ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಲವ್ಲಿನಾ, ಪಿ.ವಿ.ಸಿಂಧು, ಮೀರಾಬಾಯಿ ಚಾನುರಿಗೆ ಅಮುಲ್​ ಅಭಿನಂದನೆ..

ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಲವ್ಲಿನಾ, ಪಿ.ವಿ.ಸಿಂಧು, ಮೀರಾಬಾಯಿ ಚಾನುರಿಗೆ ಅಮುಲ್​ ಅಭಿನಂದನೆ..
ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಲವ್ಲಿನಾ ಬಾರ್ಗೋಹೈನ್, ಪಿ.ವಿ.ಸಿಂಧು ​ ಮತ್ತು ಮೀರಾಬಾಯಿ ಚಾನು

Tokyo Olympics 2020: ಈ ಬಾರಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್​ಗಳು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಮೀರಾಬಾಯಿ ಚಾನು ಅವರಿಂದ ಶುರುವಾದ ಪದಕ ಬೇಟೆ ಮುಂದುವರಿದಿದೆ. ಅದರಲ್ಲೂ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಲ್ಲಿ ಮಹಿಳೆಯರೇ ಒಂದು ಕೈ ಮುಂದಿದ್ದಾರೆ.

TV9kannada Web Team

| Edited By: Lakshmi Hegde

Aug 05, 2021 | 6:43 PM

ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Tokyo Olympics)​ನಲ್ಲಿ ಭಾರತದ ಯುವ ಬಾಕ್ಸರ್​​ ಲವ್ಲಿನಾ ಬಾರ್ಗೋಹೈನ್(Lovlina Borgohain)​ ಕಂಚಿನ ಪದಕ (Bronze) ಗೆದ್ದಿದ್ದಾರೆ. ಸೆಮಿಫೈನಲ್​ನಲ್ಲಿ ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಸೋತಿದ್ದರಿಂದ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಅದ್ಭುತ ಫೈಟ್​ಕೊಟ್ಟ ಲವ್ಲಿನಾರನ್ನು ಇಡೀ ದೇಶ ಹೊಗಳುತ್ತಿದೆ. ಈಗ ಭಾರತದ ಡೇರಿ ಉತ್ಪನ್ನಗಳ ಪ್ರಮುಖ ಕಂಪನಿಯಾದ ಅಮುಲ್ (Amul) ಕೂಡ ಕಾರ್ಟೂನ್​ ಮೂಲಕ ಲವ್ಲಿನಾರಿಗೆ ವಿಶೇಷ ಗೌರವ, ಅಭಿನಂದನೆ ಸಲ್ಲಿಸಿದೆ. ಕೈಯಲ್ಲಿ ಬೊಕ್ಕೆ ಹಿಡಿದು, ತನ್ನ ಪದಕವನ್ನು ಎತ್ತಿ ತೋರಿಸುತ್ತಿರುವ ಲವ್ಲಿನಾ ಬಾರ್ಗೋಹೈನ್ ಅವರಿಗೆ ಅಮುಲ್ ಬೇಬಿ ಶುಭಾಶಯ ಹೇಳುತ್ತಿರುವಂಥ ಕಾರ್ಟೂನ್​ ತುಂಬ ಮುದ್ದಾಗಿದೆ.

ಅಮುಲ್​ ಕೇವಲ ಲವ್ಲಿನಾರಿಗೆ ಅಷ್ಟೇ ಅಲ್ಲದೆ, ಒಲಿಂಪಿಕ್ಸ್​ನಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರಿಗೂ ತನ್ನದೇ ರೀತಿಯಲ್ಲಿ ಅಭಿನಂದನೆ ಸಲ್ಲಿಸುತ್ತಿದೆ. ಹಾಗೇ ಈಗಾಗಲೇ ಕಂಚು ಗೆದ್ದಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು, ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಅವರಿಗೂ ಕಾರ್ಟೂನ್​ ಮೂಲಕ ಅಮುಲ್ ಶುಭಾಶಯ ಕೋರಿದೆ. ಅಷ್ಟೇ ಅಲ್ಲ, 41 ವರ್ಷದ ಬಳಿಕ ಕಂಚಿನ ಪದಕ ಗೆದ್ದು, ಐತಿಹಾಸಿಕ ಸಾಧನೆ ಮಾಡಿದ ಪುರುಷರ ಹಾಕಿ ತಂಡಕ್ಕೂ ಅಭಿನಂದನೆ ಸಲ್ಲಿದೆ. ಇದೀಗ ಬೆಳ್ಳಿ ಗೆದ್ದಿರುವ ಕುಸ್ತಿಪಟು ರವಿಕುಮಾರ್ ದಹಿಯಾ ಅವರಿಗೂ ಶುಭಕೋರಿದೆ.

ಈ ಬಾರಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್​ಗಳು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಮೀರಾಬಾಯಿ ಚಾನು ಅವರಿಂದ ಶುರುವಾದ ಪದಕ ಬೇಟೆ ಮುಂದುವರಿದಿದೆ. ಅದರಲ್ಲೂ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಲ್ಲಿ ಮಹಿಳೆಯರೇ ಒಂದು ಕೈ ಮುಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: Tokyo Olympics: ಕೊನೆಯ 10 ಸೆಕೆಂಡುಗಳಲ್ಲಿ ಪಂದ್ಯ ಕೈಚೆಲ್ಲಿದ ಕುಸ್ತಿಪಟು ದೀಪಕ್ ಪೂನಿಯಾ; ಕಂಚಿನ ಪದಕದ ಪಂದ್ಯದಲ್ಲಿ ಸೋಲು

Amul celebrates women power at Tokyo Olympics with beautiful cartoons

Follow us on

Most Read Stories

Click on your DTH Provider to Add TV9 Kannada