ಮೇಘನಾ ರಾಜ್​ ಸುದ್ದಿಗೋಷ್ಠಿ: ರಾಯನ್​ ರಾಜ್​ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ

ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ನಾಮಕರಣದ ಬಳಿಕ ಮೊದಲ ಬಾರಿಗೆ ಕುಟುಂಬದವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಮೇಘನಾ ರಾಜ್​ ಸುದ್ದಿಗೋಷ್ಠಿ: ರಾಯನ್​ ರಾಜ್​ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ
ಧ್ರುವ ಸರ್ಜಾ, ಮೇಘನಾ ರಾಜ್​, ಸುಂದರ್​ ರಾಜ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 03, 2021 | 12:47 PM

ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ‘ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ’ ಎಂಬ ಅರ್ಥ ಈ ಹೆಸರಿಗೆ ಇದೆ. ಅದನ್ನು ಮೇಘನಾ ರಾಜ್​ ವಿವರಿಸಿದ್ದಾರೆ. ‘ನಾಮಕರಣ ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ. 11 ತಿಂಗಳ ಬಳಿಕ ಹೆಸರು ನಿರ್ಧರಿಸಿದ್ವಿ. ರಾಯನ್​ ಎಂಬ ಹೆಸರು ನನ್ನ ಮನಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ ನಮಗೆ ಬೆಳಕು ತಂದವನೇ ನನ್ನ ಮಗ’ ಎಂದು ಮೇಘನಾ ರಾಜ್​ ಹೇಳಿದರು.

ಸುಂದರ್​ ರಾಜ್ ಅವರು ಇಷ್ಟು ದಿನ ಮೊಮ್ಮಗನನ್ನು ಚಿಂಟು ಎಂದು ಕರೆಯುತ್ತಿದ್ದರು. ಸುದ್ದಿಗೋಷ್ಠಿಯಲ್ಲಿ ಅವರೂ ಭಾಗಿ ಆಗಿದ್ದರು. ‘ತುಂಬ ಜನಕ್ಕೆ ಆಹ್ವಾನ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಮೊಮ್ಮಗನ ನಾಮಕರಣಕ್ಕೆ ಹೆಚ್ಚು ಜನರನ್ನು ಕರೆದಿಲ್ಲ. ತಾತನಾಗಿ ಈ ಮಗುವನ್ನು ನಾನು ಫ್ರೆಂಡ್​ ಅಂತ ಕರೆಯುತ್ತೇನೆ. ನನ್ನನ್ನು ಬಿಟ್ಟು ಅವನು ಒಂದು ಕ್ಷಣವೂ ಇರುವುದಿಲ್ಲ. ಇಷ್ಟು ದಿನ ಅವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ವಿ. ಈಗ ರಾಯನ್​ ರಾಜ್​ ಸರ್ಜಾ ಅಂತ ಹೆಸರಿಟ್ಟಿದ್ದೇವೆ’ ಎಂದು ಸುಂದರ್​ ರಾಜ್ ಹೇಳಿದರು.

ಅಣ್ಣನ ಮಗನ ಬಗ್ಗೆ ಧ್ರುವ ಸರ್ಜಾ ಖುಷಿಯಿಂದ ಮಾತನಾಡಿದರು. ‘ಈ ಸಂದರ್ಭದಲ್ಲಿ ನಾನು ಅಣ್ಣನನ್ನು ನೆನಪಿಸಿಕೊಳ್ಳುತ್ತೇನೆ. ರಾಯನ್​ ಎಂಬ ಹೆಸರಿಗೆ ಸಂಸ್ಕೃತದಲ್ಲಿ ಯುವರಾಜ ಎಂಬ ಅರ್ಥ ಇದೆ. ಅವನು ಯುವರಾಜನ ರೀತಿಯೇ ಇರುತ್ತಾನೆ’ ಎಂದು ಧ್ರುವ ಸರ್ಜಾ ಹೇಳಿದರು. ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಕುಟುಂಬದ ನಡುವೆ ಬಿರುಕು ಮೂಡಿದೆ ಎಂಬ ರೀತಿಯಲ್ಲಿ ಕೆಲವು ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿರುವುದು ಎರಡೂ ಕುಟುಂಬಕ್ಕೆ ಬೇಸರ ತರಿಸಿದೆ. ಆ ಬಗ್ಗೆಯೂ ಧ್ರುವ ಸರ್ಜಾ ಮಾತನಾಡಿದರು. ‘ನಮ್ಮ ಎರಡು ಕುಟುಂಬಗಳು ಯಾವಾಗಲೂ ಒಂದಾಗಿ ಇರುತ್ತವೆ’ ಎಂದು ಅವರು ಹೇಳಿದರು.

‘ಮೇಘನಾಳನ್ನು ನೋಡಿದರೆ ಖುಷಿ ಆಗುತ್ತದೆ. ಎಲ್ಲವನ್ನೂ ಅವಳು ಸಮರ್ಥವಾಗಿ ನಿಭಾಯಿಸುತ್ತಾಳೆ. ಅಪ್ಪನ ಫೋಟೋ ನೋಡಿದರೆ ರಾಯನ್​ ಚೆನ್ನಾಗಿ ಪ್ರತಿಕ್ರಿಯಿಸುತ್ತಾನೆ. ಅವನ ನಗುವಲ್ಲಿ ನಾವು ಸಂತೋಷವಾಗಿದ್ದೇವೆ’ ಎಂದು ಧ್ರುವ ಪತ್ನಿ ಪ್ರೇರಣ ಹೇಳಿದ್ದಾರೆ.

ಇದನ್ನೂ ಓದಿ:

ಮೇಘನಾ ರಾಜ್​ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್​ ಸರ್ಜಾ ಫೋಟೋ ವೈರಲ್

Meghana Raj: ಮೇಘನಾ ರಾಜ್​ ಬದುಕಲ್ಲಿ ಹೊಸ ಬೆಳಕು; ಜ್ಯೂ. ಚಿರು ಜನಿಸಿ 9 ತಿಂಗಳಾದ ಬಳಿಕ ಗುಡ್​ ನ್ಯೂಸ್​

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್