ವ್ಯಕ್ತಿ ಚಿತ್ರಣ: ಕೃಷಿ ಕುಟುಂಬದ ಹಿನ್ನೆಲೆಯ ನವಲಗುಂದ ಕ್ಷೇತ್ರದ ಶಾಸಕ, ನೂತನ ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ

Shankar Patil Munenakoppa: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ಶಂಕರ ಪಾಟೀಲ್ ಮುನೇನಕೊಪ್ಪ, ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಯಾರೇ ಬಂದು ಕೇಳಿದರೂ ಸಹಾಯ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಜನರ ಪಾಲಿಗೆ ಇವರು ದೇವರ ಹಾಗೆ ಎಂಬ ಮಾತು ಕ್ಷೇತ್ರದಲ್ಲಿ ಇರುವುದಂತೂ ಖರೆ.

ವ್ಯಕ್ತಿ ಚಿತ್ರಣ: ಕೃಷಿ ಕುಟುಂಬದ ಹಿನ್ನೆಲೆಯ ನವಲಗುಂದ ಕ್ಷೇತ್ರದ ಶಾಸಕ, ನೂತನ ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ
ಶಂಕರ ಪಾಟೀಲ್ ಮುನೇನಕೊಪ್ಪ
Follow us
| Updated By: guruganesh bhat

Updated on:Aug 04, 2021 | 3:23 PM

ಇಂದು ಬಸವರಾಜ ಬೊಮ್ಮಾಯಿ‌ ನೇತೃತ್ವದ ಹೊಸ ಸರ್ಕಾರದಲ್ಲಿ ((CM Basavaraj Bommai Cabinet) ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ (Shanakar Patil Munenakoppa) ಸಚಿವರಾಗಿದ್ದಾರೆ. ಸಹಜವಾಗಿ ಅವರ ಕ್ಷೇತ್ರದ, ಸ್ವಗ್ರಾಮದ ಜನರು ಹರ್ಷಿತರಾಗಿದ್ದಾರೆ. 52 ವರ್ಶದ ಶಂಕರ ಪಾಟೀಲ್ ಅವರ ತಂದೆ ಬಸನಗೌಡ ಮುನೇನಕೊಪ್ಪ, ತಾಯಿ ಗಂಗಮ್ಮ. ಪತ್ನಿ ಪ್ರಭಾವತಿ. ಇಬ್ಬರು ಗಂಡು ಮಕ್ಕಳು. ಜೂನ್ 6 ರಂದು ಇವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಲಿಂಗಾಯತ – ಪಂಚಮಸಾಲಿ ಸಮುದಾಯದ‌ ನಾಯಕನಾಗಿಯೂ ಶಂಕರ್ ಪಾಟೀಲ್ ಗುರುತಿಸಿಕೊಂಡಿದ್ದಾರೆ. ಇದು ಸಹ ಅವರು ಮಂತ್ರಿ ಪದವಿಗೇರಲು ಬಹುಮುಖ್ಯ ಕಾರಣ.

ರಾಜಕೀಯ ನಡೆ ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರೂ ಶಂಕರ ಪಾಟೀಲ್ ಗೆ ರಾಜಕೀಯ ಹೊಸದಲ್ಲ. ಅಜ್ಜಂದಿರ ಕಾಲದಿಂದಲೂ ರಾಜಕಾರಣ ಶಂಕರ್ ಪಾಟೀಲ್ ಕುಟುಂಬದ ರಕ್ತದಲ್ಲಿದೆ. ಶಂಕರ್ ಪಾಟೀಲ್ ತಂದೆ ರಾಜಕೀಯದಿಂದ ದೂರವೇ ಉಳಿದು ಕೃಷಿಯತ್ತ ಗಮನಹರಿಸಿದ್ದರು. ಆದರೆ ಶಂಕರ ಪಾಟೀಲ್ ಮಾತ್ರ ಮತ್ತೆ ತಮ್ಮ ಅಜ್ಜಂದಿರಂತೆ ರಾಜಕೀಯದತ್ತ ಒಲವು ತೋರಿದರು. ವಿದ್ಯಾರ್ಥಿ ದೆಸೆಯಿಂದಲೂ ಶಂಕರ ಪಾಟೀಲ್ ಮುನೇನಕೊಪ್ಪ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಪಾಟೀಲ್ ಉತ್ತಮ ಕಬಡ್ಡಿ ಕ್ರೀಡಾಪಟುವೂ ಹೌದು. 1989 ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಬಂದ ಶಂಕರ ಪಾಟೀಲ್, ಅಂದಿನ. ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 2008 ರವರೆಗೂ ಜನತಾದಳದಲ್ಲಿಯೇ ಸಕ್ರಿಯವಾಗಿದ್ದ ಪಕ್ಷದಲ್ಲಿದ್ದ ಶಂಕರ ಪಾಟೀಲ್ ಅನೇಕ ಸ್ತರಗಳಲ್ಲಿ ಕೆಲಸ ಮಾಡಿದ್ದಾರೆ.

ಶಂಕರ್ ಪಾಟೀಲ್ ಅವರು ಕರ್ನಾಟಕ ರೈಲ್ವೆ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2008 ರಲ್ಲಿ ಬಿಜೆಪಿ ಸೇರಿದ ಶಂಕರ ಪಾಟೀಲ್ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಆಯ್ಕೆಯಾದರು. ಜಗದೀಶ ಶೆಟ್ಟರ್ ಸಿಎಂ ಆದಾಗ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಕಳೆದ ಬಾರಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಎನ್. ಎಚ್. ಕೋನರೆಡ್ಡಿ ವಿರುದ್ಧ ಪರಾಭವಗೊಂಡರು. ಆದರೆ 2018 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ, ಪ್ರತಿಸ್ಪರ್ಧಿ ಕೋನರೆಡ್ಡಿ ವಿರುದ್ಧ ಗೆದ್ದು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದರು.

ಮಂತ್ರಿಯಾಗಲು ಅರ್ಹತೆಯೇನು? ಮೂಲತಃ ಕೃಷಿ ಕುಟುಂಬದ ಮುನೇನಕೊಪ್ಪ ಕುಟುಂಬ, ನವಲಗುಂದ ತಾಲೂಕಿನಲ್ಲಿ ಉತ್ತಮ ಹೆಸರು ಇಟ್ಟುಕೊಂಡಿದೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ಶಂಕರ ಪಾಟೀಲ್ ಮುನೇನಕೊಪ್ಪ, ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಯಾರೇ ಬಂದು ಕೇಳಿದರೂ ಸಹಾಯ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಜನರ ಪಾಲಿಗೆ ಇವರು ದೇವರ ಹಾಗೆ ಎಂಬ ಮಾತು ಕ್ಷೇತ್ರದಲ್ಲಿ ಇರುವುದಂತೂ ಖರೆ. ನಿತ್ಯವೂ ಮನೆ ಮತ್ತು ಕಚೇರಿಯಲ್ಲಿ ನೂರಾರು ಜನರನ್ನು ಭೇಟಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇ ಜಿಲ್ಲೆಯಲ್ಲಿ ನಡೆಯೋ ಅನೇಕ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಟ್ಟುಕೊಂಡಿದ್ದಾರೆ. ಅದರಲ್ಲೂ ಕೃಷಿ ಯೋಜನೆಗಳ ಬಗ್ಗೆ ಸಾಕಷ್ಟು ಮಾಹಿತಿ ಇಟ್ಟುಕೊಂಡಿದ್ದಾರೆ. ಜನರ ನೋವಿಗೆ ಸ್ಪಂದಿಸುತ್ತಾರೆ ಎಂಬ ಮಾತುಗಳಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇದುವರೆಗೂ ಧಾರವಾಡ ಜಿಲ್ಲೆಯಲ್ಲಿ ಸಚಿವರಾದವರ ಪೈಕಿ ಅನೇಕರು ಅವಳಿ ನಗರದಲ್ಲಿನ ಶಾಸಕರು. ಹೀಗಾಗಿ ಇವರಿಗೆ ಮಂತ್ರಿ ಪದವಿ ನೀಡುವ ಮೂಲಕ ಗ್ರಾಮೀಣ ಪ್ರದೇಶಕ್ಕೂ ಅವಕಾಶ ಕೊಡಲಾಗಿದೆ ಎಂದು ಬಿಜೆಪಿ ಹೈಕಮಾಂಡ್ ಬಿಂಬಿಸಿದೆ. ಅವರಿಗೆ ಯಾವ ಖಾತೆಯ ಜವಾಬ್ಧಾರಿ ದೊರೆಯುತ್ತದೆ ಮತ್ತು ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ: 

13 ಜಿಲ್ಲೆಗಳಿಗೆ ಮಂತ್ರಿಗಿರಿ ಇಲ್ಲ, 6 ಜಿಲ್ಲೆಗೆ ಇಬ್ಬಿಬ್ಬರು, ಲಿಂಗಾಯತರಿಗೆ ಸಿಹಿ,​ 7 ಮಂದಿ ಹಳಬರಿಗೆ ಕಹಿ; ಶಶಿಕಲಾ ಜೊಲ್ಲೆ ಏಕೈಕ ಸಚಿವೆ​

ಸಂಘ ಪರಿವಾರದವರನ್ನು ಭೇಟಿ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡುವೆ; ಶಾಸಕ ಓಲೇಕಾರ್

(CM Basavaraj Bommai Cabinet Shankar Patil Munenakoppa MLA from Navalgund constituency take oath as minister here is the profile)

Published On - 3:03 pm, Wed, 4 August 21

Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ