AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಂಪುಟದಲ್ಲಿ ಮೈಸೂರು ಮೂಲೆಗುಂಪು; ಸಿದ್ಧರಾಮಯ್ಯ ಪ್ರಭಾವ ತಗ್ಗಿಸುವ ಅವಕಾಶ ಕೈಚೆಲ್ಲಿತೇ ಬಿಜೆಪಿ ಹೈಕಮಾಂಡ್?

ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿಯೂ ಮೈಸೂರು ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತಿರಲಿಲ್ಲ. ಈ ಸಲವಾದರೂ ಜಿಲ್ಲೆಯ ಓರ್ವ ನಾಯಕನಾದರೂ ಸಚಿವರಾಗುತ್ತಾರೆ ಎಂಬ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ.

ಹೊಸ ಸಂಪುಟದಲ್ಲಿ ಮೈಸೂರು ಮೂಲೆಗುಂಪು;  ಸಿದ್ಧರಾಮಯ್ಯ ಪ್ರಭಾವ ತಗ್ಗಿಸುವ ಅವಕಾಶ ಕೈಚೆಲ್ಲಿತೇ ಬಿಜೆಪಿ ಹೈಕಮಾಂಡ್?
Guruganesh Bhat
| Edited By: |

Updated on: Aug 04, 2021 | 4:51 PM

Share

ಅಳೆದೂ ತೂಗಿ ಯಾವುದೇ ಭಿನ್ನಮತ ಹೊಮ್ಮದಿರುವಂತೆ ಮತ್ತು ಪ್ರಾದೇಶಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ಪ್ರಯತ್ನ ವಿಫಲವಾಗಿದೆ.‌ ರಾಜ್ಯದ ಮೈಸೂರು ಪ್ರಾಂತ್ಯದ ಐದು ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಗೊಂದೇ ಸಚಿವ ಸ್ಥಾನ ನೀಡಲಾಗಿದೆ.‌ ಮಂಡ್ಯದ ಕೆ.ಸಿ.ನಾರಾಯಣಗೌಡಗೆ ಮತ್ತೆ ಅವಕಾಶ ದೊರೆತಿದೆ. ಆದರೆ ಮೈಸೂರು, ಕೊಡಗು, ಹಾಸನ , ಚಾಮರಾಜನಗರ ಜಿಲ್ಲೆಗಳ ಯಾವುದೇ ನಾಯಕರಿಗೆ ಈಬಾರಿ ಸಚಿವ ಸ್ಥಾನ ದೊರೆತಿಲ್ಲ.

ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿಯೂ ಮೈಸೂರು ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತಿರಲಿಲ್ಲ. ಈ ಸಲವಾದರೂ ಜಿಲ್ಲೆಯ ಓರ್ವ ನಾಯಕನಾದರೂ ಸಚಿವರಾಗುತ್ತಾರೆ ಎಂಬ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ. ಕೃಷ್ಣರಾಜ ಕ್ಷೇತ್ರದ ಶಾಸಕ,ಐದು ಬಾರಿ ವಿಧಾನಸಭೆಗೆ ಆರಿಸಿಹೋದ ರಾಮದಾಸ್, ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಥವಾ ಚಾಮರಾಜ ಕ್ಷೇತ್ರದ ಶಾಸಕ ಎಲ್ . ನಾಗೇಂದ್ರ- ಈ ಮೂರರಲ್ಲಿ ಒಬ್ಬರಿಗೆ ಮಂತ್ರಿಗಿರಿ ಪಕ್ಕಾ ಎನ್ನಲಾಗಿತ್ತು. ಇಲ್ಲ, ಇದು ನಿಜವಾಗಿಲ್ಲ.

ಮೈಸೂರು‌ ಪ್ರಾಂತ್ಯದ ನಾಯಕರಿಗೆ ಸಚಿವ ಸ್ಥಾನ ನೀಡುವುದು ಬಿಜೆಪಿಯನ್ನು ಆ ಭಾಗದಲ್ಲಿ ಆಳವಾಗಿ ಬೇರೂರಿಸುವ ಒಂದು ಭಾಗವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಗಟ್ಟಿಯಾಗಿರುವ ಬಿಜೆಪಿಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಭಾವದಿಂದಾಗಿ ಕಾಂಗ್ರೆಸ್ ಕುರಿತು ಕೊಂಚ ಭಯವಿದೆ. ಪ್ರತಿ ಸಂಪುಟ ರಚನೆ, ಪುನರಚನೆಯಲ್ಲಿ ಮೈಸೂರು ಭಾಗದ ನಾಯಕರಿಗೆ ಮಣೆ ಹಾಕಿ ಭಯವನ್ನು ಸ್ವಲ್ಪಸ್ವಲ್ಪವೇ ತೊಳೆದುಹಾಕುವ ಅವಕಾಶವನ್ನು ಬಿಜೆಪಿ ಕೈಚೆಲ್ಲಿದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಬೋಪಯ್ಯ, ಹಾಸನದ ಪ್ರೀತಂ ಗೌಡ ಇವರೆಲ್ಲರ ನಿರೀಕ್ಷೆ ಸುಳ್ಳಾಗಿದೆ. ಬಿಜೆಪಿ ಹೈಕಮಾಂಡ್ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರೊಬ್ಬರನ್ನೇ ಈ ಭಾಗದಲ್ಲಿ ನೆಚ್ಚಿಕೊಂಡಿರಬಹುದೇ ಎಂಬ ಪ್ರಶ್ನೆಯೂ ಮೂಡಿದೆ. ಆದರೆ ಹಾಗೇನಾದರೂ ಆದಲ್ಲಿ ಅವರೊಬ್ಬರೇ ಬಿಜೆಪಿ ಬಲವರ್ಧನೆಗೆ ಸಾಕಾಗದು ಎಂಬದಂತೂ ಖರೆ.

ಇದನ್ನೂ ಓದಿ:

ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ: ಮಾಜಿ ಸಿಎಂ ಸಿದ್ದರಾಮಯ್ಯ

ಕದ್ರಾ ತಾಲೂಕಿನ ಪ್ರವಾಹ ಪೀಡಿದ ಜನರ ಸಮಸ್ಯೆಗಳನ್ನು ಅಲಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು