ಆರತಿ ಬೆಳಗುವಾಗ ಪ್ರಸಾದ ನೀಡಿ ಒಲುಮೆ ತೋರಿದ ದೇವಿ; ಗೃಹ ಸಚಿವ ಆರಗ ಜ್ಞಾನೇಂದ್ರ ಕಣ್ಣೆದುರೇ ಅಚ್ಚರಿ
ವಿನಯ್ ಗುರೂಜಿ ಆಶ್ರಮದಲ್ಲಿ ನಡೆದ ಈ ಪವಾಡದ ದೃಶ್ಯ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಹೂವಿನ ಪ್ರಸಾದವನ್ನ ಗೃಹ ಸಚಿವರ ಕೊರಳಿಗೆ ವಿನಯ್ ಗುರೂಜಿ ಹಾಕಿದ್ದು ಶುಭ ಹಾರೈಸಿದ್ದಾರೆ.
ಕರ್ನಾಟಕ ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಆರಗ ಜ್ಞಾನೇಂದ್ರ, ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಿ ಸನ್ನಿಧಿಯಲ್ಲಿ ಅಚ್ಚರಿಯ ಘಟನೆ ನಡೆದಿದ್ದು, ಆರತಿ ಬೆಳಗುವ ವೇಳೆ ನೋಡನೋಡುತ್ತಲೇ ದೇವಿಯ ತಲೆಯಿಂದ ಹೂವಿನ ಪ್ರಸಾದವಾಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರತಿ ಮಾಡುವಾಗ ದೇವಿಯ ತಲೆ ಮೇಲಿಂದ ಹೂವಿನ ಪ್ರಸಾದ ಬಿದ್ದಿದೆ. ಮೊದಲು ದೇವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆರತಿ ಮಾಡಿದ್ದಾರೆ. ಬಳಿಕ ವಿನಯ್ ಗುರೂಜಿ ದೇವಿಗೆ ಆರತಿ ಎತ್ತಿದ್ದಾರೆ. ಈ ವೇಳೆ ದೇವಿ ತಲೆಯಿಂದ ಹೂವಿನ ಪ್ರಸಾದ ಕೆಳಗೆ ಬಿದ್ದಿದೆ.
ವಿನಯ್ ಗುರೂಜಿ ಆಶ್ರಮದಲ್ಲಿ ನಡೆದ ಈ ಪವಾಡದ ದೃಶ್ಯ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಹೂವಿನ ಪ್ರಸಾದವನ್ನ ಗೃಹ ಸಚಿವರ ಕೊರಳಿಗೆ ವಿನಯ್ ಗುರೂಜಿ ಹಾಕಿದ್ದು ಶುಭ ಹಾರೈಸಿದ್ದಾರೆ. ಮೊದಲ ಬಾರಿಗೆ ಸಚಿವರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಅತ್ಯಂತ ಪ್ರಬಲ ಖಾತೆಯೇ ಸಿಕ್ಕಿದ್ದು, ಇದೀಗ ದೇವರ ಸನ್ನಿಧಿಯಲ್ಲಿ ಪ್ರಸಾದ ಲಭಿಸಿರುವುದು ಶುಭ ಸೂಚನೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನಮಾನ: ರಾಜ್ಯ ಸರ್ಕಾರದಿಂದ ಅಧಿಸೂಚನೆ
Araga Jnanendra: ಅಡಿಕೆ ಬೆಳೆಗಾರರ ದನಿ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರಗೆ ಸಿಕ್ತು ಪ್ರಮುಖ ಗೃಹ ಖಾತೆ
(Karnataka Home Minister Araga Jnanendra blessed by Devi while performing Pooja in Vinay Guruji Ashram in Chikkamagaluru)