ಸಚಿವ ಸಂಪುಟದಲ್ಲಿ 29 ಸಚಿವರು; 3 ದಲಿತ, 8 ಲಿಂಗಾಯಿತ, 7 ಒಕ್ಕಲಿಗರಿಗೆ ಸ್ಥಾನ, ಡಿಸಿಎಂ ಹುದ್ದೆಯೇ ಇಲ್ಲ

ಸಚಿವ ಸಂಪುಟದಲ್ಲಿ 29 ಸಚಿವರು; 3 ದಲಿತ, 8 ಲಿಂಗಾಯಿತ, 7 ಒಕ್ಕಲಿಗರಿಗೆ ಸ್ಥಾನ, ಡಿಸಿಎಂ ಹುದ್ದೆಯೇ ಇಲ್ಲ
ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ದೆಹಲಿಯಲ್ಲಿ ವರಿಷ್ಠರ ಜತೆ ಮಾತುಕತೆ ನಡೆಸಿದ್ದೇನೆ. ನಿನ್ನೆ ರಾತ್ರಿಯಷ್ಟೇ ಅಂತಿಮ ಚರ್ಚೆ ನಡೆದಿದೆ. ಇಂದು ಬೆಳಗ್ಗೆ ನೂತನ ಸಚಿವರ ಪಟ್ಟಿ ಸಿದ್ಧವಾಗಿದ್ದು, ಅದನ್ನು ರಾಜ್ಯಪಾಲರಿಗೆ ಕಳಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

TV9kannada Web Team

| Edited By: Skanda

Aug 04, 2021 | 2:24 PM

ನೂತನ ಸಚಿವ ಸಂಪುಟ ರಚನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟದಲ್ಲಿ 29 ಸಚಿವರು ಇರುತ್ತಾರೆ. 3 ದಲಿತ, 8 ಲಿಂಗಾಯಿತ, 7 ಒಕ್ಕಲಿಗ, 7 ಒಬಿಸಿ ಸಚಿವರು ಇರುತ್ತಾರೆ. ಡಿಸಿಎಂ ಹುದ್ದೆ ಇಲ್ಲ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಹುದ್ದೆ ಸ್ವೀಕಾರ ಮಾಡುತ್ತಿದ್ದಂತೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕುತೂಹಲ ಉಂಟಾಗಿತ್ತು. ಹಳೇ ಸಚಿವರು ಎಷ್ಟು ಮಂದಿ ಸ್ಥಾನ ಕಳೆದುಕೊಳ್ಳುತ್ತಾರೆ. ಹೊಸದಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬಿತ್ಯಾದಿ ವಿಚಾರಗಳು ಚರ್ಚೆಯಾಗುತ್ತಿದ್ದವು. ಆ ಕುತೂಹಲವೀಗ ಅರ್ಧ ತಣಿದಿದೆ. ಸಂಪುಟದಲ್ಲಿ ಮೂವರು ದಲಿತರಿಗೆ, ಎಂಟು ಮಂದಿ ಲಿಂಗಾಯಿತರು, ಏಳು ಒಕ್ಕಲಿಗರು ಮತ್ತು ಏಳು ಒಬಿಸಿ ಸಮುದಾಯದವರು ಇರುತ್ತಾರೆ ಎಂದು ಹೇಳಲಾಗಿದೆ. ಒಟ್ಟೂ 29 ಮಂದಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.  

ಹಾಗೇ, ಈ ಬಾರಿ ಮಹಿಳಾ ಶಾಸಕಿಯೊಬ್ಬರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ದೆಹಲಿಯಲ್ಲಿ ವರಿಷ್ಠರ ಜತೆ ಮಾತುಕತೆ ನಡೆಸಿದ್ದೇನೆ. ನಿನ್ನೆ ರಾತ್ರಿಯಷ್ಟೇ ಅಂತಿಮ ಚರ್ಚೆ ನಡೆದಿದೆ. ಇಂದು ಬೆಳಗ್ಗೆ ನೂತನ ಸಚಿವರ ಪಟ್ಟಿ ಸಿದ್ಧವಾಗಿದ್ದು, ಅದನ್ನು ರಾಜ್ಯಪಾಲರಿಗೆ ಕಳಿಸಿದ್ದೇನೆ. ಕಳೆದ ಬಾರಿ ಉಪಮುಖ್ಯಮಂತ್ರಿಗಳು ಮೂರು ಜನ ಇದ್ದರು. ಆದರೆ ಈ ಬಾರಿ ಡಿಸಿಎಂ ಇರುವುದಿಲ್ಲ ಎಂದು ಹೈಕಮಾಂಡ್ ಹೇಳಿದೆ. ಪ್ರಸಕ್ತ ಸಂಪುಟದಲ್ಲಿ ಅನುಭವ ಮತ್ತು ಉತ್ಸಾಹ ಉಳ್ಳವರಿಗೆ ಸ್ಥಾನ ನೀಡಲಾಗಿದೆ.  ಪ್ರಧಾನಿ ಮೋದಿ, ಅಮಿತ್​ ಶಾ, ಜೆಪಿ ನಡ್ಡಾ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನೀಡುವ ಹಿನ್ನೆಲೆಯಲ್ಲಿ ಮತ್ತು ಮುಂದಿನ ಚುನಾವಣೆಗಳನ್ನು ಎದುರಿಸುವ ದೃಷ್ಟಿಯನ್ನಿಟ್ಟುಕೊಂಡು ಸಚಿವ ಸಂಪುಟ ರಚನೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾಗೇ, ಪ್ರಮಾಣವಚನದ ಬಳಿಕ ಕ್ಯಾಬಿನೆಟ್​ ಸಭೆ ನಡೆಸುತ್ತೇವೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಪುಟದಲ್ಲಿ ಬಿ.ವೈ ವಿಜಯೇಂದ್ರಗೆ ಅವಕಾಶ ಇಲ್ಲ; ಬಸವರಾಜ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada