BC Nagesh: ಜನರ ಕೈಗೆ ಸಿಗುವ ನಾಯಕ ತಿಪಟೂರಿನ ಬಿ.ಸಿ.ನಾಗೇಶ್​ ಇನ್ನು ಶಿಕ್ಷಣ ಸಚಿವ

Karnataka Cabinet Formation: ಸಂಘ ಪರಿವಾರದ ಹಿನ್ನೆಲೆಯ ನಾಗೇಶ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರ ವಿಶ್ವಾಸಕ್ಕೂ ಪಾತ್ರರಾದವರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೂ ನಾಗೇಶ್ ಅವರಿಗೆ ಆಪ್ತ ಒಡನಾಟವಿತ್ತು.

BC Nagesh: ಜನರ ಕೈಗೆ ಸಿಗುವ ನಾಯಕ ತಿಪಟೂರಿನ ಬಿ.ಸಿ.ನಾಗೇಶ್​ ಇನ್ನು ಶಿಕ್ಷಣ ಸಚಿವ
ಬಿ.ಸಿ.ನಾಗೇಶ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 07, 2021 | 12:24 PM

ತುಮಕೂರು: ಬಹುಕಾಲ ಸಾರ್ವಜನಿಕ ಜೀವನದಲ್ಲಿದ್ದರೂ ನಾಯಕತ್ವದ ಪ್ರಭೆಯಲ್ಲಿ ಕೊಚ್ಚಿಹೋಗದ ರಾಜ್ಯದ ಕೆಲವೇ ರಾಜಕಾರಿಣಿಗಳಲ್ಲಿ ಬಿ.ಸಿ.ನಾಗೇಶ್​ ಸಹ ಒಬ್ಬರು. ತಿಪಟೂರು ಕ್ಷೇತ್ರದ ಶಾಸಕರಾದ ಬಿ.ಸಿ.ನಾಗೇಶ್​ ಜನರ ಕೈಗೆ ಸುಲಭವಾಗಿ ಸಿಗುವ ನಾಯಕ ಎಂದೇ ಹೆಸರು ಪಡೆದಿದ್ದಾರೆ. ಇದೀಗ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬಿ.ಸಿ.ನಾಗೇಶ್ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ.

 ಬಿ.ಸಿ.ನಾಗೇಶ್​ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಜಾತಿ ರಾಜಕಾರಣವೇ ಮೇಲುಗೈ ಸಾಧಿಸಿರುವ ಈ ದಿನಮಾನದಲ್ಲಿ ಬ್ರಾಹ್ಮಣ ಜಾತಿಗೆ ಸೇರಿದ ನಾಗೇಶ್​ ಲಿಂಗಾಯತ ಮತ್ತು ಒಕ್ಕಲಿಗರೇ ಮುಂಚೂಣಿಯಲ್ಲಿರುವ ತಿಪಟೂರು ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯ ನಾಗೇಶ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರ ವಿಶ್ವಾಸಕ್ಕೂ ಪಾತ್ರರಾದವರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೂ ನಾಗೇಶ್ ಅವರಿಗೆ ಆಪ್ತ ಒಡನಾಟವಿತ್ತು.

ವಿದ್ಯಾರ್ಥಿ ದೆಸೆಯಲ್ಲಿ ಆರ್​ಎಸ್​ಎಸ್​ ಚಾಲಿತ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಲ್ಲಿ ಸಕ್ರಿಯರಾಗಿದ್ದರು. ಈವರೆಗೆ ಯಾವುದೇ ವಿವಾದಕ್ಕೆ ಸಿಲುಕಿಲ್ಲ. ತುಮಕೂರು ಜಿಲ್ಲೆಯಲ್ಲಿ ಮಾಧುಸ್ವಾಮಿ ಹೊರತುಪಡಿಸಿದರೆ ಬಿಜೆಪಿಗೆ ಶಕ್ತಿ ತುಂಬಬಲ್ಲ ಸಾಮರ್ಥ್ಯವಿರುವ ಶಾಸಕ ಎಂದು ಗುರುತಿಸಿಕೊಂಡಿದ್ದಾರೆ.

ಈವರೆಗೆ ನಾಗೇಶ್ ಅವರ ಮೇಲೆ ಯಾವುದೇ ಅವ್ಯವಹಾರದ ಆರೋಪಗಳು, ಕ್ರಿಮಿನಲ್ ಅಪರಾಧ ಪ್ರಕರಣಗಳು ಇಲ್ಲ. 1984ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂದಿಗೂ ಸುಲಭವಾಗಿ ಜನಸಾಮಾನ್ಯರಿಗೆ ಸಿಗುತ್ತಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ನಾಗೇಶ್​, 2018ರ ವಿಧಾನಸಭಾ ಚುನಾವಣೆ ವೇಳೆ ಸುಮಾರು ₹ 9 ಕೋಟಿ ಮೊತ್ತದ ಆಸ್ತಿಮೌಲ್ಯ, ಸುಮಾರು ₹ 7 ಲಕ್ಷ ಮೌಲ್ಯದ ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾಗಿ ಮೈ ನೇತಾ ಜಾಲತಾಣದಲ್ಲಿ ಮಾಹಿತಿಯಿದೆ.

(CM Basavaraj Bommai Cabinet BC Nagesh MLA from Tiptur constituency take oath as minister here is the profile)

ಇದನ್ನೂ ಓದಿ: Karnataka Cabinet Formation LIVE: ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರತಿಜ್ಞಾವಿಧಿ; ರಾಜಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

ಇದನ್ನೂ ಓದಿ: ಸಚಿವ ಸಂಪುಟದಲ್ಲಿ 29 ಸಚಿವರು; 3 ದಲಿತ, 8 ಲಿಂಗಾಯಿತ, 7 ಒಕ್ಕಲಿಗರಿಗೆ ಸ್ಥಾನ, ಡಿಸಿಎಂ ಹುದ್ದೆಯೇ ಇಲ್ಲ

Published On - 3:02 pm, Wed, 4 August 21