Kamal Haasan: ಮೇಕೆದಾಟು ವಿಚಾರದಲ್ಲಿ ಬಿಜೆಪಿಯಿಂದ ಡಬಲ್ ಆ್ಯಕ್ಟಿಂಗ್; ವಿಪಕ್ಷಗಳ ಒಕ್ಕೂಟ ಸೇರಲು ಸಿದ್ಧ ಎಂದ ಕಮಲ್ ಹಾಸನ್

Mekedatu Dam Project: ಕರ್ನಾಟಕದ ಮೇಕೆದಾಟು ಡ್ಯಾಂ ನಿರ್ಮಾಣದ ವಿಷಯದಲ್ಲಿ ತಮಿಳುನಾಡು ಬಿಜೆಪಿ ಘಟಕ ಡಬ್ಬಲ್‌ ಆ್ಯಕ್ಟಿಂಗ್‌ ಮಾಡುತ್ತಿದೆ. ಅತ್ತ ಕರ್ನಾಟಕದ ಬಿಜೆಪಿ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ ಎಂದು ಎಂಎನ್​ಎಂ ಪಕ್ಷದ ನಾಯಕ ಕಮಲ್ ಹಾಸನ್ ಟೀಕಿಸಿದ್ದಾರೆ.

Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 04, 2021 | 2:33 PM

ಚೆನ್ನೈ: ಒಂದುವೇಳೆ ನಮಗೆ ಆಹ್ವಾನ ಬಂದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಎದುರು ವಿರೋಧ ಪಕ್ಷಗಳ ಒಕ್ಕೂಟಕ್ಕೆ ಮಕ್ಕಳ್ ನೀಧಿ ಮಯ್ಯಂ (MNM) ಪಕ್ಷ ಸೇರ್ಪಡೆಯಾಗಲು ಸಿದ್ಧವಿದೆ ಎಂದು ಎಂಎನ್​ಎಂ ಪಕ್ಷದ ಅಧ್ಯಕ್ಷ ಹಾಗೂ ನಟ ಕಮಲ್ ಹಾಸನ್ ಖಚಿತಪಡಿಸಿದ್ದಾರೆ. ತಮಿಳುನಾಡನ್ನು ಒಡೆಯಲು ಕಾರ್ಪೋರೇಟ್ ಕಂಪನಿಯಾದ ಬಿಜೆಪಿ ಸಂಚು ಮಾಡಿದೆ. ಕೊಂಗನಾಡು ಪ್ರತ್ಯೇಕ ರಾಜ್ಯದ ಕೂಗು ಎದ್ದಿರುವ ಹಿಂದೆಯೂ ಬಿಜೆಪಿಯ ರಾಜಕೀಯ ಕುತಂತ್ರವಿದೆ. ಪ್ರತ್ಯೇಕ ರಾಜ್ಯ ಬೇಕೆಂಬುದರ ಹಿಂದೆ ಜನರ ಒತ್ತಾಯವಿದೆ ಎಂದು ನನಗನಿಸುತ್ತಿಲ್ಲ. ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಇದಕ್ಕೆಲ್ಲ ಜನರು ಒಪ್ಪುವುದಿಲ್ಲ ಎನ್ನುವ ಮೂಲಕ ಬಿಜೆಪಿ ವಿರುದ್ಧ ಕಮಲ್ ಹಾಸನ್ ಕಿಡಿ ಕಾರಿದ್ದಾರೆ.

ಕರ್ನಾಟಕದ ಮೇಕೆದಾಟು ಡ್ಯಾಂ ನಿರ್ಮಾಣದ ವಿಷಯದಲ್ಲಿ ತಮಿಳುನಾಡು ಬಿಜೆಪಿ ಘಟಕ ಡಬ್ಬಲ್‌ ಆ್ಯಕ್ಟಿಂಗ್‌ ಮಾಡುತ್ತಿದೆ. ನಾನು ಸಿನಿಮಾಗಳಲ್ಲಿ ಡಬಲ್ ರೋಲ್ ಮಾಡಿದ್ದೇನೆ. ಆದರೆ, ಬಿಜೆಪಿಯವರು ನಿಜ ಜೀವನದಲ್ಲೂ ಡಬಲ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಒಂದೆಡೆ ತಮಿಳುನಾಡು ಬಿಜೆಪಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ. ಆದರೆ, ಕರ್ನಾಟಕದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಹಠ ತೊಟ್ಟಿದ್ದಾರೆ. ಇದರಲ್ಲಿ ಯಾವುದು ನಿಜ? ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

ನಾನು ನಟನಾಗಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ ಬಿಜೆಪಿ ರಾಜಕಾರಣದಲ್ಲೇ ಡಬಲ್ ಆ್ಯಕ್ಟಿಂಗ್ ಮಾಡುತ್ತಿದೆ. ದಕ್ಷಿಣ ಭಾರತದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಿಜೆಪಿಗಳೆರಡು ಕೇಂದ್ರ ಸರ್ಕಾರದ ಕೈಗೊಂಬೆಗಳು. ಭಾರತದಲ್ಲಿ ಮೊದಲು ಇದ್ದ ಈಸ್ಟ್‌ ಇಂಡಿಯಾ ಕಂಪೆನಿಯಂತೆ ಬಿಜೆಪಿ ನಾರ್ತ್ ಇಂಡಿಯಾ ಕಂಪನಿಯಾಗಿ ಬೆಳೆಯುತ್ತಿದೆ. ಅದನ್ನು ನಂಬಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಏನೂ ಸಿಗುವುದಿಲ್ಲ ಎಂದು ಕಮಲ್ ಹಾಸನ್ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಉಪವಾಸ ಬೇಕಾದ್ರೂ ಮಾಡಲಿ, ಇಲ್ಲ ಊಟ ಮಾಡಲಿ; ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ: ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ಟಾಂಗ್

Mekedatu Project: ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು; ನಾಳೆಯ ಸಿಎಂ ಸ್ಟಾಲಿನ್ ದೆಹಲಿ ಭೇಟಿಯತ್ತ ಎಲ್ಲರ ಚಿತ್ತ

(Kamal Haasan says MNM Consider Joining Anti BJP Front BJP protest against Mekedatu Project is double act)

Published On - 2:31 pm, Wed, 4 August 21