ಮೀರಾಬಾಯಿ ಚಾನು ಕೇವಲ ಭಾರ ಎತ್ತುವುದರಲ್ಲಿ ಮಾತ್ರ ಚಾಂಪಿಯನ್ ಅಲ್ಲ, ವ್ಯಕ್ತಿತ್ವದಲ್ಲೂ ಈಕೆಯದು ಚಾಂಪಿಯನ್ಗಿರಿ!
ತನಗೆ ಸಹಾಯ ಮಾಡಿದ ಸುಮಾರು 150 ಡ್ರೈವರ್ಗಳನ್ನು ಈಕೆ ನೆನಪಿಟ್ಟುಕೊಂಡು ಅವರನ್ನು ಮನಗೆ ಕರೆಸಿ ಎಲ್ಲರಿಗೂ ಒಂದೊಂದು ಶರ್ಟ್ ಗಿಫ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಒಲಂಪಿಕ್ಸ್ನಲ್ಲಿ ಪದಕ ಗೆದ್ದ ನಂತರ ಈಕೆ ಸೆಲಿಬ್ರಿಟಿಯಾಗಿದ್ದಾರೆ, ಹೆಸರಿನೊಂದಿಗೆ ಹಣದ ಹೊಳೆಯೂ ಹರಿದು ಬರುತ್ತಿದೆ. ನೌಕರಿಯಲ್ಲಿ ಪದೋನ್ನತಿ ಸಿಕ್ಕಿದೆ.
ಬದುಕಿನಲ್ಲಿ ಯಶಸ್ಸು ಕಂಡವರು ತಮ್ಮ ಕಷ್ಟದ ದಿನಗಳಲ್ಲಿ ನೆರವಿನ ಚಾಚಿದವರನ್ನು ನೆನಸಿಕೊಂಡು ಅವರಿಗೊಮ್ಮೆ ಥ್ಯಾಂಕ್ಸ್ ಅಂತಲೂ ಹೇಳದ ಜನರಿಂದಲೇ ತುಂಬಿರುವ ಇಂದಿನ ಸ್ವಾರ್ಥಿ ಪ್ರಪಂಚದಲ್ಲಿ ನಮ್ಮ ಬೆಳ್ಳಿ ಹುಡುಗಿ ಮೀರಾಬಾಯಿ ಚಾನು ಡಿಫರೆಂಟ್ ಆಗಿ ಕಾಣುತ್ತಾರೆ. ಹೌದು, ಟೊಕಿಯೋ ಒಲಂಪಿಕ್ಸ್ನಲ್ಲಿ ಪದಕ ಗೆದ್ದಿದ್ದೇನೆ ಎಂದು ಈಕೆ ಬೀಗುತ್ತಿಲ್ಲ. ಭಾರಿ ಪ್ರಮಾಣದ ಭಾರ ಎತ್ತಿ ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಪದಕ ಗೆದ್ದ ಕೇವಲ ಎರಡನೇ ಮಹಿಳೆಯಾಗಿರುವ ಮೀರಾಬಾಯಿಗೆ ತನ್ನ ಕಷ್ಟದ ದಿನಗಳು ಈಗಲೂ ನೆನಪಿವೆ. ಹಾಗಾಗೇ ತನ್ನ ಊರಿನಿಂದ 30 ಕಿಮೀ ದೂರದಲ್ಲಿದ್ದ ತರಬೇತಿ ಕೇಂದ್ರಕ್ಕೆ ದುಡ್ಡು ತೆಗೆದುಕೊಳ್ಳದೆ ತಮ್ಮ ಟ್ರಕ್ಗಳಲ್ಲಿ ಆಕೆ ಡ್ರಾಪ್ ನೀಡುತ್ತಿದ್ದ ಎಲ್ಲ ಟ್ರಕ್ ಡ್ರೈವರ್ಗಳನ್ನು ಆಕೆ ತನ್ನ ಮನೆಗೆ ಕರೆದು ಸನ್ಮಾನಿಸಿದ್ದಾರೆ. ಎಂಥ ದೊಡ್ಡ ಗುಣ ಈಕೆಯದು.
ತನಗೆ ಸಹಾಯ ಮಾಡಿದ ಸುಮಾರು 150 ಡ್ರೈವರ್ಗಳನ್ನು ಈಕೆ ನೆನಪಿಟ್ಟುಕೊಂಡು ಅವರನ್ನು ಮನಗೆ ಕರೆಸಿ ಎಲ್ಲರಿಗೂ ಒಂದೊಂದು ಶರ್ಟ್ ಗಿಫ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಒಲಂಪಿಕ್ಸ್ನಲ್ಲಿ ಪದಕ ಗೆದ್ದ ನಂತರ ಈಕೆ ಸೆಲಿಬ್ರಿಟಿಯಾಗಿದ್ದಾರೆ, ಹೆಸರಿನೊಂದಿಗೆ ಹಣದ ಹೊಳೆಯೂ ಹರಿದು ಬರುತ್ತಿದೆ. ನೌಕರಿಯಲ್ಲಿ ಪದೋನ್ನತಿ ಸಿಕ್ಕಿದೆ. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಅನೇಕ ಸಚಿವರು ಮೀರಾಬಾಯಿ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಎಲ್ಲೆಡೆ ಈಕೆಗೆ ಸನ್ಮಾನ, ಸತ್ಕಾರಗಳು ನಡೆಯುತ್ತಿವೆ. ಆದರೆ ಮೀರಾಬಾಯಿ ಚಾನು ಮಾತ್ರ ತನಗೆ ಸಹಾಯ ಮಾಡಿದವರಲ್ಲಿ ಒಬ್ಬರನ್ನೂ ಮರೆತಿಲ್ಲ.
ಈಕೆ ನಿಜಕ್ಕೂ ಒಬ್ಬ ಚಾಂಪಿಯನ್ ಆಥ್ಲೀಟ್. ನಿಮಗೆ ಮತ್ತು ನಿಮ್ಮ ದೊಡ್ಡ ಗುಣಕ್ಕೆ ಒಂದು ಸಲಾಂ, ಮೀರಾಬಾಯಿ ಚಾನು..
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಲವ್ಲಿನಾ, ಪಿ.ವಿ.ಸಿಂಧು, ಮೀರಾಬಾಯಿ ಚಾನುರಿಗೆ ಅಮುಲ್ ಅಭಿನಂದನೆ..