ಹಬ್ಬದ ಸೀಸನ್ ಮತ್ತಷ್ಟು ವಿಶೇಷವಾಗಿಸಲು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ!
ಟಾಪ್-ಎಂಡ್ ಮಿಡ್-ಸೈಜ್ ಕಾರು ಪ್ರಿಯರಾಗಿದ್ದರೆ ಮತ್ತು ಈ ಹಬ್ಬದ ಸೀಸನ್ನಲ್ಲಿ ಒಂದು ಹೊಸ ಟಾಪ್-ಎಂಡ್ ಎಸ್ಯುವಿ ಯನ್ನು ಕೊಳ್ಳುವ ಇರಾದೆ ಉಳ್ಳವರಾಗಿದ್ದರೆ ಕಿಯಾ ಸೆಲ್ಟೋಸ್ ಎಕ್ಸ್ ಲೈನ್ ನಿಮ್ಮ ಬಯಕೆ ಈಡೇರಿಸಲು ಬರುತ್ತಿದೆ.
ಕಿಯಾ ಮೋಟಾರ್ಸ್ ಭಾರತದ ಕಾರು ಮಾರ್ಕೆಟ್ ಅದರಲ್ಲೂ ವಿಶೇಷವಾಗಿ ಎಸ್ಯುವಿ ವಾಹನಗಳ ಮಾರ್ಕೆಟ್ ನಲ್ಲಿ ತನ್ನ ಛಾಪು ಮೂಡಿಸಿಬಿಟ್ಟಿದೆ, ಹಬ್ಬಗಳ ಸೀಸನ್ನಲ್ಲಿ ಎಲ್ಲ ವಾಹನ ತಯಾರಿಸುವ ಕಂಪನಿಗಳು ತಮ್ಮ ಹೊಸ ಮಾಡೆಲ್ಗಳನ್ನು ಮಾರ್ಕೆಟ್ ಗೆ ಬಿಡುಗಡೆ ಮಾಡುವ ಹಾಗೆ ಕಿಯಾ ಸಂಸ್ಥೆಯೂ ತನ್ನ ಹೊಸ ಸೆಲ್ಟೋಸ್ ಎಕ್ಸ್-ಲೈನ್ ಎಸ್ಯುವಿಯನ್ನು ಮಾರ್ಕೆಟ್ಗೆ ಲಾಂಚ್ ಮಾಡುತ್ತಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಹೊಸ ಕಾರು ಈಗಾಗಲೇ ಡೀಲರ್ಗಳ ಶೋರೂಮ್ಗಳಿಗೆ ಆಗಮಿಸುತ್ತಿದ್ದು ಬುಕಿಂಗ್ ಕೆಲಸವನ್ನು ಪ್ರಾಂರಂಭಿಸುವಂತೆ ಕಂಪನಿಯು ಡೀಲರ್ಗಳಿಗೆ ಸೂಚನೆ ನೀಡಿದೆ.
ಇಲ್ಲಿರುವ ವಿಡಿಯೋನಲ್ಲಿ ನೀವು ನೋಡಿತ್ತಿರುವ ಹಾಗೆ, ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಮ್ಯಾಟ್ ಗ್ರ್ಯಾಫೈಟ್ ಪೇಂಟ್‌ಜಾಬ್, ಹೊಳಪು ಕಪ್ಪು ಸರೌಂಡ್, ಗ್ಲಾಸ್ ಕಪ್ಪು ಮಂಜು ಬೆಳಕಿನ ಸುತ್ತಮುತ್ತಲಿನ ಮಿರ ಮಿರ ಮಿಂಚುವ ಕಪ್ಪು ಒಆರ್ವಿಎಮ್ ಗಳು, ಹೊಸ 18 ಇಂಚಿನ ಮಿಶ್ರಲೋಹದ ಚಕ್ರಗಳು, ಕಪ್ಪು ಹಿಂಭಾಗ-ಗೇಟ್ ಅಳವಡಿಕೆ, ಮತ್ತು ಬೂಟ್ ಮುಚ್ಚಳದಲ್ಲಿ ಎಕ್ಸ್-ಲೈನ್ ಬ್ಯಾಡ್ಜ್ ಮೊದಲಾದ ಫೀಚರ್ಗಳೊಂದಿಗೆ ಬರಲಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ನಲ್ಲಿ ಕಿತ್ತಳೆ ಬಣ್ಣದ ಲೇಬಲ್ಗಳು ಮತ್ತು ಎರಡೂ ಬದಿಗಳಲ್ಲಿ ಪ್ಲಾಸ್ಟಿಕ್ ಹೊದಿಕೆಗಳನ್ನು ಸಹ ನೀಡಲಾಗಿದೆ.
ಹುಡ್ ಅಡಿಯಲ್ಲಿ, ಕಿಯಾ ಸೆಲ್ಟೋಸ್ ಎಕ್ಸ್-ಲೈನ್ 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆರು-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸ್ಟ್ಯಾಂಡರ್ಡ್ ಆಗಿರುತ್ತದೆ, ಆದರೆ ಆರು-ಸ್ಪೀಡ್ ಆಟೋಮ್ಯಾಟಿಕ್ ಯೂನಿಟ್ ಮತ್ತು ಏಳು-ಸ್ಪೀಡ್ ಡಿಸಿಟಿ ಯುನಿಟ್ ಆಯ್ಕೆಗಳಾಗಿ ಲಭ್ಯವಿರಬಹುದು.
ಟಾಪ್-ಎಂಡ್ ಮಿಡ್-ಸೈಜ್ ಕಾರು ಪ್ರಿಯರಾಗಿದ್ದರೆ ಮತ್ತು ಈ ಹಬ್ಬದ ಸೀಸನ್ನಲ್ಲಿ ಒಂದು ಹೊಸ ಟಾಪ್-ಎಂಡ್ ಎಸ್ಯುವಿ ಯನ್ನು ಕೊಳ್ಳುವ ಇರಾದೆ ಉಳ್ಳವರಾಗಿದ್ದರೆ ಕಿಯಾ ಸೆಲ್ಟೋಸ್ ಎಕ್ಸ್ ಲೈನ್ ನಿಮ್ಮ ಬಯಕೆ ಈಡೇರಿಸಲು ಬರುತ್ತಿದೆ.
ಇದನ್ನೂ ಓದಿ: Rashid Khan: ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ ರಶೀದ್ ಖಾನ್; ವಿಡಿಯೊ ನೋಡಿ