AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Araga Jnanendra: ಅಡಿಕೆ ಬೆಳೆಗಾರರ ದನಿ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರಗೆ ಸಿಕ್ತು ಪ್ರಮುಖ ಗೃಹ ಖಾತೆ

ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲಲಾರರು ಎನ್ನುವ ದಾಖಲೆ ಮುರಿದು ನಂತರದ ದಿನಗಳಲ್ಲಿ ಸತತ ಮೂರು ಬಾರಿ ಗೆಲುವು ದಾಖಲಿಸಿದರು. 2008, 2013ರಲ್ಲಿ ಸೋತಿದ್ದರು.

Araga Jnanendra: ಅಡಿಕೆ ಬೆಳೆಗಾರರ ದನಿ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರಗೆ ಸಿಕ್ತು ಪ್ರಮುಖ ಗೃಹ ಖಾತೆ
ನೂತನ ಸಚಿವ ಆರಗ ಜ್ಞಾನೇಂದ್ರ
TV9 Web
| Edited By: |

Updated on:Aug 10, 2021 | 1:18 PM

Share

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಅಗ್ರಹ ಹೋಬಳಿ ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಸಣ ಗ್ರಾಮದ ಆರಗ ಜ್ಞಾನೇಂದ್ರ ಜನಿಸಿದ್ದು ಮಾರ್ಚ್ 15, 1951ರಲ್ಲಿ. ತಂದೆ ರಾಮಣ್ಣ ಗೌಡ ಮತ್ತು ತಾಯಿ ಚಿನ್ನಮ್ಮ. ಆರಗದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸುವ ಅನಿವಾರ್ಯತೆಗೆ ಸಿಲುಕಿದ್ದಾಗ ತಾರಗೊಳ್ಳಿ ನಾಗರಾಜ್ ರಾವ್ ಎನ್ನುವ ಆರ್​ಎಸ್ಎಸ್ ಪ್ರಮುಖರ ಕಣ್ಣಿಗೆ ಬಿದ್ದರು. ಅವರೇ ಜ್ಞಾನೇಂದ್ರರನ್ನು ಬಿಕಾಂವರೆಗೆ ಓದಿಸಿದರು.

ಆರಗ ಜ್ಞಾನೇಂದ್ರ ಅವರಿಗೆ ಇದೀಗ ಗೃಹ ಖಾತೆ ನೀಡಲಾಗಿದೆ: ವಿದ್ಯಾರ್ಥಿ ದೆಸೆಯಿಂದಲೂ ಆರ್​ಎಸ್​ಎಸ್​ನಲ್ಲಿ ಜ್ಞಾನೇಂದ್ರ ಸಕ್ರಿಯರು. ಆರ್​ಎಸ್​ಎಸ್​ ಶಾಖೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿದ ಅನುಭವವೂ ಇದೆ. ತುರ್ತು ಪರಿಸ್ಥಿತಿ ವಿರೋಧಿಸಿ ನಡೆದ ಹೋರಾಟದಲ್ಲಿ ಬಾಗಿಯಾಗಿ 6 ತಿಂಗಳು ಜೈಲು ವಾಸ ಅನುಭವಿಸಿದ್ದರು.

ತಾಲೂಕು ಬೋರ್ಡ್ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದರು. 1983ರಲ್ಲಿ ಮೊದಲ ಸಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧಿಸಿ ಕೇವಲ 2000 ಮತಗಳ ಅಂತರದಲ್ಲಿ ಸೋಲುಕಂಡಿದ್ದರು. 1985, 1989ರಲ್ಲಿ ಮತ್ತೆ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಜಿಲ್ಲಾ ಪರಿಷತ್ ಚುನಾವಣೆಗೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೇ ಸಂಧರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಶಿಮೂಲ್ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. 1994ರ ಚುನಾವಣೆಯಲ್ಲಿ ಪ್ರಭಾವಿ ನಾಯಕ ಡಿ.ಬಿ.ಚಂದ್ರೇಗೌಡರನ್ನು ಸೋಲಿಸಿ ವಿದಾನಸಭೆಗೆ ಆಯ್ಕೆಯಾದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲಲಾರರು ಎನ್ನುವ ದಾಖಲೆ ಮುರಿದು ನಂತರದ ದಿನಗಳಲ್ಲಿ ಸತತ ಮೂರು ಬಾರಿ ಗೆಲುವು ದಾಖಲಿಸಿದರು. 2008, 2013ರಲ್ಲಿ ಸೋತಿದ್ದರು. 2018ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಈವರೆಗಿನ ದಾಖಲೆಯ ಅಂತರ ಎನಿಸಿರುವ 22,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

Araga-Jnanendra

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಚಕ್ಕೋಡುಬೈಲು ಬೆನಕಭಟ್ಟರ ಭಾವಚಿತ್ರಕ್ಕೆ ಆರಗ ಜ್ಞಾನೇಂದ್ರ ನಮಿಸಿದ ಕ್ಷಣ..

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಡಿಕೆ ಬೆಳೆಗಾರರ ಪರವಾಗಿ ಸತತ ಹೋರಾಟ, ಅಡಿಕೆ ಬೆಳೆಗೆ ಸಂಕಷ್ಟ ಬಂದಾಗಲೆಲ್ಲ ನಿಯೋಗದೊಂದಿಗೆ ದೆಹಲಿಗೆ ಭೇಟಿ ನೀಡಿ, ಕೇಂದ್ರ ಸರ್ಕಾರದ ಎದುರು ಅಡಿಕೆ ಬೆಳೆಗಾರರ ಪರವಾಗಿ ಹೋರಾಟ ಮಾಡಿದ್ದರು. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ರಚನೆಯಾದ ರಾಜ್ಯ ಅಡಿಕೆ ಬೆಳೆಗಾರರ ಕಾರ್ಯಪಡೆ ರಾಜ್ಯಾಧ್ಯಕ್ಷ ಮತ್ತು ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಸುಮಾರು 45 ವರ್ಷಗಳ ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ಒಂದೇ ಪಕ್ಷ ಒಂದೇ ಸಿದ್ಧಾಂತ ಎಂಬ ತತ್ವವನ್ನು ಅಚಲವಾಗಿ ನಂಬಿದ್ದರು. 1983ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಜೊತೆ ಚುನಾವಣೆಗೆ ಸ್ಪರ್ಧಿಸಿದ ಕೆಲವೇ ನಾಯಕರಲ್ಲಿ ಜ್ಞಾನೇಂದ್ರ ಸಹ ಒಬ್ಬರು. ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ತೀರ್ಥಹಳ್ಳಿ ತಾಲ್ಲೂಕು ಗುಡ್ಡೇಕೊಪ್ಪ ಎಂಬ ಗ್ರಾಮದಲ್ಲಿ ವಾಸವಿದ್ದಾರೆ.

(CM Basavaraj Bommai Cabinet Araga Jnanendra MLA from Thirthahalli constituency take oath as minister here is the profile)

ಇದನ್ನೂ ಓದಿ: BC Nagesh: ಜನರ ಕೈಗೆ ಸಿಗುವ ನಾಯಕ ತಿಪಟೂರಿನ ಬಿ.ಸಿ.ನಾಗೇಶ್​ಗೆ ಸಚಿವ ಸ್ಥಾನ

ಇದನ್ನೂ ಓದಿ: Sunil Kumar: ಆರ್​ಎಸ್​ಎಸ್​, ಎಬಿವಿಪಿ ಹಿನ್ನೆಲೆಯುಳ್ಳ ಸುನಿಲ್ ಕುಮಾರ್​ಗೆ ಸಚಿವ ಸ್ಥಾನ

Published On - 3:40 pm, Wed, 4 August 21