Karnataka Politics: ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ; ಮಹಿಳೆಯರು ಮಕ್ಕಳ ಸಬಲೀಕರಣಕ್ಕೆ ಅಭಿಯಾನ
CM Bommai Cabinet Expansion: ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ಸರಿಯಾಗಿ ಒಂದು ವಾರದ ಬಳಿಕ ಇಂದು (ಆಗಸ್ಟ್ 4) ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ್ ಕತ್ತಿ, ಎಸ್. ಅಂಗಾರ, ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ವಿ. ಸುನಿಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮುನಿರತ್ನ ಪ್ರಮಾಣವಚನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದಿನ ಕರ್ನಾಟಕ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಅಪ್ಡೇಟ್ಗಳು ಈ ಕೆಳಗೆ ಲಭ್ಯವಿದೆ.
LIVE NEWS & UPDATES
-
ಸಚಿವ ಸ್ಥಾನ ಕೈತಪ್ಪಿರಬಹುದು; ಶಾಸಕ ಸ್ಥಾನ ಕಸಿದುಕೊಳ್ಳಲು ಯಾರಿಂದಲೂ ಆಗಲ್ಲ
ನನಗೆ ಸಚಿವ ಸ್ಥಾನ ಕೈತಪ್ಪಿರಬಹುದು. ಆದರೆ, ಶಾಸಕ ಸ್ಥಾನ ಕಸಿದುಕೊಳ್ಳಲು ಯಾರಿಂದಲೂ ಆಗಲ್ಲ. ಮತದಾರರು ನೀಡಿರುವ ಶಾಸಕ ಸ್ಥಾನ ಕಿತ್ತುಕೊಳ್ಳಲಾಗಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ, ಕಳೆದುಕೊಂಡಿರುವುದು ಅಧಿಕಾರವೇ ಹೊರತು ಹಣೆಬರಹ ಅಲ್ಲ. ಇದು ಅಂತ್ಯವಲ್ಲ ಆರಂಭ ಎಂದು ವಾಟ್ಸಪ್ ಪೋಸ್ಟ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
-
ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಈಶ್ವರಪ್ಪ
ಸಂಪುಟ ಸಭೆ ಬಳಿಕ ಮೈಸೂರಿಗೆ ತೆರಳಿರುವ ಸಚಿವ ಈಶ್ವರಪ್ಪ, ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಇಂದು ಸಂಜೆ ಚಾಮುಂಡೇಶ್ವರಿ ದರ್ಶನ ಪಡೆಯಬೇಕಿತ್ತು ಆದರೆ ನಾಳೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.
-
ಆರ್ಎಸ್ಎಸ್ ಪ್ರಮುಖರ ಜೊತೆ ಅಶ್ವತ್ಥ್ ನಾರಾಯಣ ಚರ್ಚೆ
ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಡಾ. ಸಿ.ಎನ್. ಅಶ್ವತ್ಥನಾರಾಯಣ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥಶ್ರೀಗಳನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ವಿಜಯನಗರದ ಶಾಖಾ ಮಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಬಳಿಕ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿಗೆ ತೆರಳಿ, ಆರ್ಎಸ್ಎಸ್ ಪ್ರಮುಖರನ್ನು ಭೇಟಿಯಾಗಿದ್ದಾರೆ. ಕೇಶವಕೃಪಾದಲ್ಲಿ ಸಂಘದ ಪ್ರಮುಖರ ಜತೆ ಸಚಿವ ಅಶ್ವತ್ಥ್ ನಾರಾಯಣ ಚರ್ಚೆ ನಡೆಸಿದ್ದಾರೆ.
ಬಿ.ಸಿ. ಪಾಟೀಲ್ ನಾಳೆ ಹಾವೇರಿ ಜಿಲ್ಲಾ ಪ್ರವಾಸ
ಕೊರೊನಾ ನಿರ್ವಹಣೆ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ ಉಸ್ತುವಾರಿಯಾಗಿ ನೂತನ ಸಚಿವರಿಗೆ ಜಿಲ್ಲಾವಾರು ವಿಂಗಡಣೆ ಮಾಡಿ ಜವಾಬ್ದಾರಿ ನೀಡಿರುವ ಹಿನ್ನೆಲೆಯಲ್ಲಿ, ಸಚಿವ ಬಿ.ಸಿ. ಪಾಟೀಲ್ ನಾಳೆ ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಮಾಡಲ್ಲ
ಯಾವುದೇ ಉಪ ಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪ ಇಲ್ಲ. ಹೀಗಾಗಿ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಮಾಡಲ್ಲ. ಡಿಸಿಎಂ ಸ್ಥಾನದ ಬಗ್ಗೆ ಪಕ್ಷ, ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷ ಮತ್ತು ವರಿಷ್ಠರು ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಬೆಂಗಳೂರಲ್ಲಿ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ರಾಜ್ಯದ ಜನರಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತೇನೆ
ಪಕ್ಷ ನನ್ನನ್ನು ಗುರುತಿಸಿ ಜವಾಬ್ದಾರಿ ಕೊಟ್ಟಿದೆ, ಅದನ್ನ ಸಮರ್ಪಕವಾಗಿ ನಿಭಾಯಿಸಿಕೊಂಡು ಹೊಗುತ್ತೇನೆ. ಸಿಎಂ ಹಾಗೂ ಪಕ್ಷ ಯಾವ ಖಾತೆ ಕೊಡ್ತಾರೋ ಅದನ್ನ ಜವಾಬ್ದಾರಿಯುತವಾಗಿ ಸ್ವೀಕರಿಸಿ, ಕೆಲಸ ಮಾಡ್ತೇನೆ. ರಾಜ್ಯದ ಜನರಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತೇನೆ ಎಂದು ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ಅವಧಿಗೂ ಮುನ್ನ ಬಿದ್ದು ಹೋಗುತ್ತೆ
ಬಿಜೆಪಿ ಸರ್ಕಾರ ಅವಧಿಗೂ ಮುನ್ನ ಬಿದ್ದು ಹೋಗುತ್ತೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ದವಾಗಿದೆ. ಮುಂದೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಶಾಸಕರು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಅನೇಕ ಕಡೆ ಅಸಮಧಾನವಿದೆ. ಅದಕ್ಕೆ ಸ್ಥಿರ ಸರ್ಕಾರ ಕೊಡೊಕೆ ಸಾಧ್ಯವಿಲ್ಲ. ಉಪ ಸಭಾಪತಿಗಳೆ ರಾಜೀನಾಮೆ ಕೊಡ್ತಿನಿ ಅಂತ ಹೇಳ್ತಾ ಇದ್ದಾರೆ. ನೂತನ ಸಚಿವ ಸಂಪುಟದಲ್ಲಿ ಸಮಾಜಿಕ, ಪ್ರಾದೇಶಿಕ ಸಮತೋಲನ ಕಾಪಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಸಿಎಂ ಬಹಳ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದಾರೆ ಎಂದು ಯಾದಗಿರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.
ನಾಳೆ ಬಿಜೆಪಿ ಸೇರಲಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್
ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಗೆದ್ದಿದ್ದ ಎನ್.ಮಹೇಶ್ ನಾಳೆ (ಆಗಸ್ಟ್ 5) ಭಾರತೀಯ ಜನತಾ ಪಕ್ಷವನ್ನು ಸೇರಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.
ರಾಜ್ಯವನ್ನು ದೇಶದಲ್ಲೇ ನಂ.1 ಮಾಡುತ್ತೀರೆಂದು ನಂಬಿದ್ದೇನೆ
ಎಲ್ಲರೂ ಪಕ್ಷ ಕಟ್ಟಿ, ಬೆಳೆಸಿ, ಅರ್ಹತೆಯೊಂದಿಗೆ ಸಚಿವರಾಗಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವವರಿಗೆ ಅಭಿನಂದನೆ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಟ್ವೀಟ್ ಮಾಡಿದ್ದಾರೆ. ರಾಜ್ಯವನ್ನು ದೇಶದಲ್ಲೇ ನಂ.1 ಮಾಡುತ್ತೀರೆಂದು ನಂಬಿದ್ದೇನೆ. ನಿಮಗೆ ತಾಯಿ ಚಾಮುಂಡೇಶ್ವರಿ ಶುಭವನ್ನುಂಟು ಮಾಡಲಿ ಎಂದು ಅವರು ಶುಭಹಾರೈಸಿದ್ದಾರೆ.
ಯಾವುದೇ ಖಾತೆ ಸಿಕ್ಕರೂ ಕಾರ್ಯನಿರ್ವಹಿಸುತ್ತೇವೆ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು, ಗೋಶಾಲೆ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಕೆಲಸ ಮಾಡಲಾಗಿದೆ. ಪಶುಸಂಗೋಪನೆ ಕೆಲಸಗಳು ಪೂರ್ಣಗೊಳಿಸಬೇಕಿದೆ. ನಮ್ಮ ಸಿಎಂ ಮತ್ತು ವರಿಷ್ಟರು ನೀಡುವ ಖಾತೆ ನಾನು ನಿರ್ವಹಿಸಲಿದ್ದೇನೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ. ಮತ್ತೊಂದೆಡೆ, ಸಿದ್ದಗಂಗಾ ಮಠಕ್ಕೆ ನೂತನ ಸಚಿವ ಮಾಧುಸ್ವಾಮಿ ಭೇಟಿ ಕೊಟ್ಟಿದ್ದಾರೆ. ಶಿವಕುಮಾರಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಸಿದ್ದಲಿಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ, ಸಚಿವ ಸಂಪುಟದಲ್ಲಿನ ಖಾತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಖಾತೆ ಸಿಕ್ಕರೂ ಕಾರ್ಯನಿರ್ವಹಿಸುವೆ ಎಂದು ತಿಳಿಸಿದ್ದಾರೆ.
ಸಚಿವನಾಗಲು ಅವಕಾಶ ಮಾಡಿಕೊಟ್ಟ ಸಿಎಂ, ವರಿಷ್ಠರಿಗೆ ಧನ್ಯವಾದ
ಸಚಿವನಾಗಲು ಅವಕಾಶ ಮಾಡಿಕೊಟ್ಟ ಸಿಎಂ, ವರಿಷ್ಠರಿಗೆ ಧನ್ಯವಾದ ಎಂದು ಬಿಜೆಪಿ ಕಚೇರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದ್ದಾರೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸ್ಥಾನಮಾನ ಗಮನದಲ್ಲಿಟ್ಟು ಸ್ಥಾನ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿಗರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಅಸಮಾಧಾನವಿದ್ದರೆ ಪಕ್ಷದ ಹಿರಿಯ ನಾಯಕರು ಮಾತಾಡುತ್ತಾರೆ. ಗ್ರಾಮೀಣಾಭಿವೃದ್ಧಿ ಸೇರಿದಂತೆ ಯಾವ ಖಾತೆ ಕೊಟ್ಟರೂ ನಿರ್ವಹಣೆ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಗೆ ನೂತನ ಸಚಿವರ ಭೇಟಿ
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಗೆ ನೂತನ ಸಚಿವರು ಭೇಟಿ ನೀಡಿದ್ದಾರೆ. ಪ್ರಭು ಚೌಹಾಣ್, ಹಾಲಪ್ಪ ಆಚಾರ್, ಸುನಿಲ್ ಕುಮಾರ್, ಅಶ್ವತ್ಥ್ ನಾರಾಯಣ, ಕೋಟ ಶ್ರೀನಿವಾಸ ಪೂಜಾರಿ ಭೇಟಿ ಕೊಟ್ಟಿದ್ದಾರೆ. ಪ್ರಮಾಣ ವಚನ ಬಳಿಕ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಯತಿರಾಜ ಮಠಕ್ಕೆ ಭೇಟಿ ನೀಡಿದ್ದಾರೆ. ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಯತಿರಾಜ ಮಠಕ್ಕೆ ಅಶ್ವತ್ಥ್‌ನಾರಾಯಣ ಭೇಟಿ ಕೊಟ್ಟಿದ್ದಾರೆ.
ಪದಗ್ರಹಣದ ಬಳಿಕ ಸಿಎಂ ಬೆನ್ನುಬಿಡದ ನೂತನ ಸಚಿವರು
ಪದಗ್ರಹಣದ ಬಳಿಕ ನೂತನ ಸಚಿವರು ಸಿಎಂ ಬೆನ್ನುಬಿಟ್ಟಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಬಲ ಖಾತೆಗಳಿಗಾಗಿ ಸಚಿವರು ಒತ್ತಡ ಹಾಕಿದ್ದಾರೆ. ಸಂಪುಟ ಸಭೆ ಬಳಿಕ ವಿಧಾನಸೌಧ ಕಚೇರಿಯಲ್ಲಿ ಸಿಎಂ ಇದ್ದಾರೆ. ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್ ಬೊಮ್ಮಾಯಿ ಜೊತೆಗಿದ್ದಾರೆ.
ಅರುಣ್ ಸಿಂಗ್ ಭೇಟಿ ಮಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ
ಸಚಿವ ಸ್ಥಾನದಿಂದ ವಂಚಿರಾಗಿರುವ ಹಿನ್ನೆಲೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿದ್ದಾರೆ. ಸಚಿವ ಸ್ಥಾನ ದೊರೆಯದೇ ಇರುವ ಬಗ್ಗೆ ಅರುಣ್ ಸಿಂಗ್ ಜೊತೆ ರೇಣುಕಾಚಾರ್ಯ ಚರ್ಚೆ ನಡೆಸಿದ್ದಾರೆ. ಮುಂದೆ ಗೌರವಯುತ ಸ್ಥಾನ ಕೊಡಿಸುವ ಬಗ್ಗೆ ಅರುಣ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಿತರೆಲ್ಲ ನಮ್ಮವರೇ
ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಿತರೆಲ್ಲ ನಮ್ಮವರೇ. ಅಸಮಾಧಾನಿತರೆಲ್ಲರಿಗೂ ಮುಂದೆ ಅವಕಾಶ ಕೊಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. 13 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾಧಾನ್ಯತೆ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸೂಕ್ತವಾದವರನ್ನು ಆ ಪ್ರಾಂತ್ಯಗಳಲ್ಲಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಹಗರಣದಲ್ಲಿ ಸಿಲುಕಿಕೊಂಡವರಿಗೆ ಮತ್ತೆ ಮಂತ್ರಿಗಿರಿ ಸಿಕ್ಕಿದೆ
ಒಂದು ಸ್ಥಾನ ನೀಡದಿರುವುದು ತುಂಬಾ ನೋವುಂಟು ಮಾಡಿದೆ. ಬಿಜೆಪಿಯಲ್ಲಿ ಗೊಲ್ಲ ಸಮುದಾಯದ ಏಕೈಕ ಶಾಸಕಿ ಆಗಿದ್ದೇನೆ. ನಾನು ಯಾವುದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಯಾವುದೇ ಹಗರಣ ನನ್ನನ್ನು ಸುತ್ತಿಕೊಂಡಿಲ್ಲ. ಈಗ ಪಕ್ಷ ತೆಗೆದುಕೊಂಡ ನಿರ್ಧಾರ ನನಗೆ ಘಾಸಿ ಉಂಟುಮಾಡಿದೆ. ಹಗರಣದಲ್ಲಿ ಸಿಲುಕಿಕೊಂಡವರಿಗೆ ಮತ್ತೆ ಮಂತ್ರಿಗಿರಿ ಸಿಕ್ಕಿದೆ. ಒಂದೇ ಮನೆಯಲ್ಲಿ ಎರಡು ಮೂರು ಅಧಿಕಾರ ನೀಡಲಾಗಿದೆ. ಹಗರಣ ಇಲ್ಲದ ಮಹಿಳೆಗೆ ಅವಕಾಶ ನೀಡಿದ್ದರೆ ಸಂತೋಷ ಎಂದು ತಿಳಿಸಿದ್ದಾರೆ. ಜಿಲ್ಲೆಯ ಇತರೆ ಶಾಸಕರಿಗೂ ಮಂತ್ರಿಗಿರಿ ನೀಡದೆ ಅಪಮಾನ ಮಾಡಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ
ಪೂರ್ಣಿಮಾ ಶ್ರೀನಿವಾಸ್‌ಗೆ ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಶಾಸಕಿ ಪೂರ್ಣಿಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕಿ, ನಿರಂತರವಾಗಿ ಪಕ್ಷಕ್ಕಾಗಿ ನಾನು, ನನ್ನ ಕುಟುಂಬ ಶ್ರಮಿಸಿದೆ. ಚುನಾವಣೆ ಸಂದರ್ಭದಲ್ಲಿ ನಿರಂತರವಾಗಿ ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೆ ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ. ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ಮಂತ್ರಿಸ್ಥಾನಕ್ಕಾಗಿ ಪ್ರತಿಭಟಿಸೋದು ಗೌರವ ಲಕ್ಷಣ ಅಲ್ಲ
ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸ್ಥಾನ ಸಿಗದ ವಿಚಾರವಾಗಿ ಉಡುಪಿಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟನೆ ಮಾಡಬೇಕು. ಮಂತ್ರಿಸ್ಥಾನಕ್ಕಾಗಿ ಪ್ರತಿಭಟಿಸೋದು ಗೌರವ ಲಕ್ಷಣ ಅಲ್ಲ. ನನ್ನ ಪರ ಪ್ರತಿಭಟನೆ ಮಾಡಿದರೆ ನಾನು ಸಂತೋಷಪಡಲ್ಲ. ಮಂತ್ರಿಗಿರಿ ಸಿಗದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮುಂದಿನ ನಿರ್ಧಾರಗಳನ್ನು ಆ ಪರಮಾತ್ಮನೇ ಬಲ್ಲ ಎಂದು ಉಡುಪಿಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ
ಎಸ್ಟಿಪಿಎಸ್ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್‌ಟಿ ಸೆಕ್ರೆಟರಿಯೇಟ್ ರಚನೆ ತೀರ್ಮಾನ ಮಾಡುತ್ತೇವೆ. ಎಸ್‌ಟಿ ಸಮುದಾಯದ ಬೇಡಿಕೆಯಂತೆ ಸೆಕ್ರೆಟರಿಯೇಟ್ ರಚನೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಅಭಿಯಾನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ
ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ. ಯಾವುದೇ ಸಚಿವರು ಇಂಥದ್ದೇ ಖಾತೆ ಬೇಕೆಂದು ಆಗ್ರಹಿಸಿಲ್ಲ. ಇಂದಿನ ಸಂಪುಟ ಸಭೆಯಲ್ಲಿ ನೂತನ ಸಚಿವರು ಒತ್ತಾಯಿಸಿಲ್ಲ. ಸಂಪುಟ ರಚನೆಗೆ ಹಿಂದೆ 10-15 ದಿನ ಅಥವಾ ತಿಂಗಳು ಹಿಡಿಯುತ್ತಿತ್ತು. ಆದರೆ, ಈ ಬಾರಿ 3 ದಿನದಲ್ಲಿ ಸಚಿವರ ಪಟ್ಟಿ ಫೈನಲ್ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಖಾತೆ ಹಂಚಿಕೆಗೆ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ. ನೂತನ ಸಚಿವರಿಗೆ ನಾನೇ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಯಾರೊಬ್ಬರೂ ಮೊದಲ ಖಾತೆಯಲ್ಲಿ ಮುಂದುವರಿಸಿ ಅಂದಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇವೆ ಅಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು
ಕರ್ನಾಟಕ ಸಂಪುಟದ ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ಸಚಿವರು ನಾಳೆಯೇ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 4) ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಕೊರೊನಾ 3ನೇ ಅಲೆ, ನೆರೆ ವೀಕ್ಷಣೆ ಜತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಕೊವಿಡ್ ಟಾಸ್ಕ್ಫೋರ್ಸ್ ಪುನಾರಚನೆ ಮಾಡಲಾಗುವುದು. ಸಚಿವರಿಗೆ ಖಾತೆ ಹಂಚಿಕೆ ನಂತರ ಟಾಸ್ಕ್ಫೋರ್ಸ್ ರಚನೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯ
ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ನೂತನ ಸಚಿವರ ಜತೆ ಸಿಎಂ ಬೊಮ್ಮಾಯಿ ಮೊದಲ ಸಭೆ ನಡೆಸಿದ್ದಾರೆ. ಇತ್ತ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ನಾಳೆ ಬೆಂಗಳೂರಿನಿಂದ ದೆಹಲಿಗೆ ವಾಪಸಾಗಲಿದ್ದಾರೆ.
ಚಾಮುಂಡೇಶ್ವರಿ ದರ್ಶನಕ್ಕೆ ತೆರಳಲಿರುವ ಸಚಿವ ಕೆ.ಎಸ್.ಈಶ್ವರಪ್ಪ
ಚಾಮುಂಡೇಶ್ವರಿ ದರ್ಶನ ಪಡೆಯಲು ಸಚಿವ ಈಶ್ವರಪ್ಪ ಮೈಸೂರಿಗೆ ತೆರಳಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರಿಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಸಂಪುಟ ಸಭೆ ಮುಗಿದ ಬಳಿಕ ಈಶ್ವರಪ್ಪ ಮೈಸೂರಿಗೆ ತೆರಳಲಿದ್ದಾರೆ.
ನೂತನ ಸಚಿವರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಆರಂಭ
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭಗೊಂಡಿದೆ. ನೂತನ ಸಚಿವರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣಲ್ಲಿ ಸಂಪುಟ ಸಭೆ ನಡೆಯಲಿದೆ.
ಇನ್ನು ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ
ಸಮ್ಮೇಳನ ಸಭಾಂಗಣಕ್ಕೆ ನೂತನ ಸಚಿವರು ಆಗಮಿಸುತ್ತಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ – ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ
ಸಾಮಾಜಿಕ ಜಾಲತಾಣದಲ್ಲಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಪಕ್ಷಕ್ಕಾಗಿ ನಾನು ನನ್ನ ಕುಟುಂಬ ಶ್ರಮಿಸಿದ್ದೇವೆ. ಚುನಾವಣೆ ಸಂದರ್ಭಗಳಲ್ಲಿ ನಿರಂತರವಾಗಿ ಪಕ್ಷಕ್ಕಾಗಿ ದುಡಿದ್ದೇವೆ. ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ. ಆದ್ರೆ ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ. ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ನೀಡದಿರುವುದು ನೋವುಂಟು ಮಾಡಿದೆ ಎಂದು ಬೇಸರ ಹೊರಹಾಕಿದ್ದಾರೆ.
ಹುಬ್ಬಳ್ಳಿಯ ಗೋಕುಲ ಬಳಿ ರಸ್ತೆ ತಡೆದು ಪ್ರತಿಭಟನೆ
ಅರವಿಂದ್ ಬೆಲ್ಲದ್ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರಿಂದ ಪ್ರತಿಭಟನೆ ನಡೆಯುತ್ತಿದೆ. ಹುಬ್ಬಳ್ಳಿಯ ಗೋಕುಲ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಮಧ್ಯೆ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ
ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳೆಲ್ಲ ಸಂಭ್ರಮಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಾರಾಯಣಗೌಡ ಅಭಿಮಾನಿಗಳ ಸಂಭ್ರಮ ಪಡುತ್ತಿದ್ದಾರೆ. ಕೆ.ಆರ್ ಪೇಟೆಯ ಮೈಸೂರು ವೃತ್ತದಲ್ಲಿ ಪಟಾಕಿ ಸಿಡಿಸಿ. ಸಿಹಿ ಹಂಚಿ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.
ಕಾವೇರಿ ನಿವಾಸದ ಬಳಿ ಕೈ ಕೊಯ್ದುಕೊಂಡ ವಿಜಯೇಂದ್ರ ಅಭಿಮಾನಿ
ನಮ್ಮ ಸಾಹೇಬ್ರ ಮಗನನ್ನ ಸಂಪುಟಕ್ಕೆ ಸೇರಿಸಿಲ್ಲ. ನನಗೆ ನೋವಾಗುತ್ತಿದೆ. ನಾನು ಪ್ರಾಣವನ್ನೇ ಕಳೆದಕೊಳ್ಳಬೇಕು. ಆದ್ರೆ ನನಗೂ ಕುಟುಂಬ ಇದೆ. ಹಾಗಾಗಿ ನಾನು ಸಾಯಲ್ಲ ಎಂದು ಕಾವೇರಿ ನಿವಾಸದ ಬಳಿ ವಿಜಯೇಂದ್ರ ಅಭಿಮಾನಿ ಕೈ ಕೊಯ್ದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶಿವಕುಮಾರ್ ಎಂಬ ಮಾಹಿತಿ ಲಭ್ಯವಾಗಿದೆ.
ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂತ ಪರಿಸ್ಥಿತಿ ನನಗೆ ಬಂದಿಲ್ಲ – ಶಾಸಕ ರಾಜುಗೌಡ
ಶಾಸಕ ರಾಜುಗೌಡಗೆ ಮಂತ್ರಿ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಂಬಲಿಗರನ್ನ ಉದ್ದೇಶಿಸಿ ಶಾಸಕ ರಾಜುಗೌಡ ಮಾತನಾಡಿ, ಪ್ರತಿಭಟನೆ ಮಾಡ್ಬೇಡಿ ಪಕ್ಷಕ್ಕೆ ಅವಮಾನ ಮಾಡಿದ ಹಾಗೆ ಆಗುತ್ತೆ. ಮಂತ್ರಿ ಸ್ಥಾನ ಕೊಡದೆ ಇರೋದ್ದಕ್ಕೆ ಒಳ್ಳೆಯದಾಗ್ಲಿ, ಎಲ್ಲಾ ಮಂತ್ರಿಗಳಿಗೂ ಒಳ್ಳೆಯದಾಗ್ಲಿ, ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂತ ಪರಿಸ್ಥಿತಿ ನನಗೆ ಬಂದಿಲ್ಲ. ಬಕೆಟ್ ಹಿಡಿದು ಮಂತ್ರಿ ಆಗುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಎಂಜಲು ತಿನ್ನೋದು ಬೇಡ ಮುಂದೆ ಹೊಸ ಸರ್ಕಾರದಲ್ಲಿ ಮಂತ್ರಿ ಆಗ್ತೀನಿ. ದಯವಿಟ್ಟು ಯಾರು ದಿಕ್ಕಾರ ಕೂಗಿ ಪ್ರತಿಭಟನೆ ಮಾಡ್ಬೇಡಿ. ಪ್ರತಿಭಟನೆ ಬಿಟ್ಟು ಊರಿಗೆ ಹೋಗಿ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.
ಕ್ರೀಡಾ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ – ಸಚಿವ ನಾರಾಯಣ್ ಗೌಡ
ಕ್ರೀಡಾ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಈಗ ಯಾವುದೇ ಖಾತೆ ಕೊಟ್ರು ನಿಭಾಯಿಸುತ್ತೇನೆ. ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವ ನಾರಾಯಣ್ ಗೌಡ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.
ಹಿರಿಯರನ್ನ ಪಕ್ಷದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನ – ನಳಿನ್ ಕಟೀಲ್ ಹೇಳಿಕೆ
ಹಿರಿಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ವಿಚಾರದ ಹಿನ್ನೆಲೆಯಲ್ಲಿ ಹಿರಿಯರನ್ನ ಪಕ್ಷದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗುವುದು. ಮುಂದಿನ ಚುನಾವಣೆ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಯಾವ ಶಾಸಕರು ಕೂಡ ರಾಜೀನಾಮೆ ನೀಡುವುದಿಲ್ಲ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದವರಿಗೆ ಅಸಮಾಧಾನ ಇರುತ್ತೆ. ಅವರನ್ನ ಕರೆದು ಸಮಾಧಾನ ಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲು ಹೇಳಿಕೆ ನೀಡಿದ್ದಾರೆ.
ದಿ.ಎಸ್.ಆರ್.ಬೊಮ್ಮಾಯಿ ಪ್ರತಿಮೆಗೆ ಮಾರ್ಲಪಣೆ ಮಾಡಿದ ಸಿಎಂ ಪುತ್ರ
ದಿ.ಎಸ್.ಆರ್.ಬೊಮ್ಮಾಯಿ ಪ್ರತಿಮೆಗೆ ಸಿಎಂ ಪುತ್ರ ಭರತ್ ಬೊಮ್ಮಾಯಿ ಮಾರ್ಲಪಣೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಉದ್ಯಮಿಯಾಗಿದ್ದೆನೆ, ತಂದೆಯವರಿಗೆ ಎಲ್ಲಾ ರಾಜಕೀಯ ಮತ್ತು ಆಡಳಿತ ಗೊತ್ತಿದೆ. ಅವರೆಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ. ತಂದೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೆ, ಅಜ್ಜನವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹುಬ್ಬಳ್ಳಿಯ ಸಿಎಂ ಪುತ್ರ ಭರತ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಖಾತೆ ಯಾವುದೇ ಕೊಟ್ಟರು ನಿಭಾಯಿಸುತ್ತೇನೆ- ಸಚಿವ ವಿ.ಸೋಮಣ್ಣ
ಖಾತೆ ಯಾವುದೇ ಕೊಟ್ಟರು ನಿಭಾಯಿಸುತ್ತೇನೆ. ಖಾತೆ ಕೊಡುವುದ ಸಿಎಂಗೆ ಬಿಟ್ಟಿದ್ದು. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಕೊರೊನಾ ನಿಯಂತ್ರಣ ಮಾಡುವುದು ನಮ್ಮ ಗುರಿ ಎಂದು ಟಿವಿ9ಗೆ ನೂತನ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ನಾನು ಯಾವುದೇ ಲಾಭಿ ನಡೆಸಿಲ್ಲ – ಟಿವಿ9ಗೆ ನೂತನ ಸಚಿವ ಈಶ್ವರಪ್ಪ ಹೇಳಿಕೆ
ಸಚಿವ ಸ್ಥಾನಕ್ಕೆ ನಾನು ಯಾವುದೇ ಲಾಭಿ ನಡೆಸಿಲ್ಲ. ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ ಎಂದು ಟಿವಿ9ಗೆ ನೂತನ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜೆ 5 ಗಂಟೆಗೆ ನೂತನ ಸಚಿವರ ಜತೆ ಸಿಎಂ ಸಂಪುಟ ಸಭೆ
ಸಂಜೆ 5 ಗಂಟೆಗೆ ನೂತನ ಸಚಿವರ ಜತೆ ಸಿಎಂ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ನೂತನ ಮಂತ್ರಿ ಮಂಡಲದ ಸಂಪುಟ ಸಭೆ ಜರುಗಲಿದೆ.
ಇಬ್ಬರು ಸಚಿವರಿಗೆ ಖಾತೆ ಮುಂದುವರಿಸುವ ಸಾಧ್ಯತೆ
ಇಬ್ಬರು ಸಚಿವರಿಗೆ ಖಾತೆ ಮುಂದುವರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಕೇಳಿ ಬಂದಿವೆ. ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ ಖಾತೆ ಹಾಗೂ ಪ್ರಭುಚೌಹಾಣ್- ಪಶುಸಂಗೋಪನೆ ಖಾತೆ ಮುಂದುವರೆಯುವ ಸಾಧ್ಯತೆ ಇದೆ.
ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದ 29 ಸಚಿವರ ಪಟ್ಟಿ
ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದ 29 ಸಚಿವರ ಪಟ್ಟಿ ಹೀಗಿದೆ:
ಗೋವಿಂದ ಕಾರಜೋಳ ಕೆ.ಎಸ್.ಈಶ್ವರಪ್ಪ ಆರ್.ಅಶೋಕ್ ಬಿ.ಶ್ರೀರಾಮುಲು ವಿ.ಸೋಮಣ್ಣ ಉಮೇಶ್ ವಿಶ್ವನಾಥ್ ಕತ್ತಿ ಎಸ್.ಅಂಗಾರ ಜೆ.ಸಿ.ಮಾಧುಸ್ವಾಮಿ ಆರಗ ಜ್ಞಾನೇಂದ್ರ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸಿ.ಸಿ. ಪಾಟೀಲ್ ಆನಂದ್ ಸಿಂಗ್ ಕೋಟ ಶ್ರೀನಿವಾಸ ಪೂಜಾರಿ ಪ್ರಭು ಚೌಹಾಣ್ ಮುರುಗೇಶ್ ನಿರಾಣಿ ಶಿವರಾಂ ಹೆಬ್ಬಾರ್ S.T.ಸೋಮಶೇಖರ್ ಬಿ.ಸಿ.ಪಾಟೀಲ್ ಭೈರತಿ ಬಸವರಾಜ್ ಡಾ.ಕೆ.ಸುಧಾಕರ್ ಕೆ.ಗೋಪಾಲಯ್ಯ ಶಶಿಕಲಾ ಜೊಲ್ಲೆ ಎಂಟಿಬಿ ನಾಗರಾಜ್ ಕೆ.ಸಿ.ನಾರಾಯಣಗೌಡ ಬಿ.ಸಿ.ನಾಗೇಶ್ ವಿ.ಸುನಿಲ್ ಕುಮಾರ್ ಹಾಲಪ್ಪ ಆಚಾರ್ ಶಂಕರ ಪಾಟೀಲ್ ಮುನೇನಕೊಪ್ಪ ಮುನಿರತ್ನ
ಮುಧೋಳ ಪಟ್ಟಣದಲ್ಲಿ ನಿರಾಣಿ ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ
ಮುರುಗೇಶ ನಿರಾಣಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಿರಾಣಿ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನಗರದ ಗಾಂಧಿ ಚೌಕನಲ್ಲಿ ನಿರಾಣಿ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಯುತ್ತಿದೆ.
ಕಲಬುರಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಕಾರ್ಯಕರ್ತರ ಆಕ್ರೋಶ
ಬೊಮ್ಮಾಯಿ ಸಂಪುಟದಲ್ಲಿ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ದತ್ತಾತ್ರೇಯ ಪಾಟೀಲ ರೇವೂರ್ಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯ
ರಾಜಭವನದ ಗಾಜಿನಮನೆಯಲ್ಲಿ ನಡೆದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ರಾಷ್ಟ್ರಗೀತೆಯೊಂದಿಗೆ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯಗೊಂಡಿದೆ.
ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 64 ವರ್ಷ ವಯಸ್ಸಿನ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್
64 ವರ್ಷ ವಯಸ್ಸಿನ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂಕೋಲಾ ತಾಲೂಕಿನ ಅರಬೈಲ್ ಸಮೀಪದ ಶೇವಕಾರ್ ಮೂಲದ ಹೆಬ್ಬಾರ್ ಅವರು 1983 ರಲ್ಲಿ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರಾಗಿ, ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 2019 ರಲ್ಲಿ ಬಿಜೆಪಿ ಸೇರಿ ಸಚಿವ ಸ್ಥಾನ ಅಲಂಕಾರಿಸಿದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದರು. ಕಳೆದ 2 ವರ್ಷದಿಂದ ಕಾರ್ಮಿಕ ಕಲ್ಯಾಣ, ಕೆಲವು ಅವಧಿಗೆ ಸಕ್ಕರೆ ಖಾತೆ ನಿರ್ವಹಣೆ ಮಾಡಿದ್ದಾರೆ.
ತಿಪಟೂರಿನಲ್ಲಿ ಕಾರ್ಯಕರ್ತರ ಅಭಿಮಾನಿಗಳ ಸಂಭ್ರಮಾಚರಣೆ
ತಿಪಟೂರು ಶಾಸಕ ಬಿಸಿ ನಾಗೇಶ್ ಸಚಿವರಾಗಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿಯೇ ನಡೆಯುತ್ತಿದೆ. ನಗರದ ನಂಜಪ್ಪ ವೃತ್ತದಲ್ಲಿ ಕಾರ್ಯಕರ್ತರೆಲ್ಲರು ಸೇರಿದ್ದಾರೆ. ಶಾಮಿಯಾನ ಹಾಕಿ ದೊಡ್ಡ ಪರದೆಯಲ್ಲಿ ಟಿವಿ9 ವೀಕ್ಷಣೆ ಮಾಡುತ್ತ ಸಂಭ್ರಮಿಸುತ್ತಿದ್ದಾರೆ.
ನೂತನ ಸಚಿವರ ಪಟ್ಟಿ
ನೂತನ ಸಚಿವರ ಪಟ್ಟಿ ಈ ಕೆಳಗಿನಂತಿದೆ :
ಗೋವಿಂದ ಕಾರಜೋಳ ಕೆ.ಎಸ್ ಈಶ್ವರಪ್ಪ ಆರ್ ಅಶೋಕ್ ಡಾ. ಅಶ್ವಥ್ ನಾರಾಯಣ ಬಿ. ಶ್ರೀರಾಮುಲು ವಿ. ಸೋಮಣ್ಣ ಜೆ.ಸಿ ಮಾಧುಸ್ವಾಮಿ ಸಿ.ಸಿ ಪಾಟೀಲ್ ಪ್ರಭು ಚವಾಣ ಆನಂದ್ ಸಿಂಗ್ ಕೆ. ಗೋಪಾಲಯ್ಯ ಬೈರತಿ ಬಸವರಾಜ ಎಸ್. ಟಿ ಸೋಮಶೇಖರ ಬಿ.ಸಿ ಪಾಟೀಲ್ ಕೆ. ಸುಧಾಕರ್ ಕೆ. ಸಿ ನಾರಾಯಣಗೌಡ ಶಿವರಾಮ ಹೆಬ್ಬಾರ್ ಉಮೇಶ್ ಕತ್ತಿ ಎಸ್ ಅಂಗಾರಾ ಮುರುಗೇಶ್ ನಿರಾಣಿ ಎಂ ಟಿ ಬಿ ನಾಗರಾಜ ಕೋಟ ಶ್ರೀನಿವಾಸ ಪೂಜಾರಿ ಶಶಿಕಲಾ ಜೊಲ್ಲೆ ವಿ ಸುನಿಲ್ ಕುಮಾರ್ ಹಾಲಪ್ಪ ಆಚಾರ್ ಅರಗ ಜ್ಞಾನೇಂದ್ರ ಶಂಕರ್ ಪಾಟೀಲ್ ಮುನೇನಕೊಪ್ಪ ಬಿ ಸಿ ನಾಗೇಶ್ ಮುನಿರತ್ನ
ಸಚಿವರಾಗಿ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಆಯ್ಕೆ ಹಿನ್ನಲೆ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ
ಸಚಿವರಾಗಿ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಆಯ್ಕೆ ಹಿನ್ನಲೆಯಲ್ಲಿ ಶಿವಮೊಗ್ಗ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಪರಸ್ಪರ ಬಣ್ಣ ಹಾಕಿಕೊಳ್ಳುವ ಮೂಲಕ ಸಂಭ್ರಮ ನಡೆಯುತ್ತಿದೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.. ಹಾಡು ಹಾಡುತ್ತಾ ಮಹಿಳೆಯರು ಹೆಜ್ಜೆ ಹಾಕಿ ಸಮಭ್ರಮಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸಂಭ್ರಮದಲ್ಲಿ ಬಿಜೆಪಿಯ ಮಹಿಳಾ ಪಾಲಿಕೆ ಸದಸ್ಯರು ಭಾಗಿಯಾಗಿದ್ದಾರೆ.
ಶಾಸಕ ಡಾ.ಕೆ.ಸುಧಾಕರ್ ಸಚಿವರಾಗಿ ಪ್ರಮಾಣ ವಚನ ಹಿನ್ನಲೆ ಸಂಭ್ರಮ
ಶಾಸಕ ಡಾ.ಕೆ.ಸುಧಾಕರ್ ಸಚಿವರಾಗಿ ಪ್ರಮಾಣ ವಚನ ಹಿನ್ನಲೆಯಲ್ಲೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಬ್ರಮಾಚರಣೆ ನಡೆಯುತ್ತಿದೆ. ನಗರದ ಬಲಮುರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಮುಧೋಳ ಶಾಸಕ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಹಿನ್ನೆಲೆ ಸಂಭ್ರಮಾಚರಣೆ
ಮುಧೋಳ ಶಾಸಕ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಹಿನ್ನೆಲೆಯಲ್ಲಿ ಮುಧೋಳ ನಗರದಲ್ಲಿ ಸಂಭ್ರಮಾಚರಣೆ ಜೋರಾಗಿಯೇ ನಡೆಯುತ್ತಿದೆ. ರನ್ನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಕಾರಜೋಳ ಪರ ಘೋಷಣೆ ಕೂಗುತ್ತಿದ್ದಾರೆ.
ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಭು ಚೌಹಾನ್
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಭು ಚೌಹಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಂದೂಳಿದ ತಾಲೂಕು ಔರಾದ್ ಮೀಸಲು ವಿಧಾನ ಸಭಾ ಕ್ಷೇತ್ರದ ಶಾಸಕನಿಗೆ ಮಂತ್ರಿಗಿರಿ ಒಲಿದಿದೆ. ಪ್ರಮಾಣ ವಚನ ಸ್ವೀಕರಿಸುತ್ತಿದಂತೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ ನಡೆಯುತ್ತಿದೆ. ಪ್ರಭು ಚೌಹಾನ್ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳಿಂದ ಸಂಭ್ರಮ ಮಾಡುತ್ತಿದ್ದಾರೆ.
ಪ್ರತಿಜ್ಞಾವಿಧಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ
ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಚಿವರಾಗಿ ಆನಂದ್ ಸಿಂಗ್ ಪ್ರಮಾಣವಚನ ಸ್ವೀಕಾರ
ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ರಾಜಭವನದ ಹೊರಗಡೆ ಕಾರ್ಯಕರ್ತರ ಸಂಭ್ರಮ
ರಾಜಭವನದ ಹೊರಗಡೆ ತಮ್ಮ ತಮ್ಮ ನಾಯಕರ ಭಾವ ಚಿತ್ರ ಹಿಡಿದು ಸಚಿವರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ.
ಸಚಿವರಾಗಿ ಸಿ.ಸಿ.ಪಾಟೀಲ್ ಪ್ರಮಾಣವಚನ ಸ್ವೀಕಾರ
ಗದಗ ಜಿಲ್ಲೆಯ ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಸಿ.ಸಿ.ಪಾಟೀಲ್ ತಿಜ್ಞಾವಿಧಿ ಸ್ವೀಕರಿಸಿದರು.
ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಪ್ರಮಾಣವಚನ ಸ್ವೀಕಾರ
ಸಚಿವರಾಗಿ ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥ್ ನಾರಾಯಣ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಗೆಹ್ಲೋಟ್ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಪ್ರಮಾಣವಚನ ಸ್ವೀಕಾರ
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಜೆ.ಸಿ.ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಮಾಧುಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು.
ಸಚಿವರಾಗಿ ಎಸ್.ಅಂಗಾರ ಪ್ರಮಾಣವಚನ ಸ್ವೀಕಾರ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಗೆಹ್ಲೋಟ್ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಉಮೇಶ್ ಕತ್ತಿ ಪ್ರಮಾಣವಚನ ಸ್ವೀಕಾರ
ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿ. ಸೋಮಣ್ಣ ಪ್ರಮಾಣವಚನ ಸ್ವೀಕಾರ
ವಿ. ಸೋಮಣ್ಣ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.
ಕೊನೇ ಕ್ಷಣದಲ್ಲಿ ರಾಜಭವನದತ್ತ ಶಶಿಕಲಾ ಜೊಲ್ಲೆ ದೌಡು
ಶಶಿಕಲಾ ಜೊಲ್ಲೆ ಕೊನೇ ಕ್ಷಣದಲ್ಲಿ ರಾಜಭವನದತ್ತ ದೌಡಾಯಿಸುತ್ತಿದ್ದಾರೆ. ಝೀರೋ ಟ್ರಾಫಿಕ್ನಲ್ಲಿ ಜೊಲ್ಲೆ ಪ್ರಮಾಣ ವಚನ ಸ್ವೀಕರಿಸಲು ಆಗಮಿಸುತ್ತಿದ್ದಾರೆ.
ಬಿ.ಶ್ರೀರಾಮುಲು ಪ್ರಮಾಣವಚನ ಸ್ವೀಕಾರ
ಡಿಸಿಎಂ ಹುದ್ದೆ ಮೇಲೆ ಕಣ್ಣಟ್ಟಿದ್ದ ಶಾಸಕ ಬಿ.ಶ್ರೀರಾಮುಲು ಪ್ರಮಾಣವಚನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಆರ್.ಅಶೋಕ್
ಕೆ.ಎಸ್.ಈಶ್ವರಪ್ಪ ನಂತರ ಆರ್.ಅಶೋಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎರಡನೇಯವರಾಗಿ ಕೆ.ಎಸ್.ಈಶ್ವರಪ್ಪ ಪ್ರಮಾಣವಚನ ಸ್ವೀಕಾರ
ಕೆ.ಎಸ್.ಈಶ್ವರಪ್ಪ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮೊದಲನೆಯವರಾಗಿ ಕಾರಜೋಳ ಪ್ರಮಾಣವಚನ ಸ್ವೀಕಾರ
ಸಚಿವರಾಗಿ ಗೋವಿಂದ ಕಾರಜೋಳ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದ್ದಾರೆ.
ಏರ್‌ಪೋರ್ಟ್‌ಗೆ ಅಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ
ಶಾಸಕಿ ಶಶಿಕಲಾ ಜೊಲ್ಲೆ ಏರ್‌ಪೋರ್ಟ್‌ಗೆ ಆಗಮಿಸಿದ್ದಾರೆ. ತರಾತುರಿಯಲ್ಲಿ ಏರ್‌ಪೋರ್ಟ್‌ನಿಂದ ಪ್ರಯಾಣ ಬೆಳೆಸುತ್ತಿದ್ದಾರೆ.
ಗಾಜಿನ ಮನೆಗೆ ರಾಜ್ಯಪಾಲರ ಆಗಮನ
ಗಾಜಿನ ಮನೆಗೆ ರಾಜ್ಯಪಾಲರು ಆಗಮಿಸುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಾಕ್ರಮ ಪ್ರಾರಂಭವಾಗುತ್ತದೆ.
ಕೊನೆಯವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶಶಿಕಲಾ ಜೊಲ್ಲೆ
ವಿಮಾನ ವಿಳಂಬವಾಗಿ ಬರುತ್ತಿರುವ ಕಾರಣ ಸಚಿವೆಯಾಗಿ ಶಶಿಕಲಾ ಜೊಲ್ಲೆ ಕೊನೆಯವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.
ಲಾಬಿ ಮಾಡಿದ್ದರೆ ನಾನು ಕೂಡ ಸಚಿವನಾಗುತ್ತಿದ್ದೆ: ರೇಣುಕಾಚಾರ್ಯ
ಲಾಬಿ ಮಾಡಿದ್ದರೆ ನಾನು ಕೂಡ ಸಚಿವನಾಗುತ್ತಿದ್ದೆ. ಲಾಬಿ ಮಾಡದಿದ್ದಕ್ಕೆ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಮರ್ಥರಿಗೆ ಸ್ಥಾನ ನೀಡಿದ್ದಾರೆಂದು ಅಂದುಕೊಂಡಿದ್ದೇನೆ ಎಂದು ಬೆಂಗಳೂರಿನಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಕೆಲವೇ ಕ್ಷಣಗಳಲ್ಲಿ ನೂತನ ಸಚಿವರ ಪ್ರತಿಜ್ಞಾವಿಧಿ ಸ್ವೀಕಾರ
ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತದೆ.
ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ
ಒಳಗೆ ಹೋಗಲು ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಕೊನೆಗೆ ಪಾಸ್ ಇದೆ ಬಿಡಿ ಅಂತ ಕಾರ್ಯಕರ್ತರು ಒಳಗೆ ಹೋದರು.
ರಾಜಭವನಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ಆಗಮಿಸಿದ್ದಾರೆ.
ಶಾಸಕಿ ಶಶಿಕಲಾ ಜೊಲ್ಲೆ ಬರುವುದಕ್ಕೆ ಎಸ್ಕಾರ್ಟ್ ವ್ಯವಸ್ಥೆ
ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶಶಿಕಲಾ ಜೊಲ್ಲೆ ಬರುವುದಕ್ಕೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಕೆಐಎಬಿಯಿಂದ ರಾಜಭವನಕ್ಕೆ ಬರುವುದಕ್ಕೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.
ರಾಜಭವನಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ ರಾಜಭವನಕ್ಕೆ ಆಗಮಿಸಿದ್ದಾರೆ. ತಂದೆ ಜತೆಯೇ ಬಿ.ವೈ.ವಿಜಯೇಂದ್ರ ಆಗಮಿಸಿದರು. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ರಾಜಭವನದಲ್ಲಿ ಜೈಕಾರದ ಘೋಷಣೆ ಕೂಗಿದರು.
ರಾಜಭವನದತ್ತ ಸಿಎಂ ಬಸವರಾಜ ಬೊಮ್ಮಾಯಿ
ಆರ್.ಟಿ.ನಗರದ ನಿವಾಸದಿಂದ ಸಿಎಂ ಬಸವರಾಜ ಬೊಮ್ಮಾಯಿ ರಾಜಭವನದತ್ತ ಆಗಮಿಸುತ್ತಿದ್ದಾರೆ.
ಶಶಿಕಲಾ ಜೊಲ್ಲೆಗೆ ಆರಂಭದಲ್ಲೆ ವಿಘ್ನ; 1:30 ಕ್ಕೆ ಕೆಐಎಬಿಗೆ ಆಗಮಿಸಬೇಕಿದ್ದ ವಿಮಾನ ವಿಳಂಬ
ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಲು ಶಾಸಕಿ ಶಶಿಕಲಾ ಜೊಲ್ಲೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ 1:30 ಕ್ಕೆ ಕೆಐಎಬಿಗೆ ಆಗಮಿಸಬೇಕಿದ್ದ ವಿಮಾನ ಅರ್ಧ ಗಂಟೆ ತಡವಾಗಿ ಬರಲಿದೆ. 2 ಗಂಟೆ ಸುಮಾರಿಗೆ ವಿಮಾನ ಬರಲಿದೆ. ಹೀಗಾಗಿ ಶಶಿಕಲಾ ಜೊಲ್ಲೆ ತಡವಾಗಿ ಪ್ರಮಾಣವಚನ ಸ್ವೀಕರಲಿಸಲಿದ್ದಾರೆ.
ನನಗ್ಯಾಕೆ ಸಚಿವ ಸ್ಥಾನವಿಲ್ಲ?- ರಾಜುಗೌಡ ಪ್ರಶ್ನೆ
ನನ್ನ ವಿರುದ್ಧ ಯಾವುದೇ ಒಂದು ರಿಮಾರ್ಕ್ ಇಲ್ಲ. ಆದರೂ ನನಗೇಕೆ ಸಚಿವ ಸ್ಥಾನ ಕೊಟ್ಟಿಲ್ಲವೆಂದು ಬಿಜೆಪಿ ಶಾಸಕ ರಾಜುಗೌಡ ಪ್ರಶ್ನಿಸಿದ್ದಾರೆ. ಒಂದಲ್ಲಾ ಒಂದು ದಿನ ದೇವರು ಕಾಪಾಡುತ್ತಾನೆ ಅಂತ ಟಿವಿ9ಗೆ ಶಾಸಕ ಹೇಳಿಕೆ ನೀಡಿದ್ದಾರೆ.
ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್ ಕೆಂಡಾಮಂಡಲ; ಸಿಎಂ ವಿರುದ್ಧ ದೂರು ಕೊಡಲು ಶಾಸಕ ನಿರ್ಧಾರ
ಸಂಪುಟದಲ್ಲಿ ಸಚಿವ ಸ್ಥಾನ ನೀಡದ್ದಕ್ಕೆ ನೆಹರು ಓಲೇಕಾರ್ ಸಿಎಂ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ. ಹಾವೇರಿ ಜಿಲ್ಲೆಯಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಿ.ಸಿ.ಪಾಟೀಲ್ ಕೂಡ ಮುಂದುವರಿದ ಸಮುದಾಯದವರು. ಆದರೆ ಸಚಿವ ಸ್ಥಾನ ಮಾತ್ರ ಹಿಂದುಳಿದ ವರ್ಗಕ್ಕೆ ಕೊಡಲಿಲ್ಲ. ಸಂಪುಟದಲ್ಲಿ ಜಾತಿವಾರು ಅಸಮತೋಲನ ಎದ್ದು ಕಾಣಿಸ್ತಿದೆ. ಹಿರಿಯರು ಕರೆದು ಮಾತನಾಡಿದರೆ ಹೋಗಿ ಚರ್ಚಿಸುತ್ತೇನೆ. ಸಂಪುಟದಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪ ಇದ್ದಾಗಲೂ ಅವಕಾಶ ವಂಚಿತನಾದೆ. ಇದುವರೆಗೂ ನನಗೆ ಯಾವುದೇ ರೀತಿ ಭರವಸೆ ನೀಡಿಲ್ಲ. ನಾವು ಪಕ್ಷದ ಜೊತೆಯಲ್ಲಿದ್ದು, ಹೋರಾಟ ಮಾಡ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಮೋಸ ಮಾಡಿದ್ದಾರೆ. ನಿಷ್ಠಾವಂತರನ್ನು ಸಿಎಂ ಬೊಮ್ಮಾಯಿ ಕಡೆಗಣಿಸಿದ್ದಾರೆ. ಪ್ರಮಾಣವಚನ ಕಾರ್ಯಕ್ರಮಕ್ಕೂ ನಾನು ಹೋಗಲ್ಲ. ಪ್ರಮಾಣವಚನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದರು.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹೆಚ್.ನಾಗೇಶ್‌ಗೆ ತೀವ್ರ ನಿರಾಸೆ
ದೆಹಲಿಯಿಂದ ಮುಳಬಾಗಿಲು ಶಾಸಕ ನಾಗೇಶ್ ವಾಪಸ್ ಆಗಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹೆಚ್.ನಾಗೇಶ್‌ಗೆ ತೀವ್ರ ನಿರಾಸೆಗೊಂಡಿದ್ದಾರೆ. ನಿರಾಸೆಯಿಂದಲೇ ಹೆಚ್.ನಾಗೇಶ್ ಬೆಂಗಳೂರಿನತ್ತ ತೆರಳಿದ್ದಾರೆ.
ಶಾಸಕ ರಾಜುಗೌಡಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ
ಶಾಸಕ ರಾಜುಗೌಡಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ ಕೈಗೊಂಡಿದ್ದಾರೆ. ರಾಜುಗೌಡ ಬೆಂಬಲಿಗರಿಂದ ಪ್ರತಿಭಟನಾ ಮೆರವಣಿಗೆ ಹೊರಟಿದೆ. ಬೆಂಗಳೂರಿನ ಮೋತಿ ಮಹಲ್ ಲಾಡ್ಜ್‌ನಿಂದ ಮೆರವಣಿಗೆ ಹೊರಟಿದ್ದು, ಬೆಂಬಲಿಗರನ್ನು ರಾಜುಗೌಡರು ಸಮಾಧಾನಪಡಿಸುತ್ತಿದ್ದಾರೆ.
ಸಚಿವ ಸ್ಥಾನದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೇ ಇಲ್ಲ – ಶಾಸಕ ಕೆ.ಜಿ ಬೋಪಯ್ಯ
ಸಚಿವ ಸ್ಥಾನದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೇ ಇಲ್ಲ ಎಂದು ಬೆಂಗಳೂರಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ ನೀಡಿದ್ದಾರೆ. ಯಾರನ್ನೂ ಸಚಿವರನ್ನಾಗಿ ಮಾಡುವಂತೆ ಕೇಳಿರಲಿಲ್ಲ. ಕೊಟ್ಟರೆ ಕೊಡಲಿ ಎಂದಷ್ಟೇ ಇದ್ದೆ. ನನಗೆ ಯಾವುದೇ ಬೇಸರ ಇಲ್ಲವೆಂದ ಕೆ.ಜಿ.ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ನಾಯಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಸಚಿವ ಸಂಪುಟ ರಚನೆ ಬೆನ್ನಲ್ಲೆ ಅಸಮಾಧಾನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಾಯಕ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯುತ್ತಿದೆ. ಡಿಸಿಎಂ ಸ್ಥಾನ ನೀಡಿಲ್ಲ ಕೇವಲ ಒಂದು ಸ್ಥಾನ ನೀಡಲಾಗಿದೆ. ಇದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಮೈಸೂರು ನ್ಯಾಯಾಲಯದ ಗಾಂಧೀ ಪುತ್ಥಳಿ ಬಳಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಸಿಎಂ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಂದಿನ ದಿನದಲ್ಲಿ ಬಿಜೆಪಿ ವಿರುದ್ದ ಮತ ಚಲಾಯಿಸಲು ಕರೆ ನೀಡುತ್ತಿದ್ದಾರೆ.
ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕಿಡಿ
ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸರ್ಕಾರದ ವಿರುದ್ಧ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಆಸೆ ತೋರಿಸಿ ಆಚೆ ನೂಕುವ ಧೋರಣೆ ಮಾಡಲಾಗಿದೆ. ಮುಂದುವರಿದ ಸಮುದಾಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಹಿಂದುಳಿದ ಗೊಲ್ಲ ಸಮುದಾಯದ ಕಡೆಗಣನೆ ಸರಿಯಲ್ಲ. ನ್ಯಾಯ ನೀಡದಿದ್ದರೆ ಗೊಲ್ಲ ಸಮುದಾಯದಿಂದ ಹೋರಾಟ ನಡೆಯಲಿದೆ. ಸಭೆ ನಡೆಸಿ ಚರ್ಚಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಚಿತ್ರದುರ್ಗದಲ್ಲಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.
ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್ ಕೆಂಡಾಮಂಡಲ
ಸಂಪುಟದಲ್ಲಿ ಸ್ಥಾನ ನೀಡದ್ದಕ್ಕೆ ಓಲೇಕಾರ್ ಕೆಂಡಾಮಂಡಲರಾಗಿದ್ದಾರೆ. ಸಂಘ ಪರಿವಾರದವರನ್ನು ಭೇಟಿ ಮಾಡಿ ದೂರು ನೀಡುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಿ.ಸಿ.ಪಾಟೀಲ್ ಕೂಡ ಮುಂದುವರಿದ ಸಮುದಾಯದವರು. ಆದರೆ ಸಚಿವ ಸ್ಥಾನ ಮಾತ್ರ ಹಿಂದುಳಿದ ವರ್ಗಕ್ಕೆ ಕೊಡಲಿಲ್ಲ. ಸಂಪುಟದಲ್ಲಿ ಜಾತಿವಾರು ಅಸಮತೋಲನ ಎದ್ದು ಕಾಣಿಸ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯರು ಕರೆದು ಮಾತನಾಡಿದರೆ ಹೋಗಿ ಚರ್ಚಿಸುತ್ತೇನೆ. ಯಡಿಯೂರಪ್ಪ ಇದ್ದಾಗಲೂ ಅವಕಾಶ ವಂಚಿತನಾದೆ, ಇದುವರೆಗೂ ನನಗೆ ಯಾವುದೇ ರೀತಿ ಭರವಸೆ ನೀಡಿಲ್ಲ. ನಾವು ಪಕ್ಷದ ಜೊತೆಯಲ್ಲಿದ್ದು ಹೋರಾಟ ಮಾಡ್ತೇನೆ.ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಮೋಸ ಮಾಡಿದ್ದಾರೆ, ನಿಷ್ಠಾವಂತರನ್ನು ಸಿಎಂ ಬೊಮ್ಮಾಯಿ ಕಡೆಗಣಿಸಿದ್ದಾರೆ, ಪ್ರಮಾಣ ವಚನ ಕಾರ್ಯಕ್ರಮಕ್ಕೂ ನಾನು ಹೋಗಲ್ಲ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿಕೆ ನೀಡಿದ್ದಾರೆ.
ಮನುಷ್ಯ ಜೀವನದಲ್ಲಿ ನಿರೀಕ್ಷೆ ಇಟ್ಟುಕೊಂಡು ಬದುಕುವುದಿಲ್ಲ- ಶಾಸಕ ರಾಮದಾಸ್
ಮನುಷ್ಯ ಜೀವನದಲ್ಲಿ ನಿರೀಕ್ಷೆ ಇಟ್ಟುಕೊಂಡು ಬದುಕುವುದಿಲ್ಲ. ಬಂದಂತ ವಿಚಾರವನ್ನ ಸ್ವೀಕಾರ ಮಾಡುವುದು ಮನುಷ್ಯನ ಅರ್ಹತೆ ಮೇಲೆ ಇರುತ್ತೆ. ನನ್ನ ತಂದೆ ಸೈನಿಕ, ಸೈನಿಕನ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕು ಬೇಸರ ಪಡುವುದಿಲ್ಲ. ನಿರೀಕ್ಷೆ ಇದಿದ್ದು ಸಹಜ. ಬೇರೆ ಲೆಕ್ಕಚಾರದ ಮೂಲಕ ಸಂಪುಟ ಮಾಡಿದ್ದಾರೆ. ನನಗೆ ಅರ್ಹತೆ ಎನ್ನುವುದಕ್ಕಿಂತ, ಅನುಭವ ಇದೆ ಎಂದು ಶಾಸಕ ರಾಮದಾಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಭಾರಿ ಕಲಬುರಗಿ ಜಿಲ್ಲೆಗೆ ಅನ್ಯಾಯವಾಗಿದೆ: ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್
ಈ ಭಾರಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗೋ ನಿರೀಕ್ಷೆ ಇತ್ತು. ಆದ್ರೆ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿಲ್ಲ. ಈ ಭಾಗಕ್ಕೆ ಅನ್ಯಾಯವಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಆದ್ರು ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು. ಬಸವರಾಜ್ ಬೊಮ್ಮಾಯಿ ಅವರಿಗೆ ಈ ಭಾಗದ ಬಗ್ಗೆ ಗೊತ್ತಿದೆ. ಅವರು ಈ ಹಿಂದೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡಾ ಕೆಲಸ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ನೀಡುವ ಭರವಸೆ ಇದೆ ಎಂದು ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಹೇಳಿದರು.
ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಕೆ.ಜಿ.ಬೋಪಯ್ಯ ಹೇಳಿಕೆ
ನಮ್ಮ ಕ್ಷೇತ್ರದ ಜನ ಕಷ್ಟದಲ್ಲಿದ್ದಾರೆ. ಕೊರೊನಾ ಇದೆ. ಕೇರಳ ಗಡಿಯಲ್ಲಿ ನಮ್ಮ ಜಿಲ್ಲೆ ಇದೆ. ಸಚಿವ ಸ್ಥಾನದ ಬಗ್ಗೆ ತಲೆ ಕಡೆಸಿಕೊಳ್ಳಲೇ ಇಲ್ಲ. ನಾನು ಯಾರನ್ನು ಸಚಿವರನ್ನಾಗಿ ಮಾಡಿ ಅಂತಾ ಕೇಳಿಲ್ಲ. ಕೊಟ್ರೆ ಕೊಡಲ್ಲಿ ಅಂತಾ ಇದ್ದೆ ಅಷ್ಟೇ. ನನಗೆ ಯಾವುದೇ ಬೇಸರ ಇಲ್ಲವೆಂದು ಶಾಸಕರ ಭವನದಲ್ಲಿ ಕೆ.ಜಿ.ಬೋಪಯ್ಯ ಹೇಳಿದರು.
ಪ್ರಮಾಣವಚನ ಕಾರ್ಯಕ್ರಮಕ್ಕೆ ಹೊಸ ಕೋಟ್ ಧರಿಸಿ ತೆರಳಲಿರುವ ಸಿಎಂ ಬೊಮ್ಮಾಯಿ
2.15ಕ್ಕೆ ಸುಮಾರಿಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಹೊಸ ಕೋಟ್ ಧರಿಸಿ ತೆರಳಲಿದ್ದಾರೆ.
ಸಚಿವ ಸಂಪುಟದಲ್ಲಿ ಎಸ್.ಎ.ರಾಮದಾಸ್‌ಗೆ ತಪ್ಪಿದ ಸ್ಥಾನ
ಸಚಿವ ಸಂಪುಟದಲ್ಲಿ ಎಸ್.ಎ.ರಾಮದಾಸ್‌ಗೆ ಸ್ಥಾನ ತಪ್ಪಿದೆ. ಸಚಿವ ಸ್ಥಾನ ತಪ್ಪುತ್ತಿದ್ದಂತೆ ಬೆಂಬಲಿಗರ ಜೊತೆ ಸಭೆ ನಡೆಸಿದ್ದಾರೆ. ಕೆ.ಆರ್.ಕ್ಷೇತ್ರದ ವಿವಿಧ ಮೋರ್ಚಾ ಅಧ್ಯಕ್ಷರು ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ರಾಜುಗೌಡ ಬೆಂಬಲಿಗರಿಂದ ಪ್ರತಿಭಟನೆ
ಶಾಸಕ ರಾಜುಗೌಡಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೆಂಗಳೂರಿನಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಂ ಬೊಮ್ಮಾಯಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಆರಗ ಜ್ಞಾನೇಂದ್ರ ಬೆಂಬಲಿಗರು
ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ತೀರ್ಥಹಳ್ಳಿ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಯೂಟರ್ನ್ ಹೊಡೆದ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ
ಸಚಿವ ಸ್ಥಾನ ನೀಡದಿದ್ದರೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಯೂಟರ್ನ್ ಹೊಡೆದಿದ್ದಾರೆ. ರಾಜೀನಾಮೆ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ನಾನು ರಾಜೀನಾಮೆ ನೀಡಲ್ಲ ಅಂತ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ಟಿವಿ9ಗೆ ತಿಳಿಸಿದ್ದಾರೆ.
ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ಸಿಗದ್ದಕ್ಕೆ ಆಕ್ರೋಶ; ಬೆಂಬಲಿಗನಿಂದ ಉರುಳುಸೇವೆ
ಶಾಸಕ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ಸಿಗದ್ದಕ್ಕೆ ಬೆಂಬಲಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ಪ್ರವಾಸಿ ಮಂದಿರದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹೋಗುತ್ತಿದ್ದಾರೆ. ಪ್ರತಿಭಟನಾ ಮೆರವಣಿಗೆ ವೇಳೆ ಪರಸಪ್ಪ ಕುಂಬಾರ ಎಂಬ ಬೆಂಬಲಿಗ ಉರುಳುಸೇವೆ ಮಾಡಿದ್ದಾರೆ.
ಒಕ್ಕಲಿಗ ಕೋಟಾದಲ್ಲಿ 7 ಜನರಿಗೆ ಸಚಿವ ಸ್ಥಾನ
ಒಕ್ಕಲಿಗ ಕೋಟಾದಲ್ಲಿ 7 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ. ಡಾ.ಅಶ್ವತ್ಥ್ ನಾರಾಯಣ, ಕೆ.ಸಿ.ನಾರಾಯಣಗೌಡ, ಆರ್.ಅಶೋಕ್. ಡಾ.ಕೆ.ಸುಧಾಕರ್, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್.ಟಿ. ಸೋಮಶೇಖರ್‌ಗೆ ಸಚಿವ ಸ್ಥಾನ ಸಿಗುತ್ತಿದೆ.
ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು
ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ಸಿಕ್ಕಿದೆ. ಲಿಂಗಾಯತ ಕೋಟಾದಲ್ಲಿ 8 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ವಿ.ಸೋಮಣ್ಣ, ಶಂಕರ ಪಾಟೀಲ್ ಮುನೇನಕೊಪ್ಪ, ಜೆ.ಸಿ.ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಮುಖ್ಯಮಂತ್ರಿ ನೇರವಾಗಿ ಕರೆ ಮಾಡಿ ಪ್ರಮಾಣವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ
ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ, ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್, ಯಶವಂತಪುರ ಕ್ಷೇತ್ರದ ಶಾಸಕ S.T.ಸೋಮಶೇಖರ್, ಕೆ.ಆರ್.ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ್, ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್, ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ, ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು, ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ, ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್, ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ, ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ, ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ, ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್, ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ, ತಿಪಟೂರು ಶಾಸಕ ಬಿ.ಸಿ.ನಾಗೇಶ್‌ಗೆ ಸಚಿವ ಸ್ಥಾನ ಸಿಗಲಿದೆ.
ಬಿಎಸ್‌ವೈ ಭೇಟಿ ಮಾಡಿದ ನೂತನ ಸಚಿವರು
ಬಿ.ಸಿ ಪಾಟೀಲ್, ಮುರಗೇಶ್ ನಿರಾಣಿ. ಗೋವಿಂದ ಕಾರಜೋಳ, ಕೆ.ಸುಧಾಕರ್ ನಾರಾಯಣಗೌಡ , ವಿ ಸೋಮಣ್ಣ, ಎಸ್. ಟಿ.ಸೋಮಶೇಖರ್ ಪ್ರಭು ಚೌಹಾಣ್, ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದರು.
ಯಡಿಯೂರಪ್ಪಗೆ ನೂತನ ಸಚಿವರ ಪಟ್ಟಿ ನೀಡಿದ ಬೊಮ್ಮಾಯಿ
ಸಿಎಂ ಬೊಮ್ಮಾಯಿ ಯಡಿಯೂರಪ್ಪಗೆ ನೂತನ ಸಚಿವರ ಪಟ್ಟಿಯನ್ನು ನೀಡಿದ್ದಾರೆ. ಬಿಎಸ್ ವೈ ನಿವಾಸಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರು ಆಗಮಿಸುತ್ತಿದ್ದಾರೆ.
ಬೊಮ್ಮಾಯಿ ಸಂಪುಟದಲ್ಲಿ ಹಾಸನಕ್ಕೆ ಸಿಗದ ಪ್ರಾತಿನಿಧ್ಯ
ಬೊಮ್ಮಾಯಿ ಸಂಪುಟದಲ್ಲಿ ಹಾಸನಕ್ಕೆ ಪ್ರಾತಿನಿಧ್ಯ ಸಿಗಲಿಲ್ಲ. ಶಾಸಕ ಪ್ರೀತಂಗೌಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ನಿರಾಸೆಯಾಗಿದೆ. ಸಚಿನ ಸ್ಥಾನ ಸಿಗಲಿ ಎಂದು ಬೆಂಬಲಿಗರು ಪೂಜೆ ಮಾಡಿ ಹಾರೈಸಿದ್ದರು. ಆದ್ರೆ ಅಂತಿಮವಾಗಿ ಸಚಿವ ಸ್ಥಾನ ಸಿಗದಿದ್ದರಿಂದ ಬೆಂಬಲಿಗರಿಗೆ ಭಾರೀ ನಿರಾಸೆಯಾಗಿದೆ.
ಮಾಜಿ ಸಚಿವ ಆನಂದ್ ಸಿಂಗ್ಗೆ ಸಚಿವ ಸ್ಥಾನ ಖಚಿತ
ಮಾಜಿ ಸಚಿವ ಆನಂದ್ ಸಿಂಗ್ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಟಿವಿ9 ಗೆ ದೂರವಾಣಿ ಮೂಲಕ ಆನಂದ್ ಸಿಂಗ್ ತಿಳಿಸಿದ್ದಾರೆ.
ಯಡಿಯೂರಪ್ಪರ ಜೊತೆಗೆ ರಾಜಕೀಯಕ್ಕೆ ಬಂದವನು ನಾನು; ಕೋಟಾ ಶ್ರೀನಿವಾಸ ಪೂಜಾರಿ
ನನ್ನ 45 ವರ್ಷಗಳ ರಾಜಕೀಯ ಸೇವೆಯನ್ನು ಗುರುತಿಸಿ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಸಚಿವ ಸ್ಥಾನ ಕೊಡ್ತಿರೋದಕ್ಕೆ ತುಂಬಾ ಖುಷಿಯಾಗಿದೆ. ನಾಲ್ಕು ಬಾರಿ ಶಾಸಕನಾಗಿದ್ದೇನೆ. ಯಡಿಯೂರಪ್ಪರ ಜೊತೆಗೆ ರಾಜಕೀಯಕ್ಕೆ ಬಂದವನು ನಾನು. ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಸಿಗಬೇಕಿತ್ತು. ಬೊಮ್ಮಯಿಯವರಿಗೆ ನಾನು ಏನು ಅನ್ನೋದು ಗೊತ್ತಿದೆ. ಅವರು ಸೂಕ್ತ ಖಾತೆ ಕೊಟ್ಟು ನನ್ನ ಬಳಸಿಕೊಳ್ತಾರೆ. ಯಾವುದೇ ಖಾತೆ ಕೊಟ್ರು, ನಿಷ್ಠೆ ಯಿಂದ ನಿಭಾಯಿಸ್ತೀನಿ. ಗ್ರಾಮೀಣ ಅಭಿವೃದ್ಧಿ ಬಗ್ಗೆ ನನಗೆ ಆಸಕ್ತಿ ಇದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಯಡಿಯೂರಪ್ಪ ಭೇಟಿಗೆ ಆಗಮಿಸಿದ ಸಿಎಂ ಬೊಮ್ಮಾಯಿ
ದೆಹಲಿಯಿಂದ ಸಚಿವರ ಪಟ್ಟಿ ಹಿಡಿದು ಬಂದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಲು ಆಗಮಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ ಈ ಬಾರಿಯೂ ಕೈ ತಪ್ಪಿದ ಮಂತ್ರಿ ಸ್ಥಾನ
ಕಲಬುರಗಿ ಜಿಲ್ಲೆಗೆ ಈ ಬಾರಿಯೂ ಮಂತ್ರಿ ಸ್ಥಾನ ಕೈ ತಪ್ಪಿದೆ. ಐವರು ಶಾಸಕರಿದ್ದರು ಕೂಡಾ ಮಂತ್ರಿ ಸ್ಥಾನ ಸಿಗಲಿಲ್ಲ. ಒಬ್ಬರಿಗಾದ್ರು ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದರು.
ಬೆಂಬಲಿಗರಿಲ್ಲದೆ ಸಿ.ಪಿ.ಯೋಗೇಶ್ವರ್ ನಿವಾಸ ಖಾಲಿ ಖಾಲಿ
ಸಿ.ಪಿ.ಯೋಗೇಶ್ವರ್ಗೆ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ ಯೋಗೇಶ್ವರ್ ನಿವಾಸ ಬೆಂಬಲಿಗರಿಲ್ಲದೆ ಖಾಲಿ ಖಾಲಿಯಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸ ಖಾಲಿ ಖಾಲಿಯಾಗಿದೆ.
ಧನ್ಯವಾದ ತಿಳಿಸಿದ ಮಾಜಿ ಸಚಿವ ಸುರೇಶ್ ಕುಮಾರ್
2 ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.
ಸಿಎಂ ಸ್ವಗೃಹದ ಬಳಿ ಲಘು ಅಪಘಾತ
ಸಿಎಂ ಸ್ವಗೃಹದ ಬಳಿ ಲಘು ಅಪಘಾತವಾಗಿದೆ. ಎರಡು ಕಾರುಗಳ ನಡುವೆ ಡಿಕ್ಕಿಯಾಗಿದೆ. ಆದರೆ ಯಾವುದೇ ಅನಾಹುತು ಸಂಭವಿಸಿಲ್ಲ.
ಹಳೆಯ ಏಳು ಮಂದಿಗೆ ಕೈ ತಪ್ಪಿದ ಸ್ಥಾನ
ಹಳೆಯ ಒಟ್ಟು ಏಳು ಮಂದಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಆರ್.ಶಂಕರ್, ಸಿ.ಪಿ.ಯೋಗೇಶ್ವರ್, ಅರವಿಂದ್ ಲಿಂಬಾವಳಿ, ಶ್ರೀಮಂತ ಪಾಟೀಲ್, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಮತ್ತು ಲಕ್ಷಣ ಸವದಿಗೆ ಈ ಬಾರಿ ಮಂತ್ರಿ ಸ್ಥಾನವಿಲ್ಲ.
ಸಚಿವರ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಇಲ್ಲ; ಸಿಎಂ
ಸಚಿವರ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಇಲ್ಲ ಅಂತ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟತೆ ನೀಡಿದ್ದಾರೆ.
ಈ ಬಾರಿ ಸಂಪುಟದಲ್ಲಿ ಅನುಭವ, ಹೊಸಬರು ಇದ್ದಾರೆ; ಸಿಎಂ
ಈ ಬಾರಿ ಸಂಪುಟದಲ್ಲಿ ಅನುಭವ, ಹೊಸಬರು ಇದ್ದಾರೆ. 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್‌ಟಿ, ರೆಡ್ಡಿ ಸಮುದಾಯ, ಮಹಿಳಾ ಶಾಸಕಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಬಾರಿ ಡಿಸಿಎಂ ಸ್ಥಾನ ಇಲ್ಲ- ಸಿಎಂ ಬೊಮ್ಮಾಯಿ ಸ್ಪಷ್ಟತೆ
ನಾನು ಸಿಎಂ ಆದ ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಸ್ಥಳದಲ್ಲಿಯೇ ಪರಿಹಾರವನ್ನು ಕೂಡ ಘೋಷಣೆ ಮಾಡಿದ್ದೇನೆ. ರೈತ ಮಕ್ಕಳಿಗಾಗಿ ಯೋಜನೆ ಘೋಷಣೆ ಮಾಡಿದ್ದೇನೆ. ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದೇನೆ. ನಿನ್ನೆ ರಾತ್ರಿ ಅಂತಿಮ ಸುತ್ತಿನ ಮಾತುಕತೆ ನಡೆಯಿತು. ಸಚಿವರ ಪಟ್ಟಿ ಅಂತಿಮವಾಗಿದೆ, ರಾಜ್ಯಪಾಲರಿಗೆ ಕಳಿಸಿದ್ದೇನೆ. ಒಟ್ಟು 29 ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ ಅಂತ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ
ಸಚಿವ ಸಂಪುಟಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸುತ್ತಾರೆ.
ಮತ್ತೆ ಪಶುಸಂಗೋಪನೆ ಖಾತೆಯನ್ನೆ ಕೇಳುತ್ತೇನೆ- ಪ್ರಭು ಚೌಹಾಣ್
ಎರಡು ವರ್ಷ ನಾನು ಕ್ಯಾಬಿನೆಟ್ನಲ್ಲಿ ಕೆಲಸ ಮಾಡಿದ್ದೇನೆ. ಸಿಎಂ, ಮಾಜಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ವಿಶ್ವಾಸ ಇಟ್ಟು ಮತ್ತೆ ಮಂತ್ರಿ ಸ್ಥಾನ ನೀಡಿದ್ದಾರೆ. ರಾತ್ರಿ ಇಡೀ ನಾನು ನಿದ್ದೆ ಮಾಡಿಲ್ಲ. ಯಾವಾಗ ಕರೆ ಬರುತ್ತೋ ಅಂತ ಕಾಯ್ತಾ ಇದ್ದೆ. ಮತ್ತೆ ಪಶುಸಂಗೋಪನೆ ಖಾತೆಯನ್ನೆ ಕೇಳುತ್ತೆನೆ ಎಂದು ಪ್ರಭು ಚೌಹಾಣ್ ಹೇಳಿದರು.
ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಭಾರೀ ನಿರಾಸೆ
ದೆಹಲಿಗೆ ಹೋಗಿ ಲಾಬಿ ಮಾಡಿದರೂ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಮಂತ್ರಿಸ್ಥಾನ ಸಿಗುವಂತೆ ಕಾಣುತ್ತಿಲ್ಲ. ಮಂತ್ರಿ ಸ್ಥಾನ ಕೈತಪ್ಪಿದ ಬಗ್ಗೆ ಶಾಸಕ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ನನಗೆ ಭರವಸೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕೊನೆ ಕ್ಷಣದಲ್ಲಿ ಎಂಟಿಬಿ ನಾಗರಾಜ್ಗೆ ಮಂತ್ರಿಗಿರಿ ಪಟ್ಟ
ಮಂತ್ರಿ ಪಟ್ಟಿಯಿಂದ ಎಂಟಿಬಿ ನಾಗರಾಜ್ಗೆ ಹೆಸರು ಬಹುತೇಕ ಹೊರಗೆಯಿತ್ತು. ಆದರೆ ಕೊನೆ ಕ್ಷಣದಲ್ಲಿ ಒತ್ತಡ ಹಾಕಿ ಎಂಟಿಬಿ ನಾಗರಾಜ್ ಮಂತ್ರಿಗಿರಿ ಪಟ್ಟ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೆ.ಪಿ.ನಡ್ಡಾ ಅವರಿಗೆ ಎಂಟಿಬಿ ಸುದೀರ್ಘ ಪತ್ರ ಬರೆದಿದ್ದರು. 16 ಶಾಸಕರ ಜತೆ ಪಕ್ಷ ತೊರೆಯುವ ಎಚ್ಚರಿಕೆ ನೀಡಿದ್ದರು.
ಸಿಎಂ ಕರೆ ನಿರೀಕ್ಷೆಯಲ್ಲಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ
ನನಗೆ ಇನ್ನೂ ಕರೆ ಬಂದಿಲ್ಲ. ಕರೆಗಾಗಿ ಕಾಯುತ್ತಿದ್ದೇನೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಹೇಳಿದ್ದಾರೆ. ಪೂರ್ಣಿಮಾರವರ ಮನೆಯಲ್ಲಿ ಒಂದು ರೀತಿಯ ಸಂಭ್ರಮ ಮನೆಮಾಡಿದೆ. ಯಾದವ ಸಮುದಾಯದ ಮುಖಂಡರು ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗುತ್ತಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಬೆಂಬಲಿಗರಿಂದ ಜೈಕಾರ ಕೂಗಿ ಸಂಭ್ರಮ
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಚಿವ ಸ್ಥಾನ ಪಿಕ್ಸ್ ಹಿನ್ನೆಲೆಯಲ್ಲಿ ಆರಗ ಜ್ಞಾನೇಂದ್ರ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಎಲ್ ಹೆಚ್ ಬಳಿ ಶಾಸಕ ಆರಗ ಜ್ಞಾನೇಂದ್ರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸುತ್ತಿದ್ದಾರೆ.
ಬೆಂಗಳೂರಿನತ್ತ ಹೊರಟ ಮಾಜಿ ಸಚಿವ ಮಾಧುಸ್ವಾಮಿ
ಮಾಜಿ ಸಚಿವ ಮಾಧುಸ್ವಾಮಿ, ಸಿ ಶಿದ್ದಗಂಗಾ ಶ್ರೀವಕುಮಾರ್ ಶ್ರೀಗಳ ಗದ್ದುಗೆಗೆ ನಮಿಸಿ ಬೆಂಗಳೂರಿನತ್ತ ಹೊರಟಿದ್ದಾರೆ.
ಬೊಮ್ಮಾಯಿ ಸಂಪುಟ ಸೇರುವ ಸಂಭಾವ್ಯ ಸಚಿವರ ಪಟ್ಟಿ
ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಬಿ.ಸಿ.ಪಾಟೀಲ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಉಮೇಶ್ ಕತ್ತಿ, ಡಾ.ಕೆ.ಸುಧಾಕರ್, ಕೆ.ಎಸ್.ಈಶ್ವರಪ್ಪ, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಬಿ.ಶ್ರೀರಾಮುಲು, ಆನಂದ್ ಸಿಂಗ್, ಆರಗ ಜ್ಞಾನೇಂದ್ರ, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ವಿ.ಸುನಿಲ್ ಕುಮಾರ್, ಸಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ನಾರಾಯಣಗೌಡ, ಪ್ರಭು ಚೌಹಾಣ್, ಮುನಿರತ್ನ, ಹಾಲಪ್ಪ ಆಚಾರ್, ಶಿವರಾಂ ಹೆಬ್ಬಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.
ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾನ್ಗೆ ಒಲಿದ ಮಂತ್ರಿ ಭಾಗ್ಯ
ಬೀದರ್ ಜಿಲ್ಲೆಯ ಔರಾದ್ ಮೀಸಲು ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಭು ಚೌಹಾನ್ಗೆ ಮಂತ್ರಿ ಭಾಗ್ಯ ಒಲಿದಿದೆ. ಔರಾದ್ ಕ್ಷೇತ್ರದದಿಂದ ಮೂರು ಭಾರಿ ಗೆದ್ದಿರುವ ಪ್ರಭು ಚೌಹಾನ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಂದ ಕರೆ ಬಂದಿದೆ.
ಶಶಿಕಲಾ ಜೊಲ್ಲೆಗೆ ಸಿಎಂ ಕರೆ
ಮಾಜಿ ಸಚಿವೆ ಶಶಿಕಲಾ ಜೊಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿದ್ದಾರೆ. ಹೀಗಾಗಿ ಶಶಿಕಲಾ ಜೊಲ್ಲೆ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಇಬ್ಬರಿಗೆ ಒಲಿದ ಸಚಿವ ಸ್ಥಾನ ಪಕ್ಕಾ
ಶಿವಮೊಗ್ಗ ನಗರ ಶಾಸಕ ಕೆ.ಎಸ್ .ಈಶ್ವರಪ್ಪ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಸಿಎಂ ನಿಂದ ಇಬ್ಬರಿಗೂ ಕರೆ ಬಂದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರಿಗೆ ಸಂತೋಷ ಹೆಚ್ಚಾಗಿದೆ.
ಆರಗ ಜ್ಞಾನೇಂದ್ರಗೆ ಬಂತು ಸಿಎಂ ಕರೆ
ನನಗೆ ಸಿ.ಎಂ ಬೊಮ್ಮಯಿ ಅವರು ಕಾಲ್ ಮಾಡಿದ್ದರು. ಮಧ್ಯಾಹ್ನ 2.30 ಕ್ಕೆ ಪ್ರಯಾಣ ವಚನ ಸ್ವೀಕರಿಸಲು ಹೇಳಿದ್ದಾರೆ. ನನಗೆ ಬಹಳ ಸಂತೋಷವಾಗ್ತಿದೆ. ಯಡಿಯೂರಪ್ಪ ಆರ್ಎಸ್ಎಸ್ ಮತ್ತು ನಮ್ಮ ದೆಹಲಿ ನಾಯಕರಿಗೆ ಧನ್ಯವಾದಗಳು ಹೇಳ್ತಿನಿ.ಯಾವುದೇ ಖಾತೆ ಕೊಟ್ರು ಕೆಲಸ ಮಾಡ್ತಿನಿ. ಬೊಮ್ಮಯಿ ಅವರಿಗೆ ನನ್ನ ಶಕ್ತಿ ಗೊತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹಾಲಪ್ಪ ಆಚಾರ್ಗೆ ಸಚಿವ ಸ್ಥಾನ ಫಿಕ್ಸ್
ವಿಧಾನ ಸೌಧಕ್ಕೆ ಬಾ ಅಂದಿದ್ದಾರೆ.. ಹಾಗಾಗಿ ನಾನು ಹೋಗ್ತೀದಿನಿ ಎಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಸಂಪುಟ ಸೇರುವ ಸಂಭಾವ್ಯರ ಪಟ್ಟಿ
ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಬೈರತಿ ಬಸವರಾಜ್, ಉಮೇಶ್ ಕತ್ತಿ, ಪೂರ್ಣಿಮಾ ಶ್ರೀನಿವಾಸ್, ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್, ಡಾ.ಕೆ.ಸುಧಾಕರ್, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಆರಗ ಜ್ಞಾನೇಂದ್ರ, ಆನಂದ್ ಸಿಂಗ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಕೆ.ಸಿ.ನಾರಾಯಣ ಗೌಡ, ಪ್ರಭುಚೌಹಾನ್, ಕೆ.ಗೋಪಾಲಯ್ಯಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಶಾಸಕ ಸೋಮಲಿಂಗಪ್ಪ
ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಸಿರಗುಪ್ಪ ಬಿಜೆಪಿ ಶಾಸಕ ಸೋಮಲಿಂಗಪ್ಪ ಆಗಮಿಸಿದ್ದಾರೆ. ವರಿಷ್ಟರು ಎಲ್ಲವನ್ನ ನೋಡಿ ಒಳ್ಳೆ ತಿರ್ಮಾನ ತೆಗೆದುಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕರಿಗೆ ಕರೆ ಮಾಡಿಸುತ್ತಿರುವ ಸಿಎಂ ಬೊಮ್ಮಾಯಿ
ವಿಧಾನಸೌಧದ ಕಚೇರಿಯಿಂದಲೇ ಸಿಎಂ ಬಸವರಾಜ ಬೊಮ್ಮಾಯಿ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ ಬರುವಂತೆ ಆಹ್ವಾನ ದೂರವಾಣಿ ಕರೆ ಮಾಡುತ್ತಿದ್ದಾರೆ.
ಬಿ.ಸಿ ಪಾಟೀಲ್‌ಗೆ ಶುಭಾಶಯ ಕೋರುತ್ತಿರುವ ಅಭಿಮಾನಿಗಳು
ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಪಕ್ಕಾ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ದೂರವಾಣಿ ಕರೆ ಮಾಡುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಹಿರೆಕೇರೂರು ಕ್ಷೇತ್ರದ ಅಭಿಮಾನಿಗಳು ಬಿ.ಸಿ.ಪಾಟೀಲ್‌ಗೆ ಶುಭಾಶಯ ಕೋರುತ್ತಿದ್ದಾರೆ.
ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ- ಸಿಪಿವೈ
ನನಗೇನೂ ತೊಂದರೆ ಇಲ್ಲ, ಟೈಂ ಇದೆ ನೋಡೋಣ ಎಂದು ಏರ್‌ಪೋರ್ಟ್‌ನಲ್ಲಿ ಮಾಜಿ ಸಚಿವ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ನಾನು ಯಾರನ್ನೂ ಭೇಟಿಯಾಗಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ದೆಹಲಿಯಿಂದ ಹಿಂತಿರುಗಿದ ಬಳಿಕ ಮಾಜಿ ಸಚಿವ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿ ಟಿವಿ9ಗೆ ಲಭ್ಯ
ಸಂಭಾವ್ಯ ಸಚಿವರ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಉಮೇಶ್ ಕತ್ತಿ, ಡಾ.ಕೆ.ಸುಧಆಕರ್, ಕೆ.ಎಸ್.ಈಶ್ವರಪ್ಪ, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಆರಗ ಜ್ಞಾನೇಂದ್ರ, ಆನಂದ್ ಸಿಂಗ್, ವಿ.ಸೋಮಣ್ಣಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.
ದೆಹಲಿಯಿಂದ ಆಗಮಿಸಿದ ಸಿ.ಪಿ.ಯೋಗೇಶ್ವರ್
ದೆಹಲಿಯಿಂದ ಸಿ.ಪಿ.ಯೋಗೇಶ್ವರ್ ಆಗಮಿಸಿದ್ದಾರೆ. ನನಗೇನೂ ತೊಂದರೆ ಇಲ್ಲ, ಟೈಂ ಇದೆ ನೋಡೋಣ ಅಂತ ಸಚಿವ ಸ್ಥಾನಕ್ಕಾಗಿ ನಿನ್ನೆ ಲಾಬಿ ನಡೆಸಿದ್ದ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಏನೂ ಗುಡ್ ನ್ಯೂಸ್ ಇಲ್ಲ- ಬಿ.ವೈ.ವಿಜಯೇಂದ್ರ
ಬಿಎಸ್‌ವೈ ಭೇಟಿ ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ಏನೂ ಗುಡ್ ನ್ಯೂಸ್ ಇಲ್ಲ. ಮತ್ತೆ ಬರ್ತೀನಿ ಎಂದು ಹೇಳಿ ವಿಜಯೇಂದ್ರ ತೆರಳಿದ್ದಾರೆ.
ಸಿಎಂ ಜೊತೆಗೆ ಆಗಮಿಸಿರುವ ಅರುಣ್ ಸಿಂಗ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಅರುಣ್ ಸಿಂಗ್ ಆಗಮಿಸಿದ್ದಾರೆ.
12 ಗಂಟೆಗೆ ಅಧಿಕೃತ ಪಟ್ಟಿ ಬರುತ್ತೆ; ನಳೀನ್ ಕುಮಾರ್ ಕಟೀಲ್
ಬಿಜೆಪಿ ಕಚೇರಿಗೆ ಬಿಜೆಪಿ ರಾಜಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಿದ್ದಾರೆ. ಕೇಂದ್ರದಿಂದ ಇವತ್ತು 12 ಗಂಟೆಗೆ ಅಧಿಕೃತವಾದ ಪಟ್ಟಿ ಬರುತ್ತೆ. ಸಿಎಂ ಅವರು ಪಟ್ಟಿಯನ್ನ ಬಿಡುಗಡೆ ಮಾಡಲಿದ್ದಾರೆ ಎಂದು ಕಟೀಲ್ ತಿಳಿಸಿದ್ದಾರೆ.
10.30ರಿಂದ 11 ಗಂಟೆಯೊಳಗೆ ಶುಭ ಸುದ್ದಿ ಸಿಗುತ್ತದೆ; ಬೊಮ್ಮಾಯಿ ಹೇಳಿಕೆ
ಇನ್ನೂ ಎರಡು ವಿಚಾರಗಳ ಬಗ್ಗೆ ಚರ್ಚೆ ಬಾಕಿ ಇದೆ. 10.30ರಿಂದ 11 ಗಂಟೆಯೊಳಗೆ ಶುಭ ಸುದ್ದಿ ಸಿಗುತ್ತದೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಈಶ್ವರಪ್ಪನಿಗಿಂತ ಪಕ್ಷಕ್ಕೆ ಮೊದಲು ಬಂದವನು- ಆರಗ ಜ್ಞಾನೇಂದ್ರ
ನಾನು ಈಶ್ವರಪ್ಪನಿಗಿಂತ ಮುಂಚೆ ಪಕ್ಷಕ್ಕೆ ಬಂದವನು. ನನಗೆ ಯಾವುದೇ ಸದ್ಯ ಕರೆ ಬಂದಿಲ್ಲ, ಕಾಯುತ್ತಿದ್ದೇನೆ. ಸೊನ್ನೆಯಿಂದ ಪಕ್ಷ ಕಟ್ಟಿದ್ದೇನೆ. ನಾಲ್ಕು ಬಾರಿ ಶಾಸಕ ಆಗಿದ್ದೇನೆ. ಈ ಹಿಂದೆ ನನ್ನ ಸಚಿನನಾಗಿ ಮಾಡಬೇಕಿತ್ತು. ಬಿಎಸ್‌ವೈ ಕೂಡ ಸಚಿವರಾಗುತ್ತೀರ ಅಂತ ಹೇಳಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಾಜಿ ಸಚಿವ ನಾರಾಯಣಗೌಡಗೆ ಸಿಎಂ ಬೊಮ್ಮಾಯಿ ಕರೆ
ಪ್ರಮಾಣವಚನ ಸ್ವೀಕಾರಕ್ಕೆ ಬರುವಂತೆ ಸಿಎಂ ಬೊಮ್ಮಾಯಿ ಮಾಜಿ ಸಚಿವ ನಾರಾಯಣಗೌಡಗೆ ಕರೆ ಮಾಡಿದ್ದಾರೆ.
ಮಾಜಿ ಡಿಸಿಎಂ ಗೋವಿಂದ ಕಾರಜೋಳಗೆ ಬಂತು ಸಿಎಂ ಕರೆ
ಮುಖ್ಯಮಂತ್ರಿ ಬೊಮ್ಮಾಯಿ ಕರೆ ಮಾಡಿ ಪ್ರಮಾಣವಚನಕ್ಕೆ ಬರುವಂತೆ ತಿಳಿಸಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಅಂತ ಟಿವಿ9ಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ಧಾರೆ.
ಕಳೆದ ಒಂದು ಗಂಟೆಯಿಂದ ಬಿಎಸ್‌ವೈ ಜೊತೆ ವಿಜಯೇಂದ್ರ ಚರ್ಚೆ
ಬಿಎಸ್‌ವೈ ಜೊತೆ ಬಿ.ವೈ.ವಿಜಯೇಂದ್ರ ಮಾತುಕತೆ ನಡೆಸುತ್ತಿದ್ದಾರೆ. ಕಳೆದ ಒಂದು ಗಂಟೆಯಿಂದ ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ತಂದೆಯೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿಗೆ ಕಾದು ಕೂತಿರುವ ಶಾಸಕರು
ವಿಧಾನಸೌಧಕ್ಕೆ ಬಂದು ಭೈರತಿ ಬಸವರಾಜ, ಸುಧಾಕರ್, ಎಸ್.ಟಿ.ಸೋಮಶೇಖರ್ ಮತ್ತು ಆರ್.ಅಶೋಕ್ ಕಾದು ಕೂತಿದ್ದಾರೆ. ಕಾನ್ಫರೆನ್ಸ್ ಹಾಲ್‌ನಲ್ಲಿ ಕುಳಿತು ನಾಲ್ವರು ಶಾಸಕರು ಮಾತುಕತೆ ನಡೆಸಿಸುತ್ತಿದ್ದಾರೆ.
ಸಚಿವ ಸ್ಥಾನ ಸಿಗದಿದ್ದರೆ ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡುತ್ತೇವೆ; ಶಾಸಕ ಹಾಲಪ್ಪ
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಇದುವರೆಗೂ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಒಂದು ವೇಳೆ ಸಚಿವ ಸ್ಥಾನ ನೀಡದೇ ಇದ್ದರೆ ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡುತ್ತೇವೆ. ಹೀಗಾದರೆ ನಾವು ಬೆಳೆಯೋದು ಹೇಗೆ, ಪಕ್ಷ ಬೆಳಿಸೋದು ಹೇಗೆ? ಮೊದಲೆಲ್ಲ ಹಿರಿಯರು ಆಗೋದು ಅಂದರೆ ಪ್ರಮೋಷನ್ ಆಗಿತ್ತು. ಈಗ ಡಿಸ್ಕ್ವಾಲಿಫಿಕೇಷನ್ ತರ ಆಗಿದೆ ಅಂತ ಶಾಸಕ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸೀದಾ ವಿಧಾನ ಸೌಧಕ್ಕೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ
ಏರ್ಪೋಟ್ನಿಂದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೀದಾ ವಿಧಾನ ಸೌಧಕ್ಕೆ ತೆರಳಲಿದ್ದಾರೆ.
ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ; ಬೆಂಬಲಿಗರ ಧರಣಿ
ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶಾಸಕರ ಭವನದ ಬಳಿ ಅವರ ಬೆಂಬಲಿಗರು ಧರಣಿ ನಡೆಸುತ್ತಿದ್ದಾರೆ. ಜಾತಿ ರಾಜಕಾರಣ ಮಾಡಿ ಸಚಿವ ಸ್ಥಾನ ತಪ್ಪಿಸಿದ್ದಾರೆ ಅಂತ ಸಿಎಂ ಬೊಮ್ಮಾಯಿ ವಿರುದ್ಧ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೂ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ- ಮಾಜಿ ಸಚಿವ ಆರ್.ಶಂಕರ್
ನನಗೂ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ. ಈಗಲೂ ಸಿಎಂ ಬೊಮ್ಮಾಯಿರನ್ನ ಭೇಟಿ ಮಾಡುತ್ತೇನೆ. ನಾವೆಲ್ಲ ಸರ್ಕಾರ ರಚನೆಗೆ ಸಹಾಯ ಮಾಡಿದ್ದೇವೆ. ನನ್ನನ್ನ ಯಾಕೆ ಕಡೆಗಣಿಸುತ್ತಿದ್ದಾರೆ ಅಂತ ಗೊತ್ತಿಲ್ಲ. ಈಗಲೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ದೇವನಹಳ್ಳಿಯಲ್ಲಿ ಮಾಜಿ ಸಚಿವ ಆರ್.ಶಂಕರ್ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನ ನಿರೀಕ್ಷೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಶಾಸಕ ಶಿವನಗೌಡ ನಾಯಕ
ದೇವದುರ್ಗ ಶಾಸಕ ಶಿವನಗೌಡ ನಾಯಕ ಸಚಿವ ಸ್ಥಾನ ಸಿಗಲಿದೆ ಎಂಬ ನಿರಿಕ್ಷೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಶಾಸಕ ನಾಯಕ್ ಸಂತೋಷ್ ಮೂಲಕ ಹೈಕಮಾಂಡ ಮೇಲೆ ಒತ್ತಡ ಹೇರಿಸಿದ್ದರು. ಆದರೆ ಇದುವರೆಗೆ ಯಾವುದೇ ಕರೆ ಬಂದಿಲ್ಲ.
ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಹುತೇಕ ನಿರಾಸೆ
ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಹುತೇಕ ನಿರಾಸೆಯಾಗಿದೆ. ಡಿಸಿಎಂ ಸ್ಥಾನ ಸೃಷ್ಟಿಯ ಗೊಂದಲವೇ ಬೇಡ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ. ಸದ್ಯಕ್ಕೆ ಡಿಸಿಎಂ ಸ್ಥಾನದ ಹಂಚಿಕೆ ಬೇಡ ಆಮೇಲೆ ನೋಡೋಣ ಅಂತ ಹೈಕಮಾಂಡ್ ತಿಳಿಸಿದೆ ಅಂತ ತಮ್ಮ ಕೆಲ ಆಪ್ತರ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಏರ್‌ಪೋರ್ಟ್‌ನಿಂದ ಬಿಜೆಪಿ ಕಚೇರಿಗೆ ತೆರಳಲಿರುವ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಏರ್‌ಪೋರ್ಟ್‌ನಿಂದ ಬಿಜೆಪಿ ಕಚೇರಿಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತೆರಳುತ್ತಾರೆ. ಬೆಳಗ್ಗೆ 11ರಿಂದ 11.30ರೊಳಗೆ ಅಧಿಕೃತ ಪಟ್ಟಿ ಬಿಡುಗಡೆ ಮಾಡುತ್ತೇವೆ ಅಂತ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜೊತೆಗೆ ಮಧ್ಯಾಹ್ನ 2.15ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತದೆ ಎಂದಿದ್ದಾರೆ.
ರಾಜಭವನದಿಂದ 11 ಗಂಟೆಗೆ ಅಧಿಕೃತ ಪಟ್ಟಿ ಹೊರಬೀಳುತ್ತೆ; ಏರ್‌ಪೋರ್ಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಸಚಿವ ಸಂಪುಟ ರಚನೆ ಜತೆ ವರಿಷ್ಠರ ಜೊತೆ ಚರ್ಚಿಸಿದ್ದೇನೆ. ರಾಜಭವನದಿಂದ 11 ಗಂಟೆಗೆ ಅಧಿಕೃತ ಪಟ್ಟಿ ಹೊರಬೀಳುತ್ತೆ ಅಂತ ಏರ್‌ಪೋರ್ಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಏರ್‌ಪೋರ್ಟ್‌ನಿಂದ ಬೆಂಗಳೂರಿನತ್ತ ಸಿಎಂ ಬೊಮ್ಮಾಯಿ
ದೆಹಲಿಯಿಂದ ಬಸವರಾಜ ಬೊಮ್ಮಾಯಿ ಏರ್‌ಪೋರ್ಟ್ ಬಂದಿದ್ದಾರೆ. ಇದೀಗ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಈ ಬಾರಿ ಯಾವುದೇ ಡಿಸಿಎಂ ಸ್ಥಾನ ಇರುವುದಿಲ್ಲ: ಕಾರಜೋಳ ಮಾಹಿತಿ
ಈ ಬಾರಿ ಯಾವುದೇ ಡಿಸಿಎಂ ಸ್ಥಾನ ಇರುವುದಿಲ್ಲ ಅಂತ ಟಿವಿ9ಗೆ ಮಾಜಿ ಡಿಸಿಎಂ ಕಾರಜೋಳ ಮಾಹಿತಿ ನೀಡಿದ್ದಾರೆ. ಸಚಿವರ ಪಟ್ಟಿಯನ್ನು ಸಿಎಂ ಘೋಷಣೆ ಮಾಡುತ್ತಾರೆ. ನನಗೆ ಸಚಿವ ಸ್ಥಾನ ಸಿಗೋದು ಬಹುತೇಕ ಖಚಿತ ಅಂ ಹೇಳಿದ್ದಾರೆ.
ನಾನಂತೂ ಡಿಸಿಎಂ ಸ್ಥಾನಕ್ಕೆ ಅರ್ಜಿ ಹಾಕಿಲ್ಲ, ಟವಲ್ ಹಾಕಿಲ್ಲ: ಆರ್.ಅಶೋಕ್
ಎಲ್ಲವನ್ನೂ ಮುಖ್ಯಮಂತ್ರಿಯೇ ಬಿಡುಗಡೆ ಮಾಡುತ್ತಾರೆ ಎಂದು ವಿಧಾನಸೌಧದಲ್ಲಿ ಹೇಳಿಕೆ ನೀಡಿದ ಮಾಜಿ ಸಚಿವ ಆರ್.ಅಶೋಕ್, ನಾನಂತೂ ಡಿಸಿಎಂ ಸ್ಥಾನಕ್ಕೆ ಅರ್ಜಿ ಹಾಕಿಲ್ಲ, ಟವಲ್ ಹಾಕಿಲ್ಲ. ಸಿಎಂ ಏನು ಮಾಡ್ತಾರೆ ಅಂತ ಗೊತ್ತಿಲ್ಲ. ನಾನು ಸಿಂಪಲ್ ಆಗಿ ಇರೋನು. ಸಿಎಂ ಈಗ ತಾನೇ ಬಂದಿದ್ದಾರೆ. ಅವರೇ ಪಟ್ಟಿಯನ್ನು ಅನೌನ್ಸ್ ಮಾಡುತ್ತಾರೆ. ನಾವೆಲ್ಲ ಅದಕ್ಕೆ ಕಾಯುತ್ತಿದ್ದೇವೆ. ಕೇಂದ್ರದ ನಾಯಕರು ಏನು ತೀರ್ಮಾನ ಮಾಡಿದಾರೆ ಆ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಅಂತ ಅಭಿಪ್ರಾಯಪಟ್ಟರು.
ವಿಧಾನಸೌಧದಲ್ಲಿ ಸಚಿವರ ಪಟ್ಟಿ ಘೋಷಣೆ ಸಾಧ್ಯತೆ
ದೆಹಲಿಯಿಂದ ಹೊತ್ತು ತಂದಿರುವ ಸಚಿವರ ಪಟ್ಟಿಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸುವ ಸಾಧ್ಯತೆಯಿದೆ.
ತುಮಕೂರು ಜಿಲ್ಲೆಯ ಶಾಸಕರಿಗೆ ಕರೆ ಬಂದಿಲ್ಲ!
ಇಲ್ಲಿಯವರೆಗೆ ತುಮಕೂರು ಜಿಲ್ಲೆಯ ಯಾವ ಶಾಸಕರಿಗೂ ಕರೆ ಬಂದಿಲ್ಲ. ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿಗೂ ಕರೆ ಬಂದಿಲ್ಲ. ಸದ್ಯ ತಮ್ಮ ಗ್ರಾಮ ಜೆ.ಸಿ.ಪುರದಲ್ಲಿ ಮಾಧುಸ್ವಾಮಿ ಇದ್ದಾರೆ. ಇನ್ನು ತಿಪಟೂರು ಶಾಸಕ ಬಿ.ಸಿ.ನಾಗೇಶ್‌ರಿಗೂ ಕರೆ ಬಂದಿಲ್ಲ.
ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗುವ ಆಸೆ ಕೈ ಬಿಟ್ಟಿದ್ದೀನಿ: ನೆಹರು ಓಲೇಕಾರ
ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗುವ ಆಸೆ ಕೈ ಬಿಟ್ಟಿದ್ದೀನಿ ಅಂತ ಟಿವಿ9ಗೆ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ. ನಮ್ಮನ್ನ ಬೊಮ್ಮಾಯಿ ಕಡೆಗಣಿಸಿದ್ದಾರೆ. ನಮ್ಮ ಬಗ್ಗೆ ಬೊಮ್ಮಾಯಿಗೆ ಕೀಳರಿಮೆ ಇದೆ. ಹಾಗಾಗಿ ಸಚಿವನ್ನಾಗಿ ಮಾಡಿಲ್ಲ. ಆದ್ರೆ ಯಾವುದೇ ರಾಜೀನಾಮೆ ನಿರ್ಧಾರ ಮಾಡಲ್ಲ ಅಂತ ಶಾಸಕರ ಭವನದಲ್ಲಿ ನೆಹರು ಓಲೇಕಾರ ತಿಳಿಸಿದ್ದಾರೆ.
ಶಾಸಕಿ ಪೂರ್ಣಿಮಾ ನಿವಾಸಕ್ಕೆ ಕಾರ್ಯಕರ್ತರ ದಂಡು
ಮಹಿಳಾ ಕೋಟಾದಡಿ ಹಿರಿಯೂರು ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ಲಭಿಸುವ ಹಿನ್ನೆಲೆ ಅವರ ನಿವಾಸಕ್ಕೆ ಕಾರ್ಯಕರ್ತರ ದಂಡು ಬರುತ್ತಿದೆ. ಪೂರ್ಣಿಮಾ ಮನೆಯೊಳಗೆ ವಿಶೇಷ ಪೂಜೆಯಲ್ಲಿ ತೊಡಗಿದ್ದು, ಶುಭ ಹಾರೈಸಲು ಕಾರ್ಯಕರ್ತರು ಆಗಮಿಸುತ್ತಿದ್ದಾರೆ.
ಏರ್‌ಪೋರ್ಟ್‌ಗೆ ಅರುಣ್ ಸಿಂಗ್, ಕಟೀಲು ಆಗಮನ
ಕೆಂಪೇಗೌಡ ಏರ್‌ಪೋರ್ಟ್‌ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಿದ್ದಾರೆ.
ವಿಐಪಿ ಲಾಂಜ್ಗೆ ಆಗಮಿಸಿದ ಬೊಮ್ಮಾಯಿ
ಸಿಎಂ ಬೊಮ್ಮಾಯಿ ವಿಐಪಿ ಲಾಂಜ್ಗೆ ಆಗಮಿಸಿದ್ದಾರೆ. ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಮುಖ್ಯಮಂತ್ರಿ ಮಾಹಿತಿ ಪಡೆಯುತ್ತಿದ್ದಾರೆ.
ಆರ್ ಟಿ ನಗರದ ಸ್ವಗೃಹಕ್ಕೆ ಬರಲಿರುವ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಆರ್ ಟಿ ನಗರದ ಸ್ವಗೃಹಕ್ಕೆ ಅವರು ಮೊದಲು ಹೋಗುತ್ತಾರೆ ಅಂತಾ ಮಾಹಿತಿ ಲಭ್ಯವಾಗಿದೆ.
ಸೈನಿಕನಿಗೆ ಮಂತ್ರಿಗಿರಿ ಫಿಕ್ಸ್? ಯೋಗೇಶ್ವರ್ ಬೆಂಬಲಿಗರಲ್ಲಿ ಮೂಡಿದ ಸಂತಸ
ಸಿ.ಪಿ.ಯೋಗೇಶ್ವರ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಯೋಗೇಶ್ವರ್ ದೆಹಲಿಯಲ್ಲಿದ್ದರು. ಯೋಗೇಶ್ವರ್ ಗೆ ಮಂತ್ರಿಗಿರಿ ಸಿಗಲಿದೆ ಎಂಬ ನೀರಿಕ್ಷೆಯಲ್ಲಿ ಬೆಂಬಲಿಗರು ಚನ್ನಪಟ್ಟಣದಿಂದ ಬೆಂಗಳೂರಿನತ್ತ ಹೊರಟಿದ್ದಾರೆ.
ಬಿ.ಸಿ.ಪಾಟೀಲ್ ಪ್ರಮಾಣವಚನ ಸ್ವೀಕರಿಸುವುದು ಫಿಕ್ಸ್! ಬೆಂಗಳೂರಿನತ್ತ ದೌಡಾಯಿಸ್ತಿರುವ ಬೆಂಬಲಿಗರು
ಶಾಸಕ ಬಿ.ಸಿ.ಪಾಟೀಲ್ ಪ್ರಮಾಣವಚನ ಸ್ವೀಕರಿಸೋದು ಬಹುತೇಕ ಫಿಕ್ಸ್ ಆಗಿರುವ ಹಿನ್ನೆಲೆ ಅವರ ಬೆಂಬಲಿಗರು ಬೆಂಗಳೂರಿನತ್ತ ಬರುತ್ತಿದ್ದಾರೆ. ಈಗಾಗಲೇ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಸಚಿವ ಸ್ಥಾನ ಖಚಿತ ಆಗುತ್ತಿದ್ದಂತೆ ಸಂಭ್ರಮದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ನಿವಾಸಕ್ಕೆ ನಟಿ ತಾರಾ ಆಗಮನ
ಆರ್ ಟಿ ನಗರದ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ನಟಿ, ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಆಗಮಿಸಿದ್ದಾರೆ.
ವಿಧಾನಸೌಧಕ್ಕೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ
ಏರ್‌ಪೋರ್ಟ್‌ನಿಂದ ಸಿಎಂ ಬಸವರಾಜ್ ಬೊಮ್ಮಾಯಿ ಸೀದಾ ವಿಧಾನಸೌಧಕ್ಕೆ ತೆರಳಲಿದ್ದಾರೆ. ಆರ್ ಟಿ ನಗರದ ಸ್ವಗೃಹಕ್ಕೆ ಆಗಮಿಸದೇ ನೇರವಾಗಿ ವಿಧಾನಸೌಧದತ್ತ ತೆರಳುತ್ತಾರೆ. ಕೆಲವೇ ಕ್ಷಣಗಳಲ್ಲಿ ವಿಧಾನಸೌಧಕ್ಕೆ ತೆರಳುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿರುವ ವಿಜಯಪುರ ಶಾಸಕರು
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಸಿಎಂ ದೆಹಲಿಯಿಂದ ಹೊತ್ತು ತರುವ ಪಟ್ಟಿಯಲ್ಲಿ ತಮ್ಮ ಹೆಸರಿರಬಹುದು ಅಂತ ಶಾಸಕರು ಕಾಯುತ್ತಿದ್ದಾರೆ.
ಎಸ್.ಟಿ.ಸೋಮಶೇಖರ್‌ಗೂ ಸಚಿವ ಸ್ಥಾನ ಬಹುತೇಕ ಫಿಕ್ಸ್
ಮಾಜಿ ಸಚಿವ ಎಸ್.ಟಿ.ಸೋಮಶೇಖರ್‌ಗೂ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಪ್ರಮಾಣವಚನ ಸ್ವೀಕಾರಕ್ಕೆ ಬರಲು ಸೋಮಶೇಖರ್‌ಗೆ ಕರೆ ಬಂದಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ಮಾಜಿ ಸಚಿವ ಸ್.ಟಿ.ಸೋಮಶೇಖರ್‌ಗೆ ಮುಖ್ಯಮಂತ್ರಿ ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಟಿವಿ9ಗೆ ಸಿಎಂ ಆಪ್ತ ವಲಯದಿಂದ ಮಾಹಿತಿ ಲಭ್ಯವಾಗಿದೆ.
ಕೆಐಎಬಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಇದೀಗ ಕೆಐಎಬಿ ಗೆ ಆಗಮಿಸಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಆಗಮಿಸುತ್ತಿದ್ದಾರೆ. AI 803 ವಿಮಾನದಲ್ಲಿ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ವಿಐಪಿ ಟರ್ಮಿನಲ್ ಮೂಲಕ ಆಗಮಿಸಲಿರುವ ಸಿಎಂ, ನಂತರ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ.
ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬದ್ಧ: ಆನಂದ್ ಮಾಮನಿ ಹೇಳಿಕೆ
ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಟಿವಿ9ಗೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ಹೇಳಿದ್ದಾರೆ. ಎಲ್ಲರ ನಿರ್ಣಯದಿಂದ ನಾನು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಬಂದಿದ್ದೆ. ನನಗೆ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದೇನೆ. ನನಗೆ ಈವರೆಗೂ ದೂರವಾಣಿ ಕರೆ ಬಂದಿಲ್ಲ. ನಾನು ಸಿಎಂ, ಬಿಎಸ್‌ವೈರನ್ನು ಭೇಟಿಯಾಗಿ ಮಾತನಾಡುವೆ. ಬಳಿಕ ನನ್ನ ಬೆಂಬಲಿಗರ ಜತೆ ಮಾತನಾಡಿ ನಿರ್ಧರಿಸುತ್ತೇನೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದು ಆನಂದ್ ಮಾಮನಿ ತಿಳಿಸಿದ್ದಾರೆ.
ಮಾಜಿ ಸಿಎಂ ಬಿಎಸ್‌ವೈ ಭೇಟಿಯಾದ ಬಿ.ವೈ.ವಿಜಯೇಂದ್ರ
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಹಿನ್ನೆಲೆ ಬಿ.ವೈ.ವಿಜಯೇಂದ್ರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ.
ಗುಪ್ತಚರ ಇಲಾಖೆ ಮುಖ್ಯಸ್ಥ ದಯಾನಂದ್ ಏರ್‌ಪೋರ್ಟ್‌ಗೆ ಆಗಮನ
ಗುಪ್ತಚರ ಇಲಾಖೆ ಮುಖ್ಯಸ್ಥ ದಯಾನಂದ್ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಾರೆ. ಸಂಪುಟ ರಚನೆ ಹಿನ್ನೆಲೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಸಿಎಂ ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.
ಬೆಳಗಾವಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಬಾರದ ಸಿಎಂ ಕರೆ
ಬೆಳಗಾವಿ ಜಿಲ್ಲೆಯ ಯಾವ ಶಾಸಕರಿಗೂ ಮುಖ್ಯಮಂತ್ರಿ ಕರೆ ಮಾಡಿಲ್ಲ ಎಂದು ತಿಳಿದುಬಂದಿದೆ. ಸಿಎಂ ಮಾಡುತ್ತಾರೆ ಅಂತ ಜಿಲ್ಲೆಯ ಶಾಸಕರು ನಿರೀಕ್ಷೆಯಲ್ಲಿದ್ದಾರೆ. ಹಿರಿಯ ಶಾಸಕ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಭಯ್ ಪಾಟೀಲ್, ಶ್ರೀಮಂತ್ ಪಾಟೀಲ್, ಪಿ.ರಾಜೀವ್, ಮಹೇಶ್ ಕುಮಟಳ್ಳಿ ಸೇರಿದಂತೆ ಹತ್ತಕ್ಕೂ ಅಧಿಕ ಶಾಸಕರು ಫೋನ್ ಕರೆಗಾಗಿ ಕಾಯುತ್ತಿದ್ದಾರೆ.
ಬಿಎಸ್‌ವೈ ಭೇಟಿಗೆ ಆಗಮಿಸಿದ ಶಾಸಕ ರೇಣುಕಾಚಾರ್ಯ
ಪ್ರಬಲ ಸಚಿವಾಕಾಂಕ್ಷಿಯಾಗಿರುವ ರೇಣುಕಾಚಾರ್ಯಗೆ ಇಲ್ಲಿವರೆಗೆ ಯಾವುದೇ ಕರೆ ಬಂದಿಲ್ಲ ಅಂತ ಹೇಳಲಾಗುತ್ತಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಲು ಶಾಸಕ ರೇಣುಕಾಚಾರ್ಯ ಆಗಮಿಸುತ್ತಿದ್ದಾರೆ.
ಬಿ.ಶ್ರೀರಾಮುಲುಗೆ ಬಹುತೇಕ ಸಚಿವ ಸ್ಥಾನ ಫಿಕ್ಸ್
ಬಿ.ಶ್ರೀರಾಮುಲುಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಫಿಕ್ಸ್ ಆಗಿದೆ. ಶ್ರೀರಾಮುಲುಗೆ ಸಿಎಂ ಬೊಮ್ಮಾಯಿ ಕರೆ ಮಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು, ಸದ್ಯ ಶ್ರೀರಾಮುಲು ಬೆಂಗಳೂರಿನಲ್ಲಿ ಇದ್ದಾರೆ.
ಮಾಜಿ ಸಚಿವ ಎಂಟಿಬಿ ನಾಗರಾಜ್ಗೆ ಒಲಿದ ಸಚಿವ ಸ್ಥಾನ?
ಪ್ರಮಾಣ ವಚನ ಸ್ಬೀಕಾರಕ್ಕೆ ಬರುವಂತೆ ಮಾಜಿ ಸಚಿವ ಎಂಟಿಬಿ ನಾಗರಾಜ್ಗೆ ಕರೆ ಬಂದಿದೆ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕೆಲವೇ ನಿಮಿಷಗಳಲ್ಲಿ ಸಿಎಂ ಬೊಮ್ಮಾಯಿ ಏರ್‌ಪೋರ್ಟ್‌ಗೆ ಆಗಮನ
ಸಚಿವರ ಪಟ್ಟಿ ಹಿಡಿದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವೇ ನಿಮಿಷಗಳಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಸಿಎಂ ರನ್ನ ಕರೆತರಲು ಕಾರು ಏರ್‌ಪೋರ್ಟ್ ತೆರಳಿದೆ. ಕಾರು ನೇರವಾಗಿ ರನ್ ವೇ ನಿಂದ ಸಿಎಂ ರನ್ನ ಕರೆದುಕೊಂಡು ಬರಲಿದೆ.
Published On - Aug 04,2021 8:26 AM