ಮೈಸೂರು: ಬೈಕ್ ಕದ್ದು ಪೊಲೀಸರಿಗೆ ಹಿಂತಿರುಗಿಸುತ್ತಿದ್ದ ಕಳ್ಳರು; ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

 ಆರೋಪಿಗಳಿಂದ 5.32 ಲಕ್ಷ ರೂಪಾಯಿ ಮೌಲ್ಯದ 9 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಆಲನಹಳ್ಳಿ, ವಿಜಯನಗರ, ಕುವೆಂಪುನಗರ, ಮೇಟಗಳ್ಳಿ ಸೇರಿದಂತೆ ಒಟ್ಟು 9 ಪ್ರಕರಣಗಳನ್ನು ಭೇದಿಸಿದಂತಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.

ಮೈಸೂರು: ಬೈಕ್ ಕದ್ದು ಪೊಲೀಸರಿಗೆ ಹಿಂತಿರುಗಿಸುತ್ತಿದ್ದ ಕಳ್ಳರು; ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ
ಸಾಂಕೇತಿಕ ಚಿತ್ರ

ಮೈಸೂರು: ಬೈಕ್ ಕದಿಯುವುದು, ಅದನ್ನು ಪುನಃ ಮಾರಾಟ ಮಾಡಿ ಹಣ ಪಡೆಯುವುದರ ಬಗ್ಗೆ ನಾವು ಈಗಾಗಲೇ ಓದಿದ್ದೇವೆ. ಆದರೆ ಮೈಸೂರು ಜಿಲ್ಲೆಯ ಹುಡುಗರ ತಂಡವೊಂದು ವಿಚಿತ್ರವಾದ ಅಭ್ಯಾಸಕ್ಕಾಗಿ ಬೈಕ್ ಕಳವು (bike theft) ಮಾಡುತ್ತಿದ್ದಾರೆ. ಕದ್ದ ಬೈಕ್​ಗಳನ್ನು ಮಾರಾಟ ಮಾಡುತ್ತಿರಲಿಲ್ಲ ಬದಲಿಗೆ ಒಂದಷ್ಟು ದಿನ ಓಡಿಸಿ ಪೊಲೀಸರಿಗೇ ಅದನ್ನು ಕೊಟ್ಟು ಬರುತ್ತಿದ್ದರು. ಹೀಗೆ ಸುತ್ತಾಟಕ್ಕಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ತಂಡವೊಂದನ್ನು ಸದ್ಯ ಮೈಸೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರುಕಟ್ಟೆಯಲ್ಲಿ ಹಲವು ತರನಾದ ಬೈಕ್​ಗಳಿವೆ. ಆದರೆ ಪಡ್ಡೆ ಹುಡುಗರು ಇಷ್ಟ ಪಡುವುದು ಕೆಟಿಎಂ, ಆರ್​ಎಕ್ಸ್​ 100, ಪಲ್ಸರ್ ಇಂತಹ ಬೈಕ್​ಗಳನ್ನು ಮಾತ್ರ. ಮೈಸೂರಿನ ವಿ.ವಿ.ಪುರಂ ಠಾಣೆಯಲ್ಲಿ ಸದ್ಯ ಇಂತಹ ಬೈಕ್​ಗಳೇ ಸಾಲುಗಟ್ಟಿ ನಿಂತಿವೆ. ಇದಕ್ಕೆ ಕಾರಣ ಕದ್ದ ಬೈಕ್​ಗಳನ್ನು ಪೊಲೀಸ್ ಠಾಣೆಗೆ ಹಿಂತಿರುಗಿಸಿರುವುದೇ ಆಗಿದೆ.

ಹುಡುಗರು ಬೈಕ್ ಕದಿಯುತ್ತಿದಿದ್ದು, ಮಾರಾಟ ಮಾಡುವುದಕ್ಕೆ ಅಲ್ಲ. ಬದಲಿಗೆ ಶೋಕಿ ಮಾಡುವುದಕ್ಕೆ. ಸದ್ಯ ಇಂತಹದ್ದೊಂದು ವಿಚಿತ್ರ ಮನಸ್ಸಿನ ಹುಡುಗರನ್ನು ಮೈಸೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಮೂಲದ ಮನು, ಕೊಡಗು ಜಿಲ್ಲೆ ವೀರಾಜಪೇಟೆ ಮೂಲದ ಶಮಂತ್, ಕೆ.ಜೆ.ಗಿರೀಶ್ ಬಂಧಿತ ಆರೋಪಿಗಳು.

ಮೈಸೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ ಆರೋಪಿಗಳು. ಆರ್​ಎಕ್ಸ್​ 100 ಬೈಕ್ ಬೇಕು ಎಂದು ಕೆ.ಆರ್.ನಗರದವರೆಗೂ ಹೋಗಿ ಕದ್ದುಕೊಂಡು ಬಂದಿದ್ದಾರೆ. ಅಷ್ಟಕ್ಕು ಈ ಬೈಕ್ ಕದ್ದಿದ್ದು ಹುಡುಗಿಯರನ್ನು ವೊಲಿಸಿಕೊಳ್ಳಲು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.

ಕದ್ದ ಬೈಕ್​ಗಳಲ್ಲಿ ಪ್ರಯಾಣಿಸುವಾಗ ಪೊಲೀಸರ ಕೈಗೆ ಸಿಲುಕಿದ್ದು, ಮನೆಯಿಂದ ಡಾಕ್ಯುಮೆಂಟ್ ತರುತ್ತೇವೆ ಎಂದು ಹೇಳಿ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗುತ್ತಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ಬೇರೆ ಯಾರದ್ದೋ ಹೆಸರಿನಲ್ಲಿ ಡಾಕ್ಯುಮೆಂಟ್ ಇರುತ್ತಿತ್ತು ಅಥವಾ ನಂಬರ್ ಪ್ಲೇಟ್ ಬದಲಾಗಿರುತ್ತಿತ್ತು.

ಆರೋಪಿಗಳಿಂದ 5.32 ಲಕ್ಷ ರೂಪಾಯಿ ಮೌಲ್ಯದ 9 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಆಲನಹಳ್ಳಿ, ವಿಜಯನಗರ, ಕುವೆಂಪುನಗರ, ಮೇಟಗಳ್ಳಿ ಸೇರಿದಂತೆ ಒಟ್ಟು 9 ಪ್ರಕರಣಗಳನ್ನು ಭೇದಿಸಿದಂತಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.

ಹಣಕ್ಕಾಗಿ ಕಳ್ಳತನ ಮಾಡುತ್ತಿದ್ದ ಪ್ರಕರಣಗಳ ನಡುವೆ ಹುಡುಗಿಯರ ಮನವೊಲಿಸಲು ಕಳ್ಳತನ ಮಾಡುತ್ತಿದ್ದೇವೆ ಎಂಬ ಆರೋಪಿಗಳ ಹೇಳಿಕೆ ಸದ್ಯ ಎಲ್ಲರನ್ನು ದಂಗಾಗಿಸಿದೆ. ಅದೇನೆ‌ ಇರಲಿ ಮನೆಯ ಮಕ್ಕಳು ಏನು‌ ಮಾಡುತ್ತಿದ್ದಾರೆ ಎಂದು ಪೋಷಕರು ಗಮನಹರಿಸದಿದ್ದರೆ ಈ ರೀತಿ ಅಡ್ಡ ದಾರಿ ಹಿಡಿಯುವುದು ಸರ್ವೇ ಸಾಮಾನ್ಯವಾಗುತ್ತದೆ. ಹೀಗಾಗಿ ಮಕ್ಕಳ ಮೇಲೆ ಸದಾ ಎಚ್ಚರ ಇರಲಿ ಎಂಬುವುದು ನಮ್ಮ ಆಶಯ.

ವರದಿ: ದಿಲೀಪ್ ಚೌಡಹಳ್ಳಿ‌

ಇದನ್ನೂ ಓದಿ:

Bengaluru Crime: ಸರಗಳ್ಳತನ, ಬೈಕ್ ಕಳ್ಳತನ, ಡ್ರಗ್ಸ್ ದಂಧೆ; ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ; 10 ಲಕ್ಷ ರೂ. ಬೆಲೆಬಾಳುವ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

 

Click on your DTH Provider to Add TV9 Kannada