್ರ ಹಾಗೂ ವೆನ್ನಲ ರಾಮ್​ರಾವ್​ ಅವರಿಗೆ ಕುರುಡನ ಪಾತ್ರ ನೀಡಲಾಗಿದೆ. ಟ್ರೇಲರ್​ನಲ್ಲಿ ಅವರಿಬ್ಬರ ನಟನೆ ಕೂಡ ಗಮನ ಸೆಳೆಯುತ್ತಿದೆ.

ಈ ಸಿನಿಮಾದಲ್ಲಿ ತ್ವಿಷಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ‘ಆಣಿ ಮುತ್ತುಗಳು’ ತಯಾರಾಗಿದೆ. ‘ಚಿತ್ರಮಂದಿರ ಸ್ಟುಡಿಯೋ’ ಬ್ಯಾನರ್​ನಲ್ಲಿ ಅಚ್ಯುತ್​ ರಾಮರಾವ್​ ಅವರು ನಿರ್ಮಾಣ ಮಾಡಿದ್ದಾರೆ. ತೇಜಾ ಚೀಪುರುಪಲ್ಲಿ ಹಾಗೂ ರವೀಂದ್ರ ರೆಡ್ಡಿ ಅಬ್ದುಲ್ಲಾ ಕೂಡ ಬಂಡವಾಳ ಹೂಡಿದ್ದಾರೆ. ಗರುಡವೇಗ ಅಂಜಿ ಛಾಯಾಗ್ರಹಣ, ಸುರೇಶ್​ ಬೊಬ್ಬಿಲಿ ಸಂಗೀತ ನಿರ್ದೇಶನ ಮಾಡಿದ್ದಾರೆ.

(ಆಣಿ ಮುತ್ತುಗಳು ಸಿನಿಮಾ ಟ್ರೇಲರ್​)

ಇದನ್ನೂ ಓದಿ:

ಮತ್ತೆ ಒಂದಾಗಲಿದೆ ದಿಯಾ ಜೋಡಿ; ಹೇಗಿರಲಿದೆ ಈ ಸಿನಿಮಾ ಕಥೆ?

ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ