AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಸರ್ಕಾರದ ಸೂಪರ್ ಸಿಎಂ​ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಇಲ್ಲ

ನೂತನ ಸಚಿವ ಸಂಪುಟದಲ್ಲಿ ಬಿ.ವೈ.ವಿಜಯೇಂದ್ರ ಅವರ ಹೆಸರು ಇಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಈ ತನಕ ಯಾವುದೇ ಮಾಹಿತಿ ಇಲ್ಲ

ಯಡಿಯೂರಪ್ಪ ಸರ್ಕಾರದ ಸೂಪರ್ ಸಿಎಂ​ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಇಲ್ಲ
ವಿಜಯೇಂದ್ರ
TV9 Web
| Updated By: Skanda|

Updated on:Aug 04, 2021 | 12:18 PM

Share

ನೂತನ ಸಚಿವ ಸಂಪುಟದಲ್ಲಿ ಬಿ.ವೈ.ವಿಜಯೇಂದ್ರ ಅವರ ಹೆಸರು ಇಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಈ ತನಕ ಯಾವುದೇ ಮಾಹಿತಿ ಇಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಮೂಲಕ ಯಡಿಯೂರಪ್ಪ ಸರ್ಕಾರದಲ್ಲಿ ಸೂಪರ್​ ಸಿಎಂ ಎಂದೇ ಕರೆಸಿಕೊಂಡಿದ್ದ ಅವರ ಪುತ್ರ ಬಿ.ವೈ ವಿಜಯೇಂದ್ರ ನೂತನ ಸರ್ಕಾರದಲ್ಲಿ ದೂರ ಉಳಿಯಲಿದ್ದಾರೆ. ರಾಜ್ಯ ರಾಜಕಾರಣದ ಮಟ್ಟಿಗೆ ಇದು ಅಚ್ಚರಿಯ ನಿರ್ಧಾರದಂತೆ ಕಂಡರೂ ಹೈಕಮಾಂಡ್​ ತನ್ನ ಚಾಣಾಕ್ಷ ನಡೆಯನ್ನು ಇಲ್ಲಿ ತೋರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ತಪ್ಪಲು ಕಾರಣಗಳೇನು ಎನ್ನುವುದಕ್ಕೆ  ಪಕ್ಷದ ಮೂಲಗಳಿಂದಲೇ ಒಂದಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿದ್ದು ಅವುಗಳ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ.

ಯಡಿಯೂರಪ್ಪ ಅವರ ಪದತ್ಯಾಗದ ನಂತರ ವಿಜಯೇಂದ್ರ ಅವರಿಗೆ ಚಚಿವ ಸ್ಥಾನ ಸಿಗುವುದು ಪಕ್ಕಾ ಎಂದೇ ಹೇಳಲಾಗುತ್ತಿತ್ತು. ಆದರೆ, ಈಗ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೇ ನೀಡಿರುವುದರಿಂದ ಅದೂ ಕೂಡಾ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೈ ತಪ್ಪುವುದಕ್ಕೆ ಕಾರಣ ಎನ್ನಲಾಗಿದೆ ಬಿಜೆಪಿಯ ಮತ ಇರುವ ಕಡೆ ಅಂದರೆ ಮಧ್ಯ ಮತ್ತು ಉತ್ತರ ಬಾಂಬೆ ಕರ್ನಾಟಕದ ಪ್ರತಿನಿಧಿಯಾಗಿ ಬಸವರಾಜ ಬೊಮ್ಮಾಯಿ ಗುರುತಿಸಿಕೊಂಡಿದ್ದು, ಅವರ ಬಲ ಇರುವಾಗ ಇನ್ನೊಬ್ಬರನ್ನು ಕರೆ ತರುವುದು ಬೇಡ ಎನ್ನುವ ಲೆಕ್ಕಾಚಾರವೂ ಇರಬಹುದು ಎನ್ನಲಾಗಿದೆ.

ಅಲ್ಲದೇ, ವಿಜಯೇಂದ್ರ ಇನ್ನೂ ಲಿಂಗಾಯತ ನಾಯಕ ಆಗಿ ಹೊರಹೊಮ್ಮಿಲ್ಲ ಎನ್ನುವುದು ಅತ್ಯಂತ ಗಮನಾರ್ಹ ವಿಚಾರ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಮಗ ಎಂಬ ಕಾರಣಕ್ಕೆ ಬಲ ಜಾಸ್ತಿ ಇತ್ತು ಎನ್ನಲಾಗುತ್ತಿದೆ. ಹೀಗಾಗಿ ಈಗಲೇ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟರೆ ಸ್ಥಾನ ಕೊಟ್ಟರೆ ಯಡಿಯೂರಪ್ಪ ಬ್ಲಾಕ್​ಮೇಲ್​ ಮಾಡಿರಬಹುದು ಎಂಬ ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಹೈಕಮಾಂಡ್​ ಚತುರ ನಡೆಯನ್ನಿಟ್ಟಿದೆ.

ಇನ್ನೊಂದು ಕೋನದಲ್ಲಿ ನೋಡಿದರೆ, ಹೈಕಮಾಂಡ್​ ಬಲವಾಗಿದೆ ಎಂದು ತೋರಿಸಿಕೊಳ್ಳುವ ಅವಶ್ಯಕತೆ ಇತ್ತಾದ್ದರಿಂದ. ವಿಜಯೇಂದ್ರ ಅವರನ್ನು ಮುಂದೆ ಆರು ತಿಂಗಳು ಕೆಲಸ ಮಾಡಿಸಿ ಆಮೇಲೆ ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ. ಇವೆಲ್ಲದರ ಜತೆಗೆ ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಕೊಡುವ ಬಗ್ಗೆ ಆರ್​ಎಸ್​ಎಸ್​ ಕಡೆಯಿಂದಲೂ ತೀವ್ರ ವಿರೋಧ ಇತ್ತಾದ್ದರಿಂದ ಇಲ್ಲಿ ಅದೂ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಡಿಯೂರಪ್ಪಗೆ ಬೇವು – ಬೆಲ್ಲ! ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಗೆ ಬೇಕಾದ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯಾಗಿಸಿದ ಬಿಎಸ್​ವೈಗೆ ನೂತನ ಸಚಿವ ಸಂಪುಟ ಸಿಹಿ, ಕಹಿ ಎರಡನ್ನೂ ನೀಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ, ಯಡಿಯೂರಪ್ಪ ವಿರೋಧಿಗಳೆಂದೇ ಗುರುತಿಸಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್, ಬೆಲ್ಲದ್, ಯೋಗೀಶ್ವರ್ ಎಲ್ಲರೂ ಸಚಿವ ಸ್ಥಾನದಿಂದ ವಂಚಿತರಾಗಿರುವುದು ನಿರ್ಗಮಿತ ಸಿಎಂ ಬಿಎಸ್​ವೈ ಪಾಲಿಗೆ ಸಮಾಧಾನಕರ ಸಂಗತಿ. ಆದರೆ, ಇನ್ನೊಂದೆಡೆ ಹಿಂದಿನ ಸರ್ಕಾರದಲ್ಲಿ ಸೂಪರ್​ ಸಿಎಂ ಎಂದೇ ಕರೆಸಿಕೊಂಡಿದ್ದ ತನ್ನ ಮಗನನ್ನು ಸಂಪುಟಕ್ಕೆ ಸೇರಿಸಲಾಗದೇ ಇರುವುದು ಕಹಿಯ ವಿಚಾರವಾಗಿದೆ.

ಇದನ್ನೂ ಓದಿ: Karnataka Cabinet Formation LIVE: ಬಿ.ವೈ.ವಿಜಯೇಂದ್ರಗಿಲ್ಲ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ ಸ್ಪಷ್ಟತೆ 

ಸಚಿವ ಸಂಪುಟದಲ್ಲಿ 29 ಸಚಿವರು; 3 ದಲಿತ, 8 ಲಿಂಗಾಯಿತ, 7 ಒಕ್ಕಲಿಗರಿಗೆ ಸ್ಥಾನ, ಡಿಸಿಎಂ ಹುದ್ದೆಯೇ ಇಲ್ಲ

(BY Vijayendra name is not there in New Cabinet list says CM Basavaraj Bommai)

Published On - 11:34 am, Wed, 4 August 21