ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

ಸೆ.1ರ ಮಧ್ಯ ರಾತ್ರಿ 1.30ರ ಸುಮಾರಿಗೆ ಶೆಹನಾಜ್​ ಗಿಲ್​ ಅವರ ಮಡಿಲ ಮೇಲೆ ಸಿದ್ದಾರ್ಥ್​ ಶುಕ್ಲಾ ನಿದ್ರಿಸಿದರು. ಬೆಳಗ್ಗೆ 7.30ಕ್ಕೆ ಶೆಹನಾಜ್​ಗೆ ಎಚ್ಚರವಾಗಿ ನೋಡಿದಾಗ ಯಾವುದೇ ರೀತಿ ಚಲನೆ ಇಲ್ಲದಿರುವುದು ಕಂಡುಬಂತು.

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ
ಶೆಹನಾಜ್​ ಗಿಲ್​, ಸಿದ್ಧಾರ್ಥ್​ ಶುಕ್ಲಾ
Follow us
TV9 Web
| Updated By: ಮದನ್​ ಕುಮಾರ್​

Updated on: Sep 03, 2021 | 9:36 AM

ಕಿರುತೆರೆಯ ಖ್ಯಾತ ನಟ ಸಿದ್ದಾರ್ಥ್​ ಶುಕ್ಲಾ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಯಾರಿಗೂ ನಂಬಲಾಗುತ್ತಿಲ್ಲ. ಹೃದಯಾಘಾತದಿಂದ ಅವರು ಗುರುವಾರ (ಸೆ.2) ಬೆಳಗ್ಗೆ ನಿಧನರಾದರು. ಮರಣೋತ್ತರ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ. ಈಗ ಸಿದ್ದಾರ್ಥ್​ ಸಾವಿನ ಕುರಿತು ಕೆಲವು ಅಚ್ಚರಿಯ ಮಾಹಿತಿಗಳು ಹೊರಬರುತ್ತಿವೆ. ಹೃದಯಾಘಾತ ಆಗುವ ಸಂದರ್ಭದಲ್ಲಿ ಅವರ ಪ್ರೇಯಸಿ ಶೆಹನಾಜ್​ ಗಿಲ್​ ಕೂಡ ಜೊತೆಯಲ್ಲೇ ಇದ್ದರು ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್​ ಬಾಸ್​ ಸೀಸನ್​ 13ರಲ್ಲಿ ಶೆಹನಾಜ್ ಮತ್ತು ಸಿದ್ದಾರ್ಥ್​ ಶುಕ್ಲಾ ಸ್ಪರ್ಧಿಸಿದ್ದರು. ಆಗ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು.

ಸಿದ್ದಾರ್ಥ್​ ನಿಧನದ ಬಳಿಕ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಕೆಲವರು ಸೆಲೆಬ್ರಿಟಿಗಳು ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ವಿವರಗಳು ಹೊರಬಂದಿವೆ. ಮೂಲಗಳ ಪ್ರಕಾರ, ಬುಧವಾರ (ಸೆ.1) ರಾತ್ರಿ 9.30ಕ್ಕೆ ಸಿದ್ದಾರ್ಥ್​ ಶುಕ್ಲಾ ಅವರು ಮನೆಗೆ ಬಂದಿದ್ದರು. ಆಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಾಯಿ ಮತ್ತು ಗೆಳತಿ ಶೆಹನಾಜ್​ ಗಿಲ್​ ಅವರು ನಿಂಬು ಪಾನಿ ಮತ್ತು ಐಸ್​ ಕ್ರೀಮ್ ನೀಡಿದರು. ಬಳಿಕ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿದರು ಎಂಬ ಮಾಹಿತಿ ಕೇಳಿಬಂದಿದೆ.

ಎಷ್ಟು ಸಮಯ ಕಳೆದರೂ ಸಿದ್ದಾರ್ಥ್​ಗೆ ನಿದ್ದೆ ಬರಲಿಲ್ಲ. ಹಾಗಾಗಿ ತಮ್ಮ ಜೊತೆಯೇ ಇರುವಂತೆ ಗೆಳತಿ ಶೆಹನಾಜ್​ಗೆ ಅವರು ಕೇಳಿಕೊಂಡರು. ಮಧ್ಯ ರಾತ್ರಿ 1.30ರ ಸುಮಾರಿಗೆ ಶೆಹನಾಜ್​ ಅವರ ಮಡಿಲ ಮೇಲೆ ಸಿದ್ದಾರ್ಥ್​ ನಿದ್ರಿಸಿದರು. ಬಳಿಕ ಅವರನ್ನು ಪಕ್ಕಕ್ಕೆ ಸರಿಸಿ ಶೆಹನಾಜ್​ ಕೂಡ ಮಲಗಲು ತೆರಳಿದರು. ಬೆಳಗ್ಗೆ 7.30ರ ಸುಮಾರಿಗೆ ಶೆಹನಾಜ್​ಗೆ ಎಚ್ಚರವಾಗಿ ನೋಡಿದಾಗ ಸಿದ್ದಾರ್ಥ್​ ರಾತ್ರಿ ನಿದ್ರಿಸುತ್ತಿದ್ದ ಭಂಗಿಯಲ್ಲೇ ಮಲಗಿದ್ದರು. ಯಾವುದೇ ರೀತಿ ಚಲನೆ ಇಲ್ಲದಿರುವುದು ಗಮನಿಸಿದಾಗ ಶೆಹನಾಜ್​ಗೆ ಗಾಬರಿ ಆಯಿತು.

ಅದೇ ಅಪಾರ್ಟ್​ಮೆಂಟ್​ನ 5ನೇ ಮಹಡಿಗೆ ತೆರಳಿ ಅಲ್ಲಿರುವ ಕುಟುಂಬದವರಿಗೆ ಶೆಹನಾಜ್​ ಸುದ್ದಿ ತಿಳಿಸಿದರು. ಕೂಡಲೇ ಫ್ಯಾಮಿಲಿ ಡಾಕ್ಟರ್​ರನ್ನು ಕರೆಸಿ ನೋಡಿದಾಗ ಸಿದ್ದಾರ್ಥ್​ ನಿಧನರಾಗಿರುವುದು ತಿಳಿಯಿತು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಆದರೆ ಈ ಎಲ್ಲ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಲು ಇನ್ನೂ ಶೆಹನಾಜ್​ ಗಿಲ್​ ಸಂಪರ್ಕಕ್ಕೆ ಸಿಕ್ಕಿಲ್ಲ. ಘಟನೆ ಬಳಿಕ ಅವರ ಮೊಬೈಲ್​ ಫೋನ್​ ಸ್ವಿಚ್​ಆಫ್​ ಆಗಿರುವ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ವಿನ್ನರ್​ ಸಿದ್ಧಾರ್ಥ್​ ನಿಧನ; ಗೆಳತಿ ಶೆಹನಾಜ್​ ಪರಿಸ್ಥಿತಿ ಹೇಗಿದೆ? ಪ್ರತಿಕ್ರಿಯೆ ನೀಡಿದ ತಂದೆ

ಸಿದ್ದಾರ್ಥ್​ ಶುಕ್ಲಾ ಅನುಮಾನಾಸ್ಪದ ಸಾವು: ಗೆಳತಿ ಫೋನ್​ ಆಫ್​; ಮರಣೋತ್ತರ ಪರೀಕ್ಷೆ ವರದಿ ಮೇಲೆ ಎಲ್ಲರ ಕಣ್ಣು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ