ಓವಲ್ನಲ್ಲಿ ಭಾರತ ಕ್ರಿಕೆಟ್ ಆಟಗಾರರ ಪತ್ನಿಯರೊಂದಿಗೆ ಭರ್ಜರಿ ಪೋಸ್ ನೀಡಿದ ಅನುಷ್ಕಾ; ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ನೋಡಿ
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಆಟಗಾರರ ಪತ್ನಿಯರೊಂದಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭರ್ಜರಿ ಪೋಸ್ ನೀಡಿದ್ದು ವೈರಲ್ ಆಗಿದೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ಪತಿ ವಿರಾಟ್ ಕೊಹ್ಲಿಯೊಂದಿಗೆ ಇಂಗ್ಲೆಂಡ್ಗೆ ತೆರಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಆಟಗಾರರ ಪತ್ನಿಯರೊಂದಿಗೆ ಅನುಷ್ಕಾ ಶರ್ಮಾ ಭರ್ಜರಿ ಪೋಸ್ ನೀಡಿದ್ದು ವೈರಲ್ ಆಗಿದೆ. ಭಾರತ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪತ್ನಿ, ಟಿವಿ ನಿರೂಪಕಿ ಸಂಜನಾ ಗಣೇಶನ್, ರವಿಚಂದ್ರನ್ ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್, ಇಶಾಂತ್ ಶರ್ಮಾ ಪತ್ನಿ ಪ್ರತಿಮಾ ಸಿಂಗ್ ಮೊದಲಾದವರೊಂದಿಗೆ ಅನುಷ್ಕಾ ಭರ್ಜರಿ ಪೋಸ್ ನೀಡಿದ್ದಾರೆ.
ಚಿತ್ರದಲ್ಲಿ ಮಯಾಂಕ್ ಅಗರ್ವಾಲ್ ಪತ್ನಿ, ವಕೀಲೆ ಆಶಿತಾ ಸೂದ್, ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಪತ್ನಿ ಅನಿತಾ ಅರುಣ್, ಹನುಮ ವಿಹಾರಿ ಪತ್ನಿ ಪ್ರೀತಿರಾಜ್ ಕೂಡ ಇದ್ದಾರೆ. ಪ್ರತಿಮಾ ಸಿಂಗ್ ಹಂಚಿಕೊಂಡಿರುವ ಈ ಚಿತ್ರ ವೈರ್ ಆಗಿದ್ದು, ಅಭಿಮಾನಿಗಳು ಕ್ರಿಕೆಟ್ ತಾರೆಯರ ಪತ್ನಿಯರನ್ನು ಒಂದೇ ಫ್ರೇಮ್ನಲ್ಲಿ ನೋಡಿ ಸಂತಸಪಟ್ಟಿದ್ದಾರೆ.
ಪ್ರತಿಮಾ ಸಿಂಗ್ ಹಂಚಿಕೊಂಡ ಚಿತ್ರ:
View this post on Instagram
ಪ್ರತಿಮಾ ಸಿಂಗ್ ಹಂಚಿಕೊಂಡ ಚಿತ್ರವನ್ನು ಅನುಷ್ಕಾ ಶರ್ಮಾ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಹನುಮ ವಿಹಾರಿ ಪತ್ನಿ ಪ್ರೀತಿರಾಜ್ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪ್ರೀತಿರಾಜ್ ಹಂಚಿಕೊಂಡ ಚಿತ್ರ:
View this post on Instagram
ಪ್ರಸ್ತುತ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತುಸು ಹಿನ್ನೆಡೆಯಲ್ಲಿದೆ. ಮೊದಲ ಇನ್ನಿಂಗ್ಸ್ ಬ್ಯಾಟ್ ಮಾಡಿ 191 ರನ್ಗಳ ಸಾಧಾರಣ ಮೊತ್ತ ಪೇರಿಸಿರುವ ಭಾರತ ತಂಡ, ದಿನದಂತ್ಯದಲ್ಲಿ ಇಂಗ್ಲೆಂಡ್ನ 3 ವಿಕೆಟ್ ಕಬಳಿಸಿ ತಿರುಗೇಟು ನೀಡುವ ಯತ್ನದಲ್ಲಿದೆ. ಇಂದು(ಸೆಪ್ಟೆಂಬರ್ 3) ನಡೆಯುವ ಎರಡನೇ ದಿನದಾಟ ಪಂದ್ಯದ ದಿಕ್ಕನ್ನು ನಿರ್ಧರಿಸಲಿದೆ.
ಅನುಷ್ಕಾ ಶರ್ಮಾ ತಮ್ಮ ಮಗಳು ವಮಿಕಾಳೊಂದಿಗೆ ವಿರಾಟ್ ಕೊಹ್ಲಿಯ ಇಂಗ್ಲೆಂಡ್ ಪ್ರವಾಸದಲ್ಲಿ ಜೊತೆಗೆ ತೆರಳಿದ್ದಾರೆ. ವಿರುಷ್ಕಾ ಜೋಡಿ ಲಂಡನ್ನಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು ಆಗಾಗ ಹಂಚಿಕೊಂಡಿದ್ದರು. ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತ ಐತಿಹಾಸಿಕ ಜಯ ದಾಖಲಿಸಿದಾಗ ಅನುಷ್ಕಾ ಶರ್ಮಾ ಫೊಟೊಗಳನ್ನು ಹಂಚಿಕೊಂಡು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ನಂತರ ವಿರಾಟ್ ಹಾಗೂ ಅನುಷ್ಕಾ ರೆಸ್ಟೊರೆಂಟ್ ಒಂದಕ್ಕೆ ಊಟಕ್ಕೆ ತೆರಳಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಫೊಟೊ ತೆಗೆಸಿಕೊಂಡಿದ್ದೂ ಕೂಡ ಬಹಳಷ್ಟು ಸುದ್ದಿಯಾಗಿತ್ತು.
ಅನುಷ್ಕಾ ವೃತ್ತಿ ಜೀವನದ ವಿಷಯಕ್ಕೆ ಬಂದರೆ ಅವರು ನಟನೆಯಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳದಿದ್ದರೂ ನಿರ್ಮಾಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಅಗಲಿದ ನಟ ಇರ್ಫಾನ್ ಖಾನ್ರ ಪುತ್ರ ಬಬಿಲ್ ಕಾಣಿಸಿಕೊಳ್ಳುತ್ತಿರುವ ‘ಕಾಲ’ ಚಿತ್ರವನ್ನು ಅನುಷ್ಕಾ ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದ ವೆಬ್ ಸಿರೀಸ್ ‘ಪಾತಾಳ್ ಲೋಕ್’ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಾಗೆಯೇ ನೆಟ್ಫ್ಲಿಕ್ಸ್ನಲ್ಲಿ ತೆರೆಕಂಡ ‘ಬುಲ್ಬುಲ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಅನುಷ್ಕಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದು 2018ರಲ್ಲೇ ಕೊನೆ. ಶಾರುಖ್ ಖಾನ್ ನಟನೆಯ ಜೀರೊ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚಿದ್ದನ್ನು ಹೊರತು ಪಡಿಸಿ ನಂತರ ಅನುಷ್ಕಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ:
Ind vs Eng: ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ನಲ್ಲಿ ಕ್ರಿಕೆಟ್ ದೇವರ ದೀರ್ಘಕಾಲದ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಮೇಘನಾ ರಾಜ್ ಸುದ್ದಿಗೋಷ್ಠಿ: ರಾಯನ್ ರಾಜ್ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ
(Bollywood actress Anushka Sharma poses with Indian cricketer’s wives at England)