ಮೈಸೂರು ಮೃಗಾಲಯದಿಂದ ನೂತನ ಪ್ರಯೋಗ; ಆನೆಗಳಿಗಾಗಿ ಈಜುಕೊಳ ನಿರ್ಮಾಣ!

ಮೈಸೂರು ಮೃಗಾಲಯದಿಂದ ನೂತನ ಪ್ರಯೋಗ; ಆನೆಗಳಿಗಾಗಿ ಈಜುಕೊಳ ನಿರ್ಮಾಣ!
ಆನೆಗಳಿಗೆ ಈಜುಕೊಳ

Mysuru Zoo: ರಾಜ್ಯದಲ್ಲೇ ಮೊದಲ ಪ್ರಯತ್ನ ಎಂದು ಹೇಳಬಹುದಾದ ಈಜುಕೊಳ, ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಆಗುತ್ತಿದೆ. ಪ್ರಾಯೋಗಿಕವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

TV9kannada Web Team

| Edited By: ganapathi bhat

Aug 03, 2021 | 5:54 PM

ಮೈಸೂರು: ಆನೆಗಳ ಆರೋಗ್ಯದ ದೃಷ್ಟಿಯಿಂದ ಆನೆಗಳಿಗಾಗಿಯೇ ಈಜುಕೊಳ ನಿರ್ಮಾಣ. ಮೈಸೂರು ಮೃಗಾಲಯದಿಂದ ಇಂತಹದೊಂದು ನೂತನ ಪ್ರಯೋಗ ಆರಂಭಿಸಲಾಗಿದೆ. ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಸಂದಿವಾತ ನೋವು ಕಂಡುಬರುತ್ತದೆ. ನೋವು ನಿವಾರಣೆ ಚಿಕಿತ್ಸೆಗಾಗಿ ಈಜುಕೊಳ ನಿರ್ಮಾಣ ಮಾಡಲಾಗಿದೆ. ಮೈಸೂರು ಮೃಗಾಲಯದಿಂದ ನೂತನ ಪ್ರಯೋಗ ಇದಾಗಿದೆ.

ರಾಜ್ಯದಲ್ಲೇ ಮೊದಲ ಪ್ರಯತ್ನ ಎಂದು ಹೇಳಬಹುದಾದ ಈಜುಕೊಳ, ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಆಗುತ್ತಿದೆ. ಪ್ರಾಯೋಗಿಕವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಮೈಸೂರು ಮೃಗಾಲಯ ಈಗ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ಕೂರ್ಗಳ್ಳಿ ಪುನರ್ವಸತಿ ಕೇಂದ್ರವು ಬಹಳ ವಿಸ್ತಾರವಾದ ಪ್ರದೇಶದವನ್ನು ಹೊಂದಿದೆ. ಕರ್ನಾಟಕದ 9 ಮೃಗಾಲಯಗಳ ಪೈಕಿ ವಿಶೇಷವಾದ ಮೃಗಾಲಯ ಹಾಗೂ ಪುನರ್ವಸತಿ ಪ್ರದೇಶವು ಮೈಸೂರಿನಲ್ಲಿ ಇದೆ ಎಂದರೆ ತಪ್ಪಾಗದು. ಈ ಮೃಗಾಲಯದಲ್ಲಿ ಇದೀಗ ಹೊಸ ಪ್ರಯೋಗ ಮಾಡಲಾಗಿದೆ. ಇಲ್ಲಿ ಗಾಯಗೊಂಡ ಚಿರತೆ, ಹುಲಿ ಇತ್ಯಾದಿ ವನ್ಯಜೀವಿಗಳಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ.

ವಯಸ್ಸಾದ ಆನೆಗಳಿಗೆ ಉಂಟಾಗುವ ಸಮಸ್ಯೆ ಪರಿಹಾರಕ್ಕಾಗಿ ಈಗ ಈ ಕ್ರಮ ಕೈಗೊಳ್ಳಲಾಗಿದೆ. ಆನೆಗಳಿಗೆ ವಿಶೇಷವಾಗಿ ಈಜುಕೊಳ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಂತಾಗಿದೆ.

Mysuru Zoo Elephant Swimming Pool

ಈಜುಕೊಳದಲ್ಲಿ ಆನೆಗಳ ನೀರಾಟ

ಇದನ್ನೂ ಓದಿ: ಮೈಸೂರು ಮೃಗಾಲಯದ ಈ ಚಿರತೆ ವೀಕ್ಷಕಲ್ಲಿ ಟೋಕಿಯೋ ಒಲಂಪಿಕ್ಸ್ ಚಿತ್ರಣ ಮೂಡಿಸುತ್ತಿದೆ!

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಮೈಸೂರು ಅರಮನೆ; ವಾರಾಂತ್ಯದಲ್ಲಿ ಪ್ರವಾಸಿಗರ ದಂಡು

(Mysuru Zoo new Swimming Pool for Elephants for Animals Health Purpose)

Follow us on

Related Stories

Most Read Stories

Click on your DTH Provider to Add TV9 Kannada