ಅಮೇಜಾನ್ ಡಿಲಿವರಿ ಬಾಯ್‌ನಿಂದ ವಂಚನೆ ಆರೋಪ ಪ್ರಕರಣ: ಇಬ್ಬರ ವಿರುದ್ಧ ಎಫ್ಐಆರ್

ಆರೋಪಿಗಳು ಫೇಕ್‌ ಐಡಿ ಬಳಸಿ ಪ್ರಾಡಕ್ಟ್ ಬುಕ್ ಮಾಡಿ ನಂತರ ಪ್ಯಾಕೇ‌ಜ್‌ನಿಂದ ಉತ್ಪನ್ನಗಳನ್ನ ಹೊರತೆಗೆದು ಕಲ್ಲು ತುಂಬಿ ಗ್ರಾಹಕರು ತಿರಸ್ಕರಿಸಿದ್ದಾರೆ ಎಂದು ವಾಪಸ್ ನೀಡುತ್ತಿದ್ದರು. 3 ಲ್ಯಾಪ್‌ಟಾಪ್, 2 ಇಯರ್ ಬಡ್ಸ್, 1 ಮೊಬೈಲ್, 3 ವಾಚ್, 1 ಕ್ಯಾಮೆರಾ ಸೇರಿದಂತೆ ಸುಮಾರು 3 ಲಕ್ಷ ಬೆಲೆ ಬಾಳುವ ಉತ್ಪನ್ನಗಳನ್ನು ಈ ರೀತಿ ವಂಚಿಸಿದ್ದಾರೆ.

ಅಮೇಜಾನ್ ಡಿಲಿವರಿ ಬಾಯ್‌ನಿಂದ ವಂಚನೆ ಆರೋಪ ಪ್ರಕರಣ: ಇಬ್ಬರ ವಿರುದ್ಧ ಎಫ್ಐಆರ್
ಮಾದನಾಯಕನಹಳ್ಳಿ ಪೊಲೀಸ್ ಠಾಣೆ
Follow us
TV9 Web
| Updated By: ಆಯೇಷಾ ಬಾನು

Updated on: Aug 04, 2021 | 10:05 AM

ಬೆಂಗಳೂರು: ಅಮೇಜಾನ್ ಡಿಲಿವರಿ ಬಾಯ್‌ನಿಂದ ಕಂಪನಿಗೆ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನೌಕರರಾದ ನಿತೀಶ್, ಕಿರಣ್ ಮೇಲೆ ದೂರು ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕು ಮಾಕಳಿ ಗ್ರಾಮದಲ್ಲಿನ ಸಿಎಸ್ಎಮ್ ಎಂಟರ್‌ಪ್ರೈಸಸ್‌ಗೆ ವಂಚನೆ ಆರೋಪ ಮಾಲಿಕ ಚಂದ್ರಕಾಂತ್‌ ಸಿಂಗ್‌ರಿಂದ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ.

ಆರೋಪಿಗಳು ಫೇಕ್‌ ಐಡಿ ಬಳಸಿ ಪ್ರಾಡಕ್ಟ್ ಬುಕ್ ಮಾಡಿ ನಂತರ ಪ್ಯಾಕೇ‌ಜ್‌ನಿಂದ ಉತ್ಪನ್ನಗಳನ್ನ ಹೊರತೆಗೆದು ಕಲ್ಲು ತುಂಬಿ ಗ್ರಾಹಕರು ತಿರಸ್ಕರಿಸಿದ್ದಾರೆ ಎಂದು ವಾಪಸ್ ನೀಡುತ್ತಿದ್ದರು. 3 ಲ್ಯಾಪ್‌ಟಾಪ್, 2 ಇಯರ್ ಬಡ್ಸ್, 1 ಮೊಬೈಲ್, 3 ವಾಚ್, 1 ಕ್ಯಾಮೆರಾ ಸೇರಿದಂತೆ ಸುಮಾರು 3 ಲಕ್ಷ ಬೆಲೆ ಬಾಳುವ ಉತ್ಪನ್ನಗಳನ್ನು ಈ ರೀತಿ ವಂಚಿಸಿದ್ದಾರೆ. ಗ್ರಾಹಕರ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

amezon

ಅಮೇಜಾನ್

ಎಫ್ಐಆರ್​ನಲ್ಲೇನಿದೆ? ಬೆಂಗಳೂರು ಸಿಟಿ ಕೆ ಆರ್ ಪುರಂ ವಾಸಿ ಚಂದ್ರಕಾಂತ್ ಸಿಂಗ್ ಬಿನ್ ಲೇಟ್ ಬಾಲಾಜಿ ಸಿಂಗ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ನಾನು CSM ಎಂಟ್ ಪ್ರೈಸಸ್ ಸಂಸ್ಥೆಯನ್ನು ಮಹದೇವ ರವರ ಜೊತೆ ಸ್ಥಾಪಿಸಿದ್ದು ಮಾಕಳಿಯಲಿ ಸಂಸ್ಥೆಯ ಒಂದು ಭಾಗವನ್ನು 2021 ನೇ ಸಾಲಿನ ಮಾರ್ಚ್ 1ರಂದು ಅಮೇಜಾನ್ ಸರ್ವಿಸ್ ಪಾಟ್ನರ್ ಆಗಿ ತೆರೆದಿರುತ್ತೇನೆ ಸವರಿ ಸಂಸ್ಥೆಯ ಕಾರ್ಯವೈಕರಿಗಾಗಿ ಶ್ರೀ ನೀತಿಶ್ ಕುಮಾರ್ ಬಿನ್ ಶ್ರೀನಿವಾಸ್ ಹಾಗು ಕಿರಣ್ ಬಿನ್ ಲೇಟ್ ರವೀಂದ್ರ ರವರನ್ನು ಡೆಲಿವರಿ ಉದ್ಯೋಗಕ್ಕೆ 01/03/2021 ಕೆ ಸಂಸ್ಥೆಯ ನಿಯಮಾವಳಿ ಪ್ರಕಾರ ನೇಮಕ ಮಾಡಿಕೊಂಡಿರುತ್ತೇವೆ.

ನಿತೀಶ್ ಇತರರ ಸಹಕಾರದೊಂದಿಗೆ ಸಂಸ್ಥೆಗೆ ಸಂಬಂಧಿಸಿದ ವಸ್ತುಗಳನ್ನು ಆತನು ಕೆಲವು ಫೇಕ್ ಐಡಿಗಳ ಮುಖಾಂತರ ಆನ್ ಲೈನ್ ಪ್ಯಾಕೆಜ್ ಗಳನ್ನು ಬುಕ್ ಮಾಡಿ ಅದನ್ನು ತಾನೇ ಹೋಗುವ ಡೆಲಿವರಿ ರೂಟ್ ಗೆ ತೆಗೆದುಕೊಂಡು ಹೋಗಿ ಸಂಬಂಧಪಟ್ಟ ವಸ್ತುಗಳನ್ನು ಕಂಪನಿಗೆ ದ್ರೋಹ ಮಾಡುವ ಉದ್ದೇಶದಿಂದ ಅದರಲ್ಲಿದ್ದ ವಸ್ತುಗಳನ್ನು ತೆಗೆದು ಅದರ ಒಳಗೆ ಬೇರೆ ಇತರೆ ವಸ್ತುಗಳನ್ನು ತುಂಬಿಸಿ ಪ್ಯಾಕ್ ಮಾಡಿ ಗ್ರಾಹಕರು ಫ್ಯಾಕೆಜಗಳನ್ನು ಬೇಡವೆಂದರು ಎಂದು ನಮಗೆ ವಿಷಯವನ್ನು ತಿಳಿಸಿ ಆತನೆ ಇತರೆ ತುಂಬಿರುವ ಫ್ಯಾಕೆಜಗಳನ್ನು ಕಂಪನಿಗೆ ಹಿಂದಿರುಗಿಸುವ ಬಗ್ಗೆ ನಮೂದಿಸಿದ ನಮ್ಮ CSM ಕಂಪನಿಗೆ ಆತನೆ ಸದರಿ ಮೊಸ ಮಾಡಿದ್ದ ವಸ್ತುಗಳನ್ನು ತುಂಬಿರುವ ಫ್ಯಾಕೆಜಗಳನ್ನು ಪುನಃ ವಾಪಸ್ ಮಾಡಿದ ಗ್ರಾಹಕರು ವಸ್ತುಗಳನ್ನು ಹಿಂದಿರುಗಿಸುತ್ತಾರೆ ಎಂಬುದಾಗಿ ನಾವೂ ತಿಳಿದು ಅಮೇಜಾನ್ ಕಂಪನಿಗೆ ವಾಪಸ್ ನೀಡಿರುತ್ತೇವೆ ನಂತರ ಅಮೇಜಾನ್ ಕಂಪನಿಯವರು ಸದರಿ ವಸ್ತುಗಳ ಬದಲು ಬೇರೆ ವಸ್ತು ಬಂದಿದೆ ಎಂದು ಹೇಳಿದ್ದು ಇದನ್ನು ನಾವೂ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ನೌಕರರ ಬಳಿ ಪರಿಶೀಲನೆ ಮಾಡಿದ್ದು,

ಈ ಸಮಯದಲ್ಲಿ, ನೌಕರರಾದ ನಿತೀಶ್ ಹಾಗು ಕಿರಣ್ ಮತ್ತು ಇತರೆ ನೌಕರರ ಸಹಾಯದೊಂದಿಗೆ ನಮ್ಮ ಕಂಪನಿಗೆ ನಂಬಿಕೆ ದ್ರೋಹ ಹಾಗು ಮೊಸ ಮಾಡುವ ಉದ್ದೇಶದಿಂದ ದಿನಾಂಕ: 06/07/2021 ರಿಂದ 28/07/2021 ರವರೆಗೆ ನಿತೀಶ್ ತನ್ನ ಮೊಬೈಲ್ ನಲ್ಲಿ ಆತ ಕೆಲವು ಐಡಿಗಳನ್ನು ಉಪಯೋಗ ಮಾಡಿ ಡೆಲಿವರಿ ಫ್ಯಾಕೆಜಗಳನ್ನು ದುರುಪಯೋಗ ಮಾಡಿ ಮೊಸ ಮಾಡಿ 3 ರಿಂದ 4 ಲಕ್ಷ ರೂಪಾಯಿ ಮೌಲ್ಯದ 3 ಲಾಪಟಾಪ್, 3 ವಾಚ್, 1 ಸಿಪಿಯು, 1 ಮೊಬೈಲ್, 1 CAMRA, 2 EAR BUDS ಹಾಗು ಇತರೆ ವಸ್ತುಗಳನ್ನು ಮೊಸ ಮಾಡಿರುತ್ತಾನೆ. ಆದ್ದರಿಂದ ತಾವೂಗಳು ಇದರ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ.369/2021 ಕಲಂ 406, 408, 417, 418, 420 ಜೊ 34 ಐಪಿಸಿ ರೀತ ಪ್ರಕರಣ ದಾಖಲಿಸಿರುತ್ತೆ.

ಇದನ್ನೂ ಓದಿ: ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​