ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಬಗ್ಗೆ ಧಾರಾವಾಹಿ; ಜೂನ್​ 7ರಿಂದ ಶುರು

ಜೀ ಕನ್ನಡ ವಾಹಿನಿಯಲ್ಲಿ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಧಾರಾವಾಹಿ ಜೂನ್ 7ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆವರೆಗೆ ಪ್ರಸಾರವಾಗಲಿದೆ.

ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಬಗ್ಗೆ ಧಾರಾವಾಹಿ; ಜೂನ್​ 7ರಿಂದ ಶುರು
ಸುಭಾಷ್​ ಚಂದ್ರ ಬೋಸ್
Follow us
ರಾಜೇಶ್ ದುಗ್ಗುಮನೆ
|

Updated on: Jun 02, 2021 | 4:08 PM

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು ನೇತಾಜಿ ಸುಭಾಷ್​ ಚಂದ್ರ ಬೋಸ್. ಇವರ ಬಗ್ಗೆ ಸಿನಿಮಾ ಹಾಗೂ ವೆಬ್​ ಸೀರಿಸ್​ಗಳು ಸಿದ್ಧಗೊಂಡಿವೆ. ಈಗ ಇವರ ಬಗ್ಗೆ ಕನ್ನಡದಲ್ಲಿ ಧಾರಾವಾಹಿ ಕೂಡ ಬರುತ್ತಿದೆ ಅನ್ನೋದು ವಿಶೇಷ.  

ಹೌದು, ಜೀ ಕನ್ನಡ ವಾಹಿನಿಯಲ್ಲಿ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಧಾರಾವಾಹಿ ಜೂನ್ 7ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆವರೆಗೆ ಪ್ರಸಾರವಾಗಲಿದೆ. ಈ ಧಾರಾವಾಹಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಬಿಂಬಿಸಲಿದೆ.

ಅಂಬೇಡ್ಕರ್ ಧಾರಾವಾಹಿಯನ್ನು ಜೀ ಕನ್ನಡ ಈ ಮೊದಲು ಪ್ರಸಾರ ಮಾಡಿತ್ತು. ಈ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈಗ ಸುಭಾಷ್ ಚಂದ್ರ ಬೋಸ್ ಅವರ ಜೀವನಗಾಥೆಯನ್ನು ಮನರಂಜನೆ ರೀತಿಯಲ್ಲಿ ಕನ್ನಡ ಪ್ರೇಕ್ಷಕರ ಮುಂದಿಡುತ್ತಿದೆ.

ಒರಿಸ್ಸಾದ ಕಟಕ್​ನಲ್ಲಿ ಜನಿಸಿದ ಸುಭಾಷ್​ಚಂದ್ರ ಬೋಸ್ ಸ್ವಾತಂತ್ರ್ಯ ಹೋರಾಟದಲ್ಲಿ ತುಂಬಾನೇ ಮಹತ್ವ ವಹಿಸಿದ್ದಾರೆ. ಜರ್ಮನಿಯ ನೆರವಿನೊಂದಿಗೆ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದರು. ಅಹಿಂಸಾ ಹೋರಾಟ ವಿರೋಧಿಸಿ ಸ್ವಂತ ಸೇನೆ ಕಟ್ಟಿದರು. ಸುಭಾಷ್ ​ಚಂದ್ರ ಬೋಸ್​ ಅವರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ನಂಬಲಾಗಿದೆ. ಆದರೆ ಅದನ್ನು ಒಪ್ಪದೇ ಇರುವವರೂ ಬಹಳ ಮಂದಿ ಇದ್ದಾರೆ.

ಕನ್ನಡದಲ್ಲಿ ಸುಭಾಷ್​ ಚಂದ್ರರರ ಬಗ್ಗೆ ಧಾರಾವಾಹಿ ಪ್ರಸಾರವಾಗುತ್ತಿರುವುದಕ್ಕೆ ಕರ್ನಾಟಕದ ಮೂಲೆ ಮೂಲೆಗೂ ಅವರ ಕಥೆ ತಲುಪಲಿದೆ. ಕನ್ನಡದಲ್ಲೇ ಈ ಧಾರಾವಾಹಿ ಬರುತ್ತಿರುವುದಕ್ಕೆ ಅನೇಕರಿಗೆ ಸುಲಭವಾಗಿ ಅರ್ಥ ಕೂಡ ಆಗಲಿದೆ.

ಇದನ್ನೂ ಓದಿ: ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​