AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಮೀರಾಬಾಯಿ ಚಾನು ನಟ ಸಲ್ಮಾನ್ ಖಾನ್​ಗೆ ಕೃಷ್ಣ ಮೃಗದ ಚಿತ್ರವಿರುವ ಶಾಲ್ ಕೊಟ್ಟು ಪ್ರಾಂಕ್ ಮಾಡಿದರೇ?

Mirabai Chanu: ಟೊಕಿಯೊ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಲ್ಮಾನ್ ಧರಿಸಿರುವ ಶಾಲ್ ಎಲ್ಲರ ಗಮನ ಸೆಳೆದಿದ್ದು, ಸಲ್ಮಾನ್ ಕಾಲೆಳೆಯುತ್ತಿದ್ದಾರೆ.

Salman Khan: ಮೀರಾಬಾಯಿ ಚಾನು ನಟ ಸಲ್ಮಾನ್ ಖಾನ್​ಗೆ ಕೃಷ್ಣ ಮೃಗದ ಚಿತ್ರವಿರುವ ಶಾಲ್ ಕೊಟ್ಟು ಪ್ರಾಂಕ್ ಮಾಡಿದರೇ?
ಸಲ್ಮಾನ್ ಖಾನ್ ಹಂಚಿಕೊಂಡಿರುವ ಚಿತ್ರ
TV9 Web
| Edited By: |

Updated on:Aug 12, 2021 | 3:21 PM

Share

ಟೊಕಿಯೊ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕದ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆಯಲು ಕಾರಣವಾಗಿದ್ದ ಮೀರಾ ಬಾಯಿ ಚಾನು ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಧರಿಸಿದ್ದ ಶಾಲ್ ಒಂದು ನೆಟ್ಟಿಗರ ಗಮನ ಸೆಳೆದಿದ್ದು, ಅದಕ್ಕಾಗಿ ಸಲ್ಮಾನ್ ಖಾನ್ ಅವರ ಕಾಲೆಳೆದಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಧರಿಸಿದ ಶಾಲ್​ನಲ್ಲಿ ಏನಿತ್ತು ಎಂದು ಕುತೂಹಲ ಮೂಡುತ್ತಿದೆಯೇ? ಮುಂದೆ ಓದಿ.

ಸಲ್ಮಾನ್ ಖಾನ್ ಮಾಡಿರುವ ಟ್ವೀಟ್:

ಸಲ್ಮಾನ್ ಅವರನ್ನು ಭೇಟಿಯಾದಾಗ ಮೀರಾಬಾಯಿ ಚಾನು ಉಡುಗೊರೆ ರೂಪದಲ್ಲಿ ಶಾಲೊಂದನ್ನು ನೀಡಿದ್ದಾರೆ. ಅದರಲ್ಲಿನ ಸೂಕ್ಷ್ಮ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿದ್ದು, ಅದನ್ನು ಕೃಷ್ಣ ಮೃಗವೆಂದು ಭಾವಿಸಿ ಸಲ್ಮಾನ್ ಕಾಲೆಳೆಯುತ್ತಿದ್ದಾರೆ. ಸಲ್ಮಾನ್ ಧರಿಸಿರುವ ಶಾಲಿನ ತುದಿಯಲ್ಲಿ ಏನಿದೆ ನೋಡಿ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಸಲ್ಮಾನ್ ಅವರನ್ನು ಪ್ರಾಂಕ್ ಮಾಡಲಾಗಿದೆ ಎಂದು ಕಾಲೆಳೆದಿದ್ದಾರೆ.

ಸಲ್ಮಾನ್ ಕಾಲೆಳೆದಿರುವ ನೆಟ್ಟಿಗರು:

ಸಲ್ಮಾನ್ ಧರಿಸಿರುವ ಶಾಲಿನ ಮೇಲೆಯೇ ಕಣ್ಣು ಹೋಗುತ್ತಿದೆ ಎಂದಿರುವ ಮತ್ತೋರ್ವ ಟ್ವಿಟರ್ ಬಳಕೆದಾರ:

ಸಲ್ಮಾನ್ ಧರಿಸಿರುವುದು ಕೃಷ್ಣ ಮೃಗವಿರುವ ಶಾಲ್ ಹೌದೇ? ಸತ್ಯಾಸತ್ಯತೆ ಇಲ್ಲಿದೆ:

ಸಲ್ಮಾನ್ ಖಾನ್ ಈ ಮೊದಲು ಕೃಷ್ಣ ಮೃಗದ ಭೇಟೆಯಾಡಿ ಸಿಕ್ಕಿಬಿದ್ದಿದ್ದರು. ಅದಕ್ಕಾಗಿ ನೆಟ್ಟಿಗರು ಅವರ ಕಾಲೆಳೆಯುತ್ತಿದ್ದಾರೆ. ಆದರೆ ವಾಸ್ತವವಾಗಿ ಸಲ್ಮಾನ್ ಧರಿಸಿರುವುದು ಕೃಷ್ಣ ಮೃಗದ ಚಿತ್ರವಿರುವ ಶಾಲ್ ಅಲ್ಲ. ಅದು ಮೀರಾಬಾಯಿ ಉಡುಗೊರೆ ನೀಡಿರುವ ಮಣಿಪುರದಲ್ಲಿ ವಿಶೇಷವಾಗಿ ಕಂಡುಬರುವ ಸಾಂಗೈ ಜಿಂಕೆಯ ಚಿತ್ರ. ಆದರೆ ನೆಟ್ಟಿಗರು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ಸಲ್ಮಾನ್ ಕಾಲೆಳೆಯುತ್ತಿದ್ದಾರೆ. ಮೀರಾಬಾಯಿ ಸಲ್ಮಾನ್ ಅವರನ್ನು ಭೇಟಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು, ತನ್ನ ಕನಸೊಂದು ನನಸಾಗಿದೆ ಎಂದಿದ್ದಾರೆ.

ಇದನ್ನೂ ಓದಿ:

ಮೀರಾಬಾಯಿ ಚಾನು ಕೇವಲ ಭಾರ ಎತ್ತುವುದರಲ್ಲಿ ಮಾತ್ರ ಚಾಂಪಿಯನ್ ಅಲ್ಲ, ವ್ಯಕ್ತಿತ್ವದಲ್ಲೂ ಈಕೆಯದು ಚಾಂಪಿಯನ್​ಗಿರಿ!

‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

(Fans mistaken that Salman Khan wearing Black Buck design Shawl when he is posing with Mirabai Chanu)

Published On - 3:11 pm, Thu, 12 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್