‘ಡಾ. ರಾಜ್​ಕುಮಾರ್​ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ

‘ಮನೆತನ’ ಸೀರಿಯಲ್​ನಲ್ಲಿ ಶ್ರೀದೇವಿ ನಟಿಸುತ್ತಿದ್ದರು. ಆ ಧಾರಾವಾಹಿಯನ್ನು ಡಾ. ರಾಜ್​ಕುಮಾರ್​ ಕೂಡ ನೋಡುತ್ತಿದ್ದರು. ಓಮ್ಮೆ ಭೇಟಿಯಾದ ಸಂದರ್ಭದಲ್ಲಿ ‘ಮನೆತನ’ ಧಾರಾವಾಹಿ ಬಗ್ಗೆ ಅಣ್ಣಾವ್ರು ಮಾತನಾಡಿದ್ದರು ಎಂದು ಶ್ರೀದೇವಿ ಹೇಳಿದ್ದಾರೆ.

TV9kannada Web Team

| Edited By: Madan Kumar

Aug 31, 2021 | 1:03 PM

ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಶ್ರೀದೇವಿ ಅವರು ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಧಾರಾವಾಹಿಗಳ ಮೂಲಕವೂ ಅವರು ಫೇಮಸ್​ ಆಗಿದ್ದರು.​ ಈಗ ಟಿವಿ9​ ಜೊತೆ ಮಾತನಾಡಿರುವ ಅವರು ಕೆಲವು ಅಪರೂಪದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದಿಂದ ನಿರ್ಮಾಣವಾದ ಹಲವು ಸಿನಿಮಾಗಳಿಗೆ ಶ್ರೀದೇವಿ ಡಬ್ಬಿಂಗ್​ ಮಾಡಿದ್ದರು. ರಾಘವೇಂದ್ರ ರಾಜ್​ಕುಮಾರ್​ ನಟನೆಯ ‘ಅನುಕೂಲಕ್ಕೊಬ್ಬ ಗಂಡ’ ಸಿನಿಮಾದಲ್ಲಿ ಅವರು ನಟಿಸಿದ್ದರು.

‘ಮನೆತನ ಎಂಬ ಜನಪ್ರಿಯ ಸೀರಿಯಲ್​ನಲ್ಲಿ ನಾನು ನಟಿಸುತ್ತಿದ್ದೆ. ಅದರಲ್ಲಿ ಪಂಡರೀಬಾಯಿ, ಕಲ್ಯಾಣ್​ ಕುಮಾರ್​, ಪ್ರೊಫೆಸರ್​ ದೊಡ್ಡ ರಂಗೇಗೌಡ ಮುಂತಾದವರು ನಟಿಸುತ್ತಿದ್ದರು. ಆಗ ಒಂದು ಕಾರ್ಯಕ್ರಮದಲ್ಲಿ ರಾಜ್​ಕುಮಾರ್​ ಅವರು ಸಿಕ್ಕಿದ್ದರು. ಚೆನ್ನಾಗಿದ್ದೀರಾ ಎಂದು ಮಾತನಾಡಿಸಿದಾಗ, ನಿಮ್ಮ ಸೀರಿಯಲ್​ ನೋಡುತ್ತೇನೆ ಎಂದು ಅವರು ಹೇಳಿದರು. ಇಂಥ ದೊಡ್ಡ ಕಲಾವಿದರು ನಮ್ಮ ಧಾರಾವಾಹಿ ನೋಡುತ್ತಾರಾ ಅಂತ ಅಚ್ಚರಿಗೊಂಡು ಸಿಕ್ಕಾಪಟ್ಟೆ ಸಂತೋಷ ಆಯಿತು. ಅದು ನನಗೆ ಸಿಕ್ಕ ಬಹುದೊಡ್ಡ ಮೆಚ್ಚುಗೆ’ ಎಂದು ಶ್ರೀದೇವಿ ಅವರು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ:

ಡಾ. ರಾಜ್​ಕುಮಾರ್​ ಜತೆ ದಿಲೀಪ್​ ಕುಮಾರ್​ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್​

ಕಲಾವಿದ ರಚಿಸಿದ ಡಾ. ರಾಜ್​ ಅವರ ಈ ಅದ್ಭುತ ಚಿತ್ರದಲ್ಲಿದೆ ಬೆರಗಾಗುವಂತಹ ವಿಶೇಷ; ಗುರುತಿಸಬಲ್ಲಿರಾ?

Follow us on

Click on your DTH Provider to Add TV9 Kannada