ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್; ಮನೆಯಲ್ಲಿ ಇಂದೇ ಮಾಡಿ ಸವಿಯಿರಿ

ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಅನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

TV9kannada Web Team

| Edited By: preethi shettigar

Aug 31, 2021 | 9:06 AM

ಲಾಕ್​ಡೌನ್​ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಬಜ್ಜಿ​​, ಸ್ಯಾಂಡ್ವಿಚ್ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಅನ್ನು 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಮಾಡಲು ಬೇಕಾಗುವ ಸಾಮಾಗ್ರಿಗಳು ಹೂ ಕೋಸು, ಕೆಂಪು ಕ್ಯಾಪ್ಸಿಕಂ, ಹಸಿರು ಕ್ಯಾಪ್ಸಿಕಂ, ಹಳದಿ ಕ್ಯಾಪ್ಸಿಕಂ, ಜೋಳ, ಈರುಳ್ಳಿ, ಕಾನ್​ಫ್ಲವರ್​, ಬೆಳ್ಳುಳ್ಳಿ ಪೇಸ್ಟ್, ಮೈದಾ, ಚಿಲ್ಲಿ ಫ್ಲೈಸ್, ಚೀಸ್, ಬ್ರೆಡ್, ಬೆಣ್ಣೆ, ಎಣ್ಣೆ, ಉಪ್ಪು. ಹಾಲು, ಪೆಪ್ಪರ್.

ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಮಾಡುವ ವಿಧಾನ
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹೂ ಕೋಸು, ಕೆಂಪು ಕ್ಯಾಪ್ಸಿಕಂ, ಹಸಿರು ಕ್ಯಾಪ್ಸಿಕಂ, ಹಳದಿ ಕ್ಯಾಪ್ಸಿಕಂ ಮಿಕ್ಸ್ ಮಾಡಿ. ಬಳಿಕ ಕಾನ್​ಫ್ಲವರ್, ಮೈದಾ ಹಿಟ್ಟನ್ನು ಹಾಲಿನಲ್ಲಿ ಕಲಸಿ ಹುರಿದ ಮಿಶ್ರಣಕ್ಕೆ ಸೇರಿಸಿ. ಬಳಿಕ ಇದಕ್ಕೆ ಉಪ್ಪು, ಚಿಲ್ಲಿ ಫ್ಲೈಸ್, ಪೆಪ್ಪರ್, ಚೀಸ್, ಕಾರ್ನ್ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಬಳಿಕ ಬ್ರೆಡ್ ಮಧ್ಯದಲ್ಲಿ ಈ ಮಿಶ್ರಣ ಹಾಕಿ, ಗ್ರೀಲರ್ ಅಲ್ಲಿ ಇಡಿ. ಈಗ ರುಚಿಕರವಾದ ಗಾರ್ಲಿಕ್ ಚೀಸ್​ಕಾರ್ನ್​ ಸ್ಯಾಂಡ್ವಿಚ್ ಸವಿಯಲು ಸಿದ್ಧ.

ಇದನ್ನೂ ಓದಿ:
ಮೈಸೂರು ಸ್ಪೆಷಲ್​ ಬಜ್ಜಿ; ಸಂಜೆ ಸ್ನ್ಯಾಕ್ಸ್​ಗೆ ಮಾಡಿ ಸವಿಯಿರಿ

ಮನೆಯಲ್ಲೇ ಕೋಲಾರ ಸ್ಟೈಲ್ ಚಿಕನ್ ಧಮ್ ಬಿರಿಯಾನಿ ಮಾಡಿ ಸವಿಯಿರಿ

Follow us on

Click on your DTH Provider to Add TV9 Kannada