AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಘನಾ ರಾಜ್​ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್​ ಸರ್ಜಾ ಫೋಟೋ ವೈರಲ್

Meghana Raj | Jr Chiru: ಮೇಘನಾ ರಾಜ್​ ಆಯ್ಕೆ ಮಾಡಿಕೊಂಡು ಫೋಟೋ ತುಂಬ ಕ್ಯೂಟ್ ಆಗಿತ್ತು. ಒಂದೇ ಫ್ರೇಮ್​ನಲ್ಲಿ ಅರ್ಜುನ್ ಸರ್ಜಾ ಮತ್ತು ಜ್ಯೂ. ಚಿರು ಕಾಣಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್​ ಖುಷಿಪಟ್ಟರು.

ಮೇಘನಾ ರಾಜ್​ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್​ ಸರ್ಜಾ ಫೋಟೋ ವೈರಲ್
ಮೇಘನಾ ರಾಜ್​-ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್​ ಸರ್ಜಾ ಫೋಟೋ ವೈರಲ್
TV9 Web
| Edited By: |

Updated on:Aug 19, 2021 | 2:36 PM

Share

ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸ್ಟಾರ್​ ಕಿಡ್​ಗಳು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗುತ್ತಾರೆ. ಈ ಮಾತಿಗೆ ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ (Meghana Raj) ಪುತ್ರ ಜ್ಯೂ. ಚಿರು (Jr Chiru) ಬೆಸ್ಟ್​ ಉದಾಹರಣೆ. ಆತನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಸಖತ್​ ವೈರಲ್​ ಆಗುತ್ತವೆ. ಅಭಿಮಾನಿಗಳು ಜ್ಯೂ. ಚಿರು ಫೋಟೋ ಮತ್ತು ವಿಡಿಯೋಗಳಿಗೆ ಹೆಚ್ಚು ಲೈಕ್ಸ್​ ನೀಡುತ್ತಾರೆ. ಸೂಕ್ತ ಸಂದರ್ಭಗಳಲ್ಲೆಲ್ಲ ಮಗನ ಕುರಿತು ಮೇಘನಾ ರಾಜ್​ ಅಪ್​ಡೇಟ್​ ನೀಡುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ಅವರು ಹಂಚಿಕೊಂಡು ಒಂದು ಫೋಟೋ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಈ ಅಪರೂಪದ ಫೋಟೋದಲ್ಲಿ ಅರ್ಜುನ್​ ಸರ್ಜಾ (Arjun Sarja) ಮತ್ತು ಜ್ಯೂ. ಚಿರು ಪೋಸ್​ ನೀಡಿದ್ದಾರೆ. 

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಪಾಲಿಗೆ ಅರ್ಜುನ್​ ಸರ್ಜಾ ಗಾಡ್​ ಫಾದರ್​ ಇದ್ದಂತೆ. ಈಗಲೂ ಧ್ರುವ ಅದನ್ನು ಹೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅರ್ಜುನ್​ ಸರ್ಜಾ ಬರ್ತ್​ಡೇ ಆಚರಿಸಿಕೊಂಡರು. ಆ.15ರಂದು ಅವರ ಜನ್ಮದಿನವಿತ್ತು. ಆ ಪ್ರಯುಕ್ತ ಮೇಘನಾ ರಾಜ್​ ಕೂಡ ವಿಶ್​ ಮಾಡಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡು ಫೋಟೋ ತುಂಬ ಕ್ಯೂಟ್ ಆಗಿತ್ತು. ಒಂದೇ ಫ್ರೇಮ್​ನಲ್ಲಿ ಅರ್ಜುನ್ ಸರ್ಜಾ ಮತ್ತು ಜ್ಯೂ. ಚಿರು ಕಾಣಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್​ ಖುಷಿಪಟ್ಟರು.

ಆ್ಯಕ್ಷನ್​ ಸಿನಿಮಾಗಳ ಮೂಲಕ ಅರ್ಜುನ್​ ಸರ್ಜಾ ಹೆಸರಾದವರು. ಈಗ ಅವರು ಜ್ಯೂ. ಚಿರುಗೂ ಫೈಟಿಂಗ್​ ಹೇಳಿಕೊಡುತ್ತಿದ್ದಾರಾ? ಇಂಥ ಪ್ರಶ್ನೆ ಮೂಡುವ ರೀತಿಯಲ್ಲೇ ಅವರಿಬ್ಬರ ಫೋಟೋ ಇದೆ. ಅರ್ಜುನ್​ ಸರ್ಜಾ ಅವರನ್ನು ಬಹಳ ಕುತೂಹಲದಿಂದ ನೋಡುತ್ತಿರುವ ಜ್ಯೂ. ಚಿರು ಎಲ್ಲರ ಗಮನ ಸೆಳೆದುಕೊಂಡಿದ್ದಾನೆ. ಮೇಘನಾ ರಾಜ್​, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಅರ್ಜುನ್​ ಸರ್ಜಾ ಅಭಿಮಾನಿಗಳ ವಲಯದಲ್ಲಿ ಸದ್ಯ ಈ ಫೋಟೋ ವೈರಲ್​ ಆಗಿದೆ.

ಚಿರಂಜೀವಿ ಸರ್ಜಾ ಅವರನ್ನು ಮೇಘನಾ ರಾಜ್​ ಪ್ರತಿ ಕ್ಷಣವೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ವಿಶೇಷ ಸಂದರ್ಭಗಳಲ್ಲೂ ನೆನಪಿನ ಪುಟಗಳನ್ನು ಅವರು ತೆರೆದಿಡುತ್ತಲೇ ಇರುತ್ತಾರೆ. ಫ್ರೆಂಡ್​ಶಿಪ್​ ಡೇ ಸಂದರ್ಭದಲ್ಲೂ ಅವರು ಚಿರು ಫೋಟೋ ಹಂಚಿಕೊಂಡಿದ್ದರು. ಚಿರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದೆ. ಜ್ಯೂ. ಚಿರುಗೆ 9 ತಿಂಗಳು ತುಂಬಿದ ಬಳಿಕ ಮೇಘನಾ ಅವರು ಮತ್ತೆ ನಟನೆಯತ್ತ ಗಮನ ಹರಿಸಿದರು. ಅವರು ಹೊಸ ಪ್ರಾಜೆಕ್ಟ್​ಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಚಿರು ನಿಧನರಾಗುವುದಕ್ಕೂ ಮುನ್ನ ಮೇಘನಾ ರಾಜ್ ಅವರು ‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ’, ‘ಬುದ್ಧಿವಂತ 2’ ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಕಾರಣಾಂತರಗಳಿಂದ ಆ ಚಿತ್ರಗಳ ಕೆಲಸಗಳು ವಿಳಂಬ ಆಗಿವೆ. ಆದಷ್ಟು ಬೇಗ ಮೇಘನಾ ಅವರು ಮತ್ತೆ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳಲಿ ಎಂದು ಫ್ಯಾನ್ಸ್​ ಆಶಿಸುತ್ತಿದ್ದಾರೆ.

ಇದನ್ನೂ ಓದಿ:

Meghana Raj:  ‘ನೀನು ಯಾವಾಗಲೂ ನನ್ನ ಬೆಸ್ಟ್​ ಫ್ರೆಂಡ್’​; ಫ್ರೆಂಡ್​ಶಿಪ್​ ಡೇ ದಿನ ಚಿರು ನೆನೆದ ಮೇಘನಾ ರಾಜ್

ಚೆನ್ನೈನಲ್ಲಿ ಅರ್ಜುನ್​ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಾಲಯದ ದರ್ಶನ ಪಡೆದ ಜ್ಯೂ. ಚಿರು

Published On - 2:34 pm, Thu, 19 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್