ಸಂಘ ಪರಿವಾರದವರನ್ನು ಭೇಟಿ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡುವೆ – ಶಾಸಕ ಓಲೇಕಾರ್
ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್ ಕೆಂಡಾಮಂಡಲರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡಲು ಓಲೇಕಾರ್ ನಿರ್ಧಾರ ಮಾಡಿದ್ದಾರೆ. ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.
ಹಾವೇರಿ: ಶಾಸಕ ನೆಹರು ಓಲೇಕಾರ್ಗೆ ಸಚಿವ ಸ್ಥಾನ ಸಿಗದ್ದಕ್ಕೆ ಹಾವೇರಿಯಲ್ಲಿ ಶಾಸಕ ಓಲೇಕಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಪ್ರವಾಸಿ ಮಂದಿರದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪರಸಪ್ಪ ಕುಂಬಾರ ಎಂಬ ಬೆಂಬಲಿಗ ಏಕಾಏಕಿ ಉರುಳು ಸೇವೆ ಕೂಡ ಮಾಡಿದ್ದಾರೆ. ಶಾಸಕ ಓಲೇಕಾರರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಇನ್ನು ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್ ಕೆಂಡಾಮಂಡಲರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡಲು ಓಲೇಕಾರ್ ನಿರ್ಧಾರ ಮಾಡಿದ್ದಾರೆ. ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಿ.ಸಿ.ಪಾಟೀಲ್ ಕೂಡ ಮುಂದುವರಿದ ಸಮುದಾಯದವರು. ಆದರೆ ಸಚಿವ ಸ್ಥಾನ ಮಾತ್ರ ಹಿಂದುಳಿದ ವರ್ಗಕ್ಕೆ ಕೊಡಲಿಲ್ಲ. ಸಂಪುಟದಲ್ಲಿ ಜಾತಿವಾರು ಅಸಮತೋಲನ ಎದ್ದು ಕಾಣಿಸ್ತಿದೆ. ಹಿರಿಯರು ಕರೆದು ಮಾತನಾಡಿದರೆ ಹೋಗಿ ಚರ್ಚಿಸುತ್ತೇನೆ. ಸಂಪುಟದಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪ ಇದ್ದಾಗಲೂ ಅವಕಾಶ ವಂಚಿತನಾದೆ. ಇದುವರೆಗೂ ನನಗೆ ಯಾವುದೇ ರೀತಿ ಭರವಸೆ ನೀಡಿಲ್ಲ. ನಾವು ಪಕ್ಷದ ಜೊತೆಯಲ್ಲಿದ್ದು, ಹೋರಾಟ ಮಾಡ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಮೋಸ ಮಾಡಿದ್ದಾರೆ. ನಿಷ್ಠಾವಂತರನ್ನು ಸಿಎಂ ಬೊಮ್ಮಾಯಿ ಕಡೆಗಣಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೂ ನಾನು ಹೋಗಲ್ಲ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Kamal Haasan: ಮೇಕೆದಾಟು ವಿಚಾರದಲ್ಲಿ ಬಿಜೆಪಿಯಿಂದ ಡಬಲ್ ಆ್ಯಕ್ಟಿಂಗ್; ವಿಪಕ್ಷಗಳ ಒಕ್ಕೂಟ ಸೇರಲು ಸಿದ್ಧ ಎಂದ ಕಮಲ್ ಹಾಸನ್
Published On - 2:54 pm, Wed, 4 August 21