Parliament Monsoon Session: ರಾಜ್ಯಸಭಾ ಕಲಾಪದಿಂದ 6 ಟಿಎಂಸಿ ಸಂಸದರ ಅಮಾನತು; ವೆಂಕಯ್ಯ ನಾಯ್ಡು ಆದೇಶ

Rajya Sabha Session 2021: ರಾಜ್ಯಸಭಾ ಅಧಿವೇಶನದ ಶಾಂತಿ ಕದಡಿ, ಅಡ್ಡಿಪಡಿಸಿದ 6 ಟಿಎಂಸಿ ಸಂಸದರನ್ನು ಸಭಾಪತಿ ವೆಂಕಯ್ಯ ನಾಯ್ಡು ಇಂದಿನ ಕಲಾಪದಿಂದ ಅಮಾನತು ಮಾಡಿದ್ದಾರೆ.

Parliament Monsoon Session: ರಾಜ್ಯಸಭಾ ಕಲಾಪದಿಂದ 6 ಟಿಎಂಸಿ ಸಂಸದರ ಅಮಾನತು; ವೆಂಕಯ್ಯ ನಾಯ್ಡು ಆದೇಶ
ವೆಂಕಯ್ಯ ನಾಯ್ಡು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 04, 2021 | 1:55 PM

ನವದೆಹಲಿ: ಕಳೆದ ತಿಂಗಳು ಲೋಕಸಭಾ ಮತ್ತು ರಾಜ್ಯಸಭಾ ಮುಂಗಾರು ಅಧಿವೇಶನ (Monsoon Session 2021) ಆರಂಭವಾದಾಗಿನಿಂದ ಪೆಗಾಸಸ್ (Pegasus), ಕೃಷಿ ಕಾಯ್ದೆ (Farm Law) ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳು ಸದನದಲ್ಲಿ ಗಲಾಟೆ ಎಬ್ಬಿಸುತ್ತಿವೆ. ಇದರಿಂದಾಗಿ 2 ವಾರಗಳಿಂದ ಇದುವರೆಗೂ ಸರಿಯಾಗಿ ಅಧಿವೇಶನವನ್ನು ನಡೆಸಲು ಸಾಧ್ಯವಾಗಿಲ್ಲ. ಇಂದು ಕೂಡ ರಾಜ್ಯಸಭಾ ಕಲಾಪಕ್ಕೆ ವಿರೋಧ ಪಕ್ಷಗಳ ಸದಸ್ಯರು ಅಡ್ಡಿಪಡಿಸಿದ್ದರಿಂದ ಇಂದಿನ ಕಲಾಪದಿಂದ 6 ಟಿಎಂಸಿ ಸಂಸದರನ್ನು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅಮಾನತು ಮಾಡಿದ್ದಾರೆ.

ಟಿಎಂಸಿ ರಾಜ್ಯಸಭಾ ಸದಸ್ಯರಾದ ಡೋಲಾ ಸೇನ್, ಅರ್ಪಿತಾ ಘೋಷ್, ನದೀಮ್ ಲ್ ಹಕ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭೆ ಅಧಿವೇಶನದಲ್ಲಿ ಘೋಷಣೆ ಕೂಗಿದರು. ಪೆಗಾಸಸ್ ವಿವಾದದ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವಂತೆ ಅವರು ಒತ್ತಾಯಿಸಿದರು. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಗಲಾಟೆಯೆಬ್ಬಿಸಿದರು. ಇದರಿಂದ ರಾಜ್ಯಸಭಾ ಕಲಾಪಕ್ಕೆ ಅಡ್ಡಿಯಾಯಿತು. ಹೀಗಾಗಿ, ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದ ಸಭಾಪತಿ ವೆಂಕಯ್ಯ ನಾಯ್ಡು ಪ್ರತಿಭಟನಾನಿರತ ಸಂಸದರನ್ನು ವಾಪಾಸ್ ತಮ್ಮ ಖುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಆದರೆ, ನಾಮಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಸಂಸದರು ರಾಜ್ಯಸಭಾ ಸಭಾಪತಿಯ ಮಾತಿಗೆ ಗೌರವ ಕೊಡಲಿಲ್ಲ. ಹೀಗಾಗಿ, ನಿಯಮ 255ರ ಅಡಿಯಲ್ಲಿ ಆ ಸಂಸದರನ್ನು ಇಂದಿನ ಕಲಾಪದಿಂದ ಅಮಾನತು ಮಾಡಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಂಸದ ಶಂತನು ಸೇನ್ ಕಳೆದ ವಾರ ರಾಜ್ಯಸಭಾ ಅಧಿವೇಶನದ ವೇಳೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಕೈಯಲ್ಲಿದ್ದ ಪೆಗಾಸಸ್ ವಿವಾದದ ಕುರಿತ ಹೇಳಿಕೆಯ ಪ್ರತಿಯನ್ನು ಕಸಿದುಕೊಂಡು, ಹರಿದುಹಾಕಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ಕೆಲವು ಟಿಎಇಂಸಿ ಸಂಸದರನ್ನು ಇಂದಿನ ಕಲಾಪದಿಂದ ಅಮಾನತು ಮಾಡಲಾಗಿದೆ.

ಜುಲೈ 19ರಂದು ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಬೇಹುಗಾರಿಕೆ, ಕೋವಿಡ್ ಲಸಿಕೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಪ್ರತಿದಿನವೂ ನೋಟಿಸ್ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಅದೇ ರೀತಿ ಆಡಳಿತ ಪಕ್ಷದವರು ಕೂಡ ವಿರೋಧ ಪಕ್ಷದವರಿಂದಲೇ ಅಧಿವೇಶನ ಮುಂದೂಡಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷದವರು ದಿನಕ್ಕೊಂದು ಗಲಾಟೆಯೆಬ್ಬಿಸಿ, ಪ್ರತಿಭಟನೆ ಮಾಡುವ ಮೂಲಕ ಸದನವನ್ನು ಮುನ್ನಡೆಸದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಜುಲೈ 19ರಂದು ಮುಂಗಾರು ಅಧಿವೇಶನ ಶುರುವಾಗಿದ್ದು, ಎರಡು ವಾರಗಳಲ್ಲಿ 107 ಗಂಟೆಗಳ ಕಾಲ ನಡೆಯಬೇಕಿದ್ದ ಅಧಿವೇಶನ 18 ಗಂಟೆಗಳ ಕಾಲ ಮಾತ್ರ ನಡೆದಿದೆ. ಇದರಿಂದ ತೆರಿಗೆದಾರರ 133 ಕೋಟಿ ರೂ.ಗೂ ಅಧಿಕ ಹಣ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Parliament Monsoon Session: ಅಧಿವೇಶನ ನಡೆಸಲು ವಿಪಕ್ಷಗಳಿಂದ ಅಡ್ಡಿ; ಜನರಿಗೆ ಮಾಡುತ್ತಿರುವ ಅವಮಾನ ಎಂದು ಪ್ರಧಾನಿ ಮೋದಿ ಆಕ್ರೋಶ

Parliament Monsoon Session 2021: ಮುಂಗಾರು ಅಧಿವೇಶನದಲ್ಲಿ ‘ಪೆಗಾಸಸ್’ ಬಗ್ಗೆ ವಿಪಕ್ಷಗಳ ಗದ್ದಲ, ಉಭಯ ಸದನಗಳ ಕಲಾಪ ಮುಂದೂಡಿಕೆ

(Parliament Monsoon Session Live Rajya Sabha Chairman Venkaiah Naidu Suspends 6 TMC MPs for the day)

Published On - 1:49 pm, Wed, 4 August 21

ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ