ಕದ್ರಾ ತಾಲೂಕಿನ ಪ್ರವಾಹ ಪೀಡಿದ ಜನರ ಸಮಸ್ಯೆಗಳನ್ನು ಅಲಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಕದ್ರಾ ತಾಲೂಕಿನ ಪ್ರವಾಹ ಪೀಡಿದ ಜನರ ಸಮಸ್ಯೆಗಳನ್ನು ಅಲಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 02, 2021 | 7:16 PM

ಆಣೆಕಟ್ಟಿನಿಂದ ನೀರು ಬಿಡುವ ಮೊದಲು ಜನರಿಗೆ ಸೂಚನೆ ನೀಡಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು, ಹಾಗೆಯೇ, ತಕ್ಷಣದ ಪರಿಹಾರ ರೂಪದಲ್ಲಿ ಸರ್ಕಾರ ಬಿಡುಗಡೆ ಮಾಡಿದ ರೂ.10,000 ಗಳ ಪರಿಹಾರ ಕೆಲವರಿಗೆ ಸಿಕ್ಕಿದೆ ಕೆಲವರಿಗೆ ಸಿಕ್ಕಿಲ್ಲ ಎಂದು ಜನ ಹೇಳಿದರು

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರು ಸೋಮವಾರದಂದು ಕದ್ರಾ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟವನ್ನು ಆಲಿಸಿದರು. ಕದ್ರಾ ಜಲಾಶಯದ ತುಂಬಿದ ನಂತರ ಹೆಚ್ಚುವರಿ ನೀರನ್ನು ಹೊರಗೆ ಹರಿಬಿಟ್ಟಿದ್ದರಿಂದ ಜಲಾಶಯದ ಕೆಳಗಿನ ಪ್ರದೇಶಗಳಲ್ಲಿ ನೀರು ನುಗ್ಗಿ ಪ್ರವಾಹದಂಥ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ತೋಡಿಕೊಂಡಿರುವ ನೋವಿನ ಪ್ರಕಾರ ಕಳೆದ ಮೂರು ವರ್ಷಗಳಿಂದ ಅವರ ಇಂಥ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಅಂದರೆ 2020 ರಲ್ಲಿ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಅವರು ಸಿದ್ದರಾಮಯ್ಯನವರಿಗೆ ಹೇಳಿದರು.

ಆಣೆಕಟ್ಟಿನಿಂದ ನೀರು ಬಿಡುವ ಮೊದಲು ಜನರಿಗೆ ಸೂಚನೆ ನೀಡಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು, ಹಾಗೆಯೇ, ತಕ್ಷಣದ ಪರಿಹಾರ ರೂಪದಲ್ಲಿ ಸರ್ಕಾರ ಬಿಡುಗಡೆ ಮಾಡಿದ ರೂ.10,000 ಗಳ ಪರಿಹಾರ ಕೆಲವರಿಗೆ ಸಿಕ್ಕಿದೆ ಕೆಲವರಿಗೆ ಸಿಕ್ಕಿಲ್ಲ ಎಂದು ಜನ ಹೇಳಿದರು. ಅಲ್ಲದೆ, ಮನೆ ಕಳೆದುಕೊಂಡವರಿಗೆ ಪುನಃ ಮನೆ ಕಟ್ಟಿಕೊಳ್ಳಲು ಸರ್ಕಾರ ಘೋಷಿಸಿರುವ 5 ಲಕ್ಷ ರೂಪಾಯಿಗಳ ಪರಿಹಾರ ಮನೆ ಕಳೆದೊಕೊಂಡ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಎಂಬ ಅಂಶ ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ ಅವರು ಸ್ಥಳದಲ್ಲೇ ಇದ್ದ ತಹಸಿಲ್ದಾರರಿಗೆ‘ ಪರಿಹಾರ ವಿತರಣೆ ಕೆಲಸದ ಬಗ್ಗೆ ವಿಚಾರಿಸಿದರು.

ಸಿದ್ದರಾಮಯ್ಯನವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ, ಸತೀಶ್ ಸೈಲ್ ಮೊದಲಾದವರಿದ್ದರು.

ಇದನ್ನೂ ಓದಿ: Siddaramaiah: ಗಾಂಧೀಜಿ ಮಗ ಕುಡುಕನಾಗಲಿಲ್ವ?; ಬಸವರಾಜ​ ಬೊಮ್ಮಾಯಿಗೂ ಅಪ್ಪನ ಗುಣ ಇರುತ್ತದೆ ಎನ್ನಲಾಗದು ಎಂದ ಸಿದ್ದರಾಮಯ್ಯ