AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Madhuri Dixit: ಮಾಧುರಿ ದೀಕ್ಷಿತ್​ ಜನ್ಮದಿನ; ‘ಏಕ್​ ದೋ ತೀನ್​’ ಸುಂದರಿಗೆ ಈಗ ಎಷ್ಟು ವರ್ಷ?

Madhuri Dixit Birthday: ಇಂದಿಗೂ ಡ್ಯಾನ್ಸ್​ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್​ ಆಗಿ ಮಾಧುರಿ ದೀಕ್ಷಿತ್ ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

Happy Birthday Madhuri Dixit: ಮಾಧುರಿ ದೀಕ್ಷಿತ್​ ಜನ್ಮದಿನ; ‘ಏಕ್​ ದೋ ತೀನ್​’ ಸುಂದರಿಗೆ ಈಗ ಎಷ್ಟು ವರ್ಷ?
ಮಾಧುರಿ ದೀಕ್ಷಿತ್
ಮದನ್​ ಕುಮಾರ್​
|

Updated on: May 15, 2021 | 12:10 PM

Share

ಬಾಲಿವುಡ್​ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್​ ಅವರಿಗೆ ಇಂದು (ಮೇ 15) ಜನ್ಮದಿನ. ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. ‘ಏಕ್​ ದೋ ತೀನ್​..’ ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್​ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್​ ಸ್ಟಾರ್​ ಆಗಿದ್ದರು. ಇಂದು ಅವರು 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಎವರ್​ಗ್ರೀನ್​ ಸುಂದರಿಗೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

1984ರಲ್ಲಿ ಅಬೋದ್​ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್​ ಅವರು ಬಾಲಿವುಡ್​ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ಆಗ ಮಾಧುರಿ ವಯಸ್ಸು ಕೇವಲ 17. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್​’ ಸಿನಿಮಾ ಮೂಲಕ. ಆ ಚಿತ್ರದ ‘ಏಕ್​ ದೋ ತೀನ್​..’ ಹಾಡು ಸೂಪರ್​ ಹಿಟ್​ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್​ ದೇಶಾದ್ಯಂತ ಖ್ಯಾತಿ ಗಳಿಸಿದರು. ಸಿನಿಪ್ರೇಮಿಗಳಿಗೆ ಇಂದಿಗೂ ಆ ಹಾಡು ಫೇವರಿಟ್​ ಆಗಿ ಉಳಿದುಕೊಂಡಿದೆ. ತೇಜಾಬ್​ ಚಿತ್ರದ ನಂತರ ಮಾಧುರಿ ದೀಕ್ಷಿತ್​ ಅವರ ಸ್ಟಾರ್​ಗಿರಿ ದೊಡ್ಡ ಮಟ್ಟಕ್ಕೆ ಏರಿತು. ಸ್ಟಾರ್​ ನಟರಿಗಿಂತಲೂ ಅವರು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬುದು ಅಚ್ಚರಿಯ ವಿಷಯ.

ಆ ಸಮಯಕ್ಕಾಗಲೇ ನಟಿ ಶ್ರೀದೇವಿ ಸ್ಟಾರ್​ ಕಲಾವಿದೆಯಾಗಿ ಮಿಂಚುತ್ತಿದ್ದರು. ಅವರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಮಾಧುರಿ ಕೂಡ ಅಪಾರ ಜನಪ್ರಿಯತೆ ಗಳಿಸಿದರು. ಸುಮ್ಮನೆ ಹೀರೋ ಜೊತೆ ಮರ ಸುತ್ತುವ ಪಾತ್ರಗಳ ಬದಲಿಗೆ ತಮ್ಮ ನಟನೆಗೆ ಮಹತ್ವ ಇರುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿ ಮಾಧುರಿ ಬೇರೆ ಎಲ್ಲ ನಟಿಯರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಾ ಬಂದರು. ಆಜ ನಚಲೇ ಮತ್ತು ಗುಲಾಬ್​ ಗ್ಯಾಂಗ್​ ಸಿನಿಮಾಗಳವರೆಗೂ ಅವರು ಇದೇ ಸೂತ್ರವನ್ನು ಅನುಸರಿಸಿಕೊಂಡು ಬಂದರು.

1994ರಲ್ಲಿ ಬಂದ ಹಮ್​ ಆಪ್ಕೆ ಹೈ ಕೌನ್​ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್​ ಮತ್ತು ಸಲ್ಮಾನ್​ ಖಾನ್​ ಜೋಡಿ ಆಗಿದ್ದರು. ಆ ಚಿತ್ರ ಬರುವ ವೇಳೆಗೆ ಮಾಧುರಿ ಧೀಕ್ಷಿತ್​ಗೆ ಸ್ಟಾರ್​ ಪಟ್ಟ ಸಿಕ್ಕಿತ್ತು. ಆಗ ಸಲ್ಮಾನ್​ ಖಾನ್​ ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಆದರೂ ಹಮ್​ ಆಪ್ಕೆ ಹೈ ಕೌನ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗಿಂತಲೂ ಹೆಚ್ಚು ಸಂಭಾವನೆಯನ್ನು ಮಾಧುರಿಗೆ ನೀಡಲಾಗಿತ್ತು. ಅದು ಅಂದು ಮಾಧುರಿಗೆ ಇದ್ದ ಬೇಡಿಕೆಗೆ ಸಾಕ್ಷಿ ಒದಗಿಸುವಂತಹ ಸಂಗತಿ. ಇಂದಿಗೂ ಡ್ಯಾನ್ಸ್​ ಸಂಬಂಧಿತ ಟಿವಿ ಕಾರ್ಯಕ್ರಮಗಳ ಜಡ್ಜ್​ ಆಗಿ ಅವರು ಸಕ್ರಿಯರಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಮಾಧುರಿಗೆ ಇಂದು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ:

ನಟಿ ಮಾಧುರಿ ದೀಕ್ಷಿತ್ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು